ಇತಿಹಾಸದಲ್ಲೇ ಮೊದಲ ಬಾರಿಗೆ ವಾಹನಗಳ ಮಾರಾಟದಲ್ಲಿ ಸೊನ್ನೆ ಸುತ್ತಿದ ಆಟೋ ಕಂಪನಿಗಳು

ಮಹಾಮಾರಿ ಕರೋನಾ ವೈರಸ್‌ ತಡೆಯಲು ಲಾಕ್‌ಡೌನ್ ಅನಿವಾರ್ಯವಾಗಿದ್ದರಿಂದ ವಾಣಿಜ್ಯ ವ್ಯಾಪಾರಗಳು ಸಂಪೂರ್ಣವಾಗಿ ನೆಲಕಚ್ಚಿದ್ದು, ಆಟೋ ಮೊಬೈಲ್ ಉದ್ಯಮವು ಕೂಡಾ ಭಾರೀ ಪ್ರಮಾಣದ ನಷ್ಟವನ್ನು ಅನುಭವಿಸುತ್ತಿದೆ.

ಇತಿಹಾಸದಲ್ಲೇ ಮೊದಲ ಬಾರಿಗೆ ವಾಹನ ಮಾರಾಟದಲ್ಲಿ ಸೊನ್ನೆ ಸುತ್ತಿದ ಆಟೋ ಕಂಪನಿಗಳು

ಕಳೆದ ತಿಂಗಳು 23ರಿಂದಲೇ ವಾಹನಗಳ ಉತ್ಪಾದನೆ ಮತ್ತು ಮಾರಾಟವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿರುವ ಆಟೋ ಕಂಪನಿಗಳು ಇದುವರೆಗೂ ಯಾವುದೇ ಉತ್ಪಾದನೆ ಮತ್ತು ಮಾರಾಟಕ್ಕೆ ಅವಕಾಶ ಇಲ್ಲದಿರುವುದರಿಂದ ದಿನಂಪ್ರತಿ ನೂರಾರು ಕೋಟಿ ನಷ್ಟ ಅನುಭವಿಸುತ್ತಿವೆ. ಸದ್ಯ 2ನೇ ಹಂತದ ಲಾಕ್‌ಡೌನ್ ಮುಕ್ತಾಯ ಹಂತಕ್ಕೆ ಬಂದಿದ್ದರು ಸಹ ವಾಹನ ಮಾರಾಟಕ್ಕೆ ಅವಕಾಶ ಸಿಗುವುದು ಅನುಮಾನ ಎನ್ನಲಾಗುತ್ತಿದ್ದು, ಸೋಂಕು ಪರಿಣಾಮಕಾರಿಯಾಗಿ ತಗ್ಗಿಸಲು ಮೂರನೇ ಹಂತದ ಲಾಕ್‌ಡೌನ್ ಮುಂದುವರಿಸಲಾಗುತ್ತಿದೆ.

ಇತಿಹಾಸದಲ್ಲೇ ಮೊದಲ ಬಾರಿಗೆ ವಾಹನ ಮಾರಾಟದಲ್ಲಿ ಸೊನ್ನೆ ಸುತ್ತಿದ ಆಟೋ ಕಂಪನಿಗಳು

ಇದರಿಂದ ಇತಿಹಾಸದಲ್ಲೇ ಮೊದಲ ಬಾರಿಗೆ ಒಂದು ತಿಂಗಳ ಅವಧಿಯಲ್ಲಿ ಯಾವುದೇ ಆಟೋ ಕಂಪನಿಯು ಒಂದೇ ಒಂದು ವಾಹನವನ್ನು ಮಾರಾಟ ಮಾಡದೆ ಇರುವುದು ಇದೇ ಮೊದಲು ಎನ್ನಲಾಗಿದ್ದು, ಮೇ 3ರ ನಂತರವೂ ಇದೇ ಪರಿಸ್ಥಿತಿ ಮುಂದುವರಿಯುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.

MOST READ: ಲಾಕ್‌ಡೌನ್ ಸಂಕಷ್ಟ- ಆಟೋ ಚಾಲಕರ ಬ್ಯಾಂಕ್ ಖಾತೆ ಸೇರಿದ ರೂ.5 ಸಾವಿರ ಪರಿಹಾರ..

