ಆಟೋ ಕಂಪನಿಗಳಿಗೆ ಪೂರಕವಾಗಿ ಬಿಡಿಭಾಗಗಳ ಉತ್ಪಾದನಾ ಪ್ರಕ್ರಿಯೆಗೂ ಶೀಘ್ರವೇ ಚಾಲನೆ

ದೇಶಾದ್ಯಂತ ಈಗಾಗಲೇ ಹಲವಾರು ಆಟೋ ಕಂಪನಿಗಳು ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿಯಂತೆ ವಾಹನ ಉತ್ಪಾದನೆ ಮತ್ತು ಮಾರಾಟ ಪ್ರಕ್ರಿಯೆ ಚಾಲನೆ ನೀಡಿದ್ದು, ಶೀಘ್ರದಲ್ಲೇ ಬಿಡಿಭಾಗಗಳ ಉತ್ಪಾದನಾ ಕಂಪನಿಗಳು ಕೂಡಾ ಉತ್ಪಾದನಾ ಪ್ರಕಿಯೆಗೆ ಚಾಲನೆ ನೀಡಲು ಸಿದ್ದವಾಗಿವೆ.

ಆಟೋ ಕಂಪನಿಗಳಿಗೆ ಪೂರಕವಾಗಿ ಬಿಡಿಭಾಗಗಳ ಉತ್ಪಾದನಾ ಪ್ರಕ್ರಿಯೆಗೂ ಶೀಘ್ರವೇ ಚಾಲನೆ

ಕೇಂದ್ರ ಸರ್ಕಾರದ ಹೊಸ ಸುರಕ್ಷಾ ಮಾರ್ಗಸೂಚಿಯಂತೆ ಹಸಿರು ಮತ್ತು ಕಿತ್ತಳೆ ವಲಯದಲ್ಲಿರುವ ಆಟೋ ಕಂಪನಿಗಳ ಉತ್ಪಾದನಾ ಪ್ರಕ್ರಿಯೆಗೆ ಚಾಲನೆ ಸಿಕ್ಕಿದ್ದು, ಆಟೋ ಉತ್ಪಾದನಾ ಕಂಪನಿಗಳಿಗೆ ಪೂರಕವಾಗಿ ಬಿಡಿಭಾಗಗಳ ಉತ್ಪಾದನಾ ಕಂಪನಿಗಳು ಕೂಡಾ ಉತ್ಪಾದನೆ ಕೈಗೊಳ್ಳಲು ಸಿದ್ದವಾಗಿವೆ. ಆದರೆ ಬಹುತೇಕ ಬಿಡಿಭಾಗಗಳ ಉತ್ಪಾದನಾ ಕಂಪನಿಗಳು ಕಾರ್ಪೋರೆಷನ್ ವ್ಯಾಪ್ತಿಯಲ್ಲಿ ಉತ್ಪಾದನಾ ಘಟಕಗಳನ್ನು ಹೊಂದಿರುವುದರಿಂದ ಹೊಸ ಮಾರ್ಗಸೂಚಿಯ ಅವಶ್ಯಕತೆಯಿದ್ದು, ಶೀಘ್ರದಲ್ಲೇ ಉತ್ಪಾದನೆಯನ್ನು ಆರಂಭಿಸಲಿವೆ.

ಆಟೋ ಕಂಪನಿಗಳಿಗೆ ಪೂರಕವಾಗಿ ಬಿಡಿಭಾಗಗಳ ಉತ್ಪಾದನಾ ಪ್ರಕ್ರಿಯೆಗೂ ಶೀಘ್ರವೇ ಚಾಲನೆ

ಆಟೋ ಕಂಪನಿಗಳು ಉತ್ಪಾದನೆ ಶುರು ಮಾಡಿದ್ದರಿಂದ ಅದಕ್ಕೆ ಪೂರಕವಾಗಿ ಬಿಡಿಭಾಗಗಳ ಪೂರೈಕೆಯಿದ್ದಾಗ ಮಾತ್ರ ವಾಹನಗಳ ಉತ್ಪಾದನೆ ಪರಿಪೂರ್ಣವಾಗಲಿದ್ದು, ಸದ್ಯ ಸ್ಟಾಕ್ ಪ್ರಮಾಣದಲ್ಲಿ ಮಾತ್ರವೇ ಉತ್ಪಾದನೆಯನ್ನು ಕೈಗೊಳ್ಳಲಾಗುತ್ತಿದೆ.

