ಬಿಡುಗಡೆಗೂ ಮುನ್ನವೇ ಹೊಸ ಎಸ್‌ಯುವಿಗೆ ಫಿದಾ ಆದ ಆನಂದ್ ಮಹೀಂದ್ರಾ
ಮಹೀಂದ್ರಾ ಕಂಪನಿಯು ಮೊನ್ನೆಯಷ್ಟೇ ತನ್ನ 2020ರ ಹೊಸ ಥಾರ್ ಎಸ್‌ಯುವಿಯನ್ನು ಅನಾವರಣಗೊಳಿಸಿದೆ. ಎಲ್ಲೆಡೆ ಈ ಎಸ್‌ಯುವಿಯ ಬಗ್ಗೆಯೇ ಚರ್ಚಿಸಲಾಗುತ್ತಿದೆ. ಕಂಪನಿಯು ಹೊಸ ಥಾರ್ ಎಸ್‌ಯುವಿಯನ್ನು ಹಲವಾರು ಬದಲಾವಣೆಗಳೊಂದಿಗೆ ಹೊರ ತಂದಿದೆ.

ಆಕರ್ಷಕ ಲುಕ್ ಹೊಂದಿರುವ ಹೊಸ ಎಸ್‌ಯುವಿ ಹಲವಾರು ಫೀಚರ್ ಹಾಗೂ ಎಕ್ವಿಪ್ ಮೆಂಟ್ ಗಳನ್ನು ಹೊಂದಿದೆ. ಕಂಪನಿಯು ಈ ಎಸ್‌ಯುವಿಯ ಬುಕ್ಕಿಂಗ್ ಗಳನ್ನು ಅಕ್ಟೋಬರ್ 2ರಿಂದ ಆರಂಭಿಸಲಿದೆ. ಈ ಎಸ್‌ಯುವಿ ಅನಾವರಣಗೊಂಡ ನಂತರ ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷರಾದ ಆನಂದ್ ಮಹೀಂದ್ರಾರವರು 2020ರ ಹೊಸ ಥಾರ್‌ನ ಚಿತ್ರಗಳನ್ನು ಟ್ವೀಟರ್ ನಲ್ಲಿ ಶೇರ್ ಮಾಡಿದ್ದಾರೆ.

ತಾವು ಸಹ ಈ ಎಸ್‌ಯುವಿಯನ್ನು ಖರೀದಿಸುವುದಾಗಿ ಹೇಳಿದ್ದಾರೆ. ಇತರ ಕಾರು ಉತ್ಸಾಹಿಗಳಂತೆ ಆನಂದ್ ಮಹೀಂದ್ರಾ ಕೂಡ ಈ ಆಫ್-ರೋಡ್ ಎಸ್‌ಯುವಿಯನ್ನು ಇಷ್ಟಪಟ್ಟಿದ್ದು, ಸಾಧ್ಯವಾದಷ್ಟು ಬೇಗ ಈ ಎಸ್‌ಯುವಿಯನ್ನು ಚಾಲನೆ ಮಾಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
MOST READ:ಒಂದು ಸಾವಿರ ರೂಪಾಯಿ ಪಾವತಿಸಿ ಈ ಸ್ಕೂಟರ್ ಬುಕ್ ಮಾಡಿ

ನಟಿ ರವೀನಾ ಟಂಡನ್ ಕೂಡ ತಮಗಾಗಿ ಈ ಎಸ್‌ಯುವಿಯನ್ನು ಬುಕ್ ಮಾಡಬೇಕೆಂದು ಆನಂದ್ ಮಹೀಂದ್ರಾರವರಲ್ಲಿ ಮನವಿ ಮಾಡಿಕೊಂಡಿದ್ದಾರೆ.ಆನಂದ್ ಮಹೀಂದ್ರಾ ರವರು ಥಾರ್ ಎಸ್‌ಯುವಿಯ ಟೀಸರ್ ಚಿತ್ರಗಳನ್ನು ಶೇರ್ ಮಾಡುವ ಮುನ್ನವೇ ಈ ಎಸ್‌ಯುವಿಯ ಬಗ್ಗೆ ನಿರಂತರವಾಗಿ ಟ್ವೀಟ್ ಮಾಡುತ್ತಿದ್ದರು.

