ಅನಾವರಣಗೊಂಡ ನಂತರ ಮೊದಲ ಬಾರಿಗೆ ರೋಡ್ ಟೆಸ್ಟಿಂಗ್‌ನಲ್ಲಿ ಕಂಡುಬಂದ ರೆನಾಲ್ಟ್ ಕಿಗರ್

ರೆನಾಲ್ಟ್ ಇಂಡಿಯಾ ಕಂಪನಿಯು ತನ್ನ ಬಹುನೀರಿಕ್ಷಿತ ಕಿಗರ್ ಕಾರು ಮಾದರಿಯನ್ನು ಮುಂಬರುವ 2021ರ ಮಾರ್ಚ್ ಹೊತ್ತಿಗೆ ಬಿಡುಗಡೆ ಮಾಡುವುದು ಬಹುತೇಕ ಖಚಿತವಾಗಿದ್ದು, ಹೊಸ ಕಾರಿನ ಅನಾವರಣಗೊಂಡ ನಂತರ ಮೊದಲ ಬಾರಿಗೆ ರೋಡ್ ಟೆಸ್ಟಿಂಗ್ ಪ್ರಕ್ರಿಯೆಯಲ್ಲಿ ಕಂಡುಬಂದಿದೆ.

ರೋಡ್ ಟೆಸ್ಟಿಂಗ್‌ನಲ್ಲಿ ಕಂಡುಬಂದ ರೆನಾಲ್ಟ್ ಕಿಗರ್

ನಾಲ್ಕು ಮೀಟರ್‌ಗಿಂತಲೂ ಕಡಿಮೆ ಉದ್ದಳತೆ ಹೊಂದಿರುವ ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಸದ್ಯ ಪ್ರಮುಖ ಕಾರು ಕಂಪನಿಗಳ ನಡುವೆ ಭಾರೀ ಪೈಪೋಟಿ ನಡೆಯುತ್ತಿದ್ದು, ಕಿಗರ್ ಕಾರು ಮಾದರಿಯು ಸಹ ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಟಿಸುವ ತವಕದಲ್ಲಿದೆ. ಕಟಿಂಗ್ ಎರ್ಡ್ಜ್ ವಿನ್ಯಾಸದೊಂದಿಗೆ ಸ್ಪೋರ್ಟಿ ಲುಕ್ ಹೊಂದಿರುವ ಹೊಸ ಕಿಗರ್ ಕಾರು ಮಾದರಿಯು ಮುಂಭಾಗದಲ್ಲಿ ಡ್ಯುಯಲ್ ಹೆಡ್‌ಲ್ಯಾಂಪ್ ಜೊತೆಗೆ ಎಲ್ಇಡಿ ಡಿಆರ್‌ಎಲ್ಎಸ್ ಪಡೆದುಕೊಂಡಿದ್ದು, ಹೆಡ್‌ಲ್ಯಾಂಪ್ ಸೌಲಭ್ಯವು ಬಂಪರ್ ಮೇಲ್ಭಾಲದಲ್ಲಿ ಮತ್ತು ಎಲ್ಇಡಿ ಡಿಆರ್‌ಎಲ್ಎಸ್ ಸೌಲಭ್ಯವು ಬ್ಯಾನೆಟ್‌ಗೆ ಹೊಂದಿಕೊಂಡಿದೆ.

ರೋಡ್ ಟೆಸ್ಟಿಂಗ್‌ನಲ್ಲಿ ಕಂಡುಬಂದ ರೆನಾಲ್ಟ್ ಕಿಗರ್

ರೋಡ್ ಟೆಸ್ಟಿಂಗ್ ಪ್ರಕ್ರಿಯೆಯಲ್ಲಿ ಕಂಡುಬಂದ ಉತ್ಪಾದನಾ ಕಿಗರ್ ಆವೃತ್ತಿಯು ಕೂಡಾ ಕಾನ್ಸೆಪ್ಟ್ ಮಾದರಿಯಲ್ಲೇ ಬಹುತೇಕ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಳ್ಳಲಿದ್ದು, ಟರ್ಬೋ ಎಂಜಿನ್ ಜೋಡಣೆ ಹೊಂದಿರುವ ಮಾದರಿಯು ಹೆಚ್ಚು ಪ್ರೀಮಿಯಂ ಸೌಲಭ್ಯಗಳನ್ನು ಪಡೆದುಕೊಳ್ಳಲಿದೆ.