ಇತಿಹಾಸದಲ್ಲೇ ಮೊದಲ ಬಾರಿಗೆ ವಾಹನ ಮಾರಾಟದಲ್ಲಿ ಸೊನ್ನೆ ಸುತ್ತಿದ ಆಟೋ ಕಂಪನಿಗಳು

ಭಾರತದಲ್ಲಿ ಸದ್ಯ ಕರೋನಾ ವೈರಸ್ ಹರಡುವಿಕೆ ಪ್ರಮಾಣವು ನಿಯಂತ್ರಣದಲ್ಲಿದ್ದರೂ ಕೂಡಾ ಲಾಕ್‌ಡೌನ್ ಅನ್ನು ತಕ್ಷಣವೇ ಕೈಬಿಡುವುದರಿಂದ ವೈರಸ್ ಪ್ರಮಾಣವು ಮತ್ತೆ ಹೆಚ್ಚಳವಾಗುವ ಎಲ್ಲಾ ಸಾಧ್ಯತೆಗಳಿದ್ದು, ಇದರಿಂದ ಸದ್ಯ ವಾಹನಗಳ ಮಾರಾಟಕ್ಕೆ ಹಾಕಲಾಗಿರುವ ನಿರ್ಬಂಧವನ್ನು ಮುಂದುವರಿಯಬಹುದು.

ಇತಿಹಾಸದಲ್ಲೇ ಮೊದಲ ಬಾರಿಗೆ ವಾಹನ ಮಾರಾಟದಲ್ಲಿ ಸೊನ್ನೆ ಸುತ್ತಿದ ಆಟೋ ಕಂಪನಿಗಳು

ಇದಕ್ಕಾಗಿಯೇ ಆಟೋ ಉತ್ಪಾದನಾ ಕಂಪನಿಗಳು ಹೊಸ ಯೋಜನೆಗಳೊಂದಿಗೆ ವಾಹನಗಳ ಮಾರಾಟ ಪ್ರಕ್ರಿಯೆಯನ್ನು ಮುಂದುವರಿಸಲು ಮುಂದಾಗಿದ್ದು, ಆನ್‌ಲೈನ್ ಸ್ಟೋರ್‌ಗಳ ಮೂಲಕ ಹೊಸ ವಾಹನಗಳನ್ನು ಮನೆಬಾಗಿಲಿಗೆ ತಲುಪಿಸಲು ಮುಂದಾಗಿವೆ.

MOST READ: ಲಾಕ್ ಡೌನ್ ಎಫೆಕ್ಟ್- ಮಾರ್ಗ ಮಧ್ಯದಲ್ಲೇ ಉಳಿದ ಸಾವಿರಾರು ಕೋಟಿ ಮೌಲ್ಯದ ಹೊಸ ವಾಹನಗಳು

ಇತಿಹಾಸದಲ್ಲೇ ಮೊದಲ ಬಾರಿಗೆ ವಾಹನ ಮಾರಾಟದಲ್ಲಿ ಸೊನ್ನೆ ಸುತ್ತಿದ ಆಟೋ ಕಂಪನಿಗಳು

ಗ್ರಾಹಕರು ನೇರವಾಗಿ ವಾಹನಗಳ ಮಾರಾಟ ಕೇಂದ್ರಗಳಿಗೆ ಭೇಟಿ ನೀಡುವುದರಿಂದ ವೈರಸ್ ಹರಡಬಹುದೆನ್ನುವ ಎಚ್ಚರಿಕೆಯ ಹಿನ್ನಲೆಯಲ್ಲಿ ಶೋರೂಂ ಸಿಬ್ಬಂದಿಯೇ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಹೊಸ ವಾಹನಗಳನ್ನು ಬೇಡಿಕೆ ಮೇರೆಗೆ ಗ್ರಾಹಕರ ಮನೆಗೆ ತಲುಪಿಸಲು ಸಿದ್ದತೆ ನಡೆಸುತ್ತಿವೆ.

ಇತಿಹಾಸದಲ್ಲೇ ಮೊದಲ ಬಾರಿಗೆ ವಾಹನ ಮಾರಾಟದಲ್ಲಿ ಸೊನ್ನೆ ಸುತ್ತಿದ ಆಟೋ ಕಂಪನಿಗಳು

2ನೇ ಹಂತದ ಲಾಕ್‌ಡೌನ್‌ನಲ್ಲಿ ಕೆಲವು ವಿನಾಯ್ತಿಗಳಿಂದಾಗಿ ಈಗಾಗಲೇ ಹಲವು ಆಟೋ ಕಂಪನಿಗಳು ವಾಹನ ಉತ್ಪಾದನೆಯನ್ನು ನಿರ್ದಿಷ್ಟ ಪ್ರಮಾಣದಲ್ಲಿ ಉತ್ಪಾದನೆಯನ್ನು ಶುರು ಮಾಡಿದ್ದು, ಮೇ 3ರ ನಂತರ ಪ್ರಕಟಿಸಲಾಗುವ ಕೇಂದ್ರ ಸರ್ಕಾರದ ನಿರ್ಧಾರದ ಮೇಲೆ ವಾಹನ ಮಾರಾಟ ಪ್ರಕ್ರಿಯೆ ಹೇಗಿರಲಿದೆ ಎನ್ನವುದು ನಿರ್ಧಾರವಾಗಲಿದೆ.