ನಾನು ಕೋವಿಡ್ ಹರಡದಂತೆ ತಡೆಯಲು ಮಾಸ್ಕ್ ಧರಿಸುತ್ತೇನೆ. ಆದರೆ ಈ ಎಸ್‌ಯುವಿಯೊಂದಿಗೆ ಹೊರಗೆ ಹೋಗಲು ಮರೆಯುವುದಿಲ್ಲವೆಂದು ಟ್ವೀಟ್ ಮಾಡಿದ್ದರು. ಆದರೆ ಅಕ್ಟೋಬರ್ ವರೆಗೆ ಈ ಎಸ್‌ಯುವಿಗಾಗಿ ಕಾಯುಬೇಕಾಗಿದೆ ಎಂದು ಅವರು ಹೇಳಿದ್ದರು.
MOST READ: ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಹೊಸ ಥಾರ್ ಎಸ್‌ಯುವಿಯನ್ನು ಅಕ್ಟೋಬರ್ 2ರಂದು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗುವುದು. ಆನಂದ್ ಮಹೀಂದ್ರಾರವರು ಇದೇ ಅರ್ಥದಲ್ಲಿ ಟ್ವೀಟ್ ಮಾಡಿದ್ದಾರೆ. ಮಹೀಂದ್ರಾ ಥಾರ್, ಆಫ್-ರೋಡ್ ವಾಹನ ಪ್ರಿಯರ ನೆಚ್ಚಿನ ವಾಹನವಾಗಿದೆ.

ಆನಂದ್ ಮಹೀಂದ್ರಾ ಸಹ ಅಂತಹ ಆಫ್ ರೋಡ್ ವಾಹನ ಪ್ರಿಯರಲ್ಲಿ ಒಬ್ಬರು. ಬಾಲಿವುಡ್ ನಟ ರಣದೀಪ್ ಹೂಡ ಕೂಡ ಹೊಸ ಥಾರ್ ಎಸ್‌ಯುವಿಗಾಗಿ ಕುತೂಹಲದಿಂದ ಕಾಯುತ್ತಿರುವುದಾಗಿ ಹೇಳಿದ್ದಾರೆ.
MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಅನಾವರಣಗೊಂಡಾಗಿನಿಂದ ಹೊಸ ಮಹೀಂದ್ರಾ ಥಾರ್ ಹೆಚ್ಚು ಸುದ್ದಿಯಾಗುತ್ತಿದೆ. ಕಂಪನಿಯು ಈ ಎಸ್‌ಯುವಿಯ ಬಿಡುಗಡೆಗೆ ಸಿದ್ದತೆಗಳನ್ನು ನಡೆಸಿದೆ. 2020ರ ಹೊಸ ಮಹೀಂದ್ರಾ ಥಾರ್ ಎಸ್‌ಯುವಿಯನ್ನು ಶೀಘ್ರದಲ್ಲೇ ಡೀಲರ್ ಗಳಿಗೆ ಕಳುಹಿಸಲಾಗುವುದು.

ಥಾರ್ ಎಸ್‌ಯುವಿಯನ್ನು ಎರಡು ಎಂಜಿನ್ ಆಯ್ಕೆ ಹಾಗೂ ಎಎಕ್ಸ್, ಎಲ್ಎಕ್ಸ್ ಎಂಬ ಎರಡು ಮಾದರಿಗಳಲ್ಲಿ ಬಿಡುಗಡೆಗೊಳಿಸಲಾಗುವುದು. ಈ ಎಸ್‌ಯುವಿ ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳನ್ನು ಹೊಂದಿದೆ.
MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಹೊಸ ಮಹೀಂದ್ರಾ ಥಾರ್ ಎಸ್‌ಯುವಿಯ ಆರಂಭಿಕ ಬೆಲೆಯನ್ನು ರೂ.10 ಲಕ್ಷಗಳಿರುವ ಸಾಧ್ಯತೆಗಳಿವೆ. ಕಂಪನಿಯು ಹೊಸ ಎಸ್‌ಯುವಿಯ ಬೆಲೆಯನ್ನು ಬಿಡುಗಡೆಯ ದಿನದಂದು ಬಹಿರಂಗಪಡಿಸಲಿದೆ. ಈ ಎಸ್‌ಯುವಿಯು ಎಷ್ಟು ಜನಪ್ರಿಯವಾಗಲಿದೆ ಎಂಬುದು ಬಿಡುಗಡೆಯಾದ ನಂತರ ತಿಳಿಯಲಿದೆ.


Click it and Unblock the Notifications