ಪೆಟ್ರೋಲ್ ಹೈಬ್ರಿಡ್ ಎಂಜಿನ್ ಹೊತ್ತು ಬರಲಿದೆ ಮುಂದಿನ ತಲೆಮಾರಿನ ಟೊಯೊಟಾ ಇನೋವಾ ಕ್ರಿಸ್ಟಾ

ಟೊಯೊಟಾ ಇಂಡಿಯಾ ಸಂಸ್ಥೆಯು ಭವಿಷ್ಯದಲ್ಲಿ ತಮ್ಮ ಜನಪ್ರಿಯ ಇನೊವಾ ಕಾರಿನ ಡೀಸೆಲ್ ಮಾದರಿಯನ್ನು ಸ್ಥಗಿತಗೊಳಿಸಲಿದ್ದು, ಬಿಡುಗಡೆಯಾಗಲಿರುವ ಹೊಸ ತಲೆಮಾರಿನ ಟೊಯೊಟಾ ಇನೊವಾ ಕ್ರಿಸ್ಟಾ ಕಾರುಗಳು ಡೀಸೆಲ್ ಎಂಜಿನ್ ಬದಲಿಗೆ ಪೆಟ್ರೋಲ್-ಹೈಬ್ರಿಡ್ ಎಂಜಿನ್ ಆಯ್ಕೆಯಲ್ಲಿ ಲಭ್ಯವಿರಲಿದೆ.

ಪೆಟ್ರೋಲ್ ಹೈಬ್ರಿಡ್ ಹೊತ್ತು ಬರಲಿದೆ ಮುಂದಿನ ತಲೆಮಾರಿನ ಟೊಯೊಟಾ ಇನೋವಾ ಕ್ರಿಸ್ಟಾ

ಟೊಯೋಟಾ ತನ್ನ ಹೆಚ್ಚು ಮಾರಾಟವಾದ ಮಾದರಿಯಲ್ಲಿ ಹೊರಸೂಸುವಿಕೆಯ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ತೋರುತ್ತಿರುವುದರಿಂದ ಈ ಕ್ರಮವನ್ನು ಪರಿಗಣಿಸಲಾಗುತ್ತಿದೆ. ಟೊಯೋಟಾ ಕಾರು ತಯಾರಕರಾಗಿದ್ದು, ಇದು ವಿಶ್ವದ ಇತರ ಬ್ರಾಂಡ್‌ಗಳಿಗಿಂತ ಹೆಚ್ಚು ವಿಶ್ವಾಸಾರ್ಹತೆ ಮತ್ತು ವಿಶ್ವಸನೀಯತೆಯನ್ನು ಹೊಂದಿದೆ. ಟೊಯೋಟಾದ ಎಲ್ಲಾ ಕಾರುಗಳು ಸಂಪೂರ್ಣವಾಗಿ ವಿಶ್ವಾಸಾರ್ಹವಾಗಿದ್ದು, ಅವುಗಳಲ್ಲಿ ಟೊಯೋಟಾ ಇನ್ನೋವಾ ಮಾತ್ರ ಮಾರುಕಟ್ಟೆಯಲ್ಲಿ ಉನ್ನತ್ತ ಮಟ್ಟದಲ್ಲಿ ವಿಶ್ವಾಸಾರ್ಹತೆಯನ್ನು ಪಡೆದಿದೆ.

ಪೆಟ್ರೋಲ್ ಹೈಬ್ರಿಡ್ ಹೊತ್ತು ಬರಲಿದೆ ಮುಂದಿನ ತಲೆಮಾರಿನ ಟೊಯೊಟಾ ಇನೋವಾ ಕ್ರಿಸ್ಟಾ

ಇನ್ನೋವಾ ವಿಶ್ವದ ಅತ್ಯಂತ ವಿಶ್ವಾಸಾರ್ಹ ವಾಹನಗಳಲ್ಲಿ ಒಂದಾಗಿದೆ ಎಂಬ ಖ್ಯಾತಿಯನ್ನು ಗಳಿಸಿದೆ. ಎಂಪಿವಿ ಖಾಸಗಿ ವಾಹನಗಳು, ಟ್ಯಾಕ್ಸಿಗಳು, ಕಂಪನಿಯ ಒಡೆತನದ ಮತ್ತು ಚಾಲಿತ ವಾಹನಗಳು, ಫ್ಲೀಟ್ ವಾಹನಗಳು ಇತ್ಯಾದಿಗಳಾಗಿ ಬಳಸುವುದನ್ನು ಕಠಿಣವಾಗಿ ಕಾಣಬಹುದು. ಇದು ಯಾವುದೇ ಸವಾಲನ್ನು ಸುಲಭವಾಗಿ ತೆಗೆದುಕೊಳ್ಳಬಹುದು.

