2020ರಲ್ಲಿ ಬಿಡುಗಡೆಯಾಗಲಿದೆ ಹೊಸ ಆವೃತ್ತಿಯ ಫೋಕ್ಸ್ ವ್ಯಾಗನ್ ಪೊಲೊ

ಹೊಸ ತಲೆಮಾರಿನ ಫೋಕ್ಸ್ ವ್ಯಾಗನ್ ಪೊಲೊ ಮಾದರಿಯನ್ನು ಇತ್ತೀಚಿಗೆ ಪುಣೆಯಲ್ಲಿ ಸ್ಪಾಟ್ ಟೆಸ್ಟ್ ಮಾಡಲಾಗಿದೆ. ಹೊಸ ಆವೃತ್ತಿಯ ಪೊಲೊ ಹ್ಯಾಚ್‍‍ಬ್ಯಾಕ್ ವಾಹನವನ್ನು 2020ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಲಾಗುವುದು.

2020ರಲ್ಲಿ ಬಿಡುಗಡೆಯಾಗಲಿದೆ ಹೊಸ ಆವೃತ್ತಿಯ ಫೋಕ್ಸ್ ವ್ಯಾಗನ್ ಪೊಲೊ

ಜಿಗ್‍‍ವ್ಹೀಲ್ಸ್ ಸುದ್ದಿ ಸಂಸ್ಥೆಯ ವರದಿಗಳ ಪ್ರಕಾರ, ಫೋಕ್ಸ್ ವ್ಯಾಗನ್ ಪೊಲೊದ ಒಟ್ಟಾರೆ ವಿನ್ಯಾಸದಲ್ಲಿ ಯಾವುದೇ ಬದಲಾವಣೆಗಳಾಗುವುದಿಲ್ಲ. ಎಕ್ಸ್ ಟಿರಿಯರ್‍‍ನಲ್ಲಿ ಸ್ವಲ್ಪ ಮಟ್ಟಿನ ಬದಲಾವಣೆಗಳಾಗಲಿವೆ. ಈ ಬದಲಾವಣೆಗಳಲ್ಲಿ ಜಿಟಿ ಸ್ಟೈಲಿನ ಮುಂಭಾಗದ ಮತ್ತು ಹಿಂಭಾಗದ ಬಂಪರ್‍‍ಗಳು ಸೇರಿರಲಿವೆ. ಈ ಹ್ಯಾಚ್‍‍ಬ್ಯಾಕ್ ಕಾರು ಜಿಟಿ ಮಾದರಿಗಳಲ್ಲಿರುವಂತಹ ಹೆಡ್‍‍ಲೈಟ್ ಅಸೆಂಬ್ಲಿಗಳನ್ನು ಹೊಂದಲಿದೆ.

2020ರಲ್ಲಿ ಬಿಡುಗಡೆಯಾಗಲಿದೆ ಹೊಸ ಆವೃತ್ತಿಯ ಫೋಕ್ಸ್ ವ್ಯಾಗನ್ ಪೊಲೊ

ಇದಲ್ಲದೇ ಫೋಕ್ಸ್ ವ್ಯಾಗನ್ ಕಂಪನಿಯು ತನ್ನ ಪೊಲೊ ಹೊಸ ಆವೃತ್ತಿಯ ಇಂಟಿರಿಯರ್‍‍ನಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಿದ್ದು, ಹೊಸ ಬಗೆಯ ಟಚ್ ಸ್ಕ್ರೀನ್ ಇನ್ಫೋಟೇನ್‍‍ಮೆಂಟ್ ಸಿಸ್ಟಂ, ಡಿಸ್‍‍ಪ್ಲೇ ನ್ಯಾವಿಗೇಶನ್ ಮತ್ತು ಹಿಂಭಾಗದಲ್ಲಿ ಪಾರ್ಕಿಂಗ್ ಕ್ಯಾಮೆರಾಗಳನ್ನು ಅಳವಡಿಸಲಾಗುವುದು.

2020ರಲ್ಲಿ ಬಿಡುಗಡೆಯಾಗಲಿದೆ ಹೊಸ ಆವೃತ್ತಿಯ ಫೋಕ್ಸ್ ವ್ಯಾಗನ್ ಪೊಲೊ

ವಾಹನದ ಪೂರ್ತಿ ವಿನ್ಯಾಸದಲ್ಲಿ ಮತ್ತು ಮೂಲ ವಿನ್ಯಾಸಗಳಲ್ಲಿ ಯಾವುದೇ ಬದಲಾವಣೆಗಳಾಗುವುದಿಲ್ಲ. ಫೋಕ್ಸ್ ವ್ಯಾಗನ್ ಕಾರಿನಲ್ಲಿ ಬಿ‍ಎಸ್ 6 ನಿಯಮಗಳಿಗೆ ಹೊಂದಿಕೊಳ್ಳುವ ಎಂಜಿನ್ ಅಳವಡಿಸಲಾಗುವುದು. ಫೋಕ್ಸ್ ವ್ಯಾಗನ್ ಪೊಲೊ ವಾಹನವನ್ನು ಸದ್ಯಕ್ಕೆ ನಾಲ್ಕು ಬಗೆಯ ಎಂಜಿನ್ ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತಿದೆ.

