ಟಾಟಾ ನೆಕ್ಸಾನ್ ಇವಿ ಅನಾವರಣ ಮುಂದೂಡಿಕೆ- ಡಿ.17ರ ಬದಲಾಗಿ 19ಕ್ಕೆ ಫಿಕ್ಸ್..!

ಇದೇ ತಿಂಗಳು 17ರಂದು ಮುಂಬೈನಲ್ಲಿ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಅನಾವರಣಕ್ಕೆ ಸಜ್ಜಾಗಿದ್ದ ಟಾಟಾ ಮೋಟಾರ್ಸ್ ಸಂಸ್ಥೆಯು ತಾಂತ್ರಿಕ ಕಾರಣಗಳಿಂದಾಗಿ ಹೊಸ ಕಾರು ಅನಾವರಣ ಕಾರ್ಯಕ್ರಮವನ್ನು ಎರಡು ದಿನ ಕಾಲ ಮುಂದೂಡಿಕೆ ಮಾಡಿದ್ದು, 17ರ ಬದಲಾಗಿ 19ಕ್ಕೆ ದಿನಾಂಕ ನಿಗದಿಪಡಿಸಿದೆ.

ಟಾಟಾ ನೆಕ್ಸಾನ್ ಇವಿ ಅನಾವರಣ ಮುಂದೂಡಿಕೆ- ಡಿ.17ರ ಬದಲಾಗಿ 19ಕ್ಕೆ ಫಿಕ್ಸ್..!

ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ಬಿಡುಗಡೆಗಾಗಿ ಅಂತಿಮ ಹಂತದ ತಯಾರಿ ನಡೆಸುತ್ತಿರುವ ಟಾಟಾ ಸಂಸ್ಥೆಯು ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಜಿಪ್‌ಟ್ರಾನ್ ತಂತ್ರಜ್ಞಾನ ಪ್ರೇರಣೆ ಹೊಂದಿರುವ ಹೊಸ ಕಾರು ಹಲವು ವಿಶೇಷತೆಗಳಿಂದ ಕೂಡಿದೆ. ಕೈಗೆಟುಕುವ ಬೆಲೆಯಲ್ಲಿ ಖರೀದಿ ಲಭ್ಯವಾಗಲಿರುವ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಉತ್ತಮ ಬ್ಯಾಟರಿ ವೈಶಿಷ್ಟ್ಯತೆಯೊಂದಿಗೆ ಸಾಮಾನ್ಯ ನೆಕ್ಸಾನ್ ಫೇಸ್‌ಲಿಫ್ಟ್ ಮಾದರಿಯಲ್ಲೇ ಹಲವು ಪ್ರೀಮಿಯಂ ಫೀಚರ್ಸ್ ಪಡೆದುಕೊಳ್ಳಲಿದೆ.

ಟಾಟಾ ನೆಕ್ಸಾನ್ ಇವಿ ಅನಾವರಣ ಮುಂದೂಡಿಕೆ- ಡಿ.17ರ ಬದಲಾಗಿ 19ಕ್ಕೆ ಫಿಕ್ಸ್..!

19ರಂದು ಅನಾವರಣಗೊಳ್ಳಲಿರುವ ಹೊಸ ನೆಕ್ಸಾನ್ ಎಲೆಕ್ಟ್ರಿಕ್ ಕಾರು 2020ರ ಆರಂಭದಲ್ಲಿ ಅಧಿಕೃತವಾಗಿ ಖರೀದಿಗೆ ಲಭ್ಯವಿರಲಿದ್ದು, ನೆಕ್ಸಾನ್ ಎಲೆಕ್ಟ್ರಿಕ್ ಜಿಪ್‌ಟ್ರಾನ್ ತಂತ್ರಜ್ಞಾನ ಪ್ರೇರಣೆಯೊಂದಿಗೆ ಅತ್ಯುತ್ತಮ ಎಂಜಿನ್ ದಕ್ಷತೆ ಹೊಂದಿದೆ.

ಟಾಟಾ ನೆಕ್ಸಾನ್ ಇವಿ ಅನಾವರಣ ಮುಂದೂಡಿಕೆ- ಡಿ.17ರ ಬದಲಾಗಿ 19ಕ್ಕೆ ಫಿಕ್ಸ್..!

ಟಾಟಾ ನೆಕ್ಸಾನ್ ಇವಿ ಕಾರು ಪ್ರತಿ ಚಾರ್ಜ್‌ಗೆ 300ಕಿ.ಮೀ ಮೈಲೇಜ್ ಹಿಂದಿರುಗಿಸುವ ಸಾಮರ್ಥ್ಯ ಹೊಂದಿದೆ. ಜೊತೆಗೆ ಹ್ಯಾರಿಯರ್ ಕಾರಿನಲ್ಲಿರುವ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ಹಲವು ಪ್ರೀಮಿಯಂ ಸೌಲಭ್ಯಗಳು ನೆಕ್ಸಾನ್ ಎಲೆಕ್ಟ್ರಿಕ್ ಕಾರಿನಲ್ಲಿವೆ ಎನ್ನಲಾಗಿದೆ.