ಆಟೋ ಕಂಪನಿಗಳಿಗೆ ಪೂರಕವಾಗಿ ಬಿಡಿಭಾಗಗಳ ಉತ್ಪಾದನಾ ಪ್ರಕ್ರಿಯೆಗೂ ಶೀಘ್ರವೇ ಚಾಲನೆ

ಮುಂದಿನ ಒಂದು ವಾರದೊಳಗೆ ಬಿಡಿಭಾಗಗಳ ಕಂಪನಿಗಳು ಉತ್ಪಾದನೆಯನ್ನು ಪುನಾರಂಭಿಸುವ ಅವಶ್ಯಕತೆಯಿದ್ದು, ಸೋಂಕು ಹೆಚ್ಚಿರುವ ಪ್ರದೇಶಗಳನ್ನು ಹೊರತುಪಡಿಸಿ ಇನ್ನುಳಿದ ಕಡೆಗಳಲ್ಲಿ ಆಟೋ ಬಿಡಿಭಾಗಗಳ ಉತ್ಪಾದನೆಗೆ ಚಾಲನೆ ಸಿಗಲಿದೆ.

MOST READ: ಲಾಕ್‌ಡೌನ್‌ನಿಂದ ತತ್ತರಿಸಿರುವ ಆಟೋ ಕಂಪನಿಗಳಿಗೆ ಇದೀಗ ಮತ್ತೊಂದು ಸಂಕಷ್ಟ

ಆಟೋ ಕಂಪನಿಗಳಿಗೆ ಪೂರಕವಾಗಿ ಬಿಡಿಭಾಗಗಳ ಉತ್ಪಾದನಾ ಪ್ರಕ್ರಿಯೆಗೂ ಶೀಘ್ರವೇ ಚಾಲನೆ

ಇನ್ನು ಕರೋನಾ ವೈರಸ್‌ನಿಂದಾಗಿ ಇಡೀ ವಿಶ್ವವೇ ಸಂಕಷ್ಟಕ್ಕೆ ಸಿಲುಕಿದ್ದು, ಬಹುತೇಕ ವಾಣಿಜ್ಯ ವ್ಯಾಪಾರಗಳು ನೆಲಕಚ್ಚಿವೆ. ಭಾರತದಲ್ಲೂ ಲಾಕ್‌ಡೌನ್ ವಿಧಿಸಿದ ದಿನದಿಂದಲೂ ಎಲ್ಲಾ ಮಾದರಿಯ ವಾಣಿಜ್ಯ ಚಟುವಟಿಕೆಗಳನ್ನು ಬಂದ್ ಮಾಡಿದ್ದರಿಂದ ಆಟೋ ಉದ್ಯಮ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಆರ್ಥಿಕ ಬಿಕ್ಕಟ್ಟು ಶುರುವಾಗಿದೆ.

ಆಟೋ ಕಂಪನಿಗಳಿಗೆ ಪೂರಕವಾಗಿ ಬಿಡಿಭಾಗಗಳ ಉತ್ಪಾದನಾ ಪ್ರಕ್ರಿಯೆಗೂ ಶೀಘ್ರವೇ ಚಾಲನೆ

ವೈರಸ್ ತಡೆಗಾಗಿ ಲಾಕ್‌ಡೌನ್ ಅನಿವಾರ್ಯವಾಗಿದ್ದರಿಂದ ಭಾರತೀಯ ಆಟೋ ಉದ್ಯಮವು ಸಹ ದಿನಂಪ್ರತಿ ನೂರಾರು ಕೋಟಿ ನಷ್ಟ ಅನುಭವಿಸುತ್ತಿದ್ದು, ಇದೀಗ ಪರಿಸ್ಥಿತಿಗೆ ಅನುಗುಣವಾಗಿ ಆಟೋ ಕ್ಷೇತ್ರಕ್ಕೆ ವಿನಾಯ್ತಿ ನೀಡಲಾಗಿದೆಯಾದರೂ ಆರ್ಥಿಕ ಮುಗ್ಗಟ್ಟು ತೀವ್ರ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.

