ಕಾರು ಖರೀದಿಗೆ 30 ನಿಮಿಷದಲ್ಲಿ ಸಾಲ ನೀಡಲಿದೆ ಟೊಯೊಟಾ..!

ಕಾರುಗಳನ್ನು ಖರೀದಿಸುವುದು ಬಹುತೇಕ ಜನರ ಕನಸು. ಆದರೆ ಎಲ್ಲರಿಗೂ ಕಾರುಗಳನ್ನು ಖರೀದಿಸಲು ಸಾಧ್ಯವಾಗುವುದಿಲ್ಲ. ಕೆಲವರು ಸಾಲ ಮಾಡಿ ಕಾರುಗಳನ್ನು ಖರೀದಿಸಲು ಬಯಸಿದರೂ, ಅಷ್ಟು ಸುಲಭವಾಗಿ ಸಾಲ ಸಿಗುವುದಿಲ್ಲ.

30 ನಿಮಿಷದಲ್ಲಿ ಸಾಲ ನೀಡಲಿದೆ ಟೊಯೊಟಾ..!

ಸಾಲಕ್ಕೆ ಅರ್ಜಿ ಸಲ್ಲಿಸಿ ಹಲವಾರು ದಿನಗಳ ಕಾಲ ಕಾಯಬೇಕಾಗುತ್ತದೆ. ಕೆಲವೊಮ್ಮೆ ತಿಂಗಳುಗಳ ಕಾಲ ಅಲೆಯಬೇಕಾಗುತ್ತದೆ. ಈ ನಿಟ್ಟಿನಲ್ಲಿ ವಾಹನ ಸಾಲ ಪಡೆಯಬಯಸುವವರಿಗಾಗಿ ಟೊಯೊಟಾ ಕಂಪನಿಯು ಹೊಸ ಸಾಲ ಯೋಜನೆಯೊಂದನ್ನು ಬಿಡುಗಡೆಗೊಳಿಸಿದೆ.

30 ನಿಮಿಷದಲ್ಲಿ ಸಾಲ ನೀಡಲಿದೆ ಟೊಯೊಟಾ..!

ಟೊಯೊಟಾ ಕಂಪನಿಯು ಟೊಯೊಟಾ ಕಾರುಗಳನ್ನು ಖರೀದಿಸಲು ಬಯಸುವವರಿಗಾಗಿ ತತ್ಕಾಲ್ ಸಾಲ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯನ್ನು ಟೊಯೊಟಾದ ಸಾಲ ವಿಭಾಗವು ಬಿಡುಗಡೆಗೊಳಿಸಿದೆ.

30 ನಿಮಿಷದಲ್ಲಿ ಸಾಲ ನೀಡಲಿದೆ ಟೊಯೊಟಾ..!

ಈ ಯೋಜನೆಯಡಿಯಲ್ಲಿ ಟೊಯೊಟಾ ಕಂಪನಿಯು ಕೇವಲ 30 ನಿಮಿಷದಲ್ಲಿ ಸಾಲ ನೀಡಲಿದೆ. ತತ್ಕಾಲ್ ಸಾಲ ಯೋಜನೆಯಡಿಯಲ್ಲಿ ಟೊಯೊಟಾ ಕಾರು ಖರೀದಿಸ ಬಯಸುವವರು ಸುಲಭವಾಗಿ ಹಾಗೂ ವೇಗವಾಗಿ ಸಾಲ ಪಡೆಯಬಹುದು.

30 ನಿಮಿಷದಲ್ಲಿ ಸಾಲ ನೀಡಲಿದೆ ಟೊಯೊಟಾ..!

ಗ್ರಾಹಕರು ಸಂಬಂಧಪಟ್ಟ ದಾಖಲೆಗಳನ್ನು ಸಲ್ಲಿಸಿ ಕೇವಲ 30 ನಿಮಿಷದಲ್ಲಿ ಸಾಲ ಪಡೆಯಬಹುದು. ಈ ಸಾಲವನ್ನು ಬ್ಯಾಂಕ್ ವ್ಯವಹಾರ ಹಾಗೂ ಸಿಬಿಲ್ ಸ್ಕೋರ್ ಆಧಾರದ ಮೇಲೆ ತಕ್ಷಣವೇ ನೀಡಲಾಗುವುದು.

30 ನಿಮಿಷದಲ್ಲಿ ಸಾಲ ನೀಡಲಿದೆ ಟೊಯೊಟಾ..!

ಅಂದ ಹಾಗೆ ತತ್ಕಾಲ್ ಸಾಲ ಯೋಜನೆಯಡಿಯಲ್ಲಿ ಕಾರುಗಳ ಎಕ್ಸ್ ಶೋರೂಂ ಬೆಲೆಯ 85%ನಷ್ಟು ಸಾಲ ನೀಡಲಾಗುವುದು. ಉಳಿದ 15% ಹಣವನ್ನು ಅಡ್ವಾನ್ಸ್ ಆಗಿ ನೀಡಬೇಕಾಗುತ್ತದೆ. ಇದರಿಂದಾಗಿ ಕಾರು ಸಾಲಕ್ಕಾಗಿ ಕಾಯುವ ಅವಧಿ ಕಡಿಮೆಯಾಗಲಿದೆ.

