ಟಿಕೆಟ್ ಕ್ಯಾನ್ಸಲ್ ಮಾಡುವವರಿಗೆ ಸಿಗಲಿದೆ ಪೂರ್ತಿ ಹಣ
ಮಾರಣಾಂತಿಕ ಕರೋನಾ ವೈರಸ್ ಪ್ರಪಂಚದಾದ್ಯಂತ ಭೀತಿಯನ್ನುಂಟು ಮಾಡಿದೆ. ಭಾರತದಲ್ಲಿ ಈ ವೈರಸ್ ಹೆಚ್ಚಿನ ಸಂಖ್ಯೆಯಲ್ಲಿ ಹರಡದಂತೆ ತಡೆಯುವ ಕಾರಣಕ್ಕೆ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಈ ತಿಂಗಳ 14ಕ್ಕೆ ಮುಕ್ತಾಯಗೊಳ್ಳಬೇಕಿದ್ದ ಲಾಕ್‌ಡೌನ್ ಅವಧಿಯನ್ನು ಮೇ 3ರವರೆಗೆ ವಿಸ್ತರಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ರೈಲು ಹಾಗೂ ವಿಮಾನಯಾನ ಸೇವೆಗಳನ್ನು ರದ್ದುಪಡಿಸಲಾಗಿದೆ. ಲಾಕ್‌ಡೌನ್ ಸಮಯದಲ್ಲಿ ಬುಕ್ಕಿಂಗ್ ಮಾಡಲಾದ ವಿಮಾನ ಟಿಕೆಟ್‌ಗಳನ್ನು ರದ್ದುಗೊಳಿಸುವ ಗ್ರಾಹಕರಿಗೆ ಸಂಪೂರ್ಣ ಹಣವನ್ನು ಮರುಪಾವತಿ ನೀಡುವಂತೆ ನಾಗರಿಕ ವಿಮಾನಯಾನ ಇಲಾಖೆಯು ವಿಮಾನಯಾನ ಕಂಪನಿಗಳಿಗೆ ಆದೇಶಿಸಿದೆ.

ವಿಮಾನಯಾನ ಕಂಪನಿಗಳಿಗೆ ವಿಮಾನಯಾನ ಇಲಾಖೆಯು ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಇದರಡಿಯಲ್ಲಿ ಟಿಕೆಟ್ ರದ್ದುಗೊಳಿಸಲು ಯಾವುದೇ ಶುಲ್ಕವನ್ನು ವಿಧಿಸುವಂತಿಲ್ಲ. ಮಾರ್ಚ್ 25ರಿಂದ ಮೇ 3ರವರೆಗೆ ಬುಕ್ಕಿಂಗ್ ಮಾಡಿರುವ ಟಿಕೆಟ್‌ಗಳನ್ನು ರದ್ದುಗೊಳಿಸಿದ ನಂತರ ಯಾವುದೇ ರದ್ದತಿ ಶುಲ್ಕವನ್ನು ವಿಧಿಸದೇ ಗ್ರಾಹಕರಿಗೆ ಪೂರ್ತಿ ಹಣವನ್ನು ಮರುಪಾವತಿ ಮಾಡುವಂತೆ
ವಿಮಾನಯಾನ ಇಲಾಖೆಯು ಹೇಳಿದೆ.
MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಆದರೆ ಲಾಕ್‌ಡೌನ್‌ಗೆ ಮುಂಚೆ ಕಾಯ್ದಿರಿಸಿದ ಟಿಕೆಟ್‌ಗಳು, ಲಾಕ್‌ಡೌನ್ ಪ್ರಾರಂಭವಾಗುವ ಮೊದಲು ಅಥವಾ ಲಾಕ್‌ಡೌನ್‌ನ ಕೊನೆಯ ದಿನಾಂಕದ ನಂತರ ಅವರ ಪ್ರಯಾಣದ ಮಾಡಬೇಕಿದ್ದವರ ಟಿಕೆಟ್‌ಗಳಿಗೆ ರದ್ದತಿ ಶುಲ್ಕವನ್ನು ವಿಧಿಸಲಾಗುತ್ತದೆ.

ನಾಗರಿಕ ವಿಮಾನಯಾನ ಇಲಾಖೆ ಹಾಗೂ ವಿಮಾನಯಾನ ಕಂಪನಿಗಳ ನಡುವೆ ಬುಧವಾರ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಸಭೆಯಲ್ಲಿ ವಿಮಾನ ಟಿಕೆಟ್ ಬುಕ್ಕಿಂಗ್ ಹಾಗೂ ರದ್ದತಿ ಶುಲ್ಕದ ಬಗ್ಗೆ ಚರ್ಚೆ ನಡೆಸಲಾಯಿತು.
MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಮಾರ್ಚ್ 25ರಂದು ದೇಶಾದ್ಯಂತ ಲಾಕ್‌ಡೌನ್ ಘೋಷಿಸಿದ ನಂತರ, ಎಲ್ಲಾ ವಿಮಾನಯಾನ ಸಂಸ್ಥೆಗಳ ಸೇವೆಯನ್ನು ಸ್ಥಗಿತಗೊಳಿಸಲಾಯಿತು. ಈ ಕಾರಣಕ್ಕೆ ಟಿಕೆಟ್ ಬುಕ್ಕಿಂಗ್ ಬಗ್ಗೆ ಗೊಂದಲಗಳು ಉಂಟಾದವು.

ಅಮೆರಿಕಾ ಸರ್ಕಾರವು ಸಹ ಅಲ್ಲಿನ ವಿಮಾನಯಾನ ಕಂಪನಿಗಳಿಗೆ ಬುಕ್ಕಿಂಗ್ ಮಾಡಲಾದ ಟಿಕೆಟ್ ಮೊತ್ತವನ್ನು ಯಾವುದೇ ರದ್ದತಿ ಶುಲ್ಕವಿಲ್ಲದೆ ಮರುಪಾವತಿಸುವಂತೆ ಆದೇಶಿಸಿದೆ. ಮಾರ್ಚ್ 25ರಿಂದ ದೇಶಾದ್ಯಂತ ಲಾಕ್‌ಡೌನ್ ಜಾರಿಗೊಳಿಸಲಾಗಿದ್ದು, ವಿಮಾನ, ರೈಲು ಹಾಗೂ ಬಸ್ಸುಗಳ ಸೇವೆಯನ್ನು ರದ್ದುಗೊಳಿಸಲಾಗಿದೆ.


Click it and Unblock the Notifications