MOST READ: ಕರೋನಾ ಸಂಕಷ್ಟ: ಟ್ಯಾಕ್ಸಿ ಮತ್ತು ಆಟೋ ಚಾಲಕರಿಗೆ ವಿಶೇಷ ಪ್ಯಾಕೇಜ್ ಘೋಷಣೆ

ಆಟೋ ಕಂಪನಿಗಳಿಗೆ ಪೂರಕವಾಗಿ ಬಿಡಿಭಾಗಗಳ ಉತ್ಪಾದನಾ ಪ್ರಕ್ರಿಯೆಗೂ ಶೀಘ್ರವೇ ಚಾಲನೆ

ಹೊಸ ಸುರಕ್ಷಾ ಮಾರ್ಗಸೂಚಿತಂತೆ ಆಟೋ ಉದ್ಯಮವು ಮರು ಚಾಲನೆಗೊಂಡರು ನೀರಿಕ್ಷಿತ ಮಟ್ಟದಲ್ಲಿ ಗ್ರಾಹಕರಿಲ್ಲದೆ ಪರದಾಡುತ್ತಿವೆ. ಜೊತೆಗೆ ಲಾಕ್‌ಡೌನ್‌ಗೂ ಮೊದಲ ಬುಕ್ಕಿಂಗ್ ಮಾಡಿ ವಾಹನ ಖರೀದಿಯ ಸಂಭ್ರಮದಲ್ಲಿದ್ದ ಗ್ರಾಹಕರು ಇದೀಗ ಖರೀದಿ ಪ್ರಕ್ರಿಯೆಯಿಂದ ಹಿಂದೆ ಸರಿಯುತ್ತಿದ್ದು, ಮಾರಾಟ ಮಳಿಗೆಗಳು ಪುನಾರಂಭಗೊಂಡ ನಂತರ ವಾಹನ ಖರೀದಿ ಬದಲು ಬುಕ್ಕಿಂಗ್ ಹಣ ವಾಪಸ್ ನೀಡುವಂತೆ ಬೇಡಿಕೆಯಿಡುತ್ತಿದ್ದಾರೆ.

ಆಟೋ ಕಂಪನಿಗಳಿಗೆ ಪೂರಕವಾಗಿ ಬಿಡಿಭಾಗಗಳ ಉತ್ಪಾದನಾ ಪ್ರಕ್ರಿಯೆಗೂ ಶೀಘ್ರವೇ ಚಾಲನೆ

ಸದ್ಯಕ್ಕೆ ವಾಹನ ಖರೀದಿ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುತ್ತಿರುವ ಬಹುತೇಕ ಗ್ರಾಹಕರು ಬುಕ್ಕಿಂಗ್ ಹಣ ವಾಪಸ್ ಪಡೆದುಕೊಳ್ಳುತ್ತಿದ್ದು, ಲಾಕ್‌ಡೌನ್ ನಂತರ ವಾಹನ ಮಾರಾಟ ಯೋಜನೆಯಲ್ಲಿದ್ದ ಆಟೋ ಕಂಪನಿಗಳಿಗೆ ಗ್ರಾಹಕರು ಬುಕ್ಕಿಂಗ್ ಹಣ ವಾಪಸ್ ಪಡೆದುಕೊಳ್ಳುವ ಮೂಲಕ ಮತ್ತೊಂದು ಶಾಕ್ ನೀಡಿದ್ದಾರೆ.

MOST READ: ಕರೋನಾ ವೈರಸ್: ಹೊಸ ವಿಧಾನದ ಮೂಲಕ ಜನರ ಬಳಿ ಬರಲಿರುವ ಪೊಲೀಸರು..

ಆಟೋ ಕಂಪನಿಗಳಿಗೆ ಪೂರಕವಾಗಿ ಬಿಡಿಭಾಗಗಳ ಉತ್ಪಾದನಾ ಪ್ರಕ್ರಿಯೆಗೂ ಶೀಘ್ರವೇ ಚಾಲನೆ

ಲಾಕ್‌ಡೌನ್‌ಗೂ ಮುನ್ನ ದೇಶಾದ್ಯಂತ ಹೊಸ ವಾಹನಗಳಿಗೆ ಬುಕ್ಕಿಂಗ್ ಮಾಡಿದ್ದ ಗ್ರಾಹಕರಲ್ಲಿ ಸುಮಾರು ಶೇ.60ರಿಂದ ಶೇ.70ರಷ್ಟು ಜನ ಇದೀಗ ಬುಕ್ಕಿಂಗ್ ಹಣ ವಾಪಸ್‌ ನೀಡುವಂತೆ ಬೇಡಿಕೆ ಸಲ್ಲಿಸಿದ್ದು, ಇದು ಆಟೋ ಕಂಪನಿಗಳನ್ನು ಮತ್ತಷ್ಟು ಚಿಂತೆಗೀಡು ಮಾಡಿದೆ.

Most Read Articles

Kannada
English summary
Automobile Component Manufacturers In Green Zone To Restart Operations Soon: Awaiting Approval. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X