'ಡಿಸೇಲ್ ಗೇಟ್' ಹಗರಣ: ಫೋಕ್ಸ್‌ವ್ಯಾಗನ್ ಸಂಸ್ಥೆಗೆ 171 ಕೋಟಿ ದಂಡ..!

2015ರಲ್ಲಿ ಇಡೀ ಆಟೋಮೊಬೈಲ್ ಕ್ಷೇತ್ರವನ್ನೇ ತಲ್ಲಣಗೊಳಿಸಿದ್ದ ಫೋಕ್ಸ್‌ವ್ಯಾಗನ್ ಮಾಲಿನ್ಯ ಮೋಸ ಪ್ರಕರಣಕ್ಕೆ(ಡಿಸೇಲ್ ಗೇಟ್) ಸಂಬಂಧಿಸಿದಂತೆ ರಾಷ್ಟ್ರೀಯ ಹಸಿರು ಪೀಠವು ಮಹತ್ವದ ತೀರ್ಪು ನೀಡಿದ್ದು, ಮಾಡಿದ ತಪ್ಪಿಗೆ ಬರೋಬ್ಬರಿ ರೂ.171 ಕೋಟಿ ಪರಿಹಾರ ನೀಡುವಂತೆ ಆದೇಶ ನೀಡಿದೆ.

'ಡಿಸೇಲ್ ಗೇಟ್' ಹಗರಣ: ಫೋಕ್ಸ್‌ವ್ಯಾಗನ್ ಸಂಸ್ಥೆಗೆ 171 ಕೋಟಿ ದಂಡ..!

ದೋಷಪೂರಿತ ಡೀಸೆಲ್ ಎಂಜಿನ್ ಮೂಲಕ ಎಮಿಷನ್ ನಿಯಮಗಳನ್ನು ಗಾಳಿಗೆ ತೂರಿದ್ದ ಫೋಕ್ಸ್‌ವ್ಯಾಗನ್ ಸಂಸ್ಥೆಯು ಭಾರತ ಸೇರಿದಂತೆ ಅಮೆರಿಕ ಮತ್ತು ಯುರೋಪ್ ಮಾರುಕಟ್ಟೆಗಳಲ್ಲಿ ಮಿಲಿಯನ್‌ಗಟ್ಟಲೇ ಡಿಸೇಲ್ ಕಾರುಗಳನ್ನು ಮಾರಾಟ ಮಾಡಿದ್ದು, ಇದುವರೆಗೆ ಆದ ಮಾಲಿನ್ಯ ಉತ್ಪದಾನೆಯಿಂದ ಆದ ನಷ್ಟಕ್ಕೆ ಭಾರೀ ಪ್ರಮಾಣದ ದಂಡ ಹಾಕಲಾಗಿದೆ.

'ಡಿಸೇಲ್ ಗೇಟ್' ಹಗರಣ: ಫೋಕ್ಸ್‌ವ್ಯಾಗನ್ ಸಂಸ್ಥೆಗೆ 171 ಕೋಟಿ ದಂಡ..!

ಯುರೋಪ್ ಮಾರುಕಟ್ಟೆಯಲ್ಲಿ ಈಗಾಗಲೇ ಫೋಕ್ಸ್‌ವ್ಯಾಗನ್ ಡೀಸೆಲ್ ಕಾರುಗಳ ಮೇಲೆ ನಿಷೇಧ ಹೇರಿದ್ದ ಯುರೋಪ್ ಫೆಡರೇಷನ್, ಫೋಕ್ಸ್‌ವ್ಯಾಗನ್ ಭಾರೀ ಪ್ರಮಾಣದ ದಂಡವನ್ನು ಸಹ ವಸೂಲಿ ಮಾಡಿತ್ತು.

'ಡಿಸೇಲ್ ಗೇಟ್' ಹಗರಣ: ಫೋಕ್ಸ್‌ವ್ಯಾಗನ್ ಸಂಸ್ಥೆಗೆ 171 ಕೋಟಿ ದಂಡ..!

ಭಾರತದಲ್ಲೂ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ 2016ರಲ್ಲಿ ರಾಷ್ಟ್ರೀಯ ಹಸಿರು ಪೀಠದಲ್ಲಿ ಪ್ರಕರಣ ದಾಖಲಿಸಿದ್ದ ಕೇಂದ್ರ ಆರೋಗ್ಯ ಇಲಾಖೆಯು ಫೋಕ್ಸ್‌ವ್ಯಾಗನ್ ಡಿಸೇಲ್ ಕಾರುಗಳಿಂದಾಗಿರುವ ಆರೋಗ್ಯ ನಷ್ಟಕ್ಕೆ ಭಾರೀ ಪ್ರಮಾಣದ ಪರಿಹಾರ ಕೋರಿತ್ತು.

