2018ರಲ್ಲಿ ಅತಿ ಹೆಚ್ಚು ಮಾರಾಟಗೊಂಡ ಟಾಪ್ 10 ಕಾರುಗಳು ಯಾವವು?

ಕಳೆದ ವರ್ಷ ಹಲವು ಹೊಸತನಗಳಿಗೆ ಕಾರಣವಾದ ಭಾರತೀಯ ಆಟೋ ಉದ್ಯಮವು ಮಹತ್ವದ ಬದಲಾವಣೆಗಳೊಂದಿಗೆ ಇದೀಗ ಹೊಸ ವರ್ಷಕ್ಕೆ ಕಾಲಿಟ್ಟಿದ್ದು, 2018ರಲ್ಲಿ ಆದ ಪ್ರಮುಖ ಬದಲಾವಣೆಗಳು ಭಾರತದಲ್ಲಿ ಅಷ್ಟೇ ಅಲ್ಲದೇ ಜಾಗತಿಕವಾಗಿಯೂ ಸದ್ದು ಮಾಡಿವೆ. ಅದರಲ್ಲೂ ಕಾರು ಮಾರಾಟ ಪ್ರಮಾಣವು ಕೂಡಾ ಒಂದು.

2018ರಲ್ಲಿ ಅತಿ ಹೆಚ್ಚು ಮಾರಾಟಗೊಂಡ ಟಾಪ್ 10 ಕಾರುಗಳು ಯಾವವು?

ಭಾರತದಲ್ಲಿ ಸದ್ಯ ಕಾರು ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಮಾರುತಿ ಸುಜುಕಿ, ಹ್ಯುಂಡೈ, ಹೋಂಡಾ, ಟಾಟಾ ಮೋಟಾರ್ಸ್, ಮಹೀಂದ್ರಾ ಮತ್ತು ಫೋರ್ಡ್ ಸಂಸ್ಥೆಗಳ ಮಧ್ಯೆ ತೀವ್ರ ಪೈಪೋಟಿ ಇದ್ದು, ಟಾಪ್ 10ರಲ್ಲಿ ಸ್ಥಾನ ಪಡೆದುಕೊಳ್ಳುವಲ್ಲಿ ತೀವ್ರ ಪೈಪೋಟಿ ನಡೆಸಿದ್ದ ಪ್ರಮುಖ ಆಟೋ ಉತ್ಪಾದನಾ ಸಂಸ್ಥೆಗಳು ಗರಿಷ್ಠ ಮಟ್ಟದ ಹೊಸ ಕಾರುಗಳನ್ನು ಮಾರಾಟಮಾಡಿದೆ.

2018ರಲ್ಲಿ ಅತಿ ಹೆಚ್ಚು ಮಾರಾಟಗೊಂಡ ಟಾಪ್ 10 ಕಾರುಗಳು ಯಾವವು?

01. ಮಾರುತಿ ಸುಜುಕಿ ಡಿಜೈರ್

ಕಂಪ್ಯಾಕ್ಟ್ ಸೆಡಾನ್ ಮಾದರಿಗಳಲ್ಲಿ ಅತಿ ಹೆಚ್ಚು ಜನಪ್ರಿಯತೆ ಗಳಿಸುತ್ತಿರುವ ಡಿಜೈರ್ ಕಾರುಗಳು ಕಳೆದ 8 ತಿಂಗಳಿನಿಂದ ತಿಂಗಳು ಮಾರಾಟ ಪ್ರಮಾಣದಲ್ಲಿ ನಂ.1 ಸ್ಥಾನದಲ್ಲಿದ್ದು, ಹೋಂಡಾ ಅಮೇಜ್ ಮತ್ತು ಹ್ಯುಂಡೈ ಎಕ್ಸ್‌ಸೆಂಟ್ ತೀವ್ರ ಪೈಪೋಟಿ ನಡೆಸುವ ಮೂಲಕ 2018ರ ಅವಧಿಯಲ್ಲಿ 2,47,815 ಕಾರುಗಳು ಮಾರಾಟಗೊಂಡಿವೆ.