ರೋಡ್ ಟೆಸ್ಟಿಂಗ್‌ನಲ್ಲಿ ಕಂಡುಬಂದ ರೆನಾಲ್ಟ್ ಕಿಗರ್

ಜೊತೆಗೆ ಕಟಿಂಗ್ ಎರ್ಡ್ಜ್ ವಿನ್ಯಾಸದೊಂದಿಗೆ ಸ್ಪೋರ್ಟಿ ಲುಕ್ ಹೊಂದಿರುವ ಹೊಸ ಕಿಗರ್ ಕಾರು ಮಾದರಿಯು ಮುಂಭಾಗದಲ್ಲಿ ಡ್ಯುಯಲ್ ಹೆಡ್‌ಲ್ಯಾಂಪ್ ಜೊತೆಗೆ ಎಲ್ಇಡಿ ಡಿಆರ್‌ಎಲ್ಎಸ್ ಪಡೆದುಕೊಂಡಿದ್ದು, ಹೆಡ್‌ಲ್ಯಾಂಪ್ ಸೌಲಭ್ಯವು ಬಂಪರ್ ಮೇಲ್ಭಾಲದಲ್ಲಿ ಮತ್ತು ಎಲ್ಇಡಿ ಡಿಆರ್‌ಎಲ್ಎಸ್ ಸೌಲಭ್ಯವು ಬ್ಯಾನೆಟ್‌ಗೆ ಹೊಂದಿಕೊಂಡಿದೆ.

ರೋಡ್ ಟೆಸ್ಟಿಂಗ್‌ನಲ್ಲಿ ಕಂಡುಬಂದ ರೆನಾಲ್ಟ್ ಕಿಗರ್

ಡೇ ಲೈಟ್ ರನ್ನಿಂಗ್ ಲೈಟ್ ಸೌಲಭ್ಯವು ಫ್ರಂಟ್ ಗ್ರಿಲ್‍ವರೆಗೂ ಮುಂದುವರೆದಿದ್ದು, ಮಧ್ಯದಲ್ಲಿ ರೆನಾಲ್ಟ್ ಲೊಗೊ ಪಡೆದುಕೊಂಡಿದೆ. ಫ್ರಂಟ್ ಬಂಪರ್ ಸೌಲಭ್ಯವು ಮಧ್ಯದಲ್ಲಿ ದೊಡ್ಡದಾದ ಏರ್ ಡ್ಯಾಮ್ ಜೊತೆ ಸಿಲ್ವರ್ ಕೊಟಿಂಗ್ ಹೊಂದಿರುವ ಸ್ಕೀಡ್ ಪ್ಲೇಟ್ ಪಡೆದುಕೊಂಡಿದ್ದು, ಕಟಿಂಗ್ ಎಡ್ಜ್ ವಿನ್ಯಾಸಗಳು ಹೊಸ ಕಾರಿಗೆ ಮತ್ತಷ್ಟು ಬಲಿಷ್ಠತೆ ಪಡೆದುಕೊಳ್ಳಲಿವೆ.

ರೋಡ್ ಟೆಸ್ಟಿಂಗ್‌ನಲ್ಲಿ ಕಂಡುಬಂದ ರೆನಾಲ್ಟ್ ಕಿಗರ್

ಹಾಗೆಯೇ ಕಾರಿನ ಮುಂಭಾಗದಲ್ಲಿನ ಬಲಿಷ್ಠ ವಿನ್ಯಾಸದಂತೆ ಸೈಡ್ ಪ್ರೋಫೈಲ್ ಕೂಡಾ ಆಕರ್ಷಕವಾಗಿದ್ದು, ಕ್ರೀಸ್‌ ಲೈನ್‌ಗಳೊಂದಿಗೆ ಬ್ಲ್ಯಾಕ್ ಕ್ಲ್ಯಾಂಡಿಂಗ್ ಒಳಗೊಂಡ ವೀಲ್ಹ್ ಆರ್ಚ್ ಮತ್ತು ಆಕರ್ಷಕ ಡೈಮಂಡ್ ಕಟ್ ಅಲಾಯ್ ವೀಲ್ಹ್ ಹೊಂದಿರಲಿದೆ. ಹೊಸ ಕಾರಿನಲ್ಲಿ ಪ್ರತಿ ಸ್ಪರ್ಧಿ ಕಾರು ಮಾದರಿಗಳಂತೆ ಡ್ಯುಯಲ್ ಟೋನ್ ಬಣ್ಣಗಳ ಆಯ್ಕೆ ಹೊಂದರಲಿರುವ ಕಿಗರ್ ಕಾರು ಮಾದರಿಯು ಇಂಟ್ರಾಗ್ರೆಟೆಡ್ ಟರ್ನ್ ಇಂಡಿಕೇಟರ್ ಹೊಂದಿರುವ ರಿಯಲ್ ವ್ಯೂ ಮಿರರ್, ಬಾಡಿ ಕಲರ್ ಹೊಂದಿರುವ ಡೋರ್ ಹ್ಯಾಂಡಲ್, ಬಾಡಿ ಪ್ಯಾನೆಲ್, ಕಪ್ಪು ಬಣ್ಣ ಹೊಂದಿರುವ ರೂಫ್ ರೈಲ್ಸ್ ಪಡೆದುಕೊಂಡಿದೆ.

