ಕರೋನಾ ವೈರಸ್ ಹಿನ್ನೆಲೆ: ಬಿಎಸ್ 4 ವಾಹನಗಳ ಮಾರಾಟ ಅವಧಿ ವಿಸ್ತರಿಸಲು ಮನವಿ

ಕರೋನಾ ವೈರಸ್ ಇಡೀ ಜಗತ್ತನ್ನು ಕಾಡುತ್ತಿದೆ. ಇದರಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿದೆ. ಪ್ರಪಂಚದ ಆರ್ಥಿಕತೆಯ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಭಾರತದಲ್ಲಿಯೂ ಸಹ ಕರೋನಾ ವೈರಸ್ ಜನರ ಜೀವನದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ.

ಕರೋನಾ ವೈರಸ್ ಹಿನ್ನೆಲೆ: ಬಿಎಸ್ 4 ವಾಹನಗಳ ಮಾರಾಟ ಅವಧಿ ವಿಸ್ತರಿಸಲು ಮನವಿ

ಬಿಎಸ್ 4 ವಾಹನಗಳನ್ನು ಏಪ್ರಿಲ್ 1ರಿಂದ ಮಾರಾಟ ಮಾಡುವಂತಿಲ್ಲ. ಏಪ್ರಿಲ್ 1ರಿಂದ ಬಿಎಸ್ 6 ಮಾಲಿನ್ಯ ನಿಯಮಗಳು ಜಾರಿಗೆ ಬರಲಿವೆ. ಕರೋನಾ ವೈರಸ್ ಭೀತಿಯಿಂದಾಗಿ ವಾಹನಗಳ ಮಾರಾಟವು ಕುಸಿದಿದೆ. ಜನರು ಮನೆಗಳಿಂದ ಹೊರ ಬರಲು ಹಿಂದೇಟು ಹಾಕುತ್ತಿದ್ದಾರೆ.

ಕರೋನಾ ವೈರಸ್ ಹಿನ್ನೆಲೆ: ಬಿಎಸ್ 4 ವಾಹನಗಳ ಮಾರಾಟ ಅವಧಿ ವಿಸ್ತರಿಸಲು ಮನವಿ

ಬಿಎಸ್ 4 ವಾಹನಗಳ ಮಾರಾಟಕ್ಕೆ ನಿಗದಿಪಡಿಸಲಾಗಿರುವ ಗಡುವನ್ನು ವಿಸ್ತರಿಸುವಂತೆ ಕೋರಿ ಅಖಿಲ ಭಾರತ ವಾಹನ ಮಾರಾಟಗಾರರ ಒಕ್ಕೂಟವು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ.

ಕರೋನಾ ವೈರಸ್ ಹಿನ್ನೆಲೆ: ಬಿಎಸ್ 4 ವಾಹನಗಳ ಮಾರಾಟ ಅವಧಿ ವಿಸ್ತರಿಸಲು ಮನವಿ

ಕರೋನಾ ವೈರಸ್ ನಿಂದಾಗಿ ಮಾರಾಟವು 60% ನಿಂದ 70%ವರೆಗೂ ಕುಸಿದಿದ್ದು, ಮಾರ್ಚ್ 31ರೊಳಗೆ ಉಳಿದಿರುವ ಬಿಎಸ್ 4 ವಾಹನಗಳನ್ನು ಮಾರಾಟ ಮಾಡುವುದು ಕಷ್ಟಕರವಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಕರೋನಾ ವೈರಸ್ ಹಿನ್ನೆಲೆ: ಬಿಎಸ್ 4 ವಾಹನಗಳ ಮಾರಾಟ ಅವಧಿ ವಿಸ್ತರಿಸಲು ಮನವಿ

ಸರ್ಕಾರದ ಸೂಚನೆಗಳ ಪ್ರಕಾರ, ವಿತರಕರು ಮಾರಾಟ ಚಟುವಟಿಕೆಗಳನ್ನು ನಿಲ್ಲಿಸಿದ್ದಾರೆ. ಬಹುತೇಕ ವಿತರಕರು ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ ಎಂದು ಹೇಳಿದ್ದಾರೆ.

