ದೀಪಾವಳಿಗೂ ಮುನ್ನ ಈ ಕಾರುಗಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್

ಈ ವರ್ಷದ ಜನವರಿ ತಿಂಗಳಿನಿಂದ ಭಾರತದ ಆಟೋಮೊಬೈಲ್ ಉದ್ಯಮವು ಮಾರಾಟದಲ್ಲಿ ಕುಸಿತವನ್ನು ಕಾಣುತ್ತಿದೆ. ಆದರೂ ಸಹ ಹಲವಾರು ಕಂಪನಿಗಳು ಹೊಸ ಹೊಸ ಕಾರುಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುತ್ತಿವೆ.

ದೀಪಾವಳಿ ಮುನ್ನ ಈ ಕಾರುಗಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್

ಹಲವು ಕಂಪನಿಗಳ ಕಾರುಗಳು ಬೇಡಿಕೆಯನ್ನು ಹೊಂದಿ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ. ಕೆಲವು ಕಂಪನಿಯ ಕಾರುಗಳಿಗೆ ಯಾವ ಪ್ರಮಾಣದ ಬೇಡಿಕೆಯಿದೆ ಎಂದರೆ ಕೆಲವು ಕಾರುಗಳನ್ನು ಬುಕ್ಕಿಂಗ್ ಮಾಡಿ ಹಲವು ತಿಂಗಳವರೆಗೆ ಕಾಯಬೇಕಾಗುತ್ತದೆ. ಯಾವ ಯಾವ ಕಂಪನಿಯ ಕಾರುಗಳು ಹೆಚ್ಚಿನ ಬೇಡಿಕೆಯನ್ನು ಹೊಂದಿವೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ದೀಪಾವಳಿ ಮುನ್ನ ಈ ಕಾರುಗಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್

ಕಿಯಾ ಸೆಲ್ಟೋಸ್

ಸೆಲ್ಟೋಸ್, ಭಾರತದಲ್ಲಿ ಬಿಡುಗಡೆಯಾದ ಕಿಯಾ ಕಂಪನಿಯ ಮೊದಲ ವಾಹನವಾಗಿದೆ. ಕಳೆದ ಆಗಸ್ಟ್ ನಲ್ಲಿ ಬಿಡುಗಡೆಯಾದ ನಂತರ ಸೆಲ್ಟೋಸ್ ಎಸ್‍‍ಯುವಿಯು 50,000ಕ್ಕೂ ಹೆಚ್ಚು ಬುಕ್ಕಿಂಗ್‍‍ಗಳನ್ನು ಪಡೆದಿದೆ. ಸೆಲ್ಟೋಸ್ ವಾಹನವನ್ನು ಟೆಕ್ ಲೈನ್/ಹೆಚ್‍‍ಟಿ ಲೈನ್ ಹಾಗೂ ಸ್ಪೋರ್ಟಿಯರ್ ಜಿಟಿ ಲೈನ್ ಎಂಬ ಎರಡು ಟ್ರಿಮ್‍ಗಳಲ್ಲಿ ಮಾರಾಟ ಮಾಡಲಾಗುತ್ತದೆ.

ದೀಪಾವಳಿ ಮುನ್ನ ಈ ಕಾರುಗಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್

ಈ ಎರಡು ಟ್ರಿಮ್‍‍ಗಳ 16 ಮಾದರಿಗಳನ್ನು ಮಾರಾಟ ಮಾಡಲಾಗುತ್ತದೆ. ಮೂಲ ಮಾದರಿಯ ಹೆಚ್‍‍ಟಿ ಲೈನ್ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.9.69 ಲಕ್ಷಗಳಾಗಿದೆ. ಜಿಟಿ ಲೈನ್ ಟಾಪ್ ಎಂಡ್ ಮಾದರಿಯ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.16.99 ಲಕ್ಷಗಳಾಗಿದೆ. ಸೆಲ್ಟೋಸ್ ಎಸ್‍‍ಯುವಿಯು ದೇಶಿಯ ಮಾರುಕಟ್ಟೆಯಲ್ಲಿ ಹ್ಯುಂಡೈನ ಕ್ರೆಟಾ, ನಿಸ್ಸಾನ್ ಕಿಕ್ಸ್ ಹಾಗೂ ಎಂಜಿ ಹೆಕ್ಟರ್‍‍‍ಗಳಿಗೆ ಪೈಪೋಟಿ ನೀಡುತ್ತದೆ.

ದೀಪಾವಳಿ ಮುನ್ನ ಈ ಕಾರುಗಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್

ಹ್ಯುಂಡೈ ವೆನ್ಯೂ

ಹ್ಯುಂಡೈ ಕಂಪನಿಯ ಜನಪ್ರಿಯತೆಗೆ ತಕ್ಕಂತೆ ವೆನ್ಯೂ ಎಸ್‍‍ಯುವಿ ಸಬ್ 4 ಮೀಟರ್ ಸೆಗ್‍‍ಮೆಂಟಿನಲ್ಲಿ ಹೆಚ್ಚು ಮಾರಾಟವಾಗುತ್ತಿದ್ದು, ಮಾರುತಿ ಸುಜುಕಿ ಕಂಪನಿಯ ವಿಟಾರಾ ಬ್ರಿಝಾ, ಟಾಟಾ ನೆಕ್ಸಾನ್, ಮಹೀಂದ್ರಾ ಎಕ್ಸ್ ಯುವಿ 300 ಹಾಗೂ ಫೋರ್ಡ್ ಇಕೊ‍‍ಸ್ಪೋರ್ಟ್‍‍ಗಳಿಗೆ ಪೈಪೋಟಿ ನೀಡುತ್ತಿದೆ.

