Just In
- 10 hrs ago ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- 11 hrs ago Suzuki Access Electric: ಸುಜುಕಿ ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್ ಈ ವರ್ಷ ಬಿಡುಗಡೆ ಸಾಧ್ಯತೆ!
- 12 hrs ago Royal Enfield Himalayan ಸುಲಭವಾಗಿ ಖರೀದಿಸುವುದು ಹೇಗೆ?: ಇಲ್ಲಿದೆ ಡೌನ್ಪೇಮೆಂಟ್, EMI ಮಾಹಿತಿಗಳು!
- 12 hrs ago ಮಿಂಚಿನ ವೇಗಕ್ಕೆ ಸರಿಸಾಟಿಯಾಗಿ ಬೆಂಗಳೂರಿನ ಹೊಸ ಅಲ್ಟ್ರಾವೈಲೆಟ್ ಬೈಕ್ ಬಿಡುಗಡೆ: 323KM ರೇಂಜ್
Don't Miss!
- Movies ನೀಲಿ ಪ್ರಪಂಚದ ಕರಾಳ ಸತ್ಯವನ್ನ ಹೇಳಿದ ಲಾನಾ ರೋಡ್ಸ್
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೊಸ ಟರ್ಬೋ ಪೆಟ್ರೋಲ್ ಎಂಜಿನ್ನೊಂದಿಗೆ ಅನಾವರಣವಾಗಲಿದೆ ಜೀಪ್ ಕಂಪಾಸ್ ಫೇಸ್ಲಿಫ್ಟ್
ಅಮೆರಿಕಾ ಮೂಲದ ಜೀಪ್ ಕಂಪನಿಯು ತನ್ನ ತನ್ನ ಕಂಪಾಸ್ ಫೇಸ್ಲಿಫ್ಟ್ ಎಸ್ಯುವಿಯನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಹೊಸ ಕಂಪಾಸ್ ಫೇಸ್ಲಿಫ್ಟ್ ಎಸ್ಯುವಿಯನ್ನು ಇದೇ ತಿಂಗಳ 4ರಂದು ಅನಾವರಣಗೊಳಿಸಲಿದೆ.
ಜೀಪ್ ಕಂಪನಿಯು ತನ್ನ ಕಂಪಾಸ್ ಅನ್ನು ಮೊದಲು ಒಟ್ಟು 19 ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು. ಆದರೆ ಜೀಪ್ ಕಂಪನಿಯು ಕಂಪಾಸ್ನ 14 ಮಾದರಿಗಳನ್ನು ಈಗಾಗಲೇ ಸ್ಥಗಿತಗೊಳಿಸಿದೆ. ಇನ್ನು ಮುಂದೆ ಜೀಪ್ ಕಂಪಾಸ್ ಬಿಎಸ್ 6 ಅನ್ನು ಕೇವಲ 5 ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು. ಈ ಎಸ್ಯುವಿಯಲ್ಲಿ 1.4 ಲೀಟರ್ ಬಿಎಸ್-6 ಪೆಟ್ರೋಲ್ ಹಾಗೂ 2.0 ಲೀಟರ್ ಬಿಎಸ್-6 ಡೀಸೆಲ್ ಎಂಜಿನ್ಗಳನ್ನು ಅಳವಡಿಸಲಾಗಿದೆ.
ಇದರೊಂದಿಗೆ ಕಂಪಾಸ್ ಫೇಸ್ಲಿಫ್ಟ್ ಎಸ್ಯುವಿಯಲ್ಲಿ 1.3-ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್ ಅನ್ನು ಕೂಡ ಅಳವಡಿಸಲಾಗುತ್ತದೆ. ಜೀಪ್ ಕಂಪಾಸ್ ಬಿಎಸ್-6ನ ಐದು ಮಾದರಿಗಳಲ್ಲಿ ಸ್ಪೋರ್ಟ್, ಲಾಂಗಿಟ್ಯೂಡ್, ಲಾಂಗಿಟ್ಯೂಡ್ ಪ್ಲಸ್, ಲಿಮಿಟೆಡ್ ಪ್ಲಸ್ ಹಾಗೂ ಲಿಮಿಟೆಡ್ ಪ್ಲಸ್ 4 ಎಕ್ಸ್ 4 ಮಾದರಿಗಳು ಸೇರಿವೆ. ಟ್ರೈಲ್ಹಾಕ್ ಶ್ರೇಣಿಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.
MOST READ: ಡೀಲರ್ ಬಳಿ ತಲುಪಿದ ಹೊಸ ಫೋಕ್ಸ್ವ್ಯಾಗನ್ ಟಿ-ರಾಕ್ ಎಸ್ಯುವಿ
ಹೊಸ ಜೀಪ್ ಕಂಪಾಸ್ ಎಸ್ಯುವಿಯ ಇಂಟಿರಿಯರ್ ಬಗ್ಗೆ ಮತ್ತು ಇತರ ಕೆಲವು ಮಾಹಿತಿಗಳು ಬಹಿರಂಗವಾಗಿವೆ. ಜೀಪ್ ಕಂಪಾಸ್ ಬಿಎಸ್-6 ಎಸ್ಯುವಿಯಲ್ಲಿ 12.3 ಇಂಚುಗಳವರೆಗೆ ವೈರ್ಲೆಸ್ ಆಪಲ್ ಕಾರ್ಪ್ಲೇ, ಆಂಡ್ರಾಯ್ಡ್ ಆಟೋ, ಅಮೆಜಾನ್ ಅಲೆಕ್ಸಾ. 7 ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ, ಎಲೆಕ್ಟ್ರಿಕ್ ಆಗಿ ಅಡ್ಜಸ್ಟ್ ಮಾಡಬಹುದಾದ ಒಆರ್ವಿಎಂ, ಡ್ಯುಯಲ್ ಜೋನ್ ಕ್ಲೈಮೇಟ್ ಕಂಟ್ರೋಲ್ ಮತ್ತು 16 ಇಂಚಿನ ಅಲಾಯ್ ವ್ಹೀಲ್ ಅನ್ನು ಹೊಂದಿದೆ.
