ಆಗಸ್ಟ್ ನಲ್ಲಿ ಹೆಚ್ಚು ಮಾರಾಟವಾದ ಸೆಡಾನ್ ಕಾರುಗಳಿವು

ದೇಶಿಯ ಮಾರುಕಟ್ಟೆಯಲ್ಲಿ ಆಗಸ್ಟ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಸೆಡಾನ್ ಕಾರುಗಳ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ. ಈ ಟಾಪ್ 10 ಪಟ್ಟಿಯಲ್ಲಿ ಮಾರುತಿ ಸುಜುಕಿ ಕಂಪನಿಯ ಡಿಜೈರ್ ಕಾರು ಅಗ್ರಸ್ಥಾನದಲ್ಲಿದೆ. ಈ ಪಟ್ಟಿಯನ್ನು ಪ್ರತಿ ತಿಂಗಳ ಮಾರಾಟದ ಆಧಾರದಲ್ಲಿ ತಯಾರಿಸಲಾಗಿದೆ.

ಆಗಸ್ಟ್ ನಲ್ಲಿ ಹೆಚ್ಚು ಮಾರಾಟವಾದ ಸೆಡಾನ್ ಕಾರುಗಳಿವು

ಮಾರುತಿ ಸುಜುಕಿ ಕಂಪನಿಯ ಡಿಜೈರ್ ಕಾರು, ದೇಶಿಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಕಾರ್ ಆಗಿದೆ. ಕಳೆದ ತಿಂಗಳು ಡಿಜೈರ್ ಕಾರಿನ 13,274 ಯುನಿಟ್‍‍ಗಳನ್ನು ಮಾರಾಟ ಮಾಡಲಾಗಿದೆ. ಇದರ ಜೊತೆಗೆ ಡಿಜೈರ್ ಕಾರು ಭಾರತದಲ್ಲಿ ಮಾರಾಟವಾಗುವ ಯಾವುದೇ ಸೆಗ್‍‍ಮೆಂಟಿನಲ್ಲಿರುವ ಕಾರುಗಳ ಪೈಕಿ ಅತಿ ಹೆಚ್ಚು ಮಾರಾಟವಾಗುವ ಕಾರು ಎಂಬ ಹೆಗ್ಗಳಿಕೆಯನ್ನು ಸಹ ಹೊಂದಿದೆ. ಮಾರಾಟದಲ್ಲಿ ಡಿಜೈರ್ ಕಾರು, ಸ್ವಿಫ್ಟ್ ಹಾಗೂ ಆಲ್ಟೋ ಕಾರುಗಳನ್ನು ಹಿಂದಿಕ್ಕಿದೆ.

ಆಗಸ್ಟ್ ನಲ್ಲಿ ಹೆಚ್ಚು ಮಾರಾಟವಾದ ಸೆಡಾನ್ ಕಾರುಗಳಿವು

ಹೋಂಡಾ ಕಂಪನಿಯ ಅಮೇಜ್ ಕಾರು ಎರಡನೇ ಸ್ಥಾನದಲ್ಲಿದೆ. ಆಗಸ್ಟ್ ತಿಂಗಳಿನಲ್ಲಿ ಅಮೇಜ್ ಕಾರಿನ 4,535 ಯುನಿಟ್‍‍ಗಳನ್ನು ಮಾರಾಟ ಮಾಡಲಾಗಿದೆ. ಭಾರತದ ಆಟೋ ಮೊಬೈಲ್ ಉದ್ಯಮವು ಎದುರಿಸುತ್ತಿರುವ ನಿಧಾನಗತಿಯ ಪರಿಣಾಮವು ಜಪಾನ್ ಮೂಲದ ಹೋಂಡಾ ಕಂಪನಿಯ ಮೇಲೆಯೂ ಸಹ ಉಂಟಾಗಿದೆ.

ಸ್ಥಾನ ಮಾದರಿಗಳು ಮಾರಾಟ ಸಂಖ್ಯೆ
1 ಮಾರುತಿ ಸುಜುಕಿ ಡಿಜೈರ್ 13,274
2 ಹೋಂಡಾ ಅಮೇಜ್ 4,534
3 ಹ್ಯುಂಡೈ ವರ್ನಾ 1,597
4 ಮಾರುತಿ ಸುಜುಕಿ ಸಿಯಾಜ್ 1,596
5 ಹೋಂಡಾ ಸಿಟಿ 1,593
6 ಟೊಯೊಟಾ ಇಟಿಯೊಸ್ 1,486
7 ಹ್ಯುಂಡೈ ಎಕ್ಸ್ ಸೆಂಟ್ 1,316
8 ಟಾಟಾ ಟಿಗೋರ್ 833
9 ಸ್ಕೋಡಾ ರ್‍ಯಾಪಿಡ್ 791
10 ಫೋರ್ಡ್ ಆಸ್ಪೈರ್ 521
ಆಗಸ್ಟ್ ನಲ್ಲಿ ಹೆಚ್ಚು ಮಾರಾಟವಾದ ಸೆಡಾನ್ ಕಾರುಗಳಿವು

