Just In
Don't Miss!
- News
ಆಹಾರ ಸುರಕ್ಷಾ ಶೃಂಗ ಪ್ರಶಸ್ತಿ-2019: 2 ಪ್ರಶಸ್ತಿ ಗೆದ್ದ ಹೆರಿಟೇಜ್ ಫುಡ್ಸ್
- Sports
ಆಟದ ಮಧ್ಯೆ ಮಗುವಿಗೆ ಹಾಲುಣಿಸಿದ ಆಟಗಾರ್ತಿ; ಹೃದಯಗೆದ್ದ ಫೋಟೋ ವೈರಲ್
- Movies
ಡಿಸೆಂಬರ್ 18ಕ್ಕೆ ದುನಿಯಾ ವಿಜಯ್ ತಂಡದಿಂದ ಸರ್ಪ್ರೈಸ್
- Finance
ಶೈಕ್ಷಣಿಕ ಸಾಲ ಮನ್ನಾ ಆಗುತ್ತಾ? ಏನಂತಾರೆ FM ನಿರ್ಮಲಾ ಸೀತಾರಾಮನ್
- Technology
ಗೂಗಲ್ ಮ್ಯಾಪ್ ನಲ್ಲಿ ಪಾದಾಚಾರಿಗಳಿಗೆ ಅನುಕೂಲವಾಗುವ ಮತ್ತೊಂದು ಫೀಚರ್
- Lifestyle
ಕಬ್ಬಿಣಾಂಶದ ಕೊರತೆಯೇ? ಈ ಆಹಾರಗಳನ್ನು ಸೇವಿಸಿ
- Education
ಎಸ್ಎಸ್ಎಲ್ಸಿ ಪಾಸ್...ಚಾಲಕ ವೃತ್ತಿ ಅಂದ್ರೆ ನಂಗಿಷ್ಟ… ಹಾಗಿದ್ರೆ ಈ ಸಾರಿಗೆ ಸಂಸ್ಥೆ ನೇಮಕಾತಿಗೆ ಅರ್ಜಿ ಹಾಕ
- Travel
ಬೀಚ್ಗೆ ಹೋಗುವ ಮುನ್ನ ಈ ಸಂಗತಿಗಳು ನೆನಪಿನಲ್ಲಿರಲಿ
ಹಲವು ಸೇವೆಗಳನ್ನು ನೀಡಲು ಮುಂದಾದ ಉಬರ್
ಕ್ಯಾಬ್ ಸೇವಾ ಸಂಸ್ಥೆಯಾದ ಉಬರ್ ಸದ್ಯಕ್ಕೆ ಹೆಚ್ಚು ಜನಸಂಖ್ಯೆ ಹಾಗೂ ಸಂಚಾರ ದಟ್ಟಣೆಯಿರುವ ನಗರಗಳಿಗೆ ಹಲವು ವಿಧದ ಸೇವೆಗಳನ್ನು ನೀಡಲು ಮುಂದಾಗಿದೆ. ಈ ಹಲವು ವಿಧದ ಸೇವೆಗಳಲ್ಲಿ ಇ-ರಿಕ್ಷಾ ಹಾಗೂ ಹೆಲಿಕಾಪ್ಟರ್ (ಹೆಲಿ ಟ್ಯಾಕ್ಸಿ) ಸೇವೆಗಳೂ ಸಹ ಸೇರಿವೆ.

ಭಾರತದಲ್ಲಿನ ಈ ಯೋಜನೆಯನ್ನು ಉಬರ್‌ನ ಗ್ಲೋಬಲ್ ಚೀಫ್ ಪ್ರಾಡಕ್ಟ್ ಆಫೀಸರ್ ಆದ ಮಾಣಿಕ್ ಗುಪ್ತಾರವರು ನಿರ್ವಹಿಸುತ್ತಿದ್ದಾರೆ. ಗುಪ್ತಾರವರು ಈ ಹಿಂದೆ ಗೂಗಲ್ ಮ್ಯಾಪ್‍ಗಳ ಜಾಗತಿಕ ಉತ್ಪನ್ನಗಳ ತಂಡವನ್ನು ಮುನ್ನಡೆಸಿದ್ದರು. ಯಾವುದೇ ಸಮಸ್ಯೆಗಳಿಗೆ ಭಾರತೀಯತೆಯು ಸಹಾಯ ಮಾಡುತ್ತದೆ ಎಂಬುದು ಗುಪ್ತಾರವರ ಅಭಿಪ್ರಾಯವಾಗಿದೆ.

