ವಾಹನಗಳ ಸಂಖ್ಯೆಯಲ್ಲಿ ರಾಜಧಾನಿ ದೆಹಲಿಯನ್ನೇ ಮೀರಿಸುತ್ತಿದೆ ನಮ್ಮ ಬೆಂಗಳೂರು..!

ಸ್ವಂತ ಬಳಕೆಯ ವಾಹನಗಳ ಬಳಕೆಯನ್ನು ತಗ್ಗಿಸಿ ಸಾರ್ವಜನಿಕ ಸಾರಿಗೆ ವಲಯವನ್ನು ವಿಸ್ತರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದ್ದು, ಹೀಗಿದ್ದರೂ ಕೂಡಾ ಬೆಂಗಳೂರಿನಲ್ಲಿ ಮಾತ್ರ ದಾಖಲೆಯ ಮಟ್ಟದಲ್ಲಿ ಖಾಸಗಿ ವಾಹನಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇದೆ.

ವಾಹನಗಳ ಸಂಖ್ಯೆಯಲ್ಲಿ ರಾಜಧಾನಿ ದೆಹಲಿಯನ್ನೇ ಮೀರಿಸುತ್ತಿದೆ ನಮ್ಮ ಬೆಂಗಳೂರು..!

ಮಾಹಿತಿಗಳ ಪ್ರಕಾರ, ರಾಜಧಾನಿ ಬೆಂಗಳೂರು ಒಂದರಲ್ಲೇ ಬರೋಬ್ಬರಿ 80.45 ಲಕ್ಷ ವಾಹನಗಳು ನಿತ್ಯ ಸಂಚರಿಸುತ್ತಿದ್ದು, 1.45 ಕೋಟಿ ವಾಹನಗಳನ್ನು ಹೊಂದಿರುವ ದೆಹಲಿ ನಂತರ ಎರಡನೇ ಸ್ಥಾನದಲ್ಲಿರುವ ಬೆಂಗಳೂರು ಕೂಡಾ ಸದ್ಯ ಮಾಲಿನ್ಯದ ಕೂಪವಾಗಿ ಬದಲಾಗುತ್ತಿದೆ. ದಿನಂಪ್ರತಿ 2 ರಿಂದ 2.5 ಸಾವಿರ ಹೊಸ ವಾಹನಗಳು ಬೆಂಗಳೂರು ನಗರ ಪ್ರದೇಶದ ವ್ಯಾಪ್ತಿಯಲ್ಲೇ ನೋಂದಣಿಯಾಗುತ್ತಿದ್ದು, ಇದು ಹೀಗೆ ಮುಂದುವರಿದಲ್ಲಿ ಮುಂದಿನ ಕೆಲವೇ ವರ್ಷಗಳಲ್ಲಿ ದೆಹಲಿಯನ್ನು ಕೂಡಾ ಮೀರಿಸಲಿದೆ.

ವಾಹನಗಳ ಸಂಖ್ಯೆಯಲ್ಲಿ ರಾಜಧಾನಿ ದೆಹಲಿಯನ್ನೇ ಮೀರಿಸುತ್ತಿದೆ ನಮ್ಮ ಬೆಂಗಳೂರು..!

ಹೆಚ್ಚುತ್ತಿರುವ ಮಾಲಿನ್ಯಕ್ಕೆ ಬ್ರೇಕ್ ಹಾಕಲು ದೆಹಲಿಯಲ್ಲಿ ಈಗಾಗಲೇ ಹಳೆಯಯ ವಾಹನಗಳ ಬಳಕೆಯ ಮೇಲೆ ಮತ್ತು ನಗರಕ್ಕೆ ಪ್ರವೇಶಿಸುವ ಹೊರ ರಾಜ್ಯಗಳ ವಾಹನಗಳ ಓಡಾಟಕ್ಕೆ ಬ್ರೇಕ್ ಹಾಕಲಾಗಿದ್ದು, ಇಂತಹ ಯಾವುದೇ ಕ್ರಮಗಳು ಬೆಂಗಳೂರಿನಲ್ಲಿ ಇಲ್ಲದಿರುವುದು ವಾಹನಗಳ ಸಂಖ್ಯೆಯು ಮೀತಿ ಮಿರಲು ಪ್ರಮುಖ ಕಾರಣವಾಗಿದೆ.

