ಬಜೆಟ್ ಬೆಲೆಯಲ್ಲಿ ಖರೀದಿ ಮಾಡಬಹುದಾದ ಟಾಪ್ 5 ಎಂಪಿವಿ ಕಾರುಗಳಿವು..!

ಮಲ್ಟಿ ಪರ್ಪಸ್ ವೆಹಿಕಲ್(ಎಂಪಿವಿ) ಮಾದರಿಗಳಿಗೆ ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆಯಿದ್ದು, ಈಗಾಗಲೇ ಹಲವಾರು ಕಾರು ಕಂಪನಿಗಳು ಗ್ರಾಹಕರ ಬೇಡಿಕೆ ಅನುಗುಣವಾಗಿ ಎಂಪಿವಿ ಮಾದರಿಗಳನ್ನು ಬಿಡುಗಡೆ ಮಾಡಿವೆ. ಆದರೆ ಮಾರುಕಟ್ಟೆಯಲ್ಲಿರುವ ಹಲವು ಎಂಪಿವಿ ಮಾದರಿಗಳು ದುಬಾರಿ ಬೆಲೆಯೊಂದಿಗೆ ಮಾರಾಟಗೊಳ್ಳುತ್ತಿದ್ದು, ಬಜೆಟ್ ಬೆಲೆಯಲ್ಲಿ ಖರೀದಿ ಮಾಡಬಹುದಾದ ಟಾಪ್ 5 ಎಂಪಿವಿ ಮಾದರಿಗಳ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

ಬಜೆಟ್ ಬೆಲೆಯಲ್ಲಿ ಖರೀದಿ ಮಾಡಬಹುದಾದ ಟಾಪ್ 5 ಎಂಪಿವಿ ಕಾರುಗಳಿವು..!

ಎಂಪಿವಿ ಕಾರುಗಳ ಮಾರಾಟ ಕೆಲವು ದಿನಗಳಿಂದ ಅಗ್ರಸ್ಥಾನದಲ್ಲಿದ್ದ ಪ್ರಮುಖ ಕಂಪನಿಳಿಗೆ ಹೊಸ ಮಾದರಿಯ ಎಂಪಿವಿ ಕಾರು ಮಾದರಿಗಳು ಸಾಕಷ್ಟು ಪೈಪೋಟಿ ನೀಡುತ್ತಿದ್ದು, ಬೆಲೆ ಮತ್ತು ಎಂಜಿನ್ ಆಯ್ಕೆ ಆಧಾರದ ಆಯಾ ಕಾರು ಮಾದರಿಗಳು ಬೆಲೆ ಪಡೆದುಕೊಂಡಿವೆ. ಆದರೆ ಬಜೆಟ್ ಬೆಲೆಯಲ್ಲಿನ ಕಾರು ಮಾದರಿಗಳಿಗೆ ಗ್ರಾಹಕರ ಬೇಡಿಕೆ ಹೆಚ್ಚಿದ್ದು, ಬೆಲೆಗೆ ಅನುಗುಣವಾಗಿ ವಾಹನಗಳ ತಾಂತ್ರಿಕ ಅಂಶಗಳು ನಿರ್ಧಾರಗೊಳ್ಳುತ್ತವೆ. ಹಾಗಾದ್ರೆ ಬಜೆಟ್ ಬೆಲೆಯಲ್ಲಿ ಖರೀದಿಗೆ ಲಭ್ಯವಿರುವ ಎಂಪಿವಿ ಮಾದರಿಗಳು ಯಾವುವು ಎನ್ನುವುದನ್ನು ಈ ಲೇಖನದಲ್ಲಿ ನೋಡೋಣ.

ಬಜೆಟ್ ಬೆಲೆಯಲ್ಲಿ ಖರೀದಿ ಮಾಡಬಹುದಾದ ಟಾಪ್ 5 ಎಂಪಿವಿ ಕಾರುಗಳಿವು..!

01. ಮಾರುತಿ ಇಕೋ

ಪ್ರಸ್ತುತ ಮಾರುಕಟ್ಟೆಯಲ್ಲಿನ ಬಜೆಟ್ ಬೆಲೆಯ ಎಂಪಿವಿ ಮಾದರಿಯಲ್ಲಿ ಅಗ್ರಸ್ಥಾನದಲ್ಲಿರುವ ಇಕೋ ವಾಹನವು 5 ಸೀಟರ್ ಮತ್ತು 7 ಸೀಟರ್ ಆಸನ ಸೌಲಭ್ಯಗಳನ್ನು ಪಡೆದುಕೊಂಡಿದ್ದು, 1.2-ಲೀಟರ್ ಪೆಟ್ರೋಲ್ ಎಂಜಿನ್ ಜೊತೆಗೆ ಸಿಎನ್‌ಜಿ ಆಯ್ಕೆಯನ್ನು ಸಹ ಹೊಂದಿದೆ.

