ಭಾರತದಲ್ಲಿ ಬಿಡುಗಡೆಗೆ ಸಿದ್ದವಾದ ಬಹುನೀರಿಕ್ಷಿತ 7 ಸೀಟರ್ ಕಾರುಗಳಿವು..!

ದೇಶಿಯ ಮಾರುಕಟ್ಟೆಯಲ್ಲಿ ಈಗಾಗಲೇ ಹಲವಾರು ಆಟೋ ಉತ್ಪಾದನಾ ಸಂಸ್ಥೆಗಳು ಗ್ರಾಹಕರ ಬೇಡಿಕೆಯೆಂತೆ 7 ಸೀಟರ್ ಎಂಪಿವಿ ಮತ್ತು ಎಸ್‌ಯುವಿ ಕಾರುಗಳನ್ನು ಮಾರಾಟ ಮಾಡುತ್ತಿದ್ದು, ಮುಂದಿನ ಒಂದು ವರ್ಷದ ಅವಧಿಯೊಳಗೆ ಇನ್ನು ಕೆಲವು ವಿಶೇಷ ವಿನ್ಯಾಸದ 7 ಸೀಟರ್ ಕಾರು ಮಾದರಿಗಳು ಭಾರತದಲ್ಲಿ ಭಾರೀ ಸದ್ದು ಮಾಡುವ ನೀರಿಕ್ಷೆಯಲ್ಲಿವೆ.

ಭಾರತದಲ್ಲಿ ಬಿಡುಗಡೆಗೆ ಸಿದ್ದವಾದ ಬಹುನೀರಿಕ್ಷಿತ 7 ಸೀಟರ್ ಕಾರುಗಳಿವು..!

ಕಾರು ಮಾರುಕಟ್ಟೆಯಲ್ಲಿ ಬಹುಬಳಕೆಯ 7 ಸೀಟರ್ ಎಂಪಿವಿ ಕಾರುಗಳಿಗೆ ಸಾಕಷ್ಟು ಬೇಡಿಕೆಯಿದ್ದರೂ ಸಹ ಕೈಗೆಟುಕುವ ಬೆಲೆಗಳಲ್ಲಿ ಉತ್ತಮ ಆಸನ ಸೌಲಭ್ಯ ಹೊಂದಿರುವ ಎಂಪಿವಿ ಕಾರುಗಳು ಅಷ್ಟಾಗಿ ಖರೀದಿಗೆ ಲಭ್ಯವಿಲ್ಲ. ದುಬಾರಿ ಬೆಲೆಯ ಟೊಯೊಟಾ ಇನೋವಾ ಕ್ರಿಸ್ಟಾ ಹೊರತುಪಡಿಸಿ ಮಾರುತಿ ಸುಜುಕಿ ಎರ್ಟಿಗಾ ಮತ್ತು ಮಹೀಂದ್ರಾ ಮರಾಜೋ ಕಾರುಗಳು ಇನೋವಾ ಕ್ರಿಸ್ಟಾ ಮಾದರಿಯಲ್ಲಿ ಉತ್ತಮ ಒಳಾಂಗಣ ಸೌಲಭ್ಯ ಹೊಂದಿಲ್ಲ. ಈ ಹಿನ್ನೆಲೆಯಲ್ಲಿ ಗ್ರಾಹಕರ ನೀರಿಕ್ಷೆಯಂತೆ ಕೆಲವು ಹೊಸ 7 ಸೀಟರ್ ಕಾರು ಉತ್ಪನ್ನಗಳನ್ನು ಅಭಿವೃದ್ಧಿಪಡಿಸುತ್ತಿರುವ ವಿವಿಧ ಆಟೋ ಉತ್ಪಾದನಾ ಸಂಸ್ಥೆಗಳು ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಅಲೆ ಸೃಷ್ಠಿಸುವ ತವಕದಲ್ಲಿವೆ. ಹಾಗಾದ್ರೆ ಆ ಕಾರುಗಳು ಯಾವವು? ಬೆಲೆ ಎಷ್ಟಿರಬಹುದು ಎನ್ನುವ ಮಾಹಿತಿ ಮುಂದೆ ತಿಳಿಯಿರಿ..