2018ರಲ್ಲಿ ಅತಿ ಹೆಚ್ಚು ಮಾರಾಟಗೊಂಡ ಟಾಪ್ 10 ಕಾರುಗಳು ಯಾವವು?

02. ಮಾರುತಿ ಸುಜುಕಿ ಆಲ್ಟೋ

ಬಿಡುಗಡೆಗೊಂಡ ನಂತರ ಹಲವು ವರ್ಷಗಳ ತನಕ ಒಂದೇ ರೀತಿಯಾದ ಬೇಡಿಕೆಯನ್ನು ಉಳಿಸಿಕೊಂಡ ಕೆಲವೇ ಕೆಲವು ಕಾರು ಮಾದರಿಗಳಲ್ಲಿ ಆಲ್ಟೋ ಕಾರು ಸರಣಿ ಸಹ ಒಂದು. ಆಲ್ಟೋ 800 ಮತ್ತು ಆಲ್ಟೋ ಕೆ10 ಎಂಬ ಮಾದರಿಯಲ್ಲಿ ಖರೀದಿಗೆ ಲಭ್ಯವಿರುವ ಆಲ್ಟೋ ಕಾರುಗಳು 2018ರ ಅವಧಿಯಲ್ಲಿ ಬರೋಬ್ಬರಿ 2,13,746 ಕಾರುಗಳು ಮಾರಾಟವಾಗುವ ಮೂಲಕ ಎರಡನೇ ಸ್ಥಾನದಲ್ಲಿದೆ.

2018ರಲ್ಲಿ ಅತಿ ಹೆಚ್ಚು ಮಾರಾಟಗೊಂಡ ಟಾಪ್ 10 ಕಾರುಗಳು ಯಾವವು?

03. ಮಾರುತಿ ಸುಜುಕಿ ಸ್ವಿಫ್ಟ್

ಹ್ಯಾಚ್‌ಬ್ಯಾಕ್ ಪ್ರಿಯರ ಹಾಟ್ ಫೆವರಿಟ್ ಎಂದೇ ಜನಪ್ರಿಯವಾಗಿರುವ ಸ್ವಿಫ್ಟ್ ಕಾರುಗಳು ಸಹ 2018ರ ಅವಧಿಯಲ್ಲಿ 2,11,840 ಕಾರುಗಳು ಮಾರಾಟಗೊಂಡಿದ್ದು, ನ್ಯೂ ಜನರೇಷನ್ ವೈಶಿಷ್ಟ್ಯತೆಗಳನ್ನು ಹೊಂದಿರುವ ಈ ಸ್ವಿಫ್ಟ್ ಕಾರುಗಳು 2018ರ ಎಕ್ಸ್‌ಪೋದಲ್ಲಿ ಭರ್ಜರಿಯಾಗಿ ಬಿಡುಗಡೆಯಾಗಿದ್ದವು.

2018ರಲ್ಲಿ ಅತಿ ಹೆಚ್ಚು ಮಾರಾಟಗೊಂಡ ಟಾಪ್ 10 ಕಾರುಗಳು ಯಾವವು?

