Just In
- 21 min ago ಬುಕ್ ಮಾಡಿದ ರೈಲಿನ ಸೀಟಿನಲ್ಲಿ ಬೇರೆಯವರು ಕೂತಿದ್ರೆ ಏನ್ ಮಾಡಬೇಕು ಗೊತ್ತಾ? ಸಿಂಪಲ್ ಪರಿಹಾರ
- 32 min ago TVS iQube: ಲಕ್ಷಾಂತರ ಭಾರತೀಯರ ನೆಚ್ಚಿನ ಸ್ಕೂಟರ್ನ ಡೌನ್ಪೇಮೆಂಟ್, ಇಎಂಐ, ಲೋನ್ ವಿವರ!
- 37 min ago viral video: ಬೆಂಗಳೂರಿನಲ್ಲಿ ಮಾತ್ರ ಸಾಧ್ಯ: ಹೆಣ್ಮಗು.. ಹೆಣ್ಮಗು ಓಹ್.. ಎಂದ ನೆಟ್ಟಿಗರು!
- 51 min ago ಯುಗಾದಿ ಜಾತ್ರೆ: ಶ್ರೀಶೈಲ ಮಲ್ಲಿಕಾರ್ಜುನನ ಭಕ್ತರಿಗೆ ಸಿಹಿಸುದ್ದಿ.. NWKRTCಯಿಂದ ವಿಶೇಷ ಬಸ್ ಸೇವೆ
Don't Miss!
- News ಮಂಗಳೂರಿನಲ್ಲಿ ಅಗ್ನಿ ಅವಘಡ: ಹೊತ್ತಿ ಉರಿದ ಫಿಶ್ ಆಯಿಲ್ ಫ್ಯಾಕ್ಟರಿ
- Sports IPL 2024 RR vs DC: ರಾಯಲ್ಸ್ ವಿರುದ್ಧ ಗೆಲುವಿನೊಂದಿಗೆ ಪುಟಿದೇಳುವುದೇ ಕ್ಯಾಪಿಟಲ್ಸ್?; ಸಂಭಾವ್ಯ ಆಡುವ 11ರ ಬಳಗ
- Lifestyle ವಿಶ್ವದ ದುಬಾರಿ ಹಣ್ಣುಗಳಿವು..! ನೀವು ಊಹಿಸದ ಬೆಲೆ ಈ ಹಣ್ಣುಗಳಿಗಿದೆ..!
- Technology OnePlus: ಒನ್ಪ್ಲಸ್ ನಾರ್ಡ್ CE 4 ಫೋನ್ನ ಭಾರತದ ಬೆಲೆ ಮಾಹಿತಿ ಲೀಕ್! ಲಾಂಚ್ಗೆ ನಾಲ್ಕೇ ದಿನ ಬಾಕಿ
- Finance ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟು: ಐಟಿ ಕಂಪೆನಿಗಳನ್ನು ಕೇರಳಕ್ಕೆ ಆಹ್ವಾನಿಸಿದ ಸಚಿವ
- Movies ಲೋಕಸಭೆ ಚುನಾವಣೆ: ಬಿಜೆಪಿ 7ನೇ ಪಟ್ಟಿಯಲ್ಲಿ ದರ್ಶನ್ ಜೊತೆ ನಟಿಸಿದ್ದ ನಟಿಗೂ ಸಿಕ್ತು ಟಿಕೆಟ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೊಸ ಫೀಚರ್ಗಳೊಂದಿಗೆ ಬಿಡುಗಡೆಯಾಗಲಿದೆ 2021ರ ಮರ್ಸಿಡಿಸ್ ಎಸ್-ಕ್ಲಾಸ್
ಜರ್ಮನಿಯ ಐಷಾರಾಮಿ ಕಾರು ತಯಾರಕ ಕಂಪನಿ ಮರ್ಸಿಡಿಸ್ ಬೆಂಝ್ ತನ್ನ ಹೊಸ ಎಸ್-ಕ್ಲಾಸ್ ಕಾರನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಇದೀಗ ಈ 2021ರ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಕಾರಿನ ಹೊಸ ಟೀಸರ್ ಅನ್ನು ಬಿಡುಗಡೆಗೊಳಿಸಿದೆ.
