ದೆಹಲಿ ಟು ಮುಂಬೈ ತನಕ ವಾಣಿಜ್ಯ ಎಲೆಕ್ಟ್ರಿಲ್ ವಾಹನ ಪ್ರಯಾಣಕ್ಕೆ ಗ್ರೀನ್ ಸಿಗ್ನಲ್

ಎಲೆಕ್ಟ್ರಿಕ್ ವಾಹನಗಳಿಗೆ ಚಾರ್ಜಿಂಗ್ ಸೌಲಭ್ಯವನ್ನು ಒದಗಿಸುವಲ್ಲಿ ಮುಂಚೂಣಿಯಲ್ಲಿರುವ ಬ್ಲೂಸ್ಮಾರ್ಟ್ ಮೊಬಿಲಿಟಿ ಕಂಪನಿಯು ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ಹೊಸ ಅಭಿಯಾನಕ್ಕೆ ಚಾಲನೆ ನೀಡಿದ್ದು, ದೆಹಲಿ ಟು ಮುಂಬೈ ತನಕ ವಾಣಿಜ್ಯ ಬಳಕೆಯ ಎಲೆಕ್ಟ್ರಿಕ್ ಕಾರುಗಳ ಪ್ರಯಾಣಕ್ಕೆ ಗ್ರೀನ್ ಸಿಗ್ನಲ್ ನೀಡಿದೆ.

ದೆಹಲಿ ಟು ಮುಂಬೈ ತನಕ ವಾಣಿಜ್ಯ ಎಲೆಕ್ಟ್ರಿಲ್ ವಾಹನ ಪ್ರಯಾಣಕ್ಕೆ ಗ್ರೀನ್ ಸಿಗ್ನಲ್

2030ರ ವೇಳೆಗೆ ದೇಶಾದ್ಯಂತ ಶೇ.100 ರಷ್ಟು ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ವಾಹನಗಳ ಮಾರಾಟ ಗುರಿಹೊಂದಿರುವ ಕೇಂದ್ರ ಸರ್ಕಾರವು ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳ ಮಾರಾಟವನ್ನು ತಗ್ಗಿಸಲು ಹಲವಾರು ಕಠಿಣ ಕ್ರಮಗಳನ್ನು ಹಂತ-ಹಂತವಾಗಿ ಜಾರಿಗೆ ತರುತ್ತಿದೆ. ಇದರಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಬೆಲೆಯು ಈ ಹಿಂದಿಗಿಂತಲೂ ಹೆಚ್ಚಿನ ಮಟ್ಟದಲ್ಲಿ ಏರಿಕೆಯಾಗಿದ್ದು, ನಿರ್ವಹಣಾ ವೆಚ್ಚಗಳನ್ನು ಭರಿಸಲು ಸಾಧ್ಯವಾಗದೆ ಎಲೆಕ್ಟ್ರಿಕ್ ವಾಹನಗಳ ಬಳಕೆಯತ್ತ ಮುಖ ಮಾಡುವಂತೆ ವಾಹನ ಬಳಕೆದಾರರನ್ನು ಉತ್ತೇಜಿಸಲಾಗುತ್ತಿದೆ.

ದೆಹಲಿ ಟು ಮುಂಬೈ ತನಕ ವಾಣಿಜ್ಯ ಎಲೆಕ್ಟ್ರಿಲ್ ವಾಹನ ಪ್ರಯಾಣಕ್ಕೆ ಗ್ರೀನ್ ಸಿಗ್ನಲ್

ಈ ನಿಟ್ಟಿನಲ್ಲಿ ಬ್ಲೂಸ್ಮಾರ್ಟ್ ಮೊಬಿಲಿಟಿ ಕೂಡಾ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ಹೊಸ ಯೋಜನೆಯೊಂದನ್ನು ರೂಪಿಸಿದ್ದು, ಕೇವಲ ನಗರ ಪ್ರದೇಶಗಳಲ್ಲಿ ಮಾತ್ರವಲ್ಲ ಅಂತರ್‌ರಾಜ್ಯ ಪ್ರಯಾಣಕ್ಕೂ ವಾಣಿಜ್ಯ ಮಾದರಿಯ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಮಾಡಲು ಗ್ರಾಹಕರಿಗೆ ಉತ್ತೇಜಿಸುತ್ತಿದೆ.

