ಇನ್ಮುಂದೆ ಎಸ್‍‍‍ಯುವಿ ಕಾರುಗಳಲ್ಲಿ ಲೆದರ್ ಸೀಟ್‍‍‍ಗಳಿರಲ್ಲ..!

ಕಾರುಗಳ ಇಂಟಿರಿಯರ್‍‍‍ಗಳು ನಿಧಾನವಾಗಿ ಪರಿಸರ ಸ್ನೇಹಿಯಾಗುತ್ತಿದ್ದು, ಬಹುತೇಕ ಲಗ್ಷುರಿ ಕಾರು ತಯಾರಕರು ಲೆದರ್ ಸೀಟ್‍‍‍ಗಳ ಬದಲಿಗೆ ಮರಗಳಿಂದ ತಯಾರಿಸಿದ ಸೀಟುಗಳಿಗೆ ಆದ್ಯತೆ ನೀಡುತ್ತಿದ್ದು, ನೀಲಗಿರ ಮರ, ಸೋಯಾಬಿನ್ ಮತ್ತು ಇತರ ಸಾವಯವ ಉತ್ಪನ್ನಗಳಿಂದ ತಯಾರಾದ ಸೀಟುಗಳನ್ನು ಬಳಸುತ್ತಿದ್ದಾರೆ.

ಇನ್ಮುಂದೆ ಎಸ್‍‍‍ಯುವಿ ವಾಹನಗಳಲ್ಲಿ ಲೆದರ್ ಸೀಟ್‍‍‍ಗಳಿರಲ್ಲ..!

ಜಾಗ್ವಾರ್, ಲ್ಯಾಂಡ್ ರೋವರ್, ಮರ್ಸಿಡಿಸ್ ಬೆಂಜ್, ಫೆರಾರಿ ಮುಂತಾದ ಕಾರು ತಯಾರಕ ಕಂಪನಿಗಳು ಕಾರಿನ ಒಳಭಾಗದಲ್ಲಿ ಲೆದರ್ ಬಳಕೆಯನ್ನು ಕಡಿಮೆ ಮಾಡುತ್ತಿವೆ. ಉದಾಹರಣೆಗೆ ರೇಂಜ್ ರೋವರ್ ಇವೋಕ್ ಕಾರಿನ ಅಪ್ ಹೊಲ್‍‍ಸ್ಟರಿಗಳನ್ನು, ರಿ-ಸೈಕಲ್ ಮಾಡಿದ ಪ್ಲಾಸ್ಟಿಕ್ ಬಾಟಲ್‍‍‍‍ಗಳನ್ನು ಬಳಸಿ ನಿರ್ಮಿಸಲಾದ ಕ್ವಾದ್ರತ್ ಎಂಬ ಪ್ರಿಮೀಯಂ ಟೆಕ್ಸ್ ಟೈಲ್ಸ್ ನಿಂದ ನಿರ್ಮಿಸಲಾಗಿದೆ. ಕಡಿಮೆ ನೀರು ಬಳಸಿಕೊಂಡು, ನೈಸರ್ಗಿಕವಾಗಿ ಬೆಳೆಯುವ ನೀಲಗಿರಿ ಮರದಿಂದ ತಯಾರಿಸಿರುವ ಟೆಕ್ಸ್ ಟೈಲ್ಸ್ ಅನ್ನು ಸಹ ಗ್ರಾಹಕರು ಪಡೆಯುವ ಆಯ್ಕೆಗಳಿವೆ ಎಂದು ಜಾಗ್ವಾರ್ ಕಂಪನಿ ತನ್ನ ವೆಬ್‍‍‍‍ಸೈಟಿನಲ್ಲಿ ತಿಳಿಸಿದೆ.

ಇನ್ಮುಂದೆ ಎಸ್‍‍‍ಯುವಿ ವಾಹನಗಳಲ್ಲಿ ಲೆದರ್ ಸೀಟ್‍‍‍ಗಳಿರಲ್ಲ..!