ಟಾಟಾ ನೆಕ್ಸಾನ್ ಇವಿ ಅನಾವರಣ ಮುಂದೂಡಿಕೆ- ಡಿ.17ರ ಬದಲಾಗಿ 19ಕ್ಕೆ ಫಿಕ್ಸ್..!

ನೆಕ್ಸಾನ್ ಇವಿ ಬಿಡುಗಡೆ ಮಾಹಿತಿಯನ್ನು ಹಂಚಿಕೊಳ್ಳುವಾಗ ಹೊಸ ಕಾರಿನ ಬೆಲೆ ಮಾಹಿತಿ ಬಗ್ಗೆಯು ಅಂದಾಜು ದರಗಳನ್ನು ಪ್ರಕಟಿಸಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿ ಇತರೆ ಎಲೆಕ್ಟ್ರಿಕ್ ಕಾರುಗಳಿಂತಲೂ ಅತ್ಯುತ್ತಮ ತಂತ್ರಜ್ಞಾನ ಹೊಂದಿರುವ ಕಾರಿನ ಬೆಲೆಯು ರೂ.15 ಲಕ್ಷದಿಂದ ರೂ.17 ಲಕ್ಷ ಬೆಲೆ ಅಂತರ ಮಾರುಕಟ್ಟೆಗೆ ಬರಲಿದೆ ಎಂದಿದೆ. ಇನ್ನು ಟಾಟಾ ಸಂಸ್ಥೆಯು ತನ್ನ ಎಲೆಕ್ಟ್ರಿಕ್ ಕಾರುಗಳಲ್ಲಿ ಬಳಕೆ ಮಾಡಲು ಉದ್ದೇಶಿಸಿರುವ ಜಿಪ್‌ಟ್ರಾನ್ ತಂತ್ರಜ್ಞಾನವು ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು, ಎಲೆಕ್ಟ್ರಿಕ್ ಕಾರುಗಳನ್ನು ಅತಿ ಕಡಿಮೆ ಅವಧಿಯಲ್ಲಿ ಜನಪ್ರಿಯಗೊಳಿಸುವಲ್ಲಿ ಈ ತಂತ್ರಜ್ಞಾನ ಸಾಕಷ್ಟು ಸಹಕಾರಿಯಾಗಲಿದೆ.

ಟಾಟಾ ನೆಕ್ಸಾನ್ ಇವಿ ಅನಾವರಣ ಮುಂದೂಡಿಕೆ- ಡಿ.17ರ ಬದಲಾಗಿ 19ಕ್ಕೆ ಫಿಕ್ಸ್..!

ಜಿಪ್‌ಟ್ರಾನ್ ಪವರ್‌ಟ್ರೈನ್ ತಂತ್ರಜ್ಞಾನವು ಹಲವು ಸುಧಾರಿತ ವೈಶಿಷ್ಟ್ಯತೆಗಳೊಂದಿಗೆ ಅಭಿವೃದ್ದಿಗೊಳಿಸಲಾಗಿದ್ದು, ಹೈ ವೊಲ್ಟೆಜ್ ಸಿಸ್ಟಂ, ದೀರ್ಘಕಾಲಿಕ ಬ್ಯಾಟರಿ ಸಾಮಾರ್ಥ್ಯ, ಅತಿಕಡಿಮೆ ಅವಧಿಯಲ್ಲಿ ಚಾರ್ಜಿಂಗ್ ಸಿಸ್ಟಂ ಮತ್ತು ಸೂಪಿರಿಯರ್ ಪರ್ಫಾಮೆನ್ಸ್ ವೈಶಿಷ್ಟ್ಯತೆಗಳನ್ನು ಈ ಪವರ್‌ಟ್ರೈನ್‌ನಲ್ಲಿ ಅಳವಡಿಸಲಾಗಿದೆ.

ಟಾಟಾ ನೆಕ್ಸಾನ್ ಇವಿ ಅನಾವರಣ ಮುಂದೂಡಿಕೆ- ಡಿ.17ರ ಬದಲಾಗಿ 19ಕ್ಕೆ ಫಿಕ್ಸ್..!

ಜೊತೆಗೆ ರಿಜನರೇಟಿವ್ ಬ್ರೇಕಿಂಗ್ ಸಿಸ್ಟಂ ಅಳವಡಿಕೆ ಹಿನ್ನಲೆಯಲ್ಲಿ ಕಾರು ಚಾಲನೆ ವೇಳೆ ನೀರ್ದಿಷ್ಟ ಪ್ರಮಾಣದಲ್ಲಿ ಬ್ಯಾಟರಿ ಚಾರ್ಜಿಂಗ್ ಪ್ರಕ್ರಿಯೆಯು ಮರಳಿಪಡೆಯಬಹುದಾಗಿದ್ದು, ಇದೇ ಕಾರಣಕ್ಕೆ ಹೊಸ ತಂತ್ರಜ್ಞಾನವು ಬ್ಯಾಟರಿ ದೀರ್ಘಕಾಲ ಬಾಳಿಕೆಗೆ ಸಹಕರಿಸಲಿದೆ.