'ಡಿಸೇಲ್ ಗೇಟ್' ಹಗರಣ: ಫೋಕ್ಸ್‌ವ್ಯಾಗನ್ ಸಂಸ್ಥೆಗೆ 171 ಕೋಟಿ ದಂಡ..!

2015 ಸೆಪ್ಟೆಂಬರ್ ತಿಂಗಳಲ್ಲಿ ಫೋಕ್ಸ್‌ವ್ಯಾಗನ್ ವಿರುದ್ಧ ಮಾಲಿನ್ಯ ಮೋಸ ಪ್ರಕರಣವು ಬಯಲುಗೊಳ್ಳುತ್ತಿದ್ದಂತೆ, ಫೋಕ್ಸ್‌ವ್ಯಾಗ್ ಸಹ ಬ್ರಾಂಡ್‌ಗಳಾದ ಆಡಿ, ಪೋರ್ಷೆ, ಸ್ಕೋಡಾ ಹಾಗೂ ಸಿಯೆಟ್ ಸೇರಿದಂತೆ 11 ದಶ ಲಕ್ಷದಷ್ಟು ಡೀಸೆಲ್ ಕಾರುಗಳಲ್ಲಿ ದೋಷ ಕಂಡುಬಂದಿತ್ತು.

'ಡಿಸೇಲ್ ಗೇಟ್' ಹಗರಣ: ಫೋಕ್ಸ್‌ವ್ಯಾಗನ್ ಸಂಸ್ಥೆಗೆ 171 ಕೋಟಿ ದಂಡ..!

ಇಲ್ಲಿ ಇನ್ನೊಂದು ಆತಂಕಕಾರಿ ವಿಚಾರ ಅಂದ್ರೆ, ಅಮೆರಿಕ ಮಾಲಿನ್ಯ ತಪಾಸಣೆಯ (ಎಮಿಷನ್ ಟೆಸ್ಟ್) ವೇಳೆ ತಪಾಸಣೆಯ ಮಾನದಂಡವನ್ನು ಮರೆಮಾಚಲು ಫೋಕ್ಸ್ ವ್ಯಾಗನ್ ಸಂಸ್ಥೆಯು ವಿಶೇಷ ರೀತಿಯ ಸಾಫ್ಟ್ ವೇರ್ ವೊಂದನ್ನು ಬಳಕೆ ಮಾಡಿದ್ದು ಸಹ ಭಾರೀ ಚರ್ಚೆಗೆ ಕಾರಣವಾಗಿತ್ತು.

'ಡಿಸೇಲ್ ಗೇಟ್' ಹಗರಣ: ಫೋಕ್ಸ್‌ವ್ಯಾಗನ್ ಸಂಸ್ಥೆಗೆ 171 ಕೋಟಿ ದಂಡ..!

ಈ ಸಾಫ್ಟ್‌ವೇರ್ ಮೂಲಕ ಕಾರಿನ ಇಂಧನ ವಿಸರ್ಜನೆ ಪರೀಕ್ಷೆಯಲ್ಲಿ ಕಾರುಗಳು ಸರಾಗವಾಗಿ ತೇರ್ಗಡೆ ಹೊಂದುತ್ತಿದ್ದವು. ಆದ್ರೆ ಅಸಲಿಗೆ ಬಂದಲ್ಲಿ ಇತರೆ ಡೀಸೆಲ್ ಕಾರುಗಳಿಂತ ಮೂರು ಪಟ್ಟು ಹೆಚ್ಚು ಮಾಲಿನ್ಯವನ್ನು ಉತ್ಪತ್ತಿ ಮಾಡಿದ್ದ ಕಾರುಗಳು ವಿಶೇಷ ಸಾಫ್ಟ್‌ವೇರ್ ಬಳಕೆ ಮೂಲಕ ಮೋಸ ಮಾಡಲಾಗುತ್ತಿತ್ತು.

'ಡಿಸೇಲ್ ಗೇಟ್' ಹಗರಣ: ಫೋಕ್ಸ್‌ವ್ಯಾಗನ್ ಸಂಸ್ಥೆಗೆ 171 ಕೋಟಿ ದಂಡ..!