ಪೆಟ್ರೋಲ್ ಹೈಬ್ರಿಡ್ ಹೊತ್ತು ಬರಲಿದೆ ಮುಂದಿನ ತಲೆಮಾರಿನ ಟೊಯೊಟಾ ಇನೋವಾ ಕ್ರಿಸ್ಟಾ

2016ರಲ್ಲಿ ಬಿಡುಗಡೆಗೊಂಡ ಟೊಯೊಟಾ ಇನೋವಾ ಕ್ರಿಸ್ಟಾ ಎಮ್‍ಪಿವಿ ಕಾರುಗಳು ದೇಶದಲ್ಲಿನ ಅತಿ ಹೆಚ್ಚು ಮಾರಾಟಗೊಳ್ಳುತ್ತಿರುವ ಎಂಪಿವಿ ಕಾರು ಮಾದರಿಯಾಗಿ ಹೊರಹೊಮ್ಮಿದೆ. ಯಾಕೆಂದ್ರೆ ಬೆಲೆಯಲ್ಲಿ ಅಧಿಕವಾದರೂ ಗ್ರಾಹಕರು ಕಡಿಮೆ ಬೆಲೆಯ ಮಾರುತಿ ಸುಜುಕಿ ಎರ್ಟಿಗಾ ಕಾರನ್ನು ಲೆಕ್ಕಿಸದೇ ಐಷಾರಾಮಿ ಸೌವಲತ್ತುಗಳನ್ನು ಒದಗಿಸುತ್ತಿರುವ ಇನೋವಾ ಕ್ರಿಸ್ಟಾ ಕಾರುಗಳನ್ನು ಖರೀದಿಸುತ್ತಿದ್ದಾರೆ.

ಪೆಟ್ರೋಲ್ ಹೈಬ್ರಿಡ್ ಹೊತ್ತು ಬರಲಿದೆ ಮುಂದಿನ ತಲೆಮಾರಿನ ಟೊಯೊಟಾ ಇನೋವಾ ಕ್ರಿಸ್ಟಾ

ಪ್ರಸ್ತುತ ಟೊಯೊಟಾ ಇನೊವಾ ಕ್ರಿಸ್ಟಾ ಕಾರುಗಳು 2.4 ಲೀಟರ್ ಮತ್ತು 2.8 ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಅಯ್ಕೆಯಲ್ಲಿ ಹಾಗು 2.7 ಲೀಟರ್ ನ್ಯಾಚುರಲ್ಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. ಪೆಟ್ರೋಲ್ ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಅಥವಾ 6 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಪೆಟ್ರೋಲ್ ಹೈಬ್ರಿಡ್ ಹೊತ್ತು ಬರಲಿದೆ ಮುಂದಿನ ತಲೆಮಾರಿನ ಟೊಯೊಟಾ ಇನೋವಾ ಕ್ರಿಸ್ಟಾ

ಇನ್ನು 2.4 ಲೀಟರ್ ಡೀಸೆಲ್ ಎಂಜಿನ್ ಅನ್ನು 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಿದಲ್ಲಿ 2.7 ಲೀಟರ್ ಡೀಸೆಲ್ ಎಂಜಿನ್ ಅನ್ನು ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಟೊಯೊಟಾ ಇನೋವಾ ಎಲ್ಲಾ ವೇರಿಯಂಟ್ ಕಾರುಗಳಲ್ಲಿ ರಿಯರ್ ವ್ಹೀಲ್ ಡ್ರೈವ್ ಮೋಡ್ ಅನ್ನು ಅಳವಡಿಸಲಾಗಿದೆ.