MOST READ: ಕರೋನಾ ವೈರಸ್ ವಿರುದ್ದದ ಹೋರಾಟಕ್ಕೆ ಭಾರೀ ಪ್ರಮಾಣದ ದೇಣಿಗೆ ನೀಡಿದ ಟಿವಿಎಸ್ ಮೋಟಾರ್

ಇತಿಹಾಸದಲ್ಲೇ ಮೊದಲ ಬಾರಿಗೆ ವಾಹನ ಮಾರಾಟದಲ್ಲಿ ಸೊನ್ನೆ ಸುತ್ತಿದ ಆಟೋ ಕಂಪನಿಗಳು

ಒಂದು ವೇಳೆ ನೇರವಾಗಿ ವಾಹನ ಮಾರಾಟದ ಮೇಲೆ ನಿರ್ಬಂಧ ಮುಂದುವರಿದಲ್ಲಿ ಆನ್‌ಲೈನ್ ವಾಹನ ಮಾರಾಟಕ್ಕೆ ಅವಕಾಶ ಸಿಗುವ ಸಾಧ್ಯತೆಗಳಿದ್ದು, ಕಳೆದ ಒಂದೂವರೆ ತಿಂಗಳಿನಿಂದ ಯಾವುದೇ ಆದಾಯ ಇಲ್ಲದಿರುವುದು ಆಟೋ ಉತ್ಪಾದನಾ ಕಂಪನಿಗಳನ್ನು ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ಇತಿಹಾಸದಲ್ಲೇ ಮೊದಲ ಬಾರಿಗೆ ವಾಹನ ಮಾರಾಟದಲ್ಲಿ ಸೊನ್ನೆ ಸುತ್ತಿದ ಆಟೋ ಕಂಪನಿಗಳು

ಇನ್ನು ಮಾಹಾಮಾರಿ ಕರೋನಾ ವೈರಸ್ ವಿರುದ್ಧದ ಹೋರಾಟಕ್ಕಾಗಿ ಸಂಕಷ್ಟದ ಸಮಯದಲ್ಲೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ದೇಣಿಗೆ ಸಂಗ್ರಹ ಅಭಿಯಾನಕ್ಕೆ ಸ್ಪಂದಿಸಿರುವ ಆಟೋ ಉತ್ಪಾದನಾ ಕಂಪನಿಗಳು ಭಾರೀ ಪ್ರಮಾಣದ ಧನಸಹಾಯದ ಜೊತೆ ವೈದ್ಯಕೀಯ ಉಪಕರಣಗಳನ್ನು ಉತ್ಪಾದನೆ ಮಾಡಿ ಪೂರೈಕೆ ಮಾಡುತ್ತಿವೆ.

MOST READ: ಲಾಕ್‌ಡೌನ್ ವೇಳೆ ಕಾರು ಚಾಲನೆ ಮಾಡಿ ಸಿಕ್ಕಿಬಿದ್ದ ಮಹಿಳೆಯಿಂದ ಹೈಡ್ರಾಮಾ..

ಇತಿಹಾಸದಲ್ಲೇ ಮೊದಲ ಬಾರಿಗೆ ವಾಹನ ಮಾರಾಟದಲ್ಲಿ ಸೊನ್ನೆ ಸುತ್ತಿದ ಆಟೋ ಕಂಪನಿಗಳು

ಆಟೋ ಉತ್ಪಾದನಾ ಚಟುವಟಿಕೆ ಸಂಪೂರ್ಣ ಸ್ತಬ್ಧವಾಗಿದ್ದರಿಂದ ವೈದ್ಯಕೀಯ ಉಪಕರಣಗಳ ಉತ್ಪಾದನೆ ಹೆಚ್ಚಿನ ಒತ್ತುನೀಡಿರುವ ಆಟೋ ಉತ್ಪಾದನಾ ಕಂಪನಿಗಳು ಭಾರೀ ಪ್ರಮಾಣದ ದೇಣಿಗೆ ಜೊತೆಗೆ ಮಾಸ್ಕ್, ಹ್ಯಾಂಡ್ ಸ್ಯಾನಿಟೈಜರ್, ಪ್ರೋಟೆಕ್ವಿಟ್ ಕ್ಲಾಥ್, ರ‍್ಯಾಪಿಡ್ ಟೆಸ್ಟಿಂಗ್ ಕಿಟ್, ವೆಂಟಿಲೆಟರ್ ಉತ್ಪನ್ನಗಳನ್ನು ಸಿದ್ದಪಡಿಸುತ್ತಿವೆ.

Most Read Articles

Kannada
English summary
Auto Industry Braces For Zero Units Of Sales In April 2020. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X