ಕರೋನಾ ವೈರಸ್ ಹಿನ್ನೆಲೆ: ಬಿಎಸ್ 4 ವಾಹನಗಳ ಮಾರಾಟ ಅವಧಿ ವಿಸ್ತರಿಸಲು ಮನವಿ

ಮಾರಾಟವಾಗದೇ ಉಳಿದಿರುವ ಬಿಎಸ್ 4 ವಾಹನಗಳನ್ನು ಮಾರಾಟ ಮಾಡದಿದ್ದರೆ, ಅನೇಕ ಶೋರೂಂಗಳನ್ನು ಶಾಶ್ವತವಾಗಿ ಮುಚ್ಚಬೇಕಾಗುತ್ತದೆ ಎಂದು ಹೇಳಲಾಗಿದೆ.

ಕರೋನಾ ವೈರಸ್ ಹಿನ್ನೆಲೆ: ಬಿಎಸ್ 4 ವಾಹನಗಳ ಮಾರಾಟ ಅವಧಿ ವಿಸ್ತರಿಸಲು ಮನವಿ

ಈ ಎಲ್ಲಾ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ಮೇ 31ರವರೆಗೆ ಅಸ್ತಿತ್ವದಲ್ಲಿರುವ ಬಿಎಸ್ 4 ವಾಹನಗಳ ಮಾರಾಟಕ್ಕೆ ಹಾಗೂ ನೋಂದಣಿಗೆ ಅನುಮತಿ ನೀಡಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ.

ಕರೋನಾ ವೈರಸ್ ಹಿನ್ನೆಲೆ: ಬಿಎಸ್ 4 ವಾಹನಗಳ ಮಾರಾಟ ಅವಧಿ ವಿಸ್ತರಿಸಲು ಮನವಿ

ಬಿಎಸ್ 4 ವಾಹನ ಮಾರಾಟವನ್ನು ವಿಸ್ತರಿಸುವಂತೆ ಫೆಡರೇಶನ್ ಆಫ್ ಡೀಲರ್ಸ್ ಸಲ್ಲಿಸಿದ್ದ ಅರ್ಜಿಯನ್ನು ಕಳೆದ ತಿಂಗಳು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು. ಈಗ ಕರೋನಾ ವೈರಸ್ ಸಮಸ್ಯೆಯನ್ನು ಉಲ್ಲೇಖಿಸಿ ಗಡುವನ್ನು ವಿಸ್ತರಿಸುವಂತೆ ಕೋರಲಾಗಿದೆ.

ಕರೋನಾ ವೈರಸ್ ಹಿನ್ನೆಲೆ: ಬಿಎಸ್ 4 ವಾಹನಗಳ ಮಾರಾಟ ಅವಧಿ ವಿಸ್ತರಿಸಲು ಮನವಿ

ಸುಪ್ರೀಂ ಕೋರ್ಟ್ ಈ ಅರ್ಜಿಯನ್ನು ತುರ್ತು ಅರ್ಜಿ ಎಂದು ಪರಿಗಣಿಸಿ ತೀರ್ಪು ನೀಡಲಿದೆ ಎಂಬ ನಿರೀಕ್ಷೆಯನ್ನು ಫೆಡರೇಶನ್ ಆಫ್ ಇಂಡಿಯನ್ ಆಟೋಮೊಬೈಲ್ ಡೀಲರ್ಸ್ ಹೊಂದಿದೆ. ಅರ್ಜಿಯನ್ನು ಸುಪ್ರೀಂ ಕೋರ್ಟ್ ಶೀಘ್ರದಲ್ಲೇ ವಿಚಾರಣೆಗೆ ತೆಗೆದುಕೊಳ್ಳುವ ಸಾಧ್ಯತೆಗಳಿವೆ.

Most Read Articles

Kannada
English summary
Automobile dealers association seeks extension for BS4 vehicle sales May 31. Read in Kannada.
Story first published: Wednesday, March 18, 2020, 12:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X