04. ಮಾರುತಿ ಸುಜುಕಿ ಬಲೆನೊ

2015ರಲ್ಲಿ ಮೊದಲ ಬಾರಿಗೆ ಬಿಡುಗೊಂಡ ಬಲೆನೊ ಕಾರುಗಳು ಸಹ ಅತ್ಯುತ್ತಮ ಕಾರು ಮಾದರಿಯಾಗಿ ಹೊರಹೊಮ್ಮಿದ್ದು, ಪೆಟ್ರೋಲ್ ಮತ್ತು ಡಿಸೇಲ್ ಎಂಜಿನ್ ಹೊಂದಿರುವ ಬಲೆನೊ ಕಾರುಗಳು ಪ್ರೀಮಿಯಂ ವೈಶಿಷ್ಟ್ಯತೆಗಳೊಂದಿಗೆ ಭಾರೀ ಸದ್ದು ಮಾಡುತ್ತಿವೆ. ಹೀಗಾಗಿಯೇ 2018ರಲ್ಲಿ 1,99,100 ಕಾರುಗಳು ಮಾರಾಟವಾಗುವ ಮೂಲಕ ನಾಲ್ಕನೇ ಸ್ಥಾನಕ್ಕೆ ಬಡ್ತಿ ಪಡೆದಿರುವ ಬಲೆನೊ ಕಾರು ಹಲವು ವಿಶೇಷತೆಗಳಿಗೆ ಕಾರಣವಾಗಿದೆ.

2018ರಲ್ಲಿ ಅತಿ ಹೆಚ್ಚು ಮಾರಾಟಗೊಂಡ ಟಾಪ್ 10 ಕಾರುಗಳು ಯಾವವು?

05. ಮಾರುತಿ ಸುಜುಕಿ ವ್ಯಾಗನ್ ಆರ್

ದೇಶದಲ್ಲಿ ಮಾರಾಟವಾಗುತ್ತಿರುವ ಟಾಪ್ 10 ಕಾರುಗಳಲ್ಲಿ ಮಾರುತಿ ಸುಜುಕಿ ನಿರ್ಮಾಣದ ವ್ಯಾಗನ್ ಆರ್ ಹ್ಯಾಚ್‌ಬ್ಯಾಕ್ ಕಾರು ಸಹ ಪ್ರಮುಖ ಮಾದರಿಯಾಗಿದೆ. ಪ್ರಥಮ ಬಾರಿಗೆ ಬಿಡುಗಡೆಯಾದ ನಂತರ ಕಳೆದ ತಿಂಗಳ ಹಿಂದಷ್ಟೇ 20 ಲಕ್ಷ ಕಾರು ಮಾರಾಟ ಗುರಿತಲುಪಿರುವ ವ್ಯಾಗನ್ ಆರ್ ಕಾರುಗಳು 2018ರ ಅವಧಿಯಲ್ಲಿ ಒಟ್ಟು 1,49,479 ಕಾರುಗಳು ಮಾರಾಟವಾಗಿವೆ.

2018ರಲ್ಲಿ ಅತಿ ಹೆಚ್ಚು ಮಾರಾಟಗೊಂಡ ಟಾಪ್ 10 ಕಾರುಗಳು ಯಾವವು?

06. ಮಾರುತಿ ವಿಟಾರಾ ಬ್ರೆಝಾ

ಕಂಪ್ಯಾಕ್ಟ್ ಎಸ್‌ಯುವಿಗಳಲ್ಲಿ ಭಾರೀ ಜನಪ್ರಿಯತೆ ಸಾಧಿಸಿರುವ ಬ್ರೇಝಾ ಕಾರುಗಳು ಕಳೆದ ಮೇ ತಿಂಗಳಿನಲ್ಲಿ ಬಿಡುಗಡೆಯಾದ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆವೃತ್ತಿಗಳಿಂದಾಗಿ ಮಾರಾಟಕ್ಕೆ ಪೂರಕವಾಗಿದ್ದು, ಅತ್ಯುತ್ತಮ ಮೈಲೇಜ್ ಹಿನ್ನಲೆ ಗ್ರಾಹಕರನ್ನು ಸೆಳೆಯಲು ಯಶಸ್ವಿಯಾಗಿರುವ ಬ್ರೆಝಾ 2018ರಲ್ಲಿ 1,45,798 ಕಾರುಗಳು ಮಾರಾಟವಾಗಿವೆ.

2018ರಲ್ಲಿ ಅತಿ ಹೆಚ್ಚು ಮಾರಾಟಗೊಂಡ ಟಾಪ್ 10 ಕಾರುಗಳು ಯಾವವು?