ಸಾವಿರಾರು ಟನ್ ಪ್ಲಾಸ್ಟಿಕ್ ಕರಗಿಸಿ ತಯಾರು ಮಾಡಲಾಗಿರುವ ಮೆಟಿರಿಯಲ್‍‍‍‍ಗಳಿಂದ ವ್ಹೀಲ್‍‍‍‍ನ ಆರ್ಕ್‍‍‍‍ನಿಂದ ಕಾರ್ಪೆಟ್‍‍‍ಗಳವರೆಗೆ ಸುಮಾರು 16 ಕೆ.ಜಿಯಷ್ಟು ರಿಸೈಕಲ್ ಮೆಟಿರಿಯಲ್‍‍‍‍ಗಳನ್ನು ಬಳಸಲಾಗಿದೆ. ಫೋರ್ಡ್ ಮೋಟಾರ್ ಕಂಪನಿಯು ಸೊಯಾಬೀನ್ ಫೋಮ್ಅನ್ನು ಸೀಟ್ ಕುಷನ್, ಸೀಟ್ ಬ್ಯಾಕ್ ಮತ್ತು ಹೆಡ್‍‍ರೆಸ್ಟ್ ಗಳಾಗಿ ತನ್ನ ವಾಹನಗಳಲ್ಲಿ 2011ರಿಂದ ಬಳಸುತ್ತಿದೆ.

ಇನ್ಮುಂದೆ ಎಸ್‍‍‍ಯುವಿ ವಾಹನಗಳಲ್ಲಿ ಲೆದರ್ ಸೀಟ್‍‍‍ಗಳಿರಲ್ಲ..!

ಫೋರ್ಡ್ ಮೋಟಾರ್ಸ್ ಸಾವಯವ ವಸ್ತುಗಳಾದ - ಸೋಯಾ, ಗೋಧಿ, ಅಕ್ಕಿ, ಹರಳು, ಕತ್ತಾಳೆ, ತೆಂಗು, ದಾಸವಾಳ ಮತ್ತು ಮರಗಳ ತೊಗಟೆಗಳನ್ನು ತನ್ನ ವಾಹನಗಳಲ್ಲಿ ಬಳಸುತ್ತಿದೆ.

ಇನ್ಮುಂದೆ ಎಸ್‍‍‍ಯುವಿ ವಾಹನಗಳಲ್ಲಿ ಲೆದರ್ ಸೀಟ್‍‍‍ಗಳಿರಲ್ಲ..!

ಪೀಪಲ್ ಫಾರ್ ಎಥಿಕಲ್ ಟ್ರೀಟ್‍‍‍ಮೆಂಟ್ ಆಫ್ ಅನಿಮಲ್ಸ್ (ಪೇಟಾ) ಪ್ರಕಾರ, ಸಾವಯವ ವಸ್ತುಗಳನ್ನು ಸೀಟುಗಳಲ್ಲಿ ಮಾತ್ರವಲ್ಲದೇ ಇಂಟಿರಿಯರ್‍‍‍ಗಳಲ್ಲಿ ಮತ್ತು ಸ್ಟೀಯರಿಂಗ್ ವ್ಹೀಲ್ ಮತ್ತು ಗೇರ್ ಶಿಫ್ಟ್ ಗಳಲ್ಲೂ ಬಳಸಲಾಗುತ್ತಿದೆ. ದಶಕಗಳವರೆಗೆ ಕಾರುಗಳಲ್ಲಿ ಲೆದರ್ ಸೀಟುಗಳನ್ನು ಹೊಂದುವುದು ಹೆಮ್ಮೆಯ ವಿಚಾರವಾಗಿತ್ತು. ಕಾರು ಯಾವ ಮಾದರಿಯಾದಾದರೂ ಪರವಾಗಿಲ್ಲ, ಲೆದರ್ ಸೀಟುಗಳಿಂದ ಕಾರಿನ ಯೋಗ್ಯತೆಯನ್ನು ಅಳೆಯಲಾಗುತ್ತಿತ್ತು. ಲೆದರ್ ಸೀಟಿನ ಸುವಾಸನೆ, ಫೀಲ್‍‍‍ಗಳು ಲೆದರ್ ಸೀಟುಗಳನ್ನೆ ಹೊಂದಬೇಕೆಂಬುದಕ್ಕೆ ಕಾರಣವಾಗಿದ್ದವು.

ಇನ್ಮುಂದೆ ಎಸ್‍‍‍ಯುವಿ ವಾಹನಗಳಲ್ಲಿ ಲೆದರ್ ಸೀಟ್‍‍‍ಗಳಿರಲ್ಲ..!