ಈ ಹೊಸ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಕಾರಿನಲ್ಲಿ ಅತ್ಯಾಕರ್ಷಕ ಹೈಟಕ್ ಫೀಚರ್ಗಳನ್ನು ಹೊಂದಿರಲಿದೆ. ಈ ಹೊಸ ಮರ್ಸಿಡಿಸ್ ಬೆಂಝ್ ಕಾರಿನಲ್ಲಿ ಎಂಬಿಯುಎಕ್ಸ್ ಇನ್ಫೋಟೇನೆಮೆಂಟ್ ಸಿಸ್ಟಂ ಅನ್ನು ಹೊಂದಿದೆ. ಈ ಎಸ್-ಕ್ಲಾಸ್ ಕಾರಿನ ಹೊಸ ಟೀಸರ್ ನಲ್ಲಿ ಇ-ಆಕ್ಟಿವ್ ಬಾಡಿ ಕಂಟ್ರೋಲ್ ಸಿಸ್ಟಂ ಅನ್ನು ಬಹಿರಂಗಪಡಿಸಿದೆ. ಈ ಸಿಸ್ಟಂ ಈಗಾಗಲೇ ಜಿಎಲ್ಇ ಮತ್ತು ಜಿಎಲ್ಎಸ್ ನಂತಹ ಎಸ್ಯುವಿಗಳಲ್ಲಿ ಈ ಫೀಚರ್ ಲಭ್ಯವಿದೆ. ಇದು ಅಪಘಾತದಲ್ಲಿ ಪ್ರಯಾಣಿಕರಿಗೆ ಹೆಚ್ಚಿನ ಸುರಕ್ಷತೆಯನ್ನು ನೀಡುತ್ತದೆ.
ಇನ್ನು ಈ ಹೊಸ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಮುಂದಿನ ವರ್ಷದಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿದೆ. ಮರ್ಸಿಡಿಸ್ ಬೆಂಝ್ ಎಸ್-ಕ್ರಾಸ್ ಉನ್ನತ ಮಟ್ಟದ ಐಷಾರಾಮಿ ಮತ್ತು ಉತ್ತಮ ಕಾರ್ಯಕ್ಷಮತೆಯನ್ನು ಹೊಂದಿರುವ ಕಾರು ಇದಾಗಿದೆ.
MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ
ಇನ್ನು ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಭಾರತದಲ್ಲಿ ಬ್ರ್ಯಾಂಡ್ ನ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ. ಹೊಸ ಮರ್ಸಿಡಿಸ್ ಬೆಂಝ್ ಎಸ್-ಕ್ರಾಸ್ ಕಾರಿನ ಮುಂಭಾಗದಲ್ಲಿ ದೊಡ್ಡ ಗ್ರಿಲ್ ಅನ್ನು ಹೊಂದಿದೆ. ಈ ಕಾರಿನಲ್ಲಿ ಎಲ್ಇಡಿ ಹೆಡ್ ಲ್ಯಾಂಪ್ ಮತ್ತು ಎಲ್ಇಡಿ ಡಿಆರ್ಎಲ್ ಗಳನ್ನು ಅಳವಡಿಸಲಾಗಿದೆ.
ಪ್ರಸ್ತುತ ತಲೆಮಾರಿನ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ (ಡಬ್ಲ್ಯು 222) ಭಾರತದಿಂದ 2014ರಿಂದ ಮಾರಾಟವಾಗುತ್ತಿದೆ. ಈ ಹೊಸ ತಲೆಮಾರಿನ ಎಸ್-ಕ್ಲಾಸ್ ಡ್ಯಾಶ್ ಬೋರ್ಡ್ ನಲ್ಲಿ ದೊಡ್ಡ ಇನ್ಫೋಟೇನೆಮೆಂಟ್ ಡಿಸ್ ಪ್ಲೇಯನ್ನು ಹೊಂದಿದೆ.