2020ರಲ್ಲಿ ಬಿಡುಗಡೆಯಾಗಲಿದೆ ಹೊಸ ಆವೃತ್ತಿಯ ಫೋಕ್ಸ್ ವ್ಯಾಗನ್ ಪೊಲೊ

1.0 ಲೀಟರಿನ 3 ಸಿಲಿಂಡರ್‍‍ನ ಪೆಟ್ರೋಲ್ ಎಂಜಿನ್, 75 ಬಿ‍‍ಹೆಚ್‍‍ಪಿ ಪವರ್ ಮತ್ತು 95 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಎರಡನೇ ಬಗೆಯ 1.5 ಲೀಟರಿನ 4 ಸಿಲಿಂಡರ್‍‍ನ ಡೀಸೆಲ್ ಎಂಜಿನ್, 90 ಬಿಹೆಚ್‍‍ಪಿ ಪವರ್ ಮತ್ತು 230 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. 1.0 ಲೀಟರಿನ ಪೆಟ್ರೋಲ್ ಮತ್ತು 1.5 ಲೀಟರಿನ ಡೀಸೆಲ್ ಎಂಜಿನ್‍‍ಗಳು 5 ಸ್ಪೀಡಿನ ಮ್ಯಾನುವಲ್ ಟ್ರಾನ್ಸ್ ಮಿಷನ್ ಹೊಂದಿವೆ. ಇದಲ್ಲದೇ ಪೊಲೊ ಜಿಟಿ ಸರಣಿಯಲ್ಲಿ- ಪೊಲೊ ಜಿಟಿ ಟಿ‍ಎಸ್‍ಐ ಮತ್ತು ಪೊಲೊ ಜಿಟಿ ಟಿ‍‍ಡಿ‍ಐ - ಎಂಬ 2 ಮಾದರಿಗಳಿವೆ.

2020ರಲ್ಲಿ ಬಿಡುಗಡೆಯಾಗಲಿದೆ ಹೊಸ ಆವೃತ್ತಿಯ ಫೋಕ್ಸ್ ವ್ಯಾಗನ್ ಪೊಲೊ

ಜಿಟಿ ಟಿ‍ಎಸ್‍ಐ ಮಾದರಿಯು 1.2 ಲೀಟರಿನ 3 ಸಿಲಿಂಡರ್‍‍ನ ಟರ್ಬೊಚಾರ್ಜ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 103 ಬಿ‍‍ಹೆಚ್‍‍ಪಿ ಪವರ್ ಮತ್ತು 175 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 7 ಸ್ಪೀಡಿನ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ. ಜಿಟಿ ಟಿ‍ಡಿ‍ಐ ಮಾದರಿಯು 1.5 ಲೀಟರಿನ 4 ಸಿಲಿಂಡರ್‍‍ನ ಟರ್ಬೊಚಾರ್ಜ್ ಡೀಸೆಲ್ ಎಂಜಿನ್ ಹೊಂದಿದ್ದು, 108 ಬಿ‍‍ಹೆಚ್‍‍ಪಿ ಪವರ್ ಮತ್ತು 250 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 5 ಸ್ಪೀಡಿನ ಮ್ಯಾನುವಲ್ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ. ಪೊಲೊ ವಾಹನದ ಹೊಸ ಆವೃತ್ತಿಯ ಬಿಡುಗಡೆಯ ನಂತರ, ಫೋಕ್ಸ್ ವ್ಯಾಗನ್‍‍ನ ಉಳಿದ ಮಾದರಿಗಳಾದ ಫೋಕ್ಸ್ ವ್ಯಾಗನ್ ವೆಂಟೊ ಮತ್ತು ಆಮಿಯೋ ಗಳಲ್ಲಿಯೂ ಸಹ ಕೆಲವು ಅಪ್‍‍‍ಗ್ರೇಡ್‍‍ಗಳಾಗುವ ಸಾಧ್ಯತೆಗಳಿವೆ.

MOST READ: ಬೆನೆಲ್ಲಿ ಬೈಕ್‍‍ಗಳ ಬೆಲೆಯಲ್ಲಿ ಬರೋಬ್ಬರಿ ರೂ.51 ಸಾವಿರ ಕಡಿತ

2020ರಲ್ಲಿ ಬಿಡುಗಡೆಯಾಗಲಿದೆ ಹೊಸ ಆವೃತ್ತಿಯ ಫೋಕ್ಸ್ ವ್ಯಾಗನ್ ಪೊಲೊ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಬಹುತೇಕ ಕಾರು ತಯಾರಕ ಕಂಪನಿಗಳು ತಮ್ಮ ವಾಹನಗಳಿಗೆ ಸ್ವಲ್ಪ ಮಟ್ಟಿನ ಅಥವಾ ಪೂರ್ಣಪ್ರಮಾಣದ ಅಪ್‍‍‍ಗ್ರೇಡ್ ನೀಡಲು ಉತ್ಸುಕವಾಗಿವೆ. ಪೊಲೊ ವಾಹನವು ಫೋಕ್ಸ್ ವ್ಯಾಗನ್ ಕಂಪನಿಯಲ್ಲಿ ಜಾದೂ ಮಾಡಿದ್ದು, ಕಂಪನಿಯು ಸರಿಯಾದ ಸಮಯದಲ್ಲಿ ಈ ವಾಹನಕ್ಕೆ ಅಪ್‍‍ಗ್ರೇಡ್ ನೀಡುತ್ತಿದೆ. ಪೊಲೊ ಸರಣಿಯ ಎಲ್ಲಾ ಕಾರುಗಳನ್ನು ಅಪ್‍‍ಗ್ರೇಡ್ ಮಾಡಲಾಗುವುದೇ ಅಥವಾ ಎಂಟ್ರಿ ಲೆವೆಲ್‍ ವಾಹನಗಳ ಅಪ್‍‍ಗ್ರೇಡ್ ಮಾಡಲಾಗುವುದೋ ಎಂಬುದನ್ನು ಕಾದು ನೋಡಬೇಕಿದೆ.

More from DriveSpark

Article Published On: Tuesday, May 14, 2019, 15:00 [IST]
English summary
Volkswagen Polo Facelift Launching 2020 — Das Bessere Auto - Read in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+