ರೋಡ್ ಟೆಸ್ಟಿಂಗ್‌ನಲ್ಲಿ ಕಂಡುಬಂದ ರೆನಾಲ್ಟ್ ಕಿಗರ್

ರೆನಾಲ್ಟ್ ಕಂಪನಿಯು ಸದ್ಯಕ್ಕೆ ಕಿಗರ್ ಕಾನ್ಸೆಪ್ಟ್ ಮಾದರಿಯ ಹೊರಭಾಗದ ವಿನ್ಯಾಸಗಳನ್ನು ಮಾತ್ರವೇ ಅನಾವರಣಗೊಳಿಸಿದ್ದು, ಹೊಸ ಕಾರಿನ ಒಳ ವಿನ್ಯಾಸ ಮತ್ತು ತಾಂತ್ರಿಕ ಮಾಹಿತಿಗಳನ್ನು ಶೀಘ್ರದಲ್ಲೇ ಅನಾವರಣಗೊಳಿಸಲಿದೆ.

MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

ರೋಡ್ ಟೆಸ್ಟಿಂಗ್‌ನಲ್ಲಿ ಕಂಡುಬಂದ ರೆನಾಲ್ಟ್ ಕಿಗರ್

ಹೊಸ ಕಾರಿನಲ್ಲಿ ರೆನಾಲ್ಟ್ ಕಂಪನಿಯು ಸುಧಾರಿತ ತಂತ್ರಜ್ಞಾನ ಪ್ರೇರಿತ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಎಲೆಕ್ಟ್ರಿಕ್ ಸನ್‌ರೂಫ್ ಸೇರಿದಂತೆ ಹಲವು ಪ್ರೀಮಿಯಂ ಫೀಚರ್ಸ್‌ಗಳನ್ನು ಅಳವಡಿಸುವ ಸಾಧ್ಯತೆಗಳಿವೆ.

ರೋಡ್ ಟೆಸ್ಟಿಂಗ್‌ನಲ್ಲಿ ಕಂಡುಬಂದ ರೆನಾಲ್ಟ್ ಕಿಗರ್

ಇನ್ನು ಹೊಸ ಕಾರಿನಲ್ಲಿ ಜೋಡಣೆ ಮಾಡಲಿರುವ ಅಧಿಕೃತ ಎಂಜಿನ್ ಮಾಹಿತಿಯನ್ನು ಬಿಟ್ಟುಕೊಡದ ರೆನಾಲ್ಟ್ ಕಂಪನಿಯು ಹೊಸ ಕಾರನ್ನು 2021ರ ಆರಂಭದಲ್ಲಿ ಬಿಡುಗಡೆ ಮಾಡಲಿದ್ದು, ಮಾಹಿತಿಗಳ ಪ್ರಕಾರ ಹೊಸ ಕಾರು 1.0-ಲೀಟರ್ ಸಾಮಾರ್ಥ್ಯದ ಎರಡು ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ಪಡೆದುಕೊಳ್ಳಲಿದೆ.

MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

ರೋಡ್ ಟೆಸ್ಟಿಂಗ್‌ನಲ್ಲಿ ಕಂಡುಬಂದ ರೆನಾಲ್ಟ್ ಕಿಗರ್

ಸಾಮಾನ್ಯ ಆವೃತ್ತಿಯಲ್ಲಿ ನ್ಯಾಚುರಲಿ ಆಸ್ಪೆರೆಟೆಡ್ 1.0-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು ನಿಸ್ಸಾನ್ ಜೊತೆಗೂಡಿ ಹೊಸದಾಗಿ ಅಭಿವೃದ್ದಿಗೊಳಿಸಿರುವ 1.0-ಟೀಟರ್ ಟರ್ಬೋ ಪೆಟ್ರೋಲ್ ಮಾದರಿಯನ್ನು ಹೈ ಎಂಡ್ ಮಾದರಿಗಳಲ್ಲಿ ಅಳವಡಿಸಲಿದೆಯೆಂತೆ. ಸಾಮಾನ್ಯ ಮಾದರಿಯಲ್ಲಿ 5-ಸ್ಪೀಡ್ ಮ್ಯಾನುವಲ್ ಮತ್ತು ಟರ್ಬೋ ಮಾದರಿಯಲ್ಲಿ 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ನೀಡಲಿದೆ.

Image Courtesy: motozag/Instagram

Most Read Articles

Kannada
English summary
Renault Kiger Compact SUV Spied. Read in Kannada.
Story first published: Saturday, November 21, 2020, 22:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X