ಇನ್ನೂ ಮುಂದೆ ನೀವು ನಿಮ್ಮ ಕಾರುಗಳಲ್ಲಿ ಲೆದರ್ ಸೀಟುಗಳನ್ನು ಹೊಂದಲು ಸಾಧ್ಯವಾಗದೇ ಹೋಗಬಹುದು. ಪ್ರಾಣಿ ಪ್ರಿಯರು, ಸಂಘಟನೆಗಳು, ಪರಿಸರವಾದಿಗಳು ಲೆದರ್ ಬದಲಿಗೆ ಬಟ್ಟೆಯ ಸೀಟುಗಳನ್ನು ಅಳವಡಿಸಬೇಕೆಂದು ಒತ್ತಾಯಿಸುತ್ತಿವೆ. ಲೆದರ್ ಸೀಟುಗಳನ್ನು ಕಾರುಗಳಲ್ಲಿ ಏಕೆ ಹೊಂದಬಾರದು ಎಂಬುದಕ್ಕೆ ಕಾರಣಗಳನ್ನು ನೀಡುತ್ತಿದ್ದೇವೆ.

ಲೆದರ್ ಸೀಟುಗಳನ್ನು ಕಾರುಗಳಲ್ಲಿ ಬಳಸದೇ ಇರಲು 9 ಕಾರಣಗಳು

ಇನ್ಮುಂದೆ ಎಸ್‍‍‍ಯುವಿ ವಾಹನಗಳಲ್ಲಿ ಲೆದರ್ ಸೀಟ್‍‍‍ಗಳಿರಲ್ಲ..!

1. ಲೆದರ್‍‍‍‍ನ ಸುವಾಸನೆಯು ನಕಲಿ

ಹೊಸ ಲೆದರ್‍‍‍‍ಗಳು ಉತ್ತಮವಾದ ಸುವಾಸನೆಯನ್ನು ನೀಡುತ್ತಿದ್ದವು, ಇದಕ್ಕೆ ಕಾರಣವೆಂದರೆ ಈ ಲೆದರ್‍‍‍ಗಳನ್ನು ಪರ್ಪ್ಯೂಮ್‍‍‍‍ಗಳಿಂದ ಅದ್ದಲಾಗುತ್ತಿತ್ತು. ಇದನ್ನು ಅನೇಕ ವರ್ಷಗಳಿಂದ ಪಾಲಿಸಿಕೊಂಡು ಬರಲಾಗುತ್ತಿದೆ. ಇಂಗ್ಲಿಷ್ ಲೆದರ್ ಸುವಾಸನೆಯನ್ನು ಕಿಂಗ್ ಜಾರ್ಜ್ 3 ರವರ ಗ್ಲೌಸ್‍‍‍‍ಗಳಿಗಾಗಿ ತಯಾರು ಮಾಡಲಾಗಿತ್ತು.

ಇನ್ಮುಂದೆ ಎಸ್‍‍‍ಯುವಿ ವಾಹನಗಳಲ್ಲಿ ಲೆದರ್ ಸೀಟ್‍‍‍ಗಳಿರಲ್ಲ..!

2. ಈಗ ದೊರೆಯುತ್ತಿರುವುದು ನಿಜವಾದ ಲೆದರ್‍‍‍ಗಳಲ್ಲ

ವಾಸ್ತವವಾಗಿ ಈಗ ನೀಡಲಾಗುತ್ತಿರುವ ಲೆದರ್‍‍‍ಗಳು ನಿಜವಾದವುಗಳಲ್ಲ. ಲೆದರ್‍‍‍ನಂತೆ ಮಾರ್ಪಾಡು ಮಾಡಿ ನೀಡಲಾಗುತ್ತಿರುವ ನಕಲಿ ಮಾಲುಗಳು. ಬಹುತೇಕ ಕಾರುಗಳಲ್ಲಿ ಅಳವಡಿಸಲಾಗಿರುವ ಸೀಟುಗಳು, ಸೈಡುಗಳು, ಮತ್ತು ಹೆಡ್‍‍‍‍ರೆಸ್ಟ್ ಗಳು ಲೆದರ್‍‍‍ನಂತೆಯೇ ಇವೆಯೇ ಹೊರತು ನಿಜವಾದ ಲೆದರ್‍‍‍‍ಗಳಲ್ಲ.

ಇನ್ಮುಂದೆ ಎಸ್‍‍‍ಯುವಿ ವಾಹನಗಳಲ್ಲಿ ಲೆದರ್ ಸೀಟ್‍‍‍ಗಳಿರಲ್ಲ..!