MOST READ: ವಾಹನ ಚಾಲಕರೇ ಇತ್ತ ಗಮನಿಸಿ - ಅಕ್ಟೋಬರ್ 1 ರಿಂದ ಜಾರಿಯಾಗಲಿದೆ ಹೊಸ ರೂಲ್ಸ್

ಪೆಟ್ರೋಲ್ ಹೈಬ್ರಿಡ್ ಹೊತ್ತು ಬರಲಿದೆ ಮುಂದಿನ ತಲೆಮಾರಿನ ಟೊಯೊಟಾ ಇನೋವಾ ಕ್ರಿಸ್ಟಾ

ಟೊಯೊಟಾ ಇನೋವಾ ಕ್ರಿಸ್ಟಾ ಎಂಪಿವಿ ಕಾರುಗಳು ಕ್ಯಾಬ್ ಆಪರೇಟರ್‍‍ಗಳಿಗೆ ಮತ್ತು ಸ್ವಂತ ಬಳಕೆಗೆ ತಯಾರಿಸ್ಪಟ್ಟ ಕಾರಾಗಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ಈ ಕಾರು ರೂ.14.93 ಲಕ್ಷದಿಂದ ರೂ.23.46 ಲಕ್ಷಕ್ಕೆ ಮಾರಾಟಗೊಳ್ಳುತ್ತಿದೆ.

MOST READ: ದಂಡ ವಿಧಿಸಿದ ಪೊಲೀಸರಿಗೆ ಸರಿಯಾಗಿ ಚಮಕ್ ಕೊಟ್ಟ ಎಲೆಕ್ಟ್ರಿಷಿಯನ್

ಪೆಟ್ರೋಲ್ ಹೈಬ್ರಿಡ್ ಹೊತ್ತು ಬರಲಿದೆ ಮುಂದಿನ ತಲೆಮಾರಿನ ಟೊಯೊಟಾ ಇನೋವಾ ಕ್ರಿಸ್ಟಾ

ಹಳೆಯ ಇನೋವಾಗಿಂತಲೂ 150 ಎಂಎಂ ಉದ್ದ, 70 ಎಂಎಂ ಅಗಲ ಮತ್ತು 35 ಎಂಎಂ ಹೆಚ್ಚು ಎತ್ತರವನ್ನು ಎರಡನೇ ತಲೆಮಾರಿನ ಇನೋವಾ ಪಡೆದಿದೆ. ಇದು ಒಟ್ಟಾರೆ 4735 ಎಂಎಂ ಉದ್ದ, 1830 ಎಂಎಂ ಅಗಲ, 1795 ಎಂಎಂ ಎತ್ತರ ಮತ್ತು 2750 ಎಂಎಂ ವೀಲ್ ಬೇಸ್ ಪಡೆದಿದೆ.

MOST READ: ರೈಲ್ವೆ ಹಳಿಯ ಮೇಲೆ ವೈರಲ್ ವಿಡಿಯೋ ಮಾಡಲು ಹೋಗಿ ಪೊಲೀಸರ ಅತಿಥಿಯಾದ ವಿದ್ಯಾರ್ಥಿ

ಪೆಟ್ರೋಲ್ ಹೈಬ್ರಿಡ್ ಹೊತ್ತು ಬರಲಿದೆ ಮುಂದಿನ ತಲೆಮಾರಿನ ಟೊಯೊಟಾ ಇನೋವಾ ಕ್ರಿಸ್ಟಾ

ಟಾಪ್ ಎಂಡ್ ಇನೋವಾ ಕಾರಿನಲ್ಲಿ ಸ್ಟ್ಯಾರ್ಟ್ ಸ್ಟಾಪ್ ಬಟನ್, ಸ್ಮಾರ್ಟ್ ಎಂಟ್ರಿ ಸಿಸ್ಟಂ, ಏಳು ಏರ್ ಬ್ಯಾಗ್, ಎಬಿಎಸ್, ಇಬಿಡಿ, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಏಳು ಇಂಚುಗಳ ಆಡಿಯೋ ಸಿಸ್ಟಂ ಜೊತೆ ನೇವಿಗೇಷನ್, ಎಲ್ ಇಡಿ ಹೆಡ್ ಲ್ಯಾಂಪ್ ಮತ್ತು 17 ಇಂಚುಗಳ ಅಲಾಯ್ ವೀಲ್ ಗಳಿರಲಿದೆ.

More from DriveSpark

Article Published On: Friday, August 16, 2019, 9:12 [IST]
English summary
Next-Gen Toyota Innova To Be Powered By Petrol-Hybrid: Diesel Models To Be Discontinued. Read In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+