ಉಬರ್, ಭಾರತದಲ್ಲಿ ನಿಧಾನವಾಗಿ ತನ್ನ ಕಾರ್ಯಾಚರಣೆ ಹಾಗೂ ನೆಟ್‍ವರ್ಕ್ ಅನ್ನು ವಿಸ್ತರಿಸುತ್ತಿದೆ. ಪ್ರಯಾಣವನ್ನು ಉತ್ತಮಗೊಳಿಸಲು ಪ್ರಾಯೋಗಿಕವಾದ, ಕೈಗೆಟುಕುವ ಮಾರ್ಗಗಳನ್ನು ಸಂಶೋಧಿಸುವುದು, ಅಭಿವೃದ್ಧಿಪಡಿಸುವುದು ಹಾಗೂ ಸೇವೆಯನ್ನು ನೀಡುವುದು ಉಬರ್ ಕಂಪನಿಯ ಗುರಿಯಾಗಿದೆ.

ಭಾರತದಲ್ಲಿ ಹೆಲಿ ಟ್ಯಾಕ್ಸಿ ಸೇವೆಗಳನ್ನು ಒದಗಿಸಲು ಉಬರ್ ದೀರ್ಘಾವಧಿಯ ಯೋಜನೆಗಳನ್ನು ಹೊಂದಿದೆ. ಉಬರ್ ಸದ್ಯಕ್ಕೆ ಹೆಲಿ ಟ್ಯಾಕ್ಸಿ ಸೇವೆಗಳನ್ನು ನ್ಯೂಯಾರ್ಕ್ ನಗರದಲ್ಲಿ ನೀಡುತ್ತಿದೆ. ಈ ಮಾರ್ಗವು ಲೋವರ್ ಮ್ಯಾನ್‌ಹ್ಯಾಟನ್ ಹಾಗೂ ಜೆಎಫ್‌ಕೆ ಇಂಟರ್‌ನ್ಯಾಷನಲ್‍ಗಳನ್ನು ಸಂಪರ್ಕಿಸುತ್ತದೆ.

ನ್ಯೂಯಾರ್ಕ್‌ನ ಹೊರಗೆ ಹೆಲಿ ಟ್ಯಾಕ್ಸಿ ಸೇವೆಯನ್ನು ನೀಡುವ ಬಗ್ಗೆ ಕಂಪನಿಯು ಯಾವುದೇ ಯೋಜನೆಯನ್ನು ಹೊಂದಿಲ್ಲ. ಗುಪ್ತಾರವರು ಮಾತನಾಡಿ, ಉಬರ್ ಕಂಪನಿಯು ಹೊಸ ಮೊಬಿಲಿಟಿ ಸೇವೆಗಳನ್ನು ವೇಗವಾಗಿ ಪರಿಚಯಿಸುತ್ತಿದೆ ಎಂದು ಹೇಳಿದರು.

ಮೊದಲಿಗೆ ಈ ಸೇವೆಯಲ್ಲಿ ಆಟೋ ರಿಕ್ಷಾಗಳನ್ನು ಸೇರ್ಪಡೆ ಮಾಡಿದರೆ, ಎರಡನೆಯದಾಗಿ ಬೈಕ್ ಟ್ಯಾಕ್ಸಿಗಳನ್ನು ಸೇರ್ಪಡೆ ಮಾಡಲಾಗುವುದು. ಕಡಿಮೆ ಬೆಲೆಯನ್ನು ನಿಗದಿಪಡಿಸಿದರೆ, ನಮ್ಮ ಸೇವೆಗಳನ್ನು ಪಡೆಯುವವರ ಸಂಖ್ಯೆ ಹೆಚ್ಚಲಿದೆ ಎಂಬುದು ಕಂಪನಿಯ ಅಭಿಪ್ರಾಯವಾಗಿದೆ.

