ಏಪ್ರಿಲ್‍ 2019ರಲ್ಲಿ ಹೆಚ್ಚು ಮಾರಾಟವಾದ ಕಾರುಗಳಿವು...!

ಏಪ್ರಿಲ್ 2019ರಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾದ ಕಾರುಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಮಾರ್ಚ್ ತಿಂಗಳಿನಲ್ಲಿ ಕುಸಿತ ಕಂಡಿದ್ದ ಮಾರುತಿ ಸುಜುಕಿ ಕಂಪನಿಯ ಆಲ್ಟೋ ಕಾರು, ಏಪ್ರಿಲ್ ತಿಂಗಳಿನಲ್ಲಿ ಮತ್ತೆ ಟಾಪ್‍‍‍ಲಿಸ್ಟ್ ನಲ್ಲಿ ಸ್ಥಾನ ಪಡೆದಿದೆ.

ಏಪ್ರಿಲ್‍ 2019ರಲ್ಲಿ ಹೆಚ್ಚು ಮಾರಾಟವಾದ ಕಾರುಗಳಿವು...!

ಬಿ‍‍ಎಸ್6 ಮಾಲಿನ್ಯ ನಿಯಮಗಳಿಗೆ ತಕ್ಕ ಎಂಜಿನ್ ಅಳವಡಿಸಿ ಮಾರುತಿ ಸುಜುಕಿಯು ತನ್ನ ಹೊಸ ಆಲ್ಟೋ ಕಾರನ್ನು ದೇಶಿಯ ಮಾರುಕಟ್ಟೆಯಲಿ ಬಿಡುಗಡೆಗೊಳಿಸಿದೆ. ಎಂಜಿನ್ ಅಪ್‍‍‍‍ಡೇಟ್ ಜೊತೆಗೆ ಮಾರುತಿ ಸುಜುಕಿ ಕಂಪನಿಯು ಕೆಲವು ಕಾಸ್ಮೆಟಿಕ್ ಬದಲಾವಣೆಗಳನ್ನು ಸಹ ಮಾಡಿದೆ. ಇದರಿಂದ ಮಾರ್ಚ್ 2019ರಲ್ಲಿ ಗಣನೀಯ ಕುಸಿತ ಕಂಡಿದ್ದ ಈ ಹ್ಯಾಚ್ ಬ್ಯಾಕ್ ಕಾರು ಮಾರಾಟದಲ್ಲಿ ಏರಿಕೆ ಕಂಡಿದೆ.

ಸ್ಥಾನ ಮಾದರಿಗಳು ಏಪ್ರಿಲ್ 2019

ಏಪ್ರಿಲ್ 2018

ಬೆಳವಣಿಗೆ (%)

1 ಮಾರುತಿ ಸುಜುಕಿ ಆಲ್ಟೊ

22,766

21,233

7

2 ಮಾರುತಿ ಸುಜುಕಿ ಡಿಜೈರ್

18,544

25,935

-28

3 ಮಾರುತಿ ಸುಜುಕಿ ಬಲೆನೊ

17,355

20,412

-15

4 ಮಾರುತಿ ಸುಜುಕಿ ಸ್ವಿಫ್ಟ್

15,776

22,776

-31

5 ಮಾರುತಿ ಸುಜುಕಿ ವಿಟಾರಾ ಬ್ರಿಝಾ

11,785

10,818

9

6 ಮಾರುತಿ ಸುಜುಕಿ ವ್ಯಾಗನ್ ಆರ್

11,306

16,561

-32

7 ಹ್ಯುಂಡೈ ಕ್ರೆಟಾ

10,487

9,390

12

8 ಹ್ಯುಂಡೈ ಐ20 ಎಲೈಟ್

10,411

12,369

-16

9 ಮಾರುತಿ ಸುಜುಕಿ ಇಕೊ

10,254

7,475

37

10 ಹ್ಯುಂಡೈ ಐ10 ಗ್ರಾಂಡ್

9,610

12,174

-21

ಏಪ್ರಿಲ್‍ 2019ರಲ್ಲಿ ಹೆಚ್ಚು ಮಾರಾಟವಾದ ಕಾರುಗಳಿವು...!