MOST READ: ಗ್ರಾಹಕರ ಬೇಡಿಕೆಯೆಂತೆ 6, 7, 8 ಸೀಟರ್ ಸೌಲಭ್ಯದೊಂದಿಗೆ ಬರಲಿದೆ ಕಿಯಾ ಕಾರ್ನಿವಾಲ್

ಟಾಟಾ ನೆಕ್ಸಾನ್ ಇವಿ ಅನಾವರಣ ಮುಂದೂಡಿಕೆ- ಡಿ.17ರ ಬದಲಾಗಿ 19ಕ್ಕೆ ಫಿಕ್ಸ್..!

ಟಾಟಾ ಸಂಸ್ಥೆಯು ತನ್ನ ವಿನೂತನ ಜಿಪ್‌ಟ್ರಾನ್ ತಂತ್ರಜ್ಞಾನದ ಮೇಲೆ ಸುಮಾರು 8 ವರ್ಷಗಳ ವಾರಂಟಿ ನೀಡವುದಾಗಿ ಘೋಷಿಸಿದ್ದು, ಹೊಸ ಪವರ್‌ಟ್ರೈನ್‌ನಲ್ಲಿ ಮ್ಯಾಗ್ನೆಟ್ ಎಸಿ ಮೋಟಾರ್ ಜೋಡಿಸಿರುವುದು ಪ್ರಮುಖ ಆಕರ್ಷಣೆಯಾಗಿದೆ.

MOST READ: ಕಾರು ಖರೀದಿಸಿದ ಮಾಲೀಕನ ಮೇಲೆ ಕೇಸ್ ಜಡಿದ ಎಂಜಿ ಮೋಟಾರ್..!

ಟಾಟಾ ನೆಕ್ಸಾನ್ ಇವಿ ಅನಾವರಣ ಮುಂದೂಡಿಕೆ- ಡಿ.17ರ ಬದಲಾಗಿ 19ಕ್ಕೆ ಫಿಕ್ಸ್..!

ಇದರೊಂದಿಗೆ ಸದ್ಯ ಮಾರುಕಟ್ಟೆಯಲ್ಲಿರುವ 1.2-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿರುವ ನೆಕ್ಸಾನ್ ಫೇಸ್‌ಲಿಫ್ಟ್ ಕಾರು ಆವೃತ್ತಿ ಕೂಡಾ ಬಿಎಸ್-6 ಎಂಜಿನ್ ಆಯ್ಕೆಯೊಂದಿಗೆ ಉನ್ನತೀಕರಿಸಲಾಗಿದೆ.

MOST READ: ಖರೀದಿಸಿದ ಬೈಕ್ ಪಡೆಯಲು ಕಾನೂನು ಹೋರಾಟ ಮಾಡಿದ ಉದ್ಯಮಿ

ಟಾಟಾ ನೆಕ್ಸಾನ್ ಇವಿ ಅನಾವರಣ ಮುಂದೂಡಿಕೆ- ಡಿ.17ರ ಬದಲಾಗಿ 19ಕ್ಕೆ ಫಿಕ್ಸ್..!

ಎಂಜಿನ್ ಹೊರತಾಗಿ ನೆಕ್ಸಾನ್ ಫೇಸ್‌ಲಿಫ್ಟ್ ಕಾರಿನಲ್ಲಿ ಈ ಬಾರಿ ಮರುವಿನ್ಯಾಸಗೊಳಿಸಲಾದ ಫ್ರಂಟ್ ಬ್ಯಾನೆಟ್, ಬಂಪರ್ ಡಿಸೈನ್, ಫುಲ್ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಹೊಸ ತಂತ್ರಜ್ಞಾನ ಪ್ರೇರಿತ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸೇರಿದಂತೆ ಕ್ಯಾಬಿನ್ ವಿನ್ಯಾಸದಲ್ಲಿ ಮಹತ್ವದ ಬದಲಾವಣೆ ಪಡೆದುಕೊಂಡಿದ್ದು, ಬಿಎಸ್-6 ವೈಶಿಷ್ಟ್ಯತೆಯಿಂದಾಗಿ ಹೊಸ ಕಾರಿನ ಬೆಲೆಯಲ್ಲಿ ಪ್ರಸ್ತುತ ಮಾರುಕಟ್ಟೆಗಿಂತ ರೂ.30 ಸಾವಿರದಿಂದ ರೂ.1.20 ಲಕ್ಷದ ತನಕ ದುಬಾರಿ ಬೆಲೆ ಪಡೆಯಲಿದೆ.

Article Published On: Tuesday, December 10, 2019, 11:57 [IST]
English summary
Tata Nexon Electric reveal pushed to December 19, 2019. Read more in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+