ಹೊಸ ಪ್ರೀಮಿಯಂ ಫೀಚರ್ಸ್ ಪಡೆಯಲಿವೆ ಟಾಟಾ ಟಿಯಾಗೊ ಜೆಟಿಪಿ ಮತ್ತು ಟಿಗೋರ್ ಜೆಟಿಪಿ
ಟಾಟಾ ಸಂಸ್ಥೆಯು ತನ್ನ ಜನಪ್ರಿಯ ಟಿಯಾಗೊ ಮತ್ತು ಟಿಗೋರ್ ಜೆಟಿಪಿ ವರ್ಷನ್‌ಗಳಲ್ಲಿ ಗ್ರಾಹಕರ ಬೇಡಿಕೆಯೆಂತೆ ಕೆಲವು ಬದಲಾವಣೆಗಳನ್ನು ಪರಿಚಯಿಸುತ್ತಿದ್ದು, ನೆಕ್ಸಾನ್ ಕಂಪ್ಯಾಕ್ಟ್ ಎಸ್‌ಯುವಿ ಆವೃತ್ತಿಯ ನಂತರ ಟಿಯಾಗೊ ಮತ್ತು ಟಿಗೋರ್ ಜೆಟಿಪಿ ವರ್ಷನ್‌ಗಳಲ್ಲೂ ಕೆಲವು ಪ್ರೀಮಿಯಂ ಫೀಚರ್ಸ್‌ಗಳನ್ನು ಉನ್ನತಿಕರಿಸುತ್ತಿದೆ.

ನೆಕ್ಸಾನ್ ಕಾರು ಮಾದರಿಯಲ್ಲೇ ಟಿಯಾಗೋ ಜೆಟಿಪಿ ಮತ್ತು ಟಿಗೋರ್ ಜೆಟಿಪಿ ಕಾರುಗಳಲ್ಲಿ ಹೊಸದಾಗಿ ಆ್ಯಪಲ್ ಕಾರ್ ಪ್ಲೇ ಮತ್ತು ಅಂಡ್ರಾಯಿಡ್ ಆಟೋ ಪ್ರೇರಣೆ ಹೊಂದಿರುವ 7-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್, ಆಟೋಮ್ಯಾಟಿಕ್ ರಿಯರ್ ವ್ಯೂ ಮಿರರ್ ಮತ್ತು ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್ ಸೌಲಭ್ಯವನ್ನು ಸ್ಟ್ಯಾಂಡರ್ಡ್ ಆಗಿ ನೀಡಿದ್ದು, ಹೊಸ ಸೌಲಭ್ಯದಿಂದಾಗಿ ಕಾರಿನ ಬೆಲೆಯಲ್ಲೂ ತುಸು ದುಬಾರಿಯಾಗಲಿದೆ.

ಇನ್ನುಳಿದಂತೆ ಕಾರಿನ ತಾಂತ್ರಿಕ ಅಂಶಗಳನ್ನು ಈ ಹಿಂದಿನಂತೆಯೇ ಮುಂದುವರಿಸಲಾಗಿದ್ದು, ಹತ್ತು ಹಲವು ವಿಶೇಷ ಸೌಲಭ್ಯಗಳನ್ನು ಹೊಂದಿರುವ ಜೆಟಿಪಿ ವರ್ಷನ್ ಕಾರುಗಳು ಪರ್ಫಾಮೆನ್ಸ್ ಕಾರು ಪ್ರಿಯರ ಆಕರ್ಷಣೆಗೆ ಕಾರಣವಾಗಿವೆ.

ಸಾಮಾನ್ಯ ಮಾದರಿಯ ಟಿಗೋರ್, ಟಿಯಾಗೊ ಕಾರುಗಳಿಂತಲೂ ಉತ್ತಮ ತಾಂತ್ರಿಕ ಸೌಲಭ್ಯಗಳನ್ನು ಹೊಂದಿರುವ ಟಿಯಾಗೊ ಜೆಟಿಪಿ ಮತ್ತು ಟಿಗೋರ್ ಜೆಟಿಪಿ ಕಾರುಗಳು ಸ್ಪೋರ್ಟಿ ಲುಕ್‌ನೊಂದಿಗೆ ಪ್ರೀಮಿಯಂ ಫೀಚರ್ಸ್ ಹೊತ್ತುಬಂದಿದೆ. ಹೀಗಾಗಿ ಸಾಮಾನ್ಯ ಕಾರುಗಳಿಂತ ಜೆಟಿಪಿ ವರ್ಷನ್‌ಗಳ ಬೆಲೆ ತುಸು ದುಬಾರಿ ಎನ್ನಿಸುತ್ತವೆ.