3. ಲೆದರ್ ಮೆಂಟೇನ್ ಮಾಡುವುದು ತ್ರಾಸದಾಯಕವಾದ ಕೆಲಸ

ಲೆದರ್‍‍‍‍ಗಳನ್ನು ಸರಿಯಾಗಿ ನಿಭಾಯಿಸುವುದು ತ್ರಾಸದಾಯಕವಾದ ಕೆಲಸ, ಇದನ್ನು ಕ್ಲೀನ್ ಮಾಡುವುದು ಮತ್ತು ಒಳ್ಳೆಯ ಕಂಡೀಷನ್‍‍‍‍ನಲ್ಲಿ ಇಡುವುದು ನಿತ್ಯದ ಕೆಲಸ, ಒಂದು ದಿನ ಕ್ಲೀನ್ ಮಾಡಿ ಹಾಗೆ ಬಿಟ್ಟರೆ ಹಾಳಾಗುತ್ತವೆ.

ಇನ್ಮುಂದೆ ಎಸ್‍‍‍ಯುವಿ ವಾಹನಗಳಲ್ಲಿ ಲೆದರ್ ಸೀಟ್‍‍‍ಗಳಿರಲ್ಲ..!

4. ಹರಿದು ಹೋದರೆ ಅಸಹ್ಯವಾಗಿ ಕಾಣುತ್ತವೆ

ಒಳ್ಳೆಯ ಗುಣಮಟ್ಟದ ಲೆದರ್‍‍‍‍ಗಳನ್ನು ಸರಿಯಾಗಿ ನಿರ್ವಹಿಸಿದರೆ ಚೆನ್ನಾಗಿ ಕಾಣುತ್ತವೆ ಹಾಗೂ ವರ್ಷಗಟ್ಟಲೇ ಬಾಳಿಕೆ ಬರುತ್ತವೆ. ಒಂದು ವೇಳೆ ಹರಿದು ಹೋದರೆ ಅಸಹ್ಯವಾಗಿ ಕಾಣುತ್ತವೆ.

ಇನ್ಮುಂದೆ ಎಸ್‍‍‍ಯುವಿ ವಾಹನಗಳಲ್ಲಿ ಲೆದರ್ ಸೀಟ್‍‍‍ಗಳಿರಲ್ಲ..!

5. ಲೆದರ್ ತುಂಬಾ ಭಾರ

ಲೆದರ್ ತುಂಬಾ ಭಾರವಾಗಿರುತ್ತವೆ. ಒಳ್ಳೆಯ ಪರ್ಫಾಮೆನ್ಸ್ ನೀಡುವ ಕಾರುಗಳನ್ನು ತುಂಬಾ ಹಗುರವಾಗಿಟ್ಟು ಕೊಂಡಷ್ಟು ಒಳ್ಳೆಯದು. ಎಲ್ಲಾ ಕಡೆಯೂ ಲೆದರ್‍‍‍‍ಗಳನ್ನೇ ಅಳವಡಿಸಿಕೊಂಡರೆ ಕಾರಿನ ತೂಕವು ಹೆಚ್ಚಾಗುತ್ತದೆ. ಮೆಕ್‍‍‍‍ಲಾರೆನ್ ಕಂಪನಿಯು ಒಮ್ಮೆ ಎಲ್ಲಾ ಲೆದರ್‍ ವಸ್ತು‍‍‍ಗಳನ್ನು ಕಾರಿನಿಂದ ತೆಗೆದು ಹಾಕಿದ ಕಾರಣ ಸುಮಾರು 10 ಪೌಂಡ್‍‍‍ಗಳಷ್ಟು ತೂಕ ಕಡಿಮೆಯಾಗಿತ್ತು.

ಇನ್ಮುಂದೆ ಎಸ್‍‍‍ಯುವಿ ವಾಹನಗಳಲ್ಲಿ ಲೆದರ್ ಸೀಟ್‍‍‍ಗಳಿರಲ್ಲ..!

6. ಬಹುತೇಕ ಕಾರುಗಳಲ್ಲಿ ನಕಲಿ ಲೆದರ್‍‍‍ಗಳ ಬಳಕೆ

ಬಹುತೇಕ ಕಾರುಗಳಲ್ಲಿರುವ ಲೆದರ್‍‍‍ಗಳನ್ನು ನೋಡಿದರೆ, ಅವುಗಳು ನೈಸರ್ಗಿಕ ಲೆದರ್‍‍‍‍ಗಳಾಗಿರದೇ ನಕಲಿಯಾಗಿರುತ್ತವೆ. ಇವುಗಳಿಂದ ದೇಹದ ಮೇಲೂ ಪರಿಣಾಮಗಳಾಗುವ ಸಾಧ್ಯತೆಗಳಿರುತ್ತವೆ.

