ವಿಮಾ ಪಾವತಿಯನ್ನು ಮತ್ತಷ್ಟು ಸುಲಭವಾಗಿಸಿದ ಅಮೆಜಾನ್-ಪೇ
ಜನಪ್ರಿಯ ಇ-ಕಾಮರ್ಸ್ ಕಂಪನಿಯಾದ ಅಮೆಜಾನ್ ತನ್ನ ಪೇಮೆಂಟ್ ಅಪ್ಲಿಕೇಶನ್ ಅಮೆಜಾನ್-ಪೇ ಮೂಲಕ ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳ ವಿಮೆಯನ್ನು ಪಾವತಿ ಮಾಡುವ ಅವಕಾಶವನ್ನು ಕಲ್ಪಿಸಿದೆ.

ಅಮೆಜಾನ್-ಪೇ ವಿಮಾ ಸೌಲಭ್ಯವನ್ನು ಒದಗಿಸಲು ಆಕೋ ಕಂಪನಿಯು ಜನರಲ್ ಇನ್ಶುರೆನ್ಸ್ ಲಿಮಿಟೆಡ್ ಜೊತೆಗೆ ಪಾಲುದಾರಿಕೆಯನ್ನು ಮಾಡಿಕೊಂಡಿದೆ. ಇದರಿಂದಾಗಿ ಗ್ರಾಹಕರು ಕೆಲವೇ ನಿಮಿಷಗಳಲ್ಲಿ ತಮ್ಮ ವಾಹನಗಳ ವಿಮೆ ಮಾಡಿಕೊಳ್ಳಬಹುದಾಗಿದೆ. ಇದಕ್ಕಾಗಿ ಯಾವುದೇ ದಾಖಲೆಗಳ ಅಗತ್ಯವಿಲ್ಲ ಎಂಬುದು ವಿಶೇಷ. ಗಮನಿಸಬೇಕಾದ ಸಂಗತಿಯೆಂದರೆ ಅಮೆಜಾನ್ ಕಂಪನಿಯು ತನ್ನ ಪ್ರೈಮ್ ಸದಸ್ಯರಿಗೆ ಹೆಚ್ಚುವರಿ ರಿಯಾಯಿತಿಯನ್ನು ಸಹ ನೀಡಲಿದೆ.

ಗ್ರಾಹಕರು ವಿಮೆ ಖರೀದಿಸುವ ಪ್ರಕ್ರಿಯೆಯನ್ನು ಆಕೋ ಜೊತೆಗೆ ಬಹಳ ಸುಲಭವಾಗಿಸಲಾಗಿದೆ ಎಂದು ಅಮೆಜಾನ್ ಹೇಳಿದೆ. ಗ್ರಾಹಕರು ವಿಮಾ ಖರೀದಿಯ ಸಮಯದಲ್ಲಿ ಇದನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು. ಸುಲಭ ವಿಧಾನಗಳೊಂದಿಗೆ ವಿಮೆಯನ್ನು ಖರೀದಿಸಬಹುದು.
MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಅಮೆಜಾನ್ ಹಾಗೂ ಆಕೊ ಈ ಸೇವೆಯನ್ನು ಯಾವುದೇ ಗೊಂದಲ ಉಂಟಾಗದ ರೀತಿಯಲ್ಲಿ ನೀಡಲಿವೆ. ಇದಕ್ಕಾಗಿ ಯಾವುದೇ ಕಾಗದದ ಅಗತ್ಯವಿಲ್ಲ. ಈ ಸೇವೆಯಡಿಯಲ್ಲಿ ಅಮೆಜಾನ್ ಕಂಪನಿಯು ಆಯ್ದ ನಗರಗಳಲ್ಲಿ ಒಂದು ಗಂಟೆ ಪಿಕಪ್, 3 ದಿನಗಳ ಸರ್ವಿಂಗ್ ಕ್ಲೈಮ್ ಹಾಗೂ ಒಂದು ವರ್ಷದ ರಿಪೇರಿ ವಾರಂಟಿಯನ್ನು ನೀಡುತ್ತದೆ.

ಕಡಿಮೆ ಹಣವನ್ನು ಪಡೆಯಲು ಗ್ರಾಹಕರು ಇನ್ಸ್ ಟ್ಯಾಂಟ್ ಕ್ಯಾಶ್ ಆಯ್ಕೆಯನ್ನು ಆರಿಸಿಕೊಳ್ಳಬಹುದೆಂದು ಕಂಪನಿ ಹೇಳಿದೆ. ಇದರಿಂದ ಗ್ರಾಹಕರಿಗೆ ಹೆಚ್ಚು ಅನುಕೂಲವಾಗಲಿದೆ. ಗ್ರಾಹಕರು ತಮ್ಮ ವಾಹನಗಳನ್ನು ಅಮೆಜಾನ್-ಪೇ ಪೇಜ್ ಮೂಲಕ ಅಥವಾ ಅಮೆಜಾನ್ ವೆಬ್ ಸೈಟ್ ಮೂಲಕ ವಿಮೆ ಮಾಡಿಸಿಕೊಳ್ಳಬಹುದು.
MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಇದರಲ್ಲಿ ಗ್ರಾಹಕರು ತಮ್ಮ ಕಾರು ಅಥವಾ ಬೈಕ್ ಬಗೆಗಿನ ಮಾಹಿತಿಯನ್ನು ನೀಡಬೇಕಾಗುತ್ತದೆ. ನಂತರ ಆಯ್ಕೆಗಳನ್ನು ನೀಡಲಾಗುತ್ತದೆ. ಈ ಆಯ್ಕೆಗಳುಒಂದು ವರ್ಷದಿಂದ ಮೂರು ವರ್ಷಗಳವರೆಗೆ ಇರುತ್ತವೆ. ಗ್ರಾಹಕರು ತಮ್ಮ ಅನುಕೂಲಕ್ಕೆ ಹಾಗೂ ಬಜೆಟ್‌ಗೆ ತಕ್ಕಂತೆ ಆಯ್ಕೆ ಮಾಡಿಕೊಳ್ಳಬಹುದು.

ಯೋಜನೆಯನ್ನು ಆಯ್ಕೆ ಮಾಡಿದ ನಂತರ, ಗ್ರಾಹಕರು ಪೇಮೆಂಟ್ ಮಾಡಬೇಕಾಗುತ್ತದೆ. ಪಾವತಿಯನ್ನು ಅಮೆಜಾನ್-ಪೇ ಬ್ಯಾಲೆನ್ಸ್, ಯುಪಿಐ ಅಥವಾ ಯಾವುದಾದರೂ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ನೊಂದಿಗೆ ಮಾಡಬಹುದು. ಹಣ ಪಾವತಿಸಿದ ನಂತರ ಯುವರ್ ಆರ್ಡರ್ ಗೆ ಹೋಗಿ ಪಾಲಿಸಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.


Click it and Unblock the Notifications