ಟೊಯೊಟೊ ಬ್ಯಾಡ್ಜ್‌ನೊಂದಿಗೆ ಬಿಡುಗಡೆಯಾಗಲಿದೆ ಮಾರುತಿ ಸುಜುಕಿ ಬಲೆನೊ

ಅರೇ ಏನಿದು? ಮಾರುತಿ ಸುಜುಕಿ ಸಂಸ್ಥೆಯ ಕಾರಿಗೆ ಟೊಯೊಟಾ ಹೆಸರು ಹೇಗೆ ಅಂತಾ ಕನ್ಫ್ಯೂಷನ್ ಆಗಬೇಡಿ. ಮೊದಲಿಗೆ ಇದು ಎಲ್ಲರಿಗೂ ತುಸು ಕನ್ಫ್ಯೂಷನ್ ಅಂತಾ ಅನ್ನಿಸಿದರೂ ಅಸಲಿಗೆ ಮಾರುತಿ ಸುಜುಕಿ ಮತ್ತು ಟೊಯೊಟಾ ಸಂಸ್ಥೆಗಳು ಹೊಸ ಕಾರುಗಳ ನಿರ್ಮಾಣಕ್ಕಾಗಿ ಪರಸ್ಪರ ಕೈಜೋಡಿಸಿದ್ದು, ಟೊಯೊಟಾ ಬ್ಯಾಡ್ಜ್‌ನೊಂದಿಗೆ ಮಾರುತಿ ಸುಜುಕಿ ಪ್ರಮುಖ ಕಾರುಗಳು ಬಿಡುಗಡೆಯಾಗಲಿವೆ.

ಟೊಯೊಟೊ ಬ್ಯಾಡ್ಜ್‌ನೊಂದಿಗೆ ಬಿಡುಗಡೆಯಾಗಲಿದೆ ಮಾರುತಿ ಸುಜುಕಿ ಬಲೆನೊ

ಜಪಾನ್ ಮೂಲದ ವಾಹನ ಉತ್ಪಾದನಾ ದಿಗ್ಗಜರಾದ ಸುಜುಕಿ ಮೋಟಾರ್ಸ್ ಮತ್ತು ಟೊಯೊಟಾ ಮೋಟಾರ್ಸ್ ಸಂಸ್ಥೆಗಳು ಹೊಸ ಕಾರುಗಳ ಉತ್ಪಾದನೆಗಾಗಿ ಭಾರತದಲ್ಲಿ ಮಹತ್ವದ ಯೋಜನೆ ರೂಪಿಸಿದ್ದು, ಸಹಭಾಗಿತ್ವ ಆಧಾರದ ಮೇಲೆ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಹೊಸ ಕಾರು ಉತ್ಪನ್ನಗಳನ್ನು ತಯಾರಿಸಲು ಬೃಹತ್ ಬಂಡವಾಳ ಹೂಡಿಕೆ ಮಾಡುತ್ತಿವೆ.

ಟೊಯೊಟೊ ಬ್ಯಾಡ್ಜ್‌ನೊಂದಿಗೆ ಬಿಡುಗಡೆಯಾಗಲಿದೆ ಮಾರುತಿ ಸುಜುಕಿ ಬಲೆನೊ

2017ರ ಆರಂಭದಲ್ಲೇ ಟೊಯೊಟಾ ಮತ್ತು ಸುಜುಕಿ ಮೋಟಾರ್ಸ್ ಜಂಟಿಯಾಗಿ ಕಾರು ಉತ್ಪಾದಿಸುವ ಬಗ್ಗೆ ಮಾತುಕತೆ ನಡೆಸಿದ್ದವು. ಆದ್ರೆ ಕಾರಣಾಂತರಗಳಿಂದ ಹೊಸ ಯೋಜನೆ ಬಗ್ಗೆ ತಟಸ್ಥವಾಗಿದ್ದ ಎರಡು ಸಂಸ್ಥೆಗಳು ಇದೀಗ ಮಹತ್ವದ ನಿರ್ಣಯಕ್ಕೆ ಬಂದಿದ್ದು, ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಗಾಗಿ ಹೊಸ ಒಪ್ಪಂದ ಮಾಡಿಕೊಂಡಿವೆ.

ಟೊಯೊಟೊ ಬ್ಯಾಡ್ಜ್‌ನೊಂದಿಗೆ ಬಿಡುಗಡೆಯಾಗಲಿದೆ ಮಾರುತಿ ಸುಜುಕಿ ಬಲೆನೊ

ಹೊಸ ಒಪ್ಪಂದದ ಪ್ರಕಾರ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆ ಮಾಡುವುದಷ್ಟೇ ಅಲ್ಲದೇ ಈಗಿರುವ ಸಾಮಾನ್ಯ ಕಾರುಗಳ ಮಾರಾಟಕ್ಕೂ ಪರಸ್ಪರ ಸಹಾಯ ಮಾಡುವ ಮಹತ್ವದ ಕಾರ್ಯ ಯೋಜನೆಗೂ ಟೊಯೊಟಾ ಮತ್ತು ಸುಜುಕಿ ಸಂಸ್ಥೆಗಳು ಒಪ್ಪಿಗೆ ಸೂಚಿಸಿವೆ.