ದೀಪಾವಳಿ ಮುನ್ನ ಈ ಕಾರುಗಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್

ಕನೆಕ್ಟೆಡ್ ಕಾರ್ ಟೆಕ್ನಾಲಜಿ, ಹೆಚ್ಚು ಫೀಚರ್ಸ್ ಹಾಗೂ ಹ್ಯುಂಡೈ ಕಂಪನಿಯ ಹೆಸರಿನಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿದೆ. ವೆನ್ಯೂ ಕಾರಿನ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.6.5 ಲಕ್ಷಗಳಿಂದ ರೂ.11.10 ಲಕ್ಷಗಳಾಗಿದೆ.

ದೀಪಾವಳಿ ಮುನ್ನ ಈ ಕಾರುಗಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್

ಎಂಜಿ ಹೆಕ್ಟರ್

ಎಂಜಿ ಕಂಪನಿಯು ಹೆಕ್ಟರ್ ಎಸ್‍‍ಯುವಿಯನ್ನು ಹಲವಾರು ಫೀಚರ್‍‍ಗಳೊಂದಿಗೆ ಬಿಡುಗಡೆಗೊಳಿಸಿದೆ. ಈ ಎಸ್‍‍ಯುವಿಯಲ್ಲಿರುವ ಅನೇಕ ಫೀಚರ್‍‍ಗಳನ್ನು ಇದೇ ಮೊದಲ ಬಾರಿಗೆ ಈ ಸೆಗ್‍‍ಮೆಂಟಿನಲ್ಲಿ ನೀಡಲಾಗಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ದೀಪಾವಳಿ ಮುನ್ನ ಈ ಕಾರುಗಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್

ಈ ಎಸ್‍‍ಯುವಿಯು ಟಾಟಾ ಹ್ಯಾರಿಯರ್ ಹಾಗೂ ಮಹೀಂದ್ರಾ ಎಕ್ಸ್ ಯುವಿ 500ಗಳಿಗೆ ಪೈಪೋಟಿ ನೀಡುತ್ತದೆ. ಈ ಎಸ್‍‍ಯುವಿಯಲ್ಲಿ ದೊಡ್ಡ ಗಾತ್ರದ 10.4 ಇಂಚಿನ ಟಚ್‍‍ಸ್ಕ್ರೀನ್ ಇನ್ಫೋಟೆನ್‍‍ಮೆಂಟ್ ಸಿಸ್ಟಂ, ಪನೊರಾಮಿಕ್ ಸನ್‍‍ರೂಫ್, 100ಕ್ಕೂ ಹೆಚ್ಚಿನ ವಾಯ್ಸ್ ಕಮಾಂಡ್, 360 ಡಿಗ್ರಿ ಕ್ಯಾಮರಾ, ಫ್ರಂಟ್ ಪಾರ್ಕಿಂಗ್ ಸೆನ್ಸಾರ್‍ ಸೇರಿದಂತೆ ಹಲವಾರು ಫೀಚರ್‍‍ಗಳಿವೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ದೀಪಾವಳಿ ಮುನ್ನ ಈ ಕಾರುಗಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್

ಈ ಎಸ್‍‍ಯುವಿಯ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.12.18 ಲಕ್ಷಗಳಿಂದ ರೂ.16.88 ಲಕ್ಷಗಳಾಗಿದೆ. ಈ ಸೆಗ್‍ಮೆಂಟಿನಲ್ಲಿರುವ ಬೇರೆ ಎಸ್‍‍ಯುವಿಗಳಿಗೆ ಹೋಲಿಸಿದರೆ ಹೆಕ್ಟರ್ ಸ್ಪರ್ಧಾತ್ಮಕ ಬೆಲೆಯನ್ನು ಹೊಂದಿದೆ. ಹೆಕ್ಟರ್ ಎಸ್‍‍ಯುವಿಯ ವಿತರಣೆಯನ್ನು ಪಡೆಯಲು ಬುಕ್ಕಿಂಗ್ ಮಾಡಿದ ನಂತರ ಮೂರು ತಿಂಗಳು ಕಾಯಬೇಕಾಗುತ್ತದೆ.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ದೀಪಾವಳಿ ಮುನ್ನ ಈ ಕಾರುಗಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್

ಮಾರುತಿ ಸುಜುಕಿ ಎರ್ಟಿಗಾ

ಮಾರುತಿ ಸುಜುಕಿ ಕಂಪನಿಯ ಎರ್ಟಿಗಾ ಭಾರತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿರುವ ಎಂಪಿವಿಯಾಗಿದೆ. ಕಳೆದ ತಿಂಗಳು ಈ ಎಂಪಿವಿಯ 6,300 ಯುನಿಟ್‍‍ಗಳು ಮಾರಾಟವಾಗಿವೆ. ಈ ಎಂಪಿವಿಯ ವಿತರಣೆಯನ್ನು ಪಡೆಯಲು ಬುಕ್ಕಿಂಗ್ ಮಾಡಿದ ನಂತರ ಸುಮಾರು ಒಂದು ತಿಂಗಳಿಗೂ ಹೆಚ್ಚಿನ ಕಾಲ ಕಾಯಬೇಕಾಗುತ್ತದೆ.