ವಾಹನಗಳ ಸಂಖ್ಯೆಯಲ್ಲಿ ರಾಜಧಾನಿ ದೆಹಲಿಯನ್ನೇ ಮೀರಿಸುತ್ತಿದೆ ನಮ್ಮ ಬೆಂಗಳೂರು..!

ಕೇವಲ ಬೆಂಗಳೂರು ಮಾತ್ರವಲ್ಲದೇ ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ಹೊಸ ವಾಹನಗಳ ಸಂಖ್ಯೆ ಮಿತಿ ಹೆಚ್ಚುತ್ತಿದ್ದು, ಸದ್ಯಕ್ಕೆ ರಾಜ್ಯದಲ್ಲಿ ವಾಹನ ಸಂಖ್ಯೆ 2.10 ಕೋಟಿಗೆ ತಲುಪಿದೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ಭಾರೀ ಪ್ರಮಾಣದ ಆದಾಯ ಹರಿದುಬರುತ್ತಿದ್ದರೂ ಸಹ ಹೆಚ್ಚುತ್ತಿರುವ ಮಾಲಿನ್ಯ ಪ್ರಮಾಣವು ಆತಂಕಕಾರಿ ವಾತಾವರಣ ನಿರ್ಮಾಣಕ್ಕೆ ಕಾರಣವಾಗಿದೆ.

ವಾಹನಗಳ ಸಂಖ್ಯೆಯಲ್ಲಿ ರಾಜಧಾನಿ ದೆಹಲಿಯನ್ನೇ ಮೀರಿಸುತ್ತಿದೆ ನಮ್ಮ ಬೆಂಗಳೂರು..!

ರಾಜ್ಯದಲ್ಲಿ ಹೊಸ ವಾಹನ ನೋಂದಣಿ ಮತ್ತು ಆದಾಯ ಸಂಗ್ರಹ ಕುರಿತು ಮಾಹಿತಿ ಹಂಚಿಕೊಂಡಿರುವ ಸಾರಿಗೆ ಇಲಾಖೆಯ ಆಯುಕ್ತ ವಿ.ಪಿ. ಇಕ್ಕೇರಿಯವರು, ರಾಜ್ಯದಲ್ಲಿ ಹೆಚ್ಚುತ್ತಿರುವ ವಾಹನಗಳ ಸಂಖ್ಯೆಯಿಂದಾಗಿ 2018-19ರ ಆರ್ಥಿಕ ವರ್ಷದಲ್ಲಿ ಬರೋಬ್ಬರಿ 6,656 ಕೋಟಿಯಷ್ಟು ರಾಜಸ್ವ ಹರಿದುಬಂದಿರುವುದಾಗಿ ತಿಳಿದ್ದಾರೆ.

ವಾಹನಗಳ ಸಂಖ್ಯೆಯಲ್ಲಿ ರಾಜಧಾನಿ ದೆಹಲಿಯನ್ನೇ ಮೀರಿಸುತ್ತಿದೆ ನಮ್ಮ ಬೆಂಗಳೂರು..!

ಆದ್ರೆ ಸಾರಿಗೆಯ ಇಲಾಖೆಯ ಮೇಲೆ ಒತ್ತಡ ಹೇರುತ್ತಿರುವ ರಾಜ್ಯ ಆರೋಗ್ಯ ಇಲಾಖೆಯು ಖಾಸಗಿ ವಾಹನಗಳ ಸಂಖ್ಯೆಯನ್ನು ತಗ್ಗಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದು, ಸಾರ್ವಜನಿಕ ಸಾರಿಗೆ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ಮತ್ತು ಖಾಸಗಿ ವಾಹನಗಳನ್ನು ತಗ್ಗಿಸಲು ಕೆಲವು ಕಠಿಣ ಕ್ರಮ ಕೈಗೊಳ್ಳುವಂತೆ ಶಿಫಾರಸ್ಸು ಮಾಡಿದೆ.