ಮೊದಲ ಸ್ಥಾನದಲ್ಲಿದ್ದ ಮಾರುತಿ ಸುಜುಕಿಯ ಡಿಜೈರ್ ಎರಡನೇ ಸ್ಥಾನಕ್ಕೆ ಕುಸಿದಿದೆ. ಮಾರುತಿ ಸುಜುಕಿ ಡಿಜೈರ್ ಮತ್ತು ಮಾರುತಿ ಸುಜುಕಿ ಬಲೆನೋ ವಾಹನಗಳು ಮೊದಲ ಮೂರು ಸ್ಥಾನಗಳಲ್ಲಿ ಮುಂದುವರೆದಿವೆ.

ಏಪ್ರಿಲ್‍ 2019ರಲ್ಲಿ ಹೆಚ್ಚು ಮಾರಾಟವಾದ ಕಾರುಗಳಿವು...!

ನಾಲ್ಕನೇ ಸ್ಥಾನದಲ್ಲಿದ್ದ ಮಾರುತಿ ಸುಜುಕಿಯ ವ್ಯಾಗನ್ ಆರ್ ಆರನೇ ಸ್ಥಾನಕ್ಕಿಳಿದಿದೆ. ಸ್ವಿಫ್ಟ್ ಮತ್ತು ವಿಟಾರಾ ಬ್ರೀಝಾ ಗಳು ಮೇಲಕ್ಕೆರಿವೆ. ಮಾರ್ಚ್ 2019ರಲ್ಲಿ 16,152 ವ್ಯಾಗನ್ ಆರ್ ಕಾರುಗಳನ್ನು ಮಾರಾಟ ಮಾಡಲ್ಪಟ್ಟಿದ್ದರೆ, ಏಪ್ರಿಲ್ 2019ರಲ್ಲಿ 11,306 ಕಾರುಗಳನ್ನು ಮಾರಾಟ ಮಾಡಲಾಗಿದೆ.

ಏಪ್ರಿಲ್‍ 2019ರಲ್ಲಿ ಹೆಚ್ಚು ಮಾರಾಟವಾದ ಕಾರುಗಳಿವು...!

ಈ ಪಟ್ಟಿಯಲ್ಲಿ ಮೊದಲ ಆರು ಸ್ಥಾನಗಳನ್ನು ಮಾರುತಿ ಸುಜುಕಿ ಕಂಪನಿಯ ಕಾರುಗಳು ಆಕ್ರಮಿಸಿದ್ದರೆ, ಹ್ಯುಂಡೈ ಕಂಪನಿಯ ಕ್ರೆಟಾ ಕಾರು ಏಳನೇ ಸ್ಥಾನದಲ್ಲಿದೆ. ಮಾರಾಟದಲ್ಲಿ ಸ್ವಲ್ಪ ಮಟ್ಟಿನ ಕುಸಿತ ಕಂಡರೂ ಕ್ರೆಟಾ ಏಳನೇ ಸ್ಥಾನದಲ್ಲಿದೆ. ಹ್ಯುಂಡೈ ಎಲೈಟ್ ಐ20, ಮಾರುತಿ ಸುಜುಕಿ ಇಕೊ ಮತ್ತು ಹ್ಯುಂಡೈ ಗ್ರಾಂಡ್ ಐ 10 ಕಾರುಗಳು ಕ್ರಮವಾಗಿ ಎಂಟು, ಒಂಭತ್ತು ಮತ್ತು ಹತ್ತನೆಯ ಸ್ಥಾನದಲ್ಲಿವೆ. ಮಾರ್ಚ್ 2019ರಲ್ಲಿ 12,172 ಕಾರುಗಳನ್ನು ಮಾರಾಟ ಮಾಡಲಾಗಿದ್ದರೆ, ಏಪ್ರಿಲ್ 2019ರಲ್ಲಿ ಕುಸಿತ ಕಂಡು 10,411 ಕಾರುಗಳನ್ನು ಮಾರಾಟ ಮಾಡಲಾಗಿದೆ.