07. ಹ್ಯುಂಡೈ ಐ20

ಮಾರುತಿ ಸುಜುಕಿ ನಿರ್ಮಾಣದ ಕಾರುಗಳ ಮಾರಾಟದ ನಂತರ ಟಾಪ್ 10ರಲ್ಲಿ ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿರುವ ಹ್ಯುಂಡೈ ಸಂಸ್ಥೆಯು 2018ರ ಅವಧಿಯಲ್ಲಿ 1,29,154 ಐ20 ಹ್ಯಾಚ್‌ಬ್ಯಾಕ್ ಕಾರುಗಳನ್ನು ಮಾರಾಟಮಾಡಿದೆ.

MOST READ: ಶಾಕಿಂಗ್ ಸುದ್ದಿ- ಭಾರತದಲ್ಲಿ ಬ್ಯಾನ್ ಆಗಲಿವೆ ಈ ಒಂಬತ್ತು ಜನಪ್ರಿಯ ಕಾರುಗಳು..!

2018ರಲ್ಲಿ ಅತಿ ಹೆಚ್ಚು ಮಾರಾಟಗೊಂಡ ಟಾಪ್ 10 ಕಾರುಗಳು ಯಾವವು?

08. ಹ್ಯುಂಡೈ ಗ್ರಾಂಡ್ ಐ10

ಹೊಸ ತಲೆಮಾರಿನ ಸ್ವಿಫ್ಟ್ ಕಾರುಗಳನ್ನು ಬಿಡುಗಡೆ ನಂತರ ಐ10 ಕಾರುಗಳ ಮಾರಾಟಕ್ಕೆ ಹೊಡೆದ ಬಿದ್ದಿದ್ದು, 2018ರ ಅವಧಿಯಲ್ಲಿ 1,22,799 ಕಾರುಗಳ ಮಾರಾಟದೊಂದಿಗೆ ಟಾಪ್ 10ರ ಲಿಸ್ಟ್‌ನಲ್ಲಿ 8ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

2018ರಲ್ಲಿ ಅತಿ ಹೆಚ್ಚು ಮಾರಾಟಗೊಂಡ ಟಾಪ್ 10 ಕಾರುಗಳು ಯಾವವು?

09. ಹ್ಯುಂಡೈ ಕ್ರೆಟಾ

ಕ್ರೆಟಾ ಮಾದರಿಯು ಮೇ ಮತ್ತು ಜೂನ್ ಅವಧಿಯಲ್ಲಿ ಮಾರಾಟದಲ್ಲಿ ಕುಸಿತ ಕಂಡಿದ್ದರೂ ಫೇಸ್‌ಲಿಫ್ಟ್ ಆವೃತ್ತಿ ಬಿಡುಗಡೆಯ ನಂತರ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಹೀಗಾಗಿಯೇ ವರ್ಷದ ಕೊನೆಯಲ್ಲಿ ಗರಿಷ್ಠ ಮಾರಾಟದೊಂದಿಗೆ 1,33,274 ಗುರಿ ತಲುಪಿರುವ ಕ್ರೆಟಾ ಕಾರುಗಳು ಟಾಪ್ 10ರ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ.

MOST READ: ವಾಹನ ಸವಾರರೇ ಎಚ್ಚರ- ಪೆಟ್ರೋಲ್ ಬಂಕ್‌ಗಳಲ್ಲಿ ಹೇಗೆ ನಡೆಯುತ್ತೆ ನೋಡಿ ಹಗಲು ದರೋಡೆ..!

2018ರಲ್ಲಿ ಅತಿ ಹೆಚ್ಚು ಮಾರಾಟಗೊಂಡ ಟಾಪ್ 10 ಕಾರುಗಳು ಯಾವವು?