ಭಾರತದಲ್ಲಿ ಬಿಡುಗಡೆಗೆ ಸಿದ್ದವಾದ ಬಹುನೀರಿಕ್ಷಿತ 7 ಸೀಟರ್ ಕಾರುಗಳಿವು..!

01. ರೆನಾಲ್ಟ್ ಟ್ರೈಬರ್

ರೆನಾಲ್ಟ್ ಸಂಸ್ಥೆಯು ತನ್ನ ಬಹನೀರಿಕ್ಷಿತ ಟ್ರೈಬರ್ ಎಂಪಿವಿ ಆವೃತ್ತಿಯನ್ನು ಇದೇ ತಿಂಗಳು ಅಗಸ್ಟ್ ಅಂತ್ಯಕ್ಕೆ ಅಥವಾ ಸೆಪ್ಟೆಂಬರ್ ಆರಂಭದಲ್ಲಿ ಬಿಡುಗಡೆಗೊಳಿಸುತ್ತಿದ್ದು, ಸಿಎಂಎಫ್-ಎ ಪ್ಲಾಟ್‌ಫಾರ್ಮ್ ಅಡಿಯಲ್ಲಿ ಈ ಕಾರುನ್ನು ಅಭಿವೃದ್ಧಿಪಡಿಸಲಾಗಿದೆ.

ಭಾರತದಲ್ಲಿ ಬಿಡುಗಡೆಗೆ ಸಿದ್ದವಾದ ಬಹುನೀರಿಕ್ಷಿತ 7 ಸೀಟರ್ ಕಾರುಗಳಿವು..!

1.0-ಲೀಟರ್, ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿರುವ ಟ್ರೈಬರ್ ಕಾರು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಸಹಾಯದೊಂದಿಗೆ 71-ಬಿಎಚ್‌ಪಿ ಮತ್ತು 96-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದ್ದು, ಅತ್ಯಂತ ವ್ಯವಸ್ಥಿತವಾಗಿ 7 ಸೀಟರ್ ಸೌಲಭ್ಯವನ್ನು ಜೋಡಿಸಲಾಗಿದೆ. ವ್ಯಯಕ್ತಿಕ ಕಾರು ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ಟ್ರೈಬರ್ ಬಿಡುಗಡೆ ಮಾಡಲಾಗುತ್ತಿದ್ದು, ಎಂಟ್ರಿ ಲೆವೆಲ್ 7-ಸೀಟರ್ ಮಾದರಿಯಾಗಿರುವ ಈ ಕಾರಿನ ಬೆಲೆ ರೂ.5 ಲಕ್ಷದಿಂದ ರೂ.7 ಲಕ್ಷ ಇರಬಹುದೆಂದು ನೀರಿಕ್ಷಿಸಲಾಗಿದೆ.

ಭಾರತದಲ್ಲಿ ಬಿಡುಗಡೆಗೆ ಸಿದ್ದವಾದ ಬಹುನೀರಿಕ್ಷಿತ 7 ಸೀಟರ್ ಕಾರುಗಳಿವು..!

02. ಎಂಜಿ ಹೆಕ್ಟರ್(7 ಸೀಟರ್)

ಕಳೆದ ತಿಂಗಳು ಬಿಡುಗಡೆಯಾಗಿರುವ ಎಂಜಿ ಮೋಟಾರ್ ನಿರ್ಮಾಣದ 5 ಸೀಟರ್ ಹೆಕ್ಟರ್ ಸದ್ಯ ಭಾರೀ ಬೇಡಿಕೆಯನ್ನು ಪಡೆದುಕೊಳ್ಳುತ್ತಿದೆ. ನೀರಿಕ್ಷೆಗೂ ಮೀರಿ ಹೆಚ್ಚು ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಿರುವ ಎಂಜಿ ಸಂಸ್ಥೆಯು ಮುಂಬರುವ ಕೆಲವೇ ದಿನಗಳಲ್ಲಿ 7 ಸೀಟರ್ ಸೌಲಭ್ಯದ ಹೆಕ್ಟರ್ ಮಾದರಿಯನ್ನು ಸಹ ಬಿಡುಗಡೆಯ ಸುಳಿವು ನೀಡಿದ್ದು, ಇಂಡೋನೇಷ್ಯಾ ಮಾರುಕಟ್ಟೆಯಲ್ಲಿ ಇದೇ ವರ್ಷಾಂತ್ಯಕ್ಕೆ ಬಿಡುಗಡೆಗೊಳಿಸುತ್ತಿದೆ.