ಉಬರ್ ಕಂಪನಿಯ ಪ್ರಕಾರ ಭಾರತದಲ್ಲಿ ಕಾರು ಹೊಂದಿರುವವರ ಸಂಖ್ಯೆಯು 1000ಕ್ಕೆ 22 ರಷ್ಟಿದೆ. ಅಂದರೆ ಪ್ರತಿ 1000ಕ್ಕೆ 22 ಜನರು ಮಾತ್ರ ಕಾರುಗಳನ್ನು ಹೊಂದಿದ್ದಾರೆ. ಬಹು ಸಂಖ್ಯೆಯ ಜನರಿಗೆ ಮೊಬಿಲಿಟಿ ಸೇವೆಯನ್ನು ನೀಡುವತ್ತ ಉಬರ್ ಗಮನಹರಿಸಿದೆ.
MOST READ: ವಿಮಾನಗಳಲ್ಲಿ ಬಿಳಿ ಬಣ್ಣವನ್ನೇ ಬಳಕೆ ಮಾಡುವುದರ ಹಿಂದಿನ ಕಾರಣವೇನು?

ಉಬರ್ ಸಿಇಒ ದಾರಾ ಖೋಸ್ರೋಶಾಹಿರವರ ಪ್ರಕಾರ, ಜನರು ಸ್ವಂತ ಕಾರುಗಳಿಗಿಂತ ಟ್ಯಾಕ್ಸಿ ಸೇವೆಗಳತ್ತ ಒಲವು ತೋರುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕಾರುಗಳನ್ನು ಹೊಂದುವುದರ ಜೊತೆಗೆ, ಬಹು ಮೊಬಿಲಿಟಿ ಆಯ್ಕೆಗಳತ್ತ ಜನರು ಒಲವು ತೋರಲಿದ್ದಾರೆ.
MOST READ: ಮೈಲಿಗಲ್ಲುಗಳ ಬಣ್ಣದ ಹಿಂದಿರುವ ಕಾರಣಗಳೇನು ಗೊತ್ತಾ?

ದಾರಾ ಖೋಸ್ರೋಶಾಹಿರವರು ಕಂಪನಿಯು ಬಸ್ಸುಗಳಂತಹ ಸಮೂಹ ಸಾರಿಗೆಯನ್ನು ನೀಡುವ ಬಗ್ಗೆ ಸಂಶೋಧನೆ ನಡೆಸುತ್ತಿದೆ ಎಂದು ಹೇಳಿದರು. ದೆಹಲಿಯಲ್ಲಿ ಅಂತಹ ಸೇವೆಯ ಸಾಧ್ಯತೆಯ ಬಗ್ಗೆ ಉಬರ್ ಕಂಪನಿಯು ಸಂಶೋಧನೆ ನಡೆಸುತ್ತಿದ್ದು, ಸಿದ್ಧವಾದ ನಂತರ ಇತರ ನಗರಗಳಿಗೆ ಕಾರ್ಯಾಚರಣೆಯನ್ನು ವಿಸ್ತರಿಸಲಿದೆ.
MOST READ: ಜೆಸಿಬಿ ಯಂತ್ರವು ಹಳದಿ ಬಣ್ಣದಲ್ಲೇ ಏಕಿರುತ್ತೆ?

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಈ ಯೋಜನೆಯು ಪ್ರಭಾವಶಾಲಿಯಾಗಿದ್ದರೂ, ಇದನ್ನು ಭಾರತದಲ್ಲಿ ಜಾರಿಗೆ ತರುವುದು ಅಷ್ಟು ಸುಲಭವಲ್ಲ. ಉಬರ್ ಕಂಪನಿಯು ಹೆಲಿ ಟ್ಯಾಕ್ಸಿ ಸೇವೆಯನ್ನು ಜಾರಿಗೊಳಿಸಲು ಲಂಚ ನೀಡಬೇಕಾಗಬಹುದು.

ದೆಹಲಿಯಲ್ಲಿನ ಬಸ್ ಸೇವೆಗಳಿಗೆ ಸಂಬಂಧಿಸಿದಂತೆ ಹೇಳುವುದಾದರೆ, ಉಬರ್ ಕಂಪನಿಯು ಅರವಿಂದ್ ಕೇಜ್ರಿವಾಲ್‍ರವರಿಂದ ಭಾರೀ ಪೈಪೋಟಿಯನ್ನು ಎದುರಿಸಬೇಕಾಗುತ್ತದೆ. ಕೇಜ್ರಿವಾಲ್‍ರವರು ಪ್ರತಿ ತಿಂಗಳು 100 ಬಸ್ಸುಗಳನ್ನು ಬಿಡುಗಡೆಗೊಳಿಸುತ್ತಿದ್ದಾರೆ.