10. ಮಾರುತಿ ಸುಜುಕಿ ಸೆಲೆರಿಯೋ

ಸೆಲೆರಿಯೊ ಎಕ್ಸ್ ಕಾರುಗಳು ಬಿಡುಗಡೆಯ ನಂತರ ಹ್ಯಾಚ್‌ಬ್ಯಾಕ್ ಕಾರು ಮಾರಾಟ ಪಟ್ಟಿಯಲ್ಲಿ ಮಹತ್ವದ ಬದಲಾವಣೆಗಳಾಗಿದ್ದು, ಅತ್ಯುತ್ತಮ ತಾಂತ್ರಿಕ ಅಂಶಗಳೊಂದಿಗೆ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಸೆಲೆರಿಯೊ ಕಾರುಗಳು 2018ರಲ್ಲಿ 91,947 ಕಾರುಗಳನ್ನು ಮಾರಾಟ ಮಾಡುವ ಮೂಲಕ ಬಹುದಿನಗಳ ನಂತರ ಟಾಪ್ 10ರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿವೆ.

2018ರಲ್ಲಿ ಅತಿ ಹೆಚ್ಚು ಮಾರಾಟಗೊಂಡ ಟಾಪ್ 10 ಕಾರುಗಳು ಯಾವವು?

ಇದರ ಹೊರತಾಗಿ ಹೋಂಡಾ ಅಮೇಜ್, ಟಾಟಾ ಟಿಯಾಗೋ, ಹ್ಯುಂಡೈ ನ್ಯೂ ಸ್ಯಾಂಟ್ರೋ, ಮಾರುತಿ ಒಮ್ನಿ, ಟೊಯೊಟಾ ಇನೋವಾ ಕ್ರಿಸ್ಟಾ, ಮಹೀಂದ್ರಾ ಬಲೆರೊ, ಮಾರುತಿ ಇಕೊ, ರೆನಾಲ್ಟ್ ಕ್ವಿಡ್, ಮಾರುತಿ ಇಗ್ನಿಸ್, ಮಾರುತಿ ಎರ್ಟಿಗಾ, ಹ್ಯುಂಡೈ ಅಯಾನ್, ಹ್ಯುಂಡೈ ಎಕ್ಸ್‌ಸೆಂಟ್, ಟಾಟಾ ನೆಕ್ಸಾನ್, ಮಾರುತಿ ಎಸ್ ಕ್ರಾಸ್, ಫೋರ್ಡ್ ಇಕೋಸ್ಪೋರ್ಟ್, ಹ್ಯುಂಡೈ ವೆರ್ನಾ ಕಾರುಗಳು ಟಾಪ್ 25ರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ.

2018ರಲ್ಲಿ ಅತಿ ಹೆಚ್ಚು ಮಾರಾಟಗೊಂಡ ಟಾಪ್ 10 ಕಾರುಗಳು ಯಾವವು?

ಇದರಲ್ಲಿ ಮಾರುತಿ ಸುಜುಕಿ ಸಂಸ್ಥೆಯೇ ಉಳಿದೆಲ್ಲಾ ಕಾರು ಉತ್ಪಾದನಾ ಸಂಸ್ಥೆಗಳಿಂತಲೂ ಹೆಚ್ಚಿನ ಕಾರುಗಳನ್ನು ಮಾರಾಟ ಮಾಡುವುದರೊಂದಿಗೆ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದು, ತದನಂತರದ ಹ್ಯುಂಡೈ ಹಾಗೂ ಹೋಂಡಾ ಕೂಡಾ ಗ್ರಾಹಕರ ಸೆಳೆಯುವಲ್ಲಿ ಯಶಸ್ವಿಯಾಗಿದೆ ಎನ್ನಬಹುದು.

Most Read Articles

Kannada
English summary
Top-Selling Cars In India For 2018 — Maruti Suzuki & Hyundai Dominate The Charts. Read in Kannada.
Story first published: Tuesday, January 1, 2019, 11:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X