ಇದನ್ನು ಕೊನೆಗೂ ಪತ್ತೆಹಚ್ಚುವಲ್ಲಿ ಯಶಸ್ವಿಯಾದ ಅಮೆರಿಕ ಟ್ರಾನ್ಸ್‌ಪೋರ್ಟ್ ಅಥಾರಿಟಿಯು ಫೋಕ್ಸ್‌ವ್ಯಾಗನ್ ಕಳ್ಳಾಟವನ್ನು ಕೆಲವೇ ದಿನಗಳಲ್ಲಿ ಬಯಲು ಮಾಡಿತ್ತು. ಈ ಹೊತ್ತಿಗಾಗಲೇ ವಿಶ್ವಾದ್ಯಂತ 3 ಮಿಲಿಯನ್‌ನಷ್ಟು ಕಾರುಗಳು ಮಾರಾಟಗೊಂಡಿದ್ದವು.

'ಡಿಸೇಲ್ ಗೇಟ್' ಹಗರಣ: ಫೋಕ್ಸ್‌ವ್ಯಾಗನ್ ಸಂಸ್ಥೆಗೆ 171 ಕೋಟಿ ದಂಡ..!

ಕೊನೆಗೂ ಫೋಕ್ಸ್‌ವ್ಯಾಗನ್ ಮೇಲೆ ನಿಷೇಧ ಹೇರುವ ಮೂಲಕ ಎಂಜಿನ್ ಬದಲಾವಣೆ ಮಾಡಿದ್ದ ಅಮೆರಿಕ ಮತ್ತು ಯುರೋಪ್ ಒಕ್ಕೂಟಗಳು ಪರಿಹಾರವಾಗಿ ಸಾವಿರ ಕೋಟಿ ಲೆಚ್ಚದಲ್ಲಿ ದಂಡ ವಸೂಲಿ ಮಾಡಿದ್ದವು. ಇದೀಗ ಭಾರತದಲ್ಲೂ ಇದೇ ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರ ಆರೋಗ್ಯ ಇಲಾಖೆ ಕೂಡಾ ಫೋಕ್ಸ್‌ವ್ಯಾಗನ್ ಪರಿಹಾರ ಕೋರಿತ್ತು.

'ಡಿಸೇಲ್ ಗೇಟ್' ಹಗರಣ: ಫೋಕ್ಸ್‌ವ್ಯಾಗನ್ ಸಂಸ್ಥೆಗೆ 171 ಕೋಟಿ ದಂಡ..!

ಕೇವಲ ಭಾರತದಲ್ಲೇ ಬರೋಬ್ಬರಿ 48.678 ಟನ್‌ನಷ್ಟು ನೈಟ್ರೋಸ್ ಆಕ್ಸೈಡ್(NOx) ಮತ್ತು NO2 ಉತ್ಪಾದನೆ ಕಾರಣವಾಗಿರುವ ಫೋಕ್ಸ್‌ವ್ಯಾಗನ್ ಡಿಸೇಲ್ ಕಾರುಗಳು ದೆಹಲಿ, ಮುಂಬೈ, ಕೊಲ್ಕತ್ತಾ ಮತ್ತು ಬೆಂಗಳೂರಿನಲ್ಲಿ ಅತಿಹೆಚ್ಚು ಮಾಲಿನ್ಯ ಉಂಟು ಮಾಡಿದ್ದವು.

MOST READ: ಬ್ರೇಕ್ ಫೇಲ್ ಆದಾಗ ಜೀವ ಉಳಿಸಿಕೊಳ್ಳಲು ಈ ಟಿಪ್ಸ್ ಖಂಡಿತ ನಿಮ್ಮ ಸಹಾಯಕ್ಕೆ ಬರುತ್ತೆ..!

'ಡಿಸೇಲ್ ಗೇಟ್' ಹಗರಣ: ಫೋಕ್ಸ್‌ವ್ಯಾಗನ್ ಸಂಸ್ಥೆಗೆ 171 ಕೋಟಿ ದಂಡ..!

ಇದರಿಂದ ಜನರ ಆರೋಗ್ಯ ಸಮಸ್ಯೆ ಉಲ್ಬಣಗೊಂಡಿದ್ದಲ್ಲದೇ ಸಾವಿರಾರು ಅಮಾಯಕರು ಉಸಿರಾಟ ತೊಂದರೆಯಿಂದ ಪ್ರಾಣಕಳೆದುಕೊಂಡಿದ್ದಲ್ಲದೇ ದೆಹಲಿಯಲ್ಲಿ ಉಲ್ಬಣಗೊಂಡಿದ್ದ ಅತಿಯಾದ ಮಾಲಿನ್ಯ ಮತ್ತು ಆಮ್ಲ ಮಳೆಗೂ ಇದೇ ಹೆಚ್ಚಿನ ಪ್ರಮಾಣದಲ್ಲಿ ಕಾರಣವಾಗಿತ್ತು ಎನ್ನುವುದನ್ನು ಪತ್ತೆಮಾಡಲಾಗಿತ್ತು.