ಟೊಯೊಟೊ ಬ್ಯಾಡ್ಜ್‌ನೊಂದಿಗೆ ಬಿಡುಗಡೆಯಾಗಲಿದೆ ಮಾರುತಿ ಸುಜುಕಿ ಬಲೆನೊ

ಹೀಗಾಗಿ ಸುಜುಕಿ ಡೀಲರ್ಸ್‌ಗಳಲ್ಲಿ ಟೊಯೊಟಾ ಉತ್ಪನ್ನಗಳನ್ನು ಮತ್ತು ಟೊಯೊಟಾ ಡೀಲರ್ಸ್‌ಗಳಲ್ಲಿ ಸುಜುಕಿ ಕಾರು ಉತ್ಪನ್ನಗಳನ್ನು ಖರೀದಿ ಮಾಡಬಹುದಾಗಿದ್ದು, ಇದು ಕಾರು ಮಾರಾಟದ ಜಾಲವನ್ನು ವಿಸ್ತರಿಸುವ ಉದ್ದೇಶದಿಂದ ಇಂತದೊಂದು ಒಪ್ಪಂದ ಮಾಡಿಕೊಂಡಿವೆ.

ಟೊಯೊಟೊ ಬ್ಯಾಡ್ಜ್‌ನೊಂದಿಗೆ ಬಿಡುಗಡೆಯಾಗಲಿದೆ ಮಾರುತಿ ಸುಜುಕಿ ಬಲೆನೊ

ಇದರಲ್ಲಿ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಬಲೆನೊ ಕಾರಿನ ಉತ್ಪಾದನಾ ಜವಾಬ್ದಾರಿಯನ್ನು ಪೂರ್ಣಪ್ರಮಾಣದಲ್ಲಿ ತನ್ನ ವಶಕ್ಕೆ ತೆಗೆದುಕೊಳ್ಳಲಿರುವ ಟೊಯೊಯಾ ಸಂಸ್ಥೆಯು, ಬಲೆನೊ ಕಾರಿನ ಬ್ಯಾಡ್ಜ್ ಅನ್ನು ಸಹ ತನ್ನ ಹೆಸರಿನಲ್ಲೇ 2019ರ ಕೊನೆಯಲ್ಲಿ ಮಾರಾಟ ಆರಂಭ ಮಾಡಲಿದೆ.

ಟೊಯೊಟೊ ಬ್ಯಾಡ್ಜ್‌ನೊಂದಿಗೆ ಬಿಡುಗಡೆಯಾಗಲಿದೆ ಮಾರುತಿ ಸುಜುಕಿ ಬಲೆನೊ

ಮತ್ತಷ್ಟು ವಿಸ್ತರಣೆಯಾಗಲಿದೆ ಬಿಡದಿ ಟೊಯೊಟಾ ಘಟಕ..!

ಸದ್ಯ ಭಾರತದಲ್ಲಿ ಮೂರು ಕಾರು ಉತ್ಪಾದನಾ ಘಟಕಗಳನ್ನ ಹೊಂದಿರುವ ಸುಜುಕಿ ಸಂಸ್ಥೆಯು ಹರಿಯಾಣದಲ್ಲಿ ಎರಡು ಮತ್ತು ಗುಜರಾತ್‌ನಲ್ಲಿ ಒಂದು ಉತ್ಪಾದನಾ ಘಟಕವನ್ನ ಹೊಂದಿದೆ. ಹೀಗಾಗಿ ದಕ್ಷಿಣ ಭಾರತದಲ್ಲಿ ಯಾವುದೇ ಉತ್ಪಾದನಾ ಘಟಕ ಇಲ್ಲದಿರುವುದು ಸುಜುಕಿ ಸಂಸ್ಥೆಗೆ ಕಾರುಗಳ ಸರಬರಾಜು ಒಂದು ಸವಾಲಿನ ವಿಚಾರವೇ ಸರಿ.