ಇದರ ಜೊತೆಗೆ ಜೀಪ್ ಕಂಪಾಸ್ ಬಿಎಸ್ 6 ಟಾಪ್ ವೆರಿಯಂಟ್ ಲಿಮಿಟೆಡ್ ಪ್ಲಸ್ ಎಸ್ಯುವಿ ಆಟೋಮ್ಯಾಟಿಕ್ ಹೆಡ್ಲ್ಯಾಂಪ್, ಎಲ್ಇಡಿ ಹೆಡ್ಲ್ಯಾಂಪ್, 18 ಇಂಚಿನ ಅಲಾಯ್ ವ್ಹೀಲ್, ಡ್ಯುಯಲ್ ಟೋನ್ ರೂಫ್, ಪನೋರಾಮಿಕ್ ಸನ್ರೂಫ್, ರೇನ್ ಸೆನ್ಸಿಂಗ್ ವೈಪರ್ಸ್, ಲೆದರ್ ಸೀಟುಗಳು, ಲೆದರ್ ಸ್ಟೀಯರಿಂಗ್ ವ್ಹೀಲ್ಗಳನ್ನು ಹೊಂದಿದೆ.
MOST READ: ಹೊಸ ನಿವಸ್ ಎಸ್ಯುವಿಯನ್ನು ಅನಾವರಣಗೊಳಿಸಿದ ಫೋಕ್ಸ್ವ್ಯಾಗನ್
ಜೀಪ್ ಕಂಪಾಸ್ನಲ್ಲಿರುವ 1.4-ಲೀಟರ್ ಬಿಎಸ್-6 ಪೆಟ್ರೋಲ್ ಎಂಜಿನ್ 160 ಬಿಹೆಚ್ಪಿ ಪವರ್ ಹಾಗೂ 260 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು 2.0 ಲೀಟರಿನ ಡೀಸೆಲ್ ಎಂಜಿನ್ 173 ಬಿಹೆಚ್ಪಿ ಪವರ್ ಹಾಗೂ 350 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎರಡು ಎಂಜಿನ್ ಗಳೊಂದಿಗೆ 6-ಸ್ಪೀಡ್ ಮ್ಯಾನುವಲ್ ಹಾಗೂ 7-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ಗಳನ್ನು ಜೀಡಿಸಲಾಗಿದೆ.
ಜೀಪ್ ಕಂಪಾಸ್ ಫೇಸ್ಲಿಫ್ಟ್ ಎಸ್ಯುವಿಯಲ್ಲಿ ಹೆಚ್ಚಿನ ಸುರಕ್ಷತೆಗಾಗಿ ನಾಲ್ಕು ಡಿಸ್ಕ್ ಬ್ರೇಕ್, ರಿವರ್ಸ್ ಪಾರ್ಕ್ ಅಸಿಸ್ಟ್ ಸೆನ್ಸಾರ್, ಟ್ರಾಕ್ಷನ್ ಕಂಟ್ರೋಲ್, ಎಬಿಎಸ್ ಮತ್ತು ಫ್ರಂಟ್ ಏರ್ಬ್ಯಾಗ್ಗಳನ್ನು ಹೊಂದಿದೆ.
MOST READ: ಅನಾವರಣವಾಗಲಿದೆ ಬಹುನಿರೀಕ್ಷಿತ ಟೊಯೊಟಾ ಫಾರ್ಚೂನರ್ ಫೇಸ್ಲಿಫ್ಟ್ ಎಸ್ಯುವಿ
ಜೀಪ್ ಕಂಪಾಸ್ನ 14 ಮಾದರಿಗಳಲ್ಲಿ, 5 ಪೆಟ್ರೋಲ್ ಮಾದರಿಗಳನ್ನು ಹಾಗೂ 9 ಡೀಸೆಲ್ ಮಾದರಿಗಳನ್ನು ಸ್ಥಗಿತಗೊಳಿಸಲಾಗಿದೆ. ಕಂಪನಿಯು ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಜೀಪ್ ಕಂಪಾಸ್ ಫೇಸ್ಲಿಫ್ಟ್ ಎಸ್ಯುವಿಯನ್ನ್ನು ಬಿಡುಗಡೆಗೊಳಿಸಲಿದೆ.
ಜೀಪ್ ಕಂಪಾಸ್ ಬ್ರ್ಯಾಂಡ್ನ ಹೆಚ್ಚು ಮಾರಾಟವಾಗುವ ಎಸ್ಯುವಿಯಾಗಿದೆ. ಮುಂದಿನ ದಿನಗಳಲ್ಲಿ ಇತರ ಹೊಸ ಎಸ್ಯುವಿಗಳನ್ನು ಬಿಡುಗಡೆಗೊಳಿಸಿ ಭಾರತೀಯ ಮಾರುಕಟ್ಟೆಯಲ್ಲಿ ಪಾರುಪತ್ಯ ಸಾಧಿಸಲು ಸಜ್ಜಾಗುತ್ತಿದೆ. ಈ ಹೊಸ ಜೀಪ್ ಕಂಪಾಸ್ ಫೇಸ್ಲಿಫ್ಟ್ ಎಸ್ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಮುಂದಿನ ವರ್ಷದಲ್ಲಿ ಬಿಡುಗಡೆಯಾಗಲಿದೆ.