ಈ ಕಾರಣಕ್ಕೆ ಹೋಂಡಾ ಕಂಪನಿಯು ತನ್ನ ಕಾರುಗಳ ಮಾರಾಟದಲ್ಲಿ ಆಗಸ್ಟ್ ತಿಂಗಳಿನಲ್ಲಿ 50% ಕುಸಿತವನ್ನು ಕಂಡಿದೆ. ಹ್ಯುಂಡೈ ಕಂಪನಿಯ ವರ್ನಾ ಕಾರು ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಆಗಸ್ಟ್ ತಿಂಗಳಿನಲ್ಲಿ ವರ್ನಾ ಎಕ್ಸಿಕ್ಯೂಟಿವ್ ಸೆಡಾನ್ ಕಾರಿನ 1,597 ಯುನಿಟ್‍‍ಗಳ ಮಾರಾಟವಾಗಿದೆ.

ಆಗಸ್ಟ್ ನಲ್ಲಿ ಹೆಚ್ಚು ಮಾರಾಟವಾದ ಸೆಡಾನ್ ಕಾರುಗಳಿವು

ವರ್ನಾ, ನಾಲ್ಕನೇ ಸ್ಥಾನದಲ್ಲಿರುವ ಮಾರುತಿ ಸುಜುಕಿ ಕಂಪನಿಯ ಸಿಯಾಜ್ ಕಾರಿಗಿಂತ ಒಂದು ಯುನಿಟ್ ಹೆಚ್ಚು ಮಾರಾಟವಾಗಿದೆ. ಐದನೇ ಸ್ಥಾನದಲ್ಲಿರುವ ಹೋಂಡಾ ಸಿಟಿ ಕಾರಿಗಿಂತ ನಾಲ್ಕು ಯುನಿಟ್ ಹೆಚ್ಚು ಮಾರಾಟವಾಗಿದೆ.

ಆಗಸ್ಟ್ ನಲ್ಲಿ ಹೆಚ್ಚು ಮಾರಾಟವಾದ ಸೆಡಾನ್ ಕಾರುಗಳಿವು

ಹ್ಯುಂಡೈನ ವರ್ನಾ ದೇಶಿಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಎಕ್ಸಿಕ್ಯೂಟಿವ್ ಸೆಡಾನ್ ಕಾರ್ ಆಗಿದೆ. ಮಾರುತಿ ಸುಜುಕಿಯ ಸಿಯಾಜ್ ಕಾರಿನ 1,596 ಯುನಿಟ್‍‍ಗಳ ಮಾರಾಟವಾಗಿದ್ದರೆ, ಹೋಂಡಾ ಸಿಟಿ ಕಾರಿನ 1,593 ಯುನಿಟ್‍‍ಗಳ ಮಾರಾಟವಾಗಿದೆ.

ಆಗಸ್ಟ್ ನಲ್ಲಿ ಹೆಚ್ಚು ಮಾರಾಟವಾದ ಸೆಡಾನ್ ಕಾರುಗಳಿವು

ಹೋಂಡಾ ಕಂಪನಿಯು ಸದ್ಯಕ್ಕೆ ದೇಶಿಯ ಮಾರುಕಟ್ಟೆಗಾಗಿ ಹೊಸ ತಲೆಮಾರಿನ ಸಿಟಿ ಸೆಡಾನ್ ಕಾರ್ ಅನ್ನು ಟೆಸ್ಟ್ ಮಾಡುತ್ತಿದೆ. 2020ರ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನಗೊಳ್ಳಲಿರುವ ಹೊಸ ಹೋಂಡಾ ಸಿಟಿ ಕಾರ್ ಅನ್ನು ಇದೇ ಮೊದಲ ಬಾರಿಗೆ ಸ್ಪಾಟ್ ಟೆಸ್ಟ್ ಮಾಡಲಾಗಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಆಗಸ್ಟ್ ನಲ್ಲಿ ಹೆಚ್ಚು ಮಾರಾಟವಾದ ಸೆಡಾನ್ ಕಾರುಗಳಿವು