ಭಾರತದಲ್ಲಿ ಬಿಡುಗಡೆಗೆ ಸಿದ್ದವಾದ ಬಹುನೀರಿಕ್ಷಿತ 7 ಸೀಟರ್ ಕಾರುಗಳಿವು..!

5 ಸೀಟರ್ ಮಾದರಿಯಲ್ಲೇ ಬಹುತೇಕ ತಾಂತ್ರಿಕ ಸೌಲಭ್ಯಗಳನ್ನು ಹೊಂದಿರುವ ಅಲ್ಮಾ ಕಾರು ವಿಸ್ತರಿತ ಒಳಾಂಗಣ ಸೌಲಭ್ಯದೊಂದಿಗೆ 7 ಸೀಟರ್ ಸೌಲಭ್ಯವನ್ನು ಪಡೆದುಕೊಂಡಿದ್ದು, ಇದು ಭಾರತದಲ್ಲಿ ಹೆಕ್ಟರ್ ಅಥವಾ ಇನ್ನಿತರೆ ಹೆಸರಿನಲ್ಲಾದರೂ ಬಿಡುಗಡೆಯಾಗಲಿದೆ. ಮಾರುಕಟ್ಟೆಯಲ್ಲಿ ಬೇಡಿಕೆಯೆಂತೆ 7 ಸೀಟರ್ ಹೆಕ್ಟರ್ ಮಾದರಿಯು 2.5-ಲೀಟರ್ ಲೀಟರ್ ಡೀಸೆಲ್ ಮತ್ತು 2.0-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಹೊಂದಬಹುದಾಗಿದ್ದು, ಇನೋವಾ ಕ್ರಿಸ್ಟಾ ಮತ್ತು ಮಹೀಂದ್ರಾ ಅಲ್ಟುರಾಸ್ ಜಿ4 ಕಾರಿಗೆ ಇದು ತೀವ್ರ ಪೈಪೋಟಿ ನೀಡಲಿದೆ.

ಭಾರತದಲ್ಲಿ ಬಿಡುಗಡೆಗೆ ಸಿದ್ದವಾದ ಬಹುನೀರಿಕ್ಷಿತ 7 ಸೀಟರ್ ಕಾರುಗಳಿವು..!

03. ಹ್ಯುಂಡೈ ಕ್ರೆಟಾ(7ಸೀಟರ್)

ಹ್ಯುಂಡೈ ಯಶಸ್ವಿ ಕಾರು ಮಾದರಿಯಾದ ಕ್ರೆಟಾ ಕಾರು ಸದ್ಯ 5 ಸೀಟರ್ ಮಾದರಿಯಲ್ಲಿ ಭಾರೀ ಬೇಡಿಕೆಯೊಂದಿಗೆ ಮಾರಾಟವಾಗುತ್ತಿದ್ದು, 2020ರ ಆರಂಭದಲ್ಲಿ ಬಿಡುಗಡೆಯಾಗಲಿರುವ ನ್ಯೂ ಜನರೇಷನ್ ಕ್ರೆಟಾ ಕಾರಿನಲ್ಲಿ 7 ಸೀಟರ್ ಆಯ್ಕೆ ಕೂಡಾ ನೀಡುವುದು ಬಹುತೇಕ ಖಚಿತವಾಗಿದೆ.

ಭಾರತದಲ್ಲಿ ಬಿಡುಗಡೆಗೆ ಸಿದ್ದವಾದ ಬಹುನೀರಿಕ್ಷಿತ 7 ಸೀಟರ್ ಕಾರುಗಳಿವು..!

ಪ್ರಸ್ತುತ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ 1.6-ಲೀಟರ್ ಡೀಸೆಲ್ ಮತ್ತು 1.6-ಲೀಟರ್ ಪೆಟ್ರೋಲ್ ಬದಲಾಗಿ 1.5-ಲೀಟರ್ ಡೀಸೆಲ್ ಮತ್ತು 1.5-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬಿಡುಗಡೆಯಾಗುವ ನೀರಿಕ್ಷೆಗಳಿದ್ದು, ಹೊಸ ಕಾರಿನ ಬೆಲೆಯು ರೂ.12 ಲಕ್ಷದಿಂದ ರೂ. 15 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

ಭಾರತದಲ್ಲಿ ಬಿಡುಗಡೆಗೆ ಸಿದ್ದವಾದ ಬಹುನೀರಿಕ್ಷಿತ 7 ಸೀಟರ್ ಕಾರುಗಳಿವು..!