MOST READ: ಭಾರತಕ್ಕೆ ಲಗ್ಗೆ ಇಡಲಿದೆ ಹೊಸ ಹೋಂಡಾ ಹೆಚ್ಆರ್-ವಿ ಎಸ್ಯುವಿ
ಈ ಐಷಾರಾಮಿ ಕಾರಿನ ಹಿಂಭಾಗದ ಪ್ರಯಾಣಿಕರ ಮನುರಂಜನೆಗಾಗಿ ಹಿಂಭಾಗದಲ್ಲಿ ರೇರ್ ಸೆಂಟರ್ ಕನ್ಸೋಲ್, ಅರ್ಮ್ ರೇಸ್ಟ್, ಮಸಾಜ್ ಫಂಕ್ಷನ್ ಮತ್ತು ದೊಡ್ಡ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಇನ್ನು ಎಸ್-ಕ್ಲಾಸ್ ಡ್ಯಾಶ್ಬೋರ್ಡ್ ಹೊಸ ವಿನ್ಯಾಸವನ್ನು ಹೊಂದಿರಲಿದೆ. ಈ ಹೊಸ ಎಸ್-ಕ್ಲಾಸ್ ಕಾರಿನಲ್ಲಿ ಮೌಂಟಡ್ ಕಂಟ್ರೋಲ್ ನೊಂದಿಗೆ ಹೊಸ ಸ್ಟೀಯರಿಂಗ್ ವ್ಜೀಲ್ ಅನ್ನು ಅಳವಡಿಸಲಾಗಿದೆ.
ಹೊಸ ತಲೆಮಾರಿನ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ರೇಡಾರ್ ಗೈಡೆಡ್ ಕ್ರೂಸ್ ಕಂಟ್ರೋಲ್, ಮಲ್ಟಿಪಲ್ ಏರ್ಬ್ಯಾಗ್, 360 ಡಿಗ್ರಿ ಕ್ಯಾಮೆರಾ, ನೈಟ್ ವಿಷನ್ ಕ್ಯಾಮೆರಾ ಮತ್ತು ಇತರ ಫೀಚರ್ ಗಳನ್ನು ಹೊಂದಿರಲಿದೆ.
MOST READ: ಅನಾವರಣವಾಯ್ತು ಬಿಎಂಡಬ್ಲ್ಯು ಎಕ್ಸ್7 ಡಾರ್ಕ್ ಶ್ಯಾಡೋ ಎಸ್ಯುವಿ
ಹೊಸ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಪೆಟ್ರೋಲ್, ಡೀಸೆಲ್, ಮೈಲ್ಡ್-ಹೈಬ್ರಿಡ್ ಮತ್ತು ಪ್ಲಗ್-ಇನ್ ಹೈಬ್ರಿಡ್ ಎಂಜಿನ್ ಆಯ್ಕೆಗಳನ್ನು ಹೊಂದಿರಲಿದೆ. ಇನ್ನು ಮರ್ಸಿಡಿಸ್ ಬೆಂಝ್ ಎಸ್600 ರ ಕೂಪೆ ಮತ್ತು ಕ್ಯಾಬ್ರಿಯೊಲೆಟ್ ಆವೃತ್ತಿಗಳನ್ನು ಕಂಪನಿಯು ಸ್ಥಗಿತಗೊಳಿಸಲಿದೆ ಎಂಬ ವದಂತಿಗಳಿವೆ.
ಹೊಸ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಕಾರು ಬಿಡುಗಡೆಯಾದ ಬಳಿಕ ಬಿಎಂಡಬ್ಲ್ಯು 7 ಸೀರಿಸ್, ಜಾಗ್ವಾರ್ ಎಕ್ಸ್ಜೆ, ಆಡಿ ಎ8, ಪೋರ್ಷೆ ಪನಾಮೆರಾ ಮತ್ತು ಮೆಸಾರಟಿ ಕಾರು ಕ್ವಾಟ್ರೊಪೋರ್ಟ್ ಕಾರುಗಳಿಗೆ ಪೈಪೋಟಿ ನೀಡುತ್ತದೆ.