ಬಹುನಿರೀಕ್ಷಿತ ಬಿಎಸ್-6 ಮರಾಜೋ ಎಂಪಿವಿಯ ಉತ್ಪಾದನೆಯನ್ನು ಆರಂಭಿಸಿದ ಮಹೀಂದ್ರಾ
ಕರೋನಾ ವೈರಸ್ ಸೋಂಕಿನಿಂದ ಆಟೋಮೊಬೈಲ್ ಕ್ಷೇತ್ರಕ್ಕೆ ದೊಡ್ಡ ಮಟ್ಟದ ಪರಿಣಾಮವನ್ನು ಬೀರಿದೆ. ಆಟೋಮೊಬೈಲ್ ಕ್ಷೇತ್ರಕ್ಕೆ ಸಾವಿರಾರು ಕೋಟಿ ನಷ್ಟಗಳಾಗಿದೆ. ಆದರೆ ಕೆಲವು ದಿನಗಳಿಂದ ಆಟೋಮೊಬೈಲ್ ಕ್ಷೇತ್ರ ನಿಧಾನವಾಗಿ ಚೇತರಿಕೆಯನ್ನು ಕಾಣುತ್ತಿದೆ.

ಕರೋನಾ ವೈರಸ್ ಸೋಂಕಿನಿಂದ ಹಲವು ಜನಪ್ರಿಯ ಕಂಪನಿಗಳು ಹೊಸ ವಾಹನಗಳ ಬಿಡುಗಡೆಯನ್ನು ಮುಂದೂಡಿದರು. ಕರೋನಾ ವೈರಸ್ ಭೀತಿಯ ನಡುವೆ ಹಲವು ಜನಪ್ರಿಯ ಮಾದರಿಗಳು ಬಿಡುಗಡೆಯಾಗಿದೆ. ಇನ್ನು ಮಹೀಂದ್ರಾ ಕಂಪನಿಯು ಬಿಎಸ್-6 ಮರಾಜೋ ಎಂಪಿವಿಯನ್ನು ಶೀಘ್ರದಲ್ಲೇ ಬಿಡುಗಡೆಗೊಳಿಸಲಿದೆ. ಇನ್ನು ಬಿಎಸ್-6 ಮರಾಜೋ ಎಂಪಿವಿಯ ಉತ್ಪಾದನೆಯು ಆರಂಭವಾಗಿದೆ ಎಂದು ವರದಿಗಳಾಗಿದೆ.

ಬಿಎಸ್-6 ಮಹೀಂದ್ರಾ ಮರಾಜೋ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಮಾದರಿಗಳಲ್ಲಿ ಒಂದಾಗಿದೆ. ಇದೀಗ ಬಿಎಸ್-6 ಮರಾಜೋ ಉತ್ಪಾದನೆಯನ್ನು ಆರಂಭಿಸಿರುವುದರಿಂದ ಶೀಘ್ರದಲ್ಲೇ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ.
MOST READ: ಗ್ಲೋಬಲ್ ಎನ್‌ಸಿಎಪಿಯ ಸುರಕ್ಷತಾ ಟೆಸ್ಟ್ನಲ್ಲಿ ಅಗ್ರಸ್ಥಾನಗಳಿಸಿದ ಮಹೀಂದ್ರಾ ಕಾರು

ಬಿಎಸ್-6 ಮಹೀಂದ್ರಾ ಮರಾಜೋ ಎಂಪಿವಿಯನ್ನು ಹಿಂದಿನ ಬಿಎಸ್ 4 ಮಾದರಿಗೆ ಹೋಲಿಸಿದರೆ ಕೆಲವು ಹೊಸ ಫೀಚರ್ ಗಳನ್ನು ಹೊಂದಿರಲಿದೆ. ಹೊಸ ಮರಾಜೋ ಎಂಪಿವಿಯ ಎಂ4 ಪ್ಲಸ್ ರೂಪಾಂತರವು ಬ್ಲೂಟತ್ ಕನೆಕ್ಟಿವಿಟಿ ಹೊಂದಿರುವ ಮ್ಯೂಸಿಕ್ ಸಿಸ್ಟಂ ಮತ್ತು ಅಲಾಯ್ ವ್ಹೀಲ್ ಗಳನ್ನು ಹೊಂದಿರುತ್ತದೆ.