ಬಜೆಟ್ ಬೆಲೆಯಲ್ಲಿ ಖರೀದಿ ಮಾಡಬಹುದಾದ ಟಾಪ್ 5 ಎಂಪಿವಿ ಕಾರುಗಳಿವು..!

ಇಕೋ ಮಾದರಿಯಲ್ಲಿ ಪೆಟ್ರೋಲ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 3.82 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯು ರೂ.4.23 ಲಕ್ಷ ಬೆಲೆ ಹೊಂದಿದ್ದು, ಸಿಎನ್‌ಜಿ ಮಾದರಿಯು ಸಿಂಗಲ್ ವೆರಿಯೆಂಟ್‌ನೊಂದಿಗೆ ಎಕ್ಸ್‌ಶೋರೂಂ ಪ್ರಕಾರ ರೂ. 4.96 ಲಕ್ಷ ಬೆಲೆ ಹೊಂದಿದೆ.

ಬಜೆಟ್ ಬೆಲೆಯಲ್ಲಿ ಖರೀದಿ ಮಾಡಬಹುದಾದ ಟಾಪ್ 5 ಎಂಪಿವಿ ಕಾರುಗಳಿವು..!

02. ದಟ್ಸನ್ ಗೊ ಪ್ಲಸ್

ಗೊ ಪ್ಲಸ್ ಕಾರು ಮಾದರಿಯು ದಟ್ಸನ್ ನಿರ್ಮಾಣದ ಎಂಟ್ರಿ ಲೆವಲ್ ಕಂಪ್ಯಾಕ್ಟ್ ಎಂಪಿವಿ ಕಾರು ಮಾದರಿಯಾಗಿದ್ದು, ಗೊ ಪ್ಲಸ್ ಕಾರು 1.2-ಲೀಟರ್ ಪೆಟ್ರೋಲ್ ಮಾದರಿಯೊಂದಿಗೆ ಮ್ಯಾನುವಲ್ ಮತ್ತು ಸಿವಿಟಿ ಗೇರ್‌ಬಾಕ್ಸ್ ಆಯ್ಕೆ ಹೊಂದಿದೆ. ಬಜೆಟ್ ಬೆಲೆಯಲ್ಲಿ ಆಟೋಮ್ಯಾಟಿಕ್ ಮಾದರಿಯನ್ನು ಹೊಂದಿರುವ ಪ್ರಮುಖ ಕಾರು ಮಾದರಿಗಳಲ್ಲಿ ಗೊ ಪ್ಲಸ್ ಕೂಡಾ ಒಂದಾಗಿದ್ದು, ಪ್ರಮುಖ 7 ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ.

ಬಜೆಟ್ ಬೆಲೆಯಲ್ಲಿ ಖರೀದಿ ಮಾಡಬಹುದಾದ ಟಾಪ್ 5 ಎಂಪಿವಿ ಕಾರುಗಳಿವು..!

ಗೊ ಪ್ಲಸ್ ಕಾರು ಮಾದರಿಯು 7 ಸೀಟರ್ ಸೌಲಭ್ಯ ಪಡೆದುಕೊಂಡಿದ್ದು, ಕಾರಿನ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 4.20 ಲಕ್ಷದಿಂದ ಟಾಪ್ ಎಂಡ್ ಮಾದರಿಯ ಬೆಲೆಯನ್ನು ರೂ. 6.90 ಲಕ್ಷ ಬೆಲೆ ನಿಗದಿಪಡಿಸಿದೆ.

ಬಜೆಟ್ ಬೆಲೆಯಲ್ಲಿ ಖರೀದಿ ಮಾಡಬಹುದಾದ ಟಾಪ್ 5 ಎಂಪಿವಿ ಕಾರುಗಳಿವು..!

03. ರೆನಾಲ್ಟ್ ಟ್ರೈಬರ್

ಪ್ರೀಮಿಯಂ ಫೀಚರ್ಸ್‌ನೊಂದಿಗೆ ಸಬ್ ಫೋರ್ ಮೀಟರ್ ವಿನ್ಯಾಸದಲ್ಲೇ ಅತ್ಯುತ್ತಮ 7 ಸೀಟರ್ ಸೌಲಭ್ಯ ಹೊಂದಿರುವ ಟ್ರೈಬರ್ ಮಿನಿ ಎಂಪಿವಿ ಮಾದರಿಯು ಸದ್ಯ ಭಾರೀ ಜನಪ್ರಿಯತೆಯೊಂದಿಗೆ ಮಾರಾಟವಾಗುತ್ತಿದ್ದು, ಟ್ರೈಬರ್ ಕಾರು 1.0-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಆವೃತ್ತಿಗಳನ್ನು ಪಡೆದುಕೊಂಡಿದೆ.

ಬಜೆಟ್ ಬೆಲೆಯಲ್ಲಿ ಖರೀದಿ ಮಾಡಬಹುದಾದ ಟಾಪ್ 5 ಎಂಪಿವಿ ಕಾರುಗಳಿವು..!