'ಡಿಸೇಲ್ ಗೇಟ್' ಹಗರಣ: ಫೋಕ್ಸ್‌ವ್ಯಾಗನ್ ಸಂಸ್ಥೆಗೆ 171 ಕೋಟಿ ದಂಡ..!

ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕಳೆದ 2018ರ ಡಿಸೆಂಬರ್‌ನಲ್ಲಿ ಮಹತ್ವದ ತೀರ್ಪು ನೀಡಿದ್ದ ರಾಷ್ಟ್ರೀಯ ಹಸಿರು ಪೀಠದ ಮುಖ್ಯಸ್ಥ ಹಾಗೂ ಮುಖ್ಯ ನ್ಯಾಯಮೂರ್ತಿಯೂ ಆದ ಆದರ್ಶ್ ಕುಮಾರ್ ಗೋಯಲ್ ಅವರು ಬರೋಬ್ಬರಿ ರೂ.100 ಕೋಟಿ ದಂಡ ಪಾವತಿಸುವಂತೆ ಆದೇಶಿಸಿದ್ದರು.

MOST READ: 2019ರಿಂದ ಹೊಸ ಕಾಯ್ದೆ - ಟ್ಯಾಕ್ಸಿ ಚಾಲಕರಿಗೆ ಪೊಲೀಸರಿಂದ ನೋಟಿಸ್ ಶುರು..!

'ಡಿಸೇಲ್ ಗೇಟ್' ಹಗರಣ: ಫೋಕ್ಸ್‌ವ್ಯಾಗನ್ ಸಂಸ್ಥೆಗೆ 171 ಕೋಟಿ ದಂಡ..!

ಇದಕ್ಕೆ ಅಸಮ್ಮತಿ ಸೂಚಿಸಿದ್ದ ಕೇಂದ್ರ ಆರೋಗ್ಯ ಇಲಾಖೆ ಮತ್ತು ಎನ್‌ಜಿಟಿ ಇತರೆ ನ್ಯಾಯಮೂರ್ತಿಗಳು ಇನ್ನು ಹೆಚ್ಚಿನ ಪ್ರಮಾಣದಲ್ಲಿ ದಂಡ ವಿಧಿಸುವಂತೆ ಮೇಲ್ಮನವಿ ಸಲ್ಲಿಸಿದ್ದವು. ಆದ ನಷ್ಟಕ್ಕೆ 100 ಕೋಟಿ ಸಾಕಾಗುವುದಿಲ್ಲ ಎಂದಿದ್ದ ಮೇಲ್ಮನವಿ ಅರ್ಜಿದಾರರು ಬರೋಬ್ಬರಿ 200 ಕೋಟಿ ಪರಿಹಾರಕ್ಕೆ ಬೇಡಿಕೆಯಿಟ್ಟಿದ್ದರು.

'ಡಿಸೇಲ್ ಗೇಟ್' ಹಗರಣ: ಫೋಕ್ಸ್‌ವ್ಯಾಗನ್ ಸಂಸ್ಥೆಗೆ 171 ಕೋಟಿ ದಂಡ..!

ಇದೀಗ ಅಂತಿಮ ಹಂತವಾಗಿ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನಾಲ್ವರು ನ್ಯಾಯಮೂರ್ತಿಗಳ ಪೀಠವು ರೂ.171. 34 ಕೋಟಿ ಪರಿಹಾರ ನೀಡುವಂತೆ ಮಹತ್ವದ ತೀರ್ಪು ನೀಡಿದ್ದು, ಮಾಲಿನ್ಯ ತಡೆಯಲು ಮತ್ತೆ ವಿಫಲವಾದಲ್ಲಿ ನಿಷೇಧದ ಅಸ್ತ್ರ ಪ್ರಯೋಗಿಸುವುದಾಗಿ ಖಡಕ್ ಸೂಚನೆ ನೀಡಿದೆ.

Article Published On: Wednesday, January 16, 2019, 11:33 [IST]
English summary
Volkswagen India Emission Scandal — Fined Rs 171 Crore as Health Cost By NGT. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+