MOST READ: ಹೊಸ ಬೈಕ್‌ಗಳಿಗೆ ಇಂದಿನಿಂದ ಹೊಸ ರೂಲ್ಸ್- ಸಿಬಿಎಸ್ ಮತ್ತು ಎಬಿಎಸ್ ಇಲ್ಲದ ಬೈಕ್ ಖರೀದಿ ಬೇಡವೇ ಬೇಡ..!

ವಾಹನಗಳ ಸಂಖ್ಯೆಯಲ್ಲಿ ರಾಜಧಾನಿ ದೆಹಲಿಯನ್ನೇ ಮೀರಿಸುತ್ತಿದೆ ನಮ್ಮ ಬೆಂಗಳೂರು..!

ಮುಂದುವರಿದ ರಾಷ್ಟ್ರಗಳಲ್ಲಿ ಖಾಸಗಿ ವಾಹನ ಸಂಖ್ಯೆಯನ್ನು ತಗ್ಗಿಸಲು ಅನುಸರಿಸಲಾಗುತ್ತಿರುವ ತಂತ್ರಗಳನ್ನು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೂ ಪರಿಚಯಿಸುವಂತೆ ಮನವಿ ಮಾಡಲಾಗಿದ್ದು, ದುಬಾರಿ ತೆರಿಗೆ ಮತ್ತು ಪಾರ್ಕಿಂಗ್ ಶುಲ್ಕುಗಳನ್ನು ದುಪ್ಪಟ್ಟು ಮಾಡುವುದರಿಂದ ಖಾಸಗಿ ವಾಹನ ಬಳಕೆಯನ್ನು ತಗ್ಗಿಸಬಹುದಾಗಿದೆ ಎನ್ನಲಾಗಿದೆ.

MOST READ: ವಾಹನ ಮಾಲೀಕರೇ ಹುಷಾರ್- ಬೆಂಗಳೂರಿನಲ್ಲಿ ಜೋರಾಗಿದೆ ನಕಲಿ ನಂಬರ್ ಪ್ಲೇಟ್ ಹಾವಳಿ

ವಾಹನಗಳ ಸಂಖ್ಯೆಯಲ್ಲಿ ರಾಜಧಾನಿ ದೆಹಲಿಯನ್ನೇ ಮೀರಿಸುತ್ತಿದೆ ನಮ್ಮ ಬೆಂಗಳೂರು..!

ಹೀಗಾಗಿ ಆರೋಗ್ಯ ಇಲಾಖೆಯ ಸಲಹೆಗಳನ್ನು ಪರಿಶೀಲನೆ ಮಾಡಿ ಜಾರಿ ತರುವ ಚಿಂತನೆಯಲ್ಲಿರುವ ಸಾರಿಗೆ ಇಲಾಖೆಯು ಸರ್ಕಾರದ ಜೊತೆ ಚರ್ಚೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಿದ್ದು, ಒಂದು ವೇಳೆ ಹೊಸ ನಿಯಮಗಳು ಜಾರಿಗೆ ಬಂದಲ್ಲಿ ಖಾಸಗಿ ವಾಹನ ಮಾಲೀಕರ ಜೇಬಿಗೆ ಮತ್ತಷ್ಟು ಕತ್ತರಿ ಬಿಳುವುದರಲ್ಲಿ ಯಾವುದೇ ಅನುಮಾನವಿಲ್ಲ.

Most Read Articles

Kannada
English summary
Bengaluru closes in on Delhi, has 80 lakh vehicles. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X