04. ಟಾಟಾ ಕ್ಯಾಸಿನಿ

ಟಾಟಾ ಸಂಸ್ಥೆಯು 5 ಸೀಟರ್ ಹ್ಯಾರಿಯರ್ ಮಾದರಿಯಲ್ಲೇ 7 ಸೀಟರ್ ಕಾರು ಆವೃತ್ತಿಯಾದ ಕ್ಯಾಸಿನಿ ಕಾರನ್ನು ಅಭಿವೃದ್ಧಿಗೊಳಿಸಿದ್ದು, ಇನೋವಾ ಕ್ರಿಸ್ಟಾ ಕಾರಿನ ಮಹೀಂದ್ರಾ ಅಲ್ಟುರಾಸ್ ಜಿ4 ಮತ್ತು ಫೋರ್ಡ್ ಎಂಡೀವರ್ ಆವೃತ್ತಿಗೂ ಪ್ರತಿಸ್ಪರ್ಧಿಯಾಗುವ ಗುಣಲಕ್ಷಣಗಳನ್ನು ಹೊಂದಿದೆ. ಹೊಸ ಕ್ಯಾಸಿನಿ ಕಾರು ಮಾದರಿಯು 6 ಪ್ಲಸ್ 1 ಆಸನ ಮಾದರಿಯ ಎಸ್‌ಯುವಿ ಕಾರು ಆವೃತ್ತಿಯಾಗಿದ್ದು, 2020ರ ಮೊದಲ ತ್ರೈಮಾಸಿಕ ಅವಧಿಯಲ್ಲಿ ಬಿಡುಗಡೆಯಾಗಲಿದೆ.

MOST READ: ಇನೋವಾ ಕ್ರಿಸ್ಟಾ ಹಿಂದಿಕ್ಕಲು ಕಿಯಾ ಕಾರ್ನಿವಾಲ್‌ನಲ್ಲಿರುವ ಈ ಐದು ವಿಶೇಷ ಫೀಚರ್ಸ್‌ಗಳೇ ಸಾಕು..!

ಭಾರತದಲ್ಲಿ ಬಿಡುಗಡೆಗೆ ಸಿದ್ದವಾದ ಬಹುನೀರಿಕ್ಷಿತ 7 ಸೀಟರ್ ಕಾರುಗಳಿವು..!

ಕ್ಯಾಸಿನಿ ಕಾರುಗಳಲ್ಲಿ 2.0-ಲೀಟರ್ ಕ್ರೆಯೊಟೆಕ್ ಡೀಸೆಲ್ ಎಂಜಿನ್ ಸಹಾಯದಿಂದ 170-ಬಿಹೆಚ್‍ಪಿ ಹಾಗೂ 350-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಹೊಸ ಕಾರು ರೂ.15 ಲಕ್ಷದಿಂದ ರೂ.20 ಲಕ್ಷ ಬೆಲೆ ಪಡೆದುಕೊಳ್ಳುವ ನೀರಿಕ್ಷೆಯಿದೆ.

MOST READ: ಕೊಹ್ಲಿಗೆ ಟೋಪಿ ಹಾಕಿದ ಕಾಲ್ ಸೆಂಟರ್ ಕಿಲಾಡಿ- ಠಾಣೆಯಲ್ಲೇ ಅನಾಥವಾಗಿ ಬಿದ್ದ ರೂ. 3 ಕೋಟಿ ಕಾರು..!

ಭಾರತದಲ್ಲಿ ಬಿಡುಗಡೆಗೆ ಸಿದ್ದವಾದ ಬಹುನೀರಿಕ್ಷಿತ 7 ಸೀಟರ್ ಕಾರುಗಳಿವು..!