ಟೊಯೊಟೊ ಬ್ಯಾಡ್ಜ್‌ನೊಂದಿಗೆ ಬಿಡುಗಡೆಯಾಗಲಿದೆ ಮಾರುತಿ ಸುಜುಕಿ ಬಲೆನೊ

ಹೀಗಿರುವಾಗ ಬೆಂಗಳೂರು ಬಳಿ ಇರುವ ಬಿಡದಿಯಲ್ಲಿ ನೆಲೆಗೊಂಡಿರುವ ಟೊಯೊಟಾ ಸಂಸ್ಥೆಯ ಕಾರು ಉತ್ಪಾದನಾ ಘಟಕದಿಂದ ಸುಜುಕಿ ಸಂಸ್ಥೆಯು ತನ್ನ ಜನಪ್ರಿಯ ಕಾರುಗಳಾದ ವಿಟಾರಾ ಬ್ರೆಝಾ ಮತ್ತು ಬಲೆನೊ ಕಾರುಗಳನ್ನು ಇಲ್ಲಿಯೇ ಉತ್ಪಾದನೆ ಮಾಡುವ ಮೂಲಕ ದಕ್ಷಿಣ ಭಾರತದಲ್ಲಿನ ಡೀಲರ್ಸ್‌ಗಳಿಗೆ ಸರಬರಾಜು ಮಾಡಲು ನಿರ್ಧರಿಸಿದೆ.

ಟೊಯೊಟೊ ಬ್ಯಾಡ್ಜ್‌ನೊಂದಿಗೆ ಬಿಡುಗಡೆಯಾಗಲಿದೆ ಮಾರುತಿ ಸುಜುಕಿ ಬಲೆನೊ

ಇದಕ್ಕೆ ಸುಜುಕಿ ಮತ್ತು ಟೊಯೊಟಾ ಸಂಸ್ಥೆಗಳು ಪರಸ್ಪರ ಒಪ್ಪಿಗೆ ಸೂಚಿಸಿದ್ದು, ಕಳೆದ ನವೆಂಬರ್‌ನಲ್ಲಿ ಬಿಡದಿಗೆ ಭೇಟಿ ನೀಡಿದ್ದ ಸುಜುಕಿ ಸಂಸ್ಥೆಯ ಹಿರಿಯ ಅಧಿಕಾರಿಗಳ ತಂಡವು ಕಾರು ಉತ್ಪಾದನೆಯ ಸಾಮರ್ಥ್ಯವನ್ನು ಹೆಚ್ಚಿಸಲು ಅಗತ್ಯ ಸೌಲಭ್ಯಗಳನ್ನ ಪೂರೈಕೆ ಮಾಡುವುದಾಗಿ ಸಮ್ಮತಿ ಸೂಚಿಸಿದೆ.

MOST READ: ಬ್ರೇಕ್ ಫೇಲ್ ಆದಾಗ ಜೀವ ಉಳಿಸಿಕೊಳ್ಳಲು ಈ ಟಿಪ್ಸ್ ಖಂಡಿತ ನಿಮ್ಮ ಸಹಾಯಕ್ಕೆ ಬರುತ್ತೆ..!

ಟೊಯೊಟೊ ಬ್ಯಾಡ್ಜ್‌ನೊಂದಿಗೆ ಬಿಡುಗಡೆಯಾಗಲಿದೆ ಮಾರುತಿ ಸುಜುಕಿ ಬಲೆನೊ

7 ಸಾವಿರ ಕೋಟಿ ಹೂಡಿಕೆ

ಸದ್ಯ ಮಾರುಕಟ್ಟೆಯಲ್ಲಿ ಅತಿಹೆಚ್ಚು ಮಾರಾಟವಾಗುತ್ತಿರುವ ಬಲೆನೊ ಮತ್ತು ಬ್ರೆಝಾ ಕಾರುಗಳನ್ನು ಉತ್ಪಾದನೆ ಮಾಡಲು ಸಾಕಷ್ಟು ಸ್ಥಳಾವಕಾಶ ಬೇಕಿದ್ದು, ಇದಕ್ಕಾಗಿ ಟೊಯೊಟಾ ಘಟಕವನ್ನು ವಿಸ್ತರಣೆ ಮಾಡಲು ಸುಜುಕಿ ಸಂಸ್ಥೆಯು 1 ಬಿಲಿಯನ್ ಯುಎಸ್‌ ಡಾಲರ್( ಸುಮಾರು 7 ಸಾವಿರ ಕೋಟಿ) ಹೂಡಿಕೆ ಮಾಡಲು ನಿರ್ಧರಿಸಿದೆ.

ಟೊಯೊಟೊ ಬ್ಯಾಡ್ಜ್‌ನೊಂದಿಗೆ ಬಿಡುಗಡೆಯಾಗಲಿದೆ ಮಾರುತಿ ಸುಜುಕಿ ಬಲೆನೊ

ಜೊತೆಗೆ ಸುಜುಕಿ ಕಾರುಗಳನ್ನು ಉತ್ಪಾದನೆ ಮಾಡಲು ಪ್ರತ್ಯೇಕ ಪ್ಲ್ಯಾಟ್‌ಫಾರ್ಮ್ ಸಿದ್ದಗೊಳಿಸಲಿರುವ ಟೊಯೊಟಾ ಸಂಸ್ಥೆಯು ಸುಜುಕಿ ಸಂಸ್ಥೆಯ ಉದ್ಯೋಗಿಗಳ ಜೊತೆಗೂಡಿ ಕಾರ್ಯನಿರ್ವಹಣೆ ಮಾಡಲಿದೆ.