ದೆಹಲಿ ಟು ಮುಂಬೈ ತನಕ ವಾಣಿಜ್ಯ ಎಲೆಕ್ಟ್ರಿಲ್ ವಾಹನ ಪ್ರಯಾಣಕ್ಕೆ ಗ್ರೀನ್ ಸಿಗ್ನಲ್

ಇದಕ್ಕಾಗಿ ದೆಹಲಿಯಿಂದ ಮುಂಬೈ ತನಕ 1,376 ಕಿ.ಮೀ ಪ್ರಯಾಣವನ್ನು ಮಹೀಂದ್ರಾ ಇ-ವೆರಿಟೊ ಮೂಲಕ ಆರಂಭಿಸಿರುವ ಬ್ಲೂಸ್ಮಾರ್ಟ್ ಮೊಬಿಲಿಟಿ ಕಂಪನಿಯು 6 ದಿನಗಳಲ್ಲಿ ಪೂರ್ಣ ಪ್ರಯಾಣವನ್ನು ಮುಕ್ತಾಯಗೊಳಿಸಲಿದ್ದು, ಮಾರ್ಗಮಧ್ಯದಲ್ಲಿ ಇವಿ ಕಾರಿಗೆ ಮೊಬೈಲ್ ಚಾರ್ಜಿಂಗ್ ಸೌಲಭ್ಯವನ್ನು ಒದಗಿಸಲಿದೆ.

ದೆಹಲಿ ಟು ಮುಂಬೈ ತನಕ ವಾಣಿಜ್ಯ ಎಲೆಕ್ಟ್ರಿಲ್ ವಾಹನ ಪ್ರಯಾಣಕ್ಕೆ ಗ್ರೀನ್ ಸಿಗ್ನಲ್

ಪ್ರತಿ ಚಾರ್ಜ್‌ಗೆ 110ಕಿ.ಮೀ ಮೈಲೇಜ್ ರೇಂಜ್ ಹೊಂದಿರುವ ಮಹೀಂದ್ರಾ ಇ-ವೆರಿಟೊ ಕಾರು ಮಾದರಿಯು ವಾಣಿಜ್ಯ ಮಾದರಿಯ ಕಾರು ಆವೃತ್ತಿಯಾಗಿದ್ದು, ಬಜೆಟ್ ಬೆಲೆಯ ಎಲೆಕ್ಟ್ರಿಕ್ ಕಾರಿನ ಮೂಲಕ ದೂರದ ಮುಂಬೈ ಮತ್ತು ದೆಹಲಿ ನಡುವಿನ ಪ್ರಯಾಣಕ್ಕಾಗಿ ಆಯ್ದುಕೊಳ್ಳಲಾಗಿದೆ.

ದೆಹಲಿ ಟು ಮುಂಬೈ ತನಕ ವಾಣಿಜ್ಯ ಎಲೆಕ್ಟ್ರಿಲ್ ವಾಹನ ಪ್ರಯಾಣಕ್ಕೆ ಗ್ರೀನ್ ಸಿಗ್ನಲ್

ಸದ್ಯ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಉತ್ತಮವಾದ ವಾತಾವರಣ ಇದ್ದರೂ ಸಹ ಎಲೆಕ್ಟ್ರಿಕ್ ಚಾರ್ಜಿಂಗ್ ನಿಲ್ದಾಣಗಳ ಕೊರತೆಯು ಇವಿ ವಾಹನಗಳ ಮಾರಾಟಕ್ಕೆ ಹಿನ್ನಡೆ ಉಂಟಾಗುತ್ತಿದ್ದು, ಅಂತರ್‌ರಾಜ್ಯ ಪ್ರಯಾಣವನ್ನು ಸುಲಭವಾಗಿಸಲು ಪ್ರಮುಖ ಕಡೆಗಳಲ್ಲಿ ಬ್ಲೂಸ್ಮಾರ್ಟ್ ಮೊಬಿಲಿಟಿ ಕಂಪನಿಯು ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳನ್ನು ಸಿದ್ದಪಡಿಸುತ್ತಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ದೆಹಲಿ ಟು ಮುಂಬೈ ತನಕ ವಾಣಿಜ್ಯ ಎಲೆಕ್ಟ್ರಿಲ್ ವಾಹನ ಪ್ರಯಾಣಕ್ಕೆ ಗ್ರೀನ್ ಸಿಗ್ನಲ್