ಕೊಯಮತ್ತೂರು ಮೂಲದ ಜೇಯಮ್ ಟಾಟಾ ಪರ್ಫಾಮೆನ್ಸ್ (ಜೆಟಿಪಿ) ಸಂಸ್ಥೆಯೊಂದಿಗೆ ಜೊತೆಗೂಡಿರುವ ಟಾಟಾ ಸಂಸ್ಥೆಯು ತನ್ನ ಜನಪ್ರಿಯ ಕಾರು ಆವೃತ್ತಿಗಳಾದ ಟಿಯಾಗೊ ಮತ್ತು ಟಿಗೋರ್ ಆವೃತ್ತಿಗಳನ್ನು ಸ್ಪೋರ್ಟಿ ಲುಕ್ ಜೊತೆಗೆ ಪರ್ಫಾಮೆನ್ಸ್ ಬಳಕೆಯ ಉದ್ದೇಶಕ್ಕಾಗಿ ಹೆಚ್ಚಿನ ಮಟ್ಟದ ಎಂಜಿನ್ ದಕ್ಷತೆಯನ್ನು ಹೊಸ ಜೆಟಿಪಿ ಆವೃತ್ತಿಗಳಲ್ಲಿ ಒದಗಿಸಿದೆ. ದೆಹಲಿ ಎಕ್ಸ್‌ಶೋರೂಂ ಪ್ರಕಾರ ಟಾಟಾ ಹೊಸ ಟಿಯಾಗೊ ಜೆಟಿಪಿ ಬೆಲೆಯನ್ನು ರೂ. 6.39 ಲಕ್ಷಕ್ಕೆ ಮತ್ತು ಟಿಗೋರ್ ಜೆಟಿಪಿ ಕಾರಿನ ಬೆಲೆಯನ್ನು ರೂ.7.49 ಲಕ್ಷಕ್ಕೆ ನಿಗದಿಗೊಳಿಸಲಾಗಿದ್ದು, ಬೆಲೆಗೆ ತಕ್ಕಂತೆ ಹೊಸ ಸುಧಾರಿತ ಸೌಲಭ್ಯಗಳನ್ನು ಪಡೆದುಕೊಂಡಿವೆ.

ಸಾಮಾನ್ಯ ಮಾದರಿಯ ಟಿಗೋರ್, ಟಿಯಾಗೊ ಕಾರುಗಳಿಂತಲೂ ಉತ್ತಮ ತಾಂತ್ರಿಕ ಸೌಲಭ್ಯಗಳನ್ನು ಹೊಂದಿರುವ ಟಿಯಾಗೊ ಜೆಟಿಪಿ ಮತ್ತು ಟಿಗೋರ್ ಜೆಟಿಪಿ ಕಾರುಗಳು ಸ್ಪೋರ್ಟಿ ಲುಕ್‌ನೊಂದಿಗೆ ಪ್ರೀಮಿಯಂ ಫೀಚರ್ಸ್ ಹೊತ್ತು ಬಂದಿದ್ದು, ನೋಡಲು ಆಕರ್ಷಕ ತಾಂತ್ರಿಕ ವೈಶಿಷ್ಟ್ಯತೆ ಪಡೆದಿವೆ.