05. ಕಿಯಾ ಕಾರ್ನಿವಾಲ್

ಕಿಯಾ ಮೋಟಾರ್ಸ್ ಇದೇ ತಿಂಗಳು ಅಗಸ್ಟ್ 22ಕ್ಕೆ ತನ್ನ ಮೊದಲ ಕಾರು ಮಾದರಿಯಾದ ಸೆಲ್ಟೊಸ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯನ್ನು ಬಿಡುಗಡೆ ಮಾಡುತ್ತಿದ್ದು, ತದನಂತರ ಬಹುನೀರಿಕ್ಷಿತ ಎಂಪಿವಿ ಮಾದರಿಯಾದ ಕಾರ್ನಿವಾಲ್ ಬಿಡುಗಡೆ ಮಾಡಲಿದೆ. ಟೊಯೊಟಾ ಇನೋವಾ ಕ್ರಿಸ್ಟಾ ಪ್ರತಿಸ್ಪರ್ಧಿಯಾಗಿ ದೇಶಿಯ ಮಾರುಕಟ್ಟೆ ಪ್ರವೇಶಿಸಲಿರುವ ಈ ಕಾರು 2020ರ ಫೆಬ್ರುವರಿಯಲ್ಲಿ ನಡೆಸಲಿರುವ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಂಡ ನಂತರವಷ್ಟೇ ಮಾರಾಟಕ್ಕೆ ಲಭ್ಯವಾಗಲಿದೆ.

MOST READ: ಕಾರ್ ರೀಪೆರಿಗೆ 3 ಲಕ್ಷ ಕೇಳಿದ್ದ ಡೀಲರ್ಸ್ ಅಸಲಿಯತ್ತು ಬಯಲಾಗಿದ್ದು ಲೋಕಲ್ ಗ್ಯಾರೇಜ್‌ನಲ್ಲಿ..!

ಭಾರತದಲ್ಲಿ ಬಿಡುಗಡೆಗೆ ಸಿದ್ದವಾದ ಬಹುನೀರಿಕ್ಷಿತ 7 ಸೀಟರ್ ಕಾರುಗಳಿವು..!

ಮಾರುಕಟ್ಟೆಗೆ ಲಗ್ಗೆಯಿಡುತ್ತಿರುವ ಕಿಯಾ ನಿರ್ಮಾಣದ ಕಾರ್ನಿವಾಲ್ ಕಾರು ಪ್ರತಿಹಂತದಲ್ಲೂ ಇನೋವಾ ಕ್ರಿಸ್ಟಾಗೆ ಪೈಪೋಟಿ ನೀಡುವಂತಹ ಫೀಚರ್ಸ್‌ಗಳನ್ನು ಹೊಂದಿರುವುದಲ್ಲದೇ ಬೆಲೆ ವಿಚಾರವಾಗಿಯು ಗಮನಸೆಳೆಯಲಿದೆ. ಸದ್ಯ ಮಾರುಕಟ್ಟೆಯಲ್ಲಿ ಇನೋವಾ ಕ್ರಿಸ್ಟಾ ಕಾರು ಆನ್‌ರೋಡ್ ಬೆಲೆ ಪ್ರಕಾರ ಆರಂಭಿಕವಾಗಿ ರೂ. 18.84 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ.29.71 ಲಕ್ಷ ಬೆಲೆ ಹೊಂದಿದ್ದು, ಕಾರ್ನಿವಾಲ್ ಕಾರು ಆರಂಭಿಕವಾಗಿ ರೂ.14 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 23 ಲಕ್ಷ ಬೆಲೆ ಹೊಂದುವ ಸಾಧ್ಯತೆಗಳಿವೆ.

ಭಾರತದಲ್ಲಿ ಬಿಡುಗಡೆಗೆ ಸಿದ್ದವಾದ ಬಹುನೀರಿಕ್ಷಿತ 7 ಸೀಟರ್ ಕಾರುಗಳಿವು..!

06. ಜೀಪ್ ಕಂಪಾಸ್(7 ಸೀಟರ್)

ಪ್ರೀಮಿಯಂ ಎಸ್‌ಯುವಿಗಳಲ್ಲಿ ಜೀಪ್ ಕಂಪಾಸ್(5 ಸೀಟರ್ ವರ್ಷನ್) ಕಾರಿಗೆ ಸದ್ಯ ಉತ್ತಮ ಬೇಡಿಕೆಯಿದ್ದರೂ ಪ್ರತಿಸ್ಪರ್ಧಿ ಕಾರುಗಳಿಂದ ತೀವ್ರ ಪೈಪೋಟಿ ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕಂಪಾಸ್ ಮಾದರಿಯಲ್ಲೇ ಬಹುಬಳಕೆಯ 7 ಸೀಟರ್ ಆವೃತ್ತಿಯನ್ನು ಬಿಡುಗಡೆಗೊಳಿಸುವ ಸುಳಿವು ನೀಡಿದೆ.