ಈ ಹಿನ್ನಲೆಯಲ್ಲಿ ವಾಣಿಜ್ಯ ಬಳಕೆಯ ಎಲೆಕ್ಟ್ರಿಕ್ ಉತ್ತೇಜಿಸುವ ಉದ್ದೇಶದಿಂದಲೇ ಬ್ಲೂಸ್ಮಾರ್ಟ್ ಮೊಬಿಲಿಟಿ ಕಂಪನಿಯು ದೆಹಲಿ ಟು ಮುಂಬೈ ನಡುವೆ ಆಲ್ ಎಲೆಕ್ಟ್ರಿಕ್ ಕಾರು ಪ್ರಯಾಣಕ್ಕೆ ಚಾಲನೆ ನೀಡಿದ್ದು, ಶೀಘ್ರದಲ್ಲೇ ಬ್ಲೂಸ್ಮಾರ್ಟ್ ಮೊಬಿಲಿಟಿ ಕಂಪನಿಯು ದೇಶದ ಪ್ರಮುಖ ನಗರಗಳಲ್ಲಿ ಡಿಸಿ ಫಾಸ್ಟ್ ಚಾರ್ಜಿಂಗ್ ಸ್ಟೆಷನ್‌ಗಳನ್ನು ತೆರೆಯಲು ಸಿದ್ದವಾಗಿದೆ.

ದೆಹಲಿ ಟು ಮುಂಬೈ ತನಕ ವಾಣಿಜ್ಯ ಎಲೆಕ್ಟ್ರಿಲ್ ವಾಹನ ಪ್ರಯಾಣಕ್ಕೆ ಗ್ರೀನ್ ಸಿಗ್ನಲ್

ಇದಕ್ಕಾಗಿ ಜಪಾನ್ ಮೂಲದ ಬ್ಯಾಟರಿ ಉತ್ಪಾದನಾ ಕಂಪನಿಯಾಗಿರುವ ಒಕಾಯಾ ಜೊತೆಗೂಡಿರುವ ಬ್ಲೂಸ್ಮಾರ್ಟ್ ಮೊಬಿಲಿಟಿ ಕಂಪನಿಯು ಎಲೆಕ್ಟ್ರಿಕ್ ವಾಹನಗಳ ಮಾರಾಟ ಹೆಚ್ಚಳಕ್ಕೆ ಪೂರಕವಾಗಿ ಫಾಸ್ಟ್ ಚಾರ್ಜಿಂಗ್ ಸ್ಟೆಷನ್‌ಗಳನ್ನು ತೆರೆಯುತ್ತಿದೆ.

MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

ದೆಹಲಿ ಟು ಮುಂಬೈ ತನಕ ವಾಣಿಜ್ಯ ಎಲೆಕ್ಟ್ರಿಲ್ ವಾಹನ ಪ್ರಯಾಣಕ್ಕೆ ಗ್ರೀನ್ ಸಿಗ್ನಲ್

ಫ್ಲಿಟ್ ಸರ್ವಿಸ್‌ನಲ್ಲಿ ರೆಂಟಲ್ ಕಾರುಗಳು, ಕ್ಯಾಬ್, ಇ-ರಿಕ್ಷಾಗಳಿಗೆ ತ್ವರಿತ ಗತಿಯ ಚಾರ್ಜಿಂಗ್ ಸೌಲಭ್ಯವನ್ನು ನೀಡುವುದು ಹೊಸ ಯೋಜನೆಯ ಪ್ರಮಖ ಉದ್ದೇಶವಾಗಿದ್ದು, ಶೀಘ್ರದಲ್ಲೇ ಹೊಸ ಚಾರ್ಜಿಂಗ್ ಸ್ಟೆಷನ್‌ಗಳಿಗೆ ಚಾಲನೆ ನೀಡಲಿವೆ.

Most Read Articles

Kannada
English summary
BluSmart Mobility Flags Off India’s First All-Electric Travel. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X