ನಂತರದ ಐದು ಸ್ಥಾನಗಳಲ್ಲಿ ಟೊಯೊಟಾ ಇಟಿಯೊಸ್, ಹ್ಯುಂಡೈ ಎಕ್ಸ್ ಸೆಂಟ್, ಟಾಟಾ ಟಿಗೊರ್, ಸ್ಕೋಡಾ ರ್‍ಯಾಪಿಡ್ ಹಾಗೂ ಫೋರ್ಡ್ ಆಸ್ಪೈರ್ ಕಾರುಗಳಿವೆ. 1,486 ಯುನಿಟ್‍‍ಗಳ ಮಾರಾಟದೊಂದಿಗೆ ಟೊಯೊಟಾ ಇಟಿಯೊಸ್ ಆರನೇ ಸ್ಥಾನದಲ್ಲಿದೆ.

MOST READ: ಪೆಟ್ರೋಲ್, ಡೀಸೆಲ್ ಮಾರಾಟಕ್ಕೂ ಹೊಡೆತ ಕೊಟ್ಟ ಹೊಸ ಟ್ರಾಫಿಕ್ ರೂಲ್ಸ್

ಆಗಸ್ಟ್ ನಲ್ಲಿ ಹೆಚ್ಚು ಮಾರಾಟವಾದ ಸೆಡಾನ್ ಕಾರುಗಳಿವು

ಏಳನೇ ಸ್ಥಾನದಲ್ಲಿರುವ ಹ್ಯುಂಡೈ ಎಕ್ಸ್ ಸೆಂಟ್ ಕಾರಿನ 1,316 ಯುನಿಟ್‍‍ಗಳು ಮಾರಾಟವಾಗಿವೆ. ಆಗಸ್ಟ್ ತಿಂಗಳಿನಲ್ಲಿ ಟಾಟಾ ಟಿಗೊರ್‍‍ನ 833, ಸ್ಕೋಡಾ ರ್‍ಯಾಪಿಡ್‍‍ನ 791 ಹಾಗೂ ಫೋರ್ಡ್ ಆಸ್ಪೈರ್‍‍ನ 521 ಯುನಿಟ್‍‍ಗಳು ಮಾರಾಟವಾಗಿ ಕ್ರಮವಾಗಿ ಎಂಟು, ಒಂಭತ್ತು ಹಾಗೂ ಹತ್ತನೇ ಸ್ಥಾನದಲ್ಲಿವೆ.

MOST READ: ಚಪ್ಪಲಿ, ಲುಂಗಿ, ಬನಿಯನ್ ಧರಿಸಿದರೂ ಬೀಳಲಿದೆ ದಂಡ..!

ಆಗಸ್ಟ್ ನಲ್ಲಿ ಹೆಚ್ಚು ಮಾರಾಟವಾದ ಸೆಡಾನ್ ಕಾರುಗಳಿವು

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಆಗಸ್ಟ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಟಾಪ್ 10 ಕಾರುಗಳ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ. ಮಾರುತಿ ಸುಜುಕಿ ಕಂಪನಿಯ ಡಿಜೈರ್ ಸೆಡಾನ್ ಸೆಗ್‍‍ಮೆಂಟಿನಲ್ಲಿ ಮಾತ್ರವಲ್ಲದೇ ಭಾರತದಲ್ಲಿಯೇ ಅತಿ ಹೆಚ್ಚು ಮಾರಾಟವಾದ ಕಾರು ಎಂಬ ಹೆಗ್ಗಳಿಕೆಯನ್ನು ಹೊಂದಿದೆ.

ಆಗಸ್ಟ್ ನಲ್ಲಿ ಹೆಚ್ಚು ಮಾರಾಟವಾದ ಸೆಡಾನ್ ಕಾರುಗಳಿವು

ಬಹುತೇಕ ಕಂಪನಿಗಳು ಆಟೋ ಮೊಬೈಲ್ ಉದ್ಯಮದಲ್ಲಿನ ನಿಧಾನಗತಿಯ ಬೆಳವಣಿಗೆಯಿಂದಾಗಿ ಮಾರಾಟದಲ್ಲಿ ಕುಸಿತವನ್ನು ಕಂಡಿವೆ. ಈ ನಿಧಾನಗತಿಯ ಬೆಳವಣಿಗೆಯು ಸದ್ಯಕ್ಕೆ ಚೇತರಿಸಿಕೊಳ್ಳುವ ಸಾಧ್ಯತೆಗಳಿಲ್ಲ.

Most Read Articles

Kannada
English summary
Top-Selling Sedans In India For August 2019: Maruti Dzire Tops The List, Followed By Honda Amaze - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X