MOST READ: ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಈ ಸ್ಕೂಟರ್ ಮಾಲೀಕ ಮಾಡಿದ್ದೇನು ಗೊತ್ತಾ?

ಟೊಯೊಟೊ ಬ್ಯಾಡ್ಜ್‌ನೊಂದಿಗೆ ಬಿಡುಗಡೆಯಾಗಲಿದೆ ಮಾರುತಿ ಸುಜುಕಿ ಬಲೆನೊ

ಇದಕ್ಕೆ ಪ್ರತಿಯಾಗಿ ಸುಜುಕಿ ಸಂಸ್ಥೆಯು ತನ್ನ ಅಧಿಕೃತ ಡೀಲರ್ಸ್‌ಗಳಲ್ಲಿ ಟೊಯಾಟೊ ಕಾರುಗಳ ಮಾರಾಟಕ್ಕೆ ಅವಕಾಶ ನೀಡಲಿದ್ದು, ಹೈಬ್ರಿಡ್ ತಂತ್ರಜ್ಞಾನ ಅಭಿವೃದ್ಧಿಗೂ ಸಹಕಾರ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಟೊಯೊಟೊ ಬ್ಯಾಡ್ಜ್‌ನೊಂದಿಗೆ ಬಿಡುಗಡೆಯಾಗಲಿದೆ ಮಾರುತಿ ಸುಜುಕಿ ಬಲೆನೊ

ಇದಲ್ಲದೇ ಕಾರುಗಳ ಇಂಧನ ಕಾರ್ಯಕ್ಷಮತೆ ಮತ್ತು ಕಾರುಗಳ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಕಾರುಗಳ ಬಿಡಿಭಾಗಗಳನ್ನು ಸಹ ಒದಗಿಸುವ ಒಪ್ಪಂದಕ್ಕೂ ಉಭಯ ಸಂಸ್ಥೆಗಳು ಮುಂದಾಗಿದ್ದು, ಭಾರತದಲ್ಲಿ ಆರಂಭಗೊಂಡಿರುವ 'ಮೆಕ್ ಇನ್ ಇಂಡಿಯಾ' ಯೋಜನೆ ಅಡಿ ಹೊಸ ಕಾರುಗಳ ಉತ್ಪಾದನೆಯನ್ನು ಆರಂಭಿಸಲಿವೆ.

ಟೊಯೊಟೊ ಬ್ಯಾಡ್ಜ್‌ನೊಂದಿಗೆ ಬಿಡುಗಡೆಯಾಗಲಿದೆ ಮಾರುತಿ ಸುಜುಕಿ ಬಲೆನೊ

ಈ ಮೂಲಕ 2020ರ ವೇಳೆಗೆ ಹೊಸ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ಕಾರುಗಳನ್ನು ಸಹ ಬಿಡುಗಡೆಗೊಳಿಸುವ ಸಾಧ್ಯತೆಗಳಿದ್ದು, ಮಧ್ಯಮ ಗಾತ್ರದ ಬಜೆಟ್‌ನಲ್ಲಿ ಉತ್ತಮ ಎಲೆಕ್ಟ್ರಿಕ್ ಕಾರುಗಳನ್ನು ಅಭಿವೃದ್ಧಿಗೊಳಿಸುವ ಬಗ್ಗೆಯು ಹೊಸ ಸಂಶೋಧನೆಗಳನ್ನು ನಡೆಸಲಿದೆ.

ಟೊಯೊಟೊ ಬ್ಯಾಡ್ಜ್‌ನೊಂದಿಗೆ ಬಿಡುಗಡೆಯಾಗಲಿದೆ ಮಾರುತಿ ಸುಜುಕಿ ಬಲೆನೊ

ಒಟ್ಟಿನಲ್ಲಿ ಕಾರು ಉತ್ಪಾದಕ ದಿಗ್ಗಜರು ಇದೀಗ ಒಂದಾಗಿದ್ದು, ಹೊಸ ಉತ್ಪನ್ನಗಳ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಸದ್ದು ಮಾಡಲಿವೆ. ಜೊತೆಗೆ ಭಾರತೀಯ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮತ್ತಷ್ಟು ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ಕಾರುಗಳು ರಸ್ತೆಗಿಳಿಯಲಿವೆ.

More from DriveSpark

Article Published On: Monday, January 14, 2019, 16:54 [IST]
English summary
Toyota Rebadged Maruti Baleno Premium Hatchback To Launch Next Fiscal Year. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+