30 ನಿಮಿಷದಲ್ಲಿ ಸಾಲ ನೀಡಲಿದೆ ಟೊಯೊಟಾ..!

ಹೊಸ ಕಾರು ಖರೀದಿಸಲು ಬಯಸುವವರು ಮಾತ್ರವಲ್ಲದೇ, ಈಗಾಗಲೇ ಟೊಯೊಟಾ ಕಾರುಗಳನ್ನು ಹೊಂದಿರುವವರೂ ಸಹ ಈ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಹಳೆಯ ಟೊಯೊಟಾ ಕಾರುಗಳನ್ನು ಹೊಂದಿರುವ ಗ್ರಾಹಕರು ಸ್ವಂತ ಮನೆಯನ್ನು ಹೊಂದಿರಬೇಕು. ವಾಹನವನ್ನು ತಮ್ಮ ಸ್ವಂತಕ್ಕಾಗಿ ಬಳಸಬೇಕು.

MOST READ: ಹುಡುಗಿಯರಿಗೆ ಗೇರ್ ಬದಲಿಸಲು ಬಿಟ್ಟು ಡಿ‍ಎಲ್ ಕಳೆದುಕೊಂಡ ಡ್ರೈವರ್..!

30 ನಿಮಿಷದಲ್ಲಿ ಸಾಲ ನೀಡಲಿದೆ ಟೊಯೊಟಾ..!

ಗ್ರಾಹಕರ ಫೋಟೊ, ಅಡ್ರೆಸ್ ಪ್ರೂಫ್, ಮನೆ ಮಾಲೀಕತ್ವಕ್ಕೆ ಸಂಬಂಧಿಸಿದ ದಾಖಲೆಗಳು, ಗುರುತಿನ ಚೀಟಿ ಹಾಗೂ ಬ್ಯಾಂಕ್ ವ್ಯವಹಾರಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಸಲ್ಲಿಸಬೇಕು. ಟೊಯೊಟಾ ಕಂಪನಿಯು ಈ ಯೋಜನೆಯು ಗ್ರಾಹಕರಿಗೆ ಸುಲಭವಾಗಿ ಸಾಲ ನೀಡಲಿದೆಯೆಂದು ಹೇಳಿದೆ.

MOST READ: ಬಡ ದೇಶದ ರಾಜನಿಗೆ 15 ಮಡದಿಯರು, 19 ದುಬಾರಿ ಕಾರುಗಳು..!

30 ನಿಮಿಷದಲ್ಲಿ ಸಾಲ ನೀಡಲಿದೆ ಟೊಯೊಟಾ..!

ಈ ವಿಶೇಷ ಸಾಲ ಯೋಜನೆಯನ್ನು ಟೊಯೊಟಾ ಲಿವಾ, ಇಟಿಯೊಸ್, ಗ್ಲಾಂಜಾ, ಯಾರಿಸ್ ಹಾಗೂ ಇನೊವಾ ಕಾರುಗಳ ಮೇಲೆ ನೀಡಲಾಗುವುದು. ಹೆಚ್ಚಿನ ಮಾಹಿತಿಯನ್ನು ಹತ್ತಿರದಲ್ಲಿರುವ ಟೊಯೊಟಾ ಡೀಲರ್‍‍ಗಳ ಬಳಿ ಪಡೆಯಬಹುದು.

MOST READ: ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

30 ನಿಮಿಷದಲ್ಲಿ ಸಾಲ ನೀಡಲಿದೆ ಟೊಯೊಟಾ..!

ಟೊಯೊಟಾ ಜಪಾನ್ ಮೂಲದ ಕಂಪನಿಯಾಗಿದೆ. ಬೆಂಗಳೂರಿನ ಹೊರವಲಯದಲ್ಲಿರುವ ಬಿಡದಿಯಲ್ಲಿ ಉತ್ಪಾದನಾ ಘಟಕವನ್ನು ಹೊಂದಿದೆ. ಕೆಲ ತಿಂಗಳುಗಳ ಹಿಂದೆ ಮಾರುತಿ ಸುಜುಕಿ ಕಂಪನಿಯ ಜಂಟಿ ಸಹಭಾಗಿತ್ವದಲ್ಲಿ ಕಾರುಗಳನ್ನು ಉತ್ಪಾದಿಸುವ ಒಪ್ಪಂದಕ್ಕೆ ಸಹಿ ಹಾಕಿದೆ.

More from DriveSpark

Article Published On: Friday, November 22, 2019, 12:42 [IST]
English summary
Toyota introduces tatkal car loan - Read in Kannada
Read more on ಟೊಯೊಟಾ toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+