ಮೂರನೇ ಸಾಲಿನ ಆಸನಗಳನ್ನು ತೆಗೆದುಹಾಕಬಹುದಾದ ಸೌಲಭ್ಯ ಹೊಂದಿರುವ ಟ್ರೈಬರ್ ಕಾರು ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 5.12 ಲಕ್ಷದಿಂದ ರೂ. 7.35 ಲಕ್ಷ ಬೆಲೆ ಪಡೆದುಕೊಂಡಿದೆ.

ಬಜೆಟ್ ಬೆಲೆಯಲ್ಲಿ ಖರೀದಿ ಮಾಡಬಹುದಾದ ಟಾಪ್ 5 ಎಂಪಿವಿ ಕಾರುಗಳಿವು..!

04. ಮಾರುತಿ ಸುಜುಕಿ ಎರ್ಟಿಗಾ

ಮಧ್ಯಮ ಕ್ರಮಾಂಕದ ಎಂಪಿವಿ ಕಾರು ಮಾದರಿಯಾಗಿರುವ ಎರ್ಟಿಗಾ ತನ್ನದೆ ಆದ ಜನಪ್ರಿಯತೆ ಹೊಂದಿದ್ದು, ಬಿಎಸ್-6 ಕಡ್ಡಾಯ ನಂತರ ಭಾರೀ ಬದಲಾವಣೆ ಪಡೆದುಕೊಂಡಿದೆ. ಸದ್ಯ ಎರ್ಟಿಗಾ 1.5-ಲೀಟರ್ ಪೆಟ್ರೋಲ್ ಮತ್ತು ಸಿಎನ್‌ಜಿ ಆಯ್ಕೆಯಲ್ಲಿ ಮಾತ್ರ ಮಾರಾಟವಾಗುತ್ತಿದ್ದು, ಈ ಹಿಂದಿನ 1.3-ಲೀಟರ್ ಡೀಸೆಲ್ ಎಂಜಿನ್ ಸ್ಥಗಿತಗೊಳಿಸಲಾಗಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಬಜೆಟ್ ಬೆಲೆಯಲ್ಲಿ ಖರೀದಿ ಮಾಡಬಹುದಾದ ಟಾಪ್ 5 ಎಂಪಿವಿ ಕಾರುಗಳಿವು..!

1.5-ಲೀಟರ್ ಪೆಟ್ರೋಲ್ ಮಾದರಿಯು ಮ್ಯಾನುವಲ್ ಮತ್ತು ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 7.59 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.10. 13 ಲಕ್ಷ ಬೆಲೆ ಹೊಂದಿದೆ.

ಬಜೆಟ್ ಬೆಲೆಯಲ್ಲಿ ಖರೀದಿ ಮಾಡಬಹುದಾದ ಟಾಪ್ 5 ಎಂಪಿವಿ ಕಾರುಗಳಿವು..!

05. ಮಹೀಂದ್ರಾ ಬೊಲೆರೊ

ಮಹೀಂದ್ರಾ ನಿರ್ಮಾಣದ ಜನಪ್ರಿಯ ಕಾರುಗಳಲ್ಲಿ ಒಂದಾಗಿರುವ ಬೊಲೆರೊ ಕಾರು ಮಾದರಿಯು ಎಂಪಿವಿ ಮತ್ತು ಎಸ್‌ಯುವಿ ಎರಡು ಮಾದರಿಗಳ ವೈಶಿಷ್ಟ್ಯತೆ ಹೊಂದಿದ್ದು, ಬೊಲೆರೊ ಕಾರಿನಲ್ಲಿ 7 ಆಸನ ಸೌಲಭ್ಯಗಳನ್ನು ನೀಡಲಾಗಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಬಜೆಟ್ ಬೆಲೆಯಲ್ಲಿ ಖರೀದಿ ಮಾಡಬಹುದಾದ ಟಾಪ್ 5 ಎಂಪಿವಿ ಕಾರುಗಳಿವು..!

ಮೂರನೇ ಸಾಲಿನಲ್ಲಿ ಬೆಂಚ್ ಮಾದರಿಯ ಆಸನಗಳನ್ನು ನೀಡಲಾಗಿದ್ದು, ಬೊಲೆರೊದಲ್ಲಿ ಕೇವಲ ಒಂದೇ ಎಂಜಿನ್ ಆಯ್ಕೆ ನೀಡಲಾಗಿದೆ. 1.5-ಲೀಟರ್ ಡೀಸೆಲ್ ಎಂಜಿನ್ ಹೊಂದಿರುವ ಬೊಲೆರೊ ಕಾರು ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ಉತ್ತಮ ಬೇಡಿಕೆ ಹೊಂದಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.8.02 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 9.04 ಲಕ್ಷ ಬೆಲೆ ಹೊಂದಿದೆ.

Most Read Articles

Kannada
English summary
Most Affordable 7 Seater Cars In India. Read in Kannada.
Story first published: Friday, December 11, 2020, 19:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X