Just In
Don't Miss!
- News
ಜನಸೇವಕ್ ಸಮಾವೇಶದಲ್ಲಿ ಅಮಿತ್ ಶಾ ಭಾಷಣ; ಮುಖ್ಯಾಂಶಗಳು
- Movies
Bigg Boss Tamil 4: ಅತಿ ಹೆಚ್ಚು ಸಂಭಾವನೆ ಪಡೆದ ಸ್ಪರ್ಧಿಯೇ ವಿಜೇತ!
- Finance
ಸಿಲಿಂಡರ್ ಬುಕ್ ಮಾಡಿದ ಎರಡು ಗಂಟೆಯೊಳಗೆ ಮನೆ ಬಾಗಿಲಿಗೆ ಡೆಲಿವರಿ
- Sports
ಆಸಿಸ್ ಬೌಲರ್ಗಳಿಗೆ ಪಾಂಟಿಂಗ್ ಚಾಟಿ: ಶಾರ್ದೂಲ್- ಸುಂದರ್ ಆಟಕ್ಕೆ ಮೆಚ್ಚುಗೆ
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಲಾಕ್‌ಡೌನ್ ಸಂಕಷ್ಟದ ನಡುವೆಯೂ ವೇತನ ಹೆಚ್