ಹೊಸ ಮಹೀಂದ್ರಾ ಮರಾಜೋ ಎಂಪಿವಿಯು ಆರು ರೂಪಾಂತರಗಳಲ್ಲಿ ಲಭ್ಯವಿರಲಿದೆ. ಬಿಎಸ್-6 ಮಹೀಂದ್ರಾ ಮರಾಜೋ ಎಂಪಿವಿಯಲ್ಲಿ 1.5-ಲೀಟರ್ ಎಂಜಿನ್ ಅನ್ನು ಹೊಂದಿರಲಿದೆ.
MOST READ: ಭಾರತಕ್ಕೆ ಲಗ್ಗೆ ಇಡಲಿದೆ ಹೊಸ ಹೋಂಡಾ ಹೆಚ್‌ಆರ್-ವಿ ಎಸ್‍ಯುವಿ

ಈ ಎಂಜಿನ್ 121 ಬಿಹೆಚ್‍ಪಿ ಪವರ್ ಮತ್ತು 300 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಸ್ಟ್ಯಾಂಡರ್ಡ್ ಆಗಿ 6-ಸ್ಪೀಡ್ ಮ್ಯಾನ್ಯುವಲ್ ಗೇರ್‌ಬಾಕ್ಸ್ ಜೋಡಿಸಲಾಗುತ್ತದೆ. ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ಹೊಂದಿರುವುದಿಲ್ಲ.

ಇದರೊಂದಿಗೆ ಈ ಮರಾಜೋ ಎಂಪಿವಿಯಲ್ಲಿ ಹೊಸ 1.5 ಲೀಟರ್ ಜಿ15 ಟರ್ಬೋ ಎಂಜಿನ್ ಅನ್ನು ಅಳವಡಿಸುವ ಸಾಧ್ಯತೆಗಳಿದೆ. ಈ ಹೊಸ 1.5 ಲೀಟರ್ ಪೆಟ್ರೋಲ್ ಎಂಜಿನ್ 162 ಬಿಹೆಚ್‌ಪಿ ಮತ್ತು 280 ಎನ್ಎಂ ಟಾರ್ಕ್ ಉತ್ಪಾದಿಸಬಹುದು ಎಂದು ನಿರೀಕ್ಷಿಸುತ್ತೇವೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಅನ್ನು ಅಳವಡಿಸುವ ಸಾಧ್ಯತೆಗಳಿದೆ.
MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಬಿಡುಗಡೆಯ ನಂತದ ದಿನಗಳಲ್ಲಿ ನೀಡಬಹುದು. ಹೊಸ ಎಂಜಿನ್ ಆಯ್ಕೆಯಿಂದ ಈ ಮಹೀಂದ್ರಾ ಮರಾಜೋ ಎಂಪಿವಿಗೆ ಮತ್ತಷ್ಟು ಬಲ ಬಂದಂತಾಗುತ್ತದೆ.

ಈ ಹೊಸ ಮಹೀಂದ್ರಾ ಮರಾಜೋ ಎಂಪಿವಿಯಲ್ಲಿ ಹೊಸ ಫೀಚರ್ ಗಳೊಂದಿಗೆ ಒಳಭಾಗದಲ್ಲಿ ಹೆಚ್ಚಿನ ಸ್ಪೇಸ್ ಅನ್ನು ಹೊಂದಿರಲಿದೆ. ಈ ಹೊಸ ಎಂಪಿವಿಯು ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.


Click it and Unblock the Notifications