MOST READ: ಇನ್ಮುಂದೆ ಎಸ್‍‍‍ಯುವಿ ಕಾರುಗಳಲ್ಲಿ ಲೆದರ್ ಸೀಟ್‍‍‍ಗಳಿರಲ್ಲ..!

ಏಪ್ರಿಲ್‍ 2019ರಲ್ಲಿ ಹೆಚ್ಚು ಮಾರಾಟವಾದ ಕಾರುಗಳಿವು...!

ಹೊಸ ಅಪ್‍‍ಡೇಟ್ ಪಡೆದ, ಮಾರುತಿ ಸುಜುಕಿ ಕಂಪನಿಯ ಇಕೊ ವಾಹನವನ್ನು, ಮಾರ್ಚ್ - ಏಪ್ರಿಲ್ 2019ರ ಮಧ್ಯದಲ್ಲಿ ಸುಮಾರು 1,000 ಹೆಚ್ಚುವರಿಯಾಗಿ ಮಾರಾಟ ಮಾಡಲಾಗಿದೆ.

ಏಪ್ರಿಲ್‍ 2019ರಲ್ಲಿ ಹೆಚ್ಚು ಮಾರಾಟವಾದ ಕಾರುಗಳಿವು...!

9,610 ಕಾರುಗಳ ಮಾರಾಟವಾಗಿ ಹ್ಯುಂಡೈ ಗ್ರಾಂಡ್ ಐ10 ಕಾರು ಮಾರುತಿ ಸುಜುಕಿಯ ಸೆಲೆರಿಯೊ ಬದಲಿಗೆ ಹತ್ತನೇ ಸ್ಥಾನ ಪಡೆದಿದೆ.

ಏಪ್ರಿಲ್‍ 2019ರಲ್ಲಿ ಹೆಚ್ಚು ಮಾರಾಟವಾದ ಕಾರುಗಳಿವು...!

ಡ್ರೈವ್‍‍‍‍ಸ್ಪಾರ್ಕ್ ಅಭಿಪ್ರಾಯ

ದೇಶಿಯ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿದ್ದ ತನ್ನ ಕಾರನ್ನು ಅಪ್‍‍‍ಡೇಟ್ ಮಾಡುವ ಮೂಲಕ ಕಳೆದುಕೊಂಡಿದ್ದ ಮೊದಲನೇ ಸ್ಥಾನವನ್ನು ಮಾರುತಿ ಸುಜುಕಿಯ ಆಲ್ಟೊ ಕಾರು ಮರಳಿ ಪಡೆದಿದೆ. ಹ್ಯುಂಡೈ ಕಂಪನಿಯು ಮಾರುತಿ ಸುಜುಕಿ ಕಂಪನಿಗೆ ತೀವ್ರ ಸ್ಪರ್ಧೆಯೊಡುತ್ತಿದೆ. ಮುಂಬರುವ ದಿನಗಳಲ್ಲಿ ಹ್ಯುಂಡೈನ ವೆನ್ಯೂ ವಾಹನವು ಬಿಡುಗಡೆಯಾಗುತ್ತಿರುವುದರಿಂದ ಮಾರಾಟ ಪಟ್ಟಿಯಲ್ಲಿ ಮತ್ತಷ್ಟು ಏರಿಳಿತಗಳನ್ನು ಕಾಣಬಹುದು.

Most Read Articles

Kannada
English summary
Top-Selling Cars In India For April 2019 — Maruti Suzuki Alto Regains Top-Slot In The Sales Chart - Read in kannada
Story first published: Tuesday, May 7, 2019, 16:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X