ಇನ್ಮುಂದೆ ಎಸ್‍‍‍ಯುವಿ ವಾಹನಗಳಲ್ಲಿ ಲೆದರ್ ಸೀಟ್‍‍‍ಗಳಿರಲ್ಲ..!

7. ಪ್ರತಿ ಬಾರಿ ಅಡ್ಜಸ್ಟ್ ಮೆಂಟ್

ಅನೇಕ ಬಾರಿ ಸೀಟುಗಳನ್ನು ಅಡ್ಜಸ್ಟ್ ಮಾಡುತ್ತಲೇ ಇರಬೇಕಾಗುತ್ತದೆ. ಆದರೆ ಫ್ಯಾಬ್ರಿಕ್ ಸೀಟುಗಳಲ್ಲಿ ಈ ರೀತಿಯಾದ ಅನುಭವವಾಗುವುದಿಲ್ಲ.

ಇನ್ಮುಂದೆ ಎಸ್‍‍‍ಯುವಿ ವಾಹನಗಳಲ್ಲಿ ಲೆದರ್ ಸೀಟ್‍‍‍ಗಳಿರಲ್ಲ..!

8. ತುಂಬಾ ಚಳಿ ಅಥವಾ ತುಂಬಾ ಸೆಕೆ

ಲೆದರ್ ಸೀಟುಗಳಿರುವ ಕಾರುಗಳಲ್ಲಿ ಬೇಸಿಗೆ ಕಾಲದಲ್ಲಿ ಪಯಣಿಸುವಾಗ ತುಂಬಾ ಸೆಕೆಯಾದರೆ, ಚಳಿಗಾಲದ ಮುಂಜಾನೆಯಲ್ಲಿ ಹಿಮದಲ್ಲಿರುವಂತಹ ಅನುಭವವಾಗುತ್ತದೆ.

ಇನ್ಮುಂದೆ ಎಸ್‍‍‍ಯುವಿ ವಾಹನಗಳಲ್ಲಿ ಲೆದರ್ ಸೀಟ್‍‍‍ಗಳಿರಲ್ಲ..!

9. ಅಷ್ಟೇನೂ ಆರಾಮದಾಯಕವಲ್ಲ

ಒಂದು ವೇಳೆ ನೀವು ಬೆಂಟ್ಲಿ ಅಥವಾ ರೊಲ್ಸ್ ರಾಯ್ಸ್ ಕಾರಿನಲ್ಲಿದ್ದು, ಲೆದರ್ ಸೀಟುಗಳನ್ನು ಹೊಂದಿದ್ದರೆ ನೀವು ಸ್ವರ್ಗದಲ್ಲಿರುವಂತಹ ಅನುಭವವನ್ನು ನೀಡುತ್ತವೆ. ಒಂದು ವೇಳೆ ಕಡಿಮೆ ಬೆಲೆಯ ಕಾರಿನಲ್ಲಿದ್ದರೆ ಕಡಿಮೆ ಬೆಲೆಯ ಲೆದರ್‍‍ಗಳನ್ನು ಅಳವಡಿಸಲಾಗಿರುತ್ತದೆ. ಯಾವುದಾದರೂ ಡೀಲರ್‍‍‍‍ಶಿಪ್‍‍‍‍ಗೆ ಹೋಗಿ ಲೆದರ್ ಸೀಟು ಇರುವ ಕಾರಿನಲ್ಲಿ ಅಥವಾ ಲೆದರ್ ಇಲ್ಲದಿರುವ ಕಾರಿನಲ್ಲಿ ಕುಳಿತುಕೊಂಡರೆ ನಿಮಗೆ ಸ್ವತಃ ಅನುಭವವಾಗುತ್ತದೆ.

MOST READ: ಡ್ರಮ್ ಬ್ರೇಕ್‍ನೊಂದಿಗೆ ಬಿಡುಗಡೆಯಾದ ಟಿ‍‍ವಿ‍ಎಸ್ ಎನ್‍‍‍ಟಾರ್ಕ್ 125

Most Read Articles

Kannada
English summary
No More Leather for Your SUV Seats - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more