ದೀಪಾವಳಿ ಮುನ್ನ ಈ ಕಾರುಗಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್

ಎರ್ಟಿಗಾ ಎಂಪಿವಿಯ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.7.55 ಲಕ್ಷಗಳಿಂದ ರೂ.11.21 ಲಕ್ಷಗಳಾಗುತ್ತದೆ. ಈ ಎಂಪಿವಿಯು ಎಕ್ಸ್ ಎಲ್6, ಮಹೀಂದ್ರಾ ಮರಾಜೊ ಹಾಗೂ ರೆನಾಲ್ಟ್ ಲಾಡ್ಜಿಗಳಿಗೆ ಪೈಪೋಟಿ ನೀಡುತ್ತದೆ.

ದೀಪಾವಳಿ ಮುನ್ನ ಈ ಕಾರುಗಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್

ರೆನಾಲ್ಟ್ ಟ್ರೈಬರ್

ರೆನಾಲ್ಟ್ ಟ್ರೈಬರ್ ಭಾರತದ ಮೊದಲ ಸಬ್ 4 ಮೀಟರ್ ಎಂಪಿವಿ/ಹ್ಯಾಚ್‍‍ಬ್ಯಾಕ್ ಕಾರ್ ಆಗಿದೆ. ಕಳೆದ ಆಗಸ್ಟ್ ನಲ್ಲಿ ಬಿಡುಗಡೆಯಾದ ಈ ಕಾರು ಹೆಚ್ಚಿನ ಪ್ರಮಾಣದ ಬೇಡಿಕೆಯನ್ನು ಹೊಂದಿದೆ. ಈ ಸಬ್ ಕಾಂಪ್ಯಾಕ್ಟ್ ಎಂ‍‍ಪಿವಿ ಟೊಯೊಟಾ ಇನೊವಾ ಕ್ರಿಸ್ಟಾವನ್ನು ಮಾರಾಟದಲ್ಲಿ ಹಿಂದಿಕ್ಕಿ, 4,710 ಯುನಿಟ್‍‍ಗಳ ಮಾರಾಟದೊಂದಿಗೆ ಎರಡನೇ ಸ್ಥಾನದಲ್ಲಿದೆ.

ದೀಪಾವಳಿ ಮುನ್ನ ಈ ಕಾರುಗಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್

ರೆನಾಲ್ಟ್ ಟ್ರೈಬರ್ ಕಾರಿನ ವಿತರಣೆಯನ್ನು ಪಡೆಯಲು ಬುಕ್ಕಿಂಗ್ ಮಾಡಿದ ನಂತರ ಮೂರು ತಿಂಗಳು ಕಾಯಬೇಕಾಗುತ್ತದೆ. ಈ ಏಳು ಸೀಟರ್ ಎಂಪಿವಿಯ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.4.95 ಲಕ್ಷಗಳಿಂದ ರೂ.6.49 ಲಕ್ಷಗಳಾಗಿದೆ.

ದೀಪಾವಳಿ ಮುನ್ನ ಈ ಕಾರುಗಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್

ಟ್ರೈಬರ್ ಎಂಪಿವಿ ಸೆಗ್‍‍ಮೆಂಟಿನಲ್ಲಿ ದಟ್ಸನ್ ಗೊ ಪ್ಲಸ್ ಕಾರಿಗೆ ಪೈಪೋಟಿ ನೀಡುವುದರ ಜೊತೆಗೆ ಹ್ಯಾಚ್‍‍ಬ್ಯಾಕ್ ಸೆಗ್‍‍ಮೆಂಟಿನಲ್ಲಿ ಹ್ಯುಂಡೈ ಗ್ರಾಂಡ್ ಐ10 ನಿಯೊಸ್, ಮಾರುತಿ ಸುಜುಕಿ ಸ್ವಿಫ್ಟ್ ಹಾಗೂ ಫೋರ್ಡ್ ಫಿಗೊ ಕಾರುಗಳಿಗೆ ಪೈಪೋಟಿ ನೀಡುತ್ತದೆ. ರೆನಾಲ್ಟ್ ಕಂಪನಿಯು ಟ್ರೈಬರ್ ಕಾರಿನ ಆಟೋಮ್ಯಾಟಿಕ್ ಆವೃತ್ತಿಯನ್ನು ಸಹ ಅಭಿವೃದ್ಧಿಪಡಿಸುತ್ತಿದೆ.

Most Read Articles

Kannada
English summary
Cars With High Demand This Festive Season - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X