ಮೇಲೆ ಹೇಳಿದ ಹಾಗೆ ಸಾಮಾನ್ಯ ಟಿಯಾಗೊ ಮತ್ತು ಟಿಗೋರ್ ಕಾರುಗಳಿಂತ ಹೆಚ್ಚಿನ ಮಟ್ಟದ ತಾಂತ್ರಿಕ ಸೌಲಭ್ಯಗಳನ್ನು ಹೊಂದಿರುವ ಟಿಯಾಗೊ ಜೆಟಿಪಿ ಮತ್ತು ಟಿಗೋರ್ ಜೆಟಿಪಿ ಆವೃತ್ತಿಗಳು, ಮುಂಭಾಗದ ಗ್ರಿಲ್‌ನಲ್ಲಿ ನೀಡಲಾಗಿರುವ 'JTP' ಬ್ಯಾಡ್ಜ್ ಆಕರ್ಷಣೆಯಾಗಿದೆ.
MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಡ್ಯುಯಲ್ ವೇಂಬರ್ ಪ್ರೊಜೆಕ್ಟರ್ ಹೆಡ್‍ಲ್ಯಾಂಪ್ ಮತ್ತು ರೇಡಿಯೇಟರ್ ಗ್ರಿಲ್ ಅನ್ನು ಬಾನೆಟ್‍ನ ಮೇಲೆ ಅಳವಡಿಸುವ ಮೂಲಕ ಮುಂಭಾಗದ ವಿನ್ಯಾಸಕ್ಕೆ ಮತ್ತಷ್ಟು ಮೆರಗು ತರಲಾಗಿದ್ದು, ಕಾರಿನ ಸೈಡ್‍ನಲ್ಲಿ ಡೈಮಂಡ್ ಕಟ್ ಬ್ಲಾಕ್ ಮತ್ತು ಸಿಲ್ವರ್ ಬಣ್ಣದ 15-ಇಂಚಿನ ಅಲಾಯ್ ಚಕ್ರಗಳನ್ನು ನೀಡಲಾಗಿದೆ.
MOST READ: ಲೋನ್ ಚಿಂತೆ ಬೇಡವೇ ಬೇಡ- ಇನ್ಮುಂದೆ ಲೀಸ್‌ಗೆ ಸಿಗಲಿವೆ ಹ್ಯುಂಡೈ ಕಾರುಗಳು..!

ಎಂಜಿನ್ ಸಾಮರ್ಥ್ಯ
ಜೆಟಿಪಿ ಕಾರುಗಳಲ್ಲಿ ದೊಡ್ಡ ಬದಲಾವಣೆ ಎಂದರೆ ಅವು ಎಂಜಿನ್. ಏಕೆಂದರೆ ಈ ಬಾರಿ ನೀಡಲಾಗಿರುವ ಹೆಚ್ಚು ಸಾಮರ್ಥ್ಯದ 1.2 ಲೀಟರ್ ರೆವೊಟ್ರಾನ್ ಟರ್ಬೋಚಾರ್ಜ್ಡ್ ಎಂಜಿನ್‍ಗಳು ಹೆಚ್ಚು ಸ್ಪೀಡ್ ಅನ್ನು ಒದಗಿಸಬಲ್ಲವು.

ಟಿಯಾಗೊ ಜೆಟಿಪಿ ಹಾಗು ಟಿಗೋರ್ ಜೆಟಿಪಿ ಕಾರುಗಳಲ್ಲಿ ಅಳವಡಿಸಲಾಗಿರುವ 1.2 ರೆವೊಟ್ರಾನ್ ಪೆಟ್ರೋಲ್ ಎಂಜಿನ್‍ಗಳು 112-ಬಿಹೆಚ್‍ಪಿ ಮತ್ತು 150-ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಇದೇ ಎಂಜಿನ್ ಮಾದರಿಯ ಸಾಮಾನ್ಯ ಕಾರುಗಳಲ್ಲಿ 83.2-ಬಿಎಚ್‌ಪಿ ಮತ್ತು 114ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದ್ದು, ಜೇಯಮ್ ಟಾಟಾ ಪರ್ಫಾಮೆನ್ಸ್ (ಜೆಟಿಪಿ) ಸಂಸ್ಥೆಯು ಕಾರು ಪ್ರಿಯರಿಗಾಗಿ ಉತ್ತಮ ಮಾದರಿಯ ಪರ್ಫಾಮೆನ್ಸ್ ಗುಣ ಹೆಚ್ಚಿಸಿವೆ.


Click it and Unblock the Notifications