ಭಾರತದಲ್ಲಿ ಬಿಡುಗಡೆಗೆ ಸಿದ್ದವಾದ ಬಹುನೀರಿಕ್ಷಿತ 7 ಸೀಟರ್ ಕಾರುಗಳಿವು..!

ಚೀನಿ ಮಾರುಕಟ್ಟೆಯಲ್ಲಿರುವ 7 ಸೀಟರ್ ಕಮಾಂಡೋ ಎಸ್‌ಯುವಿ ಮಾದರಿಯನ್ನೇ ಭಾರತದಲ್ಲೂ ಕೆಲವು ಬದಲಾವಣೆಗಳೊಂದಿಗೆ ಬಿಡುಗಡೆಗೊಳಿಸುವ ಸಾಧ್ಯತೆಗಳಿದ್ದು, ರೂ.20 ಲಕ್ಷದಿಂದ ರೂ25 ಲಕ್ಷ ಬೆಲೆ ಹೊಂದಲಿರುವ ಈ ಕಾರು ಫೋರ್ಡ್ ಎಂಡೀವರ್, ಮಹೀಂದ್ರಾ ಅಲ್ಟುರಾಸ್ ಜಿ4 ಮತ್ತು ಟೊಯೊಟಾ ಫಾರ್ಚೂನರ್ ಕಾರುಗಳಿಗೆ ಪೈಪೋಟಿ ನೀಡಲಿದೆ.

ಭಾರತದಲ್ಲಿ ಬಿಡುಗಡೆಗೆ ಸಿದ್ದವಾದ ಬಹುನೀರಿಕ್ಷಿತ 7 ಸೀಟರ್ ಕಾರುಗಳಿವು..!

07. ಫೋಕ್ಸ್‌ವ್ಯಾಗನ್ ಟಿಗ್ವಾನ್ ಆಲ್‌ಸ್ಪೆಸ್

ಫೋಕ್ಸ್​ ವ್ಯಾಗನ್ ಸಂಸ್ಥೆಯು ಅತಿ ಶೀಘ್ರದಲ್ಲಿ ತನ್ನ ಹೊಸ ಟಿಗ್ವಾನ್ ಆಲ್‌ಸ್ಪೆಸ್ ಎಸ್‌ಯುವಿ ಮಾದರಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದ್ದು, ಇದೇ ವರ್ಷದ ಕೊನೆಯ ಭಾಗದಲ್ಲಿ ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.

ಭಾರತದಲ್ಲಿ ಬಿಡುಗಡೆಗೆ ಸಿದ್ದವಾದ ಬಹುನೀರಿಕ್ಷಿತ 7 ಸೀಟರ್ ಕಾರುಗಳಿವು..!

ಸಾಮಾನ್ಯ ಮಾದರಿಯ ಟಿಗ್ವಾನ್ ಆವೃತ್ತಿಯು ಸದ್ಯ ಭಾರತದಲ್ಲಿ 5-ಸೀಟರ್ ಆವೃತ್ತಿಯಲ್ಲಿ ಮಾರಾಟವಾಗುತ್ತಿದ್ದು, ಯುರೋಪಿನ್ ಮಾರುಕಟ್ಟೆಗಳಲ್ಲಿ ಲಭ್ಯವಿರುವ ಟಿಗ್ವಾನ್ ಆಲ್‌ಸ್ಪೆಸ್ ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆ ಮಾಡುವ ಸಾಧ್ಯತೆಗಳಿದ್ದು, ಹೊಸ ಕಾರು ಹಲವು ಐಷಾರಾಮಿ ಸೌಲಭ್ಯಗಳೊಂದಿಗೆ ಎಕ್ಸ್‌ಶೋರೂಂ ಪ್ರಕಾರ ರೂ.30 ಲಕ್ಷದಿಂದ ರೂ.35 ಲಕ್ಷ ಬೆಲೆ ಹೊಂದುವ ಸಾಧ್ಯತೆಗಳಿವೆ.

Most Read Articles

Kannada
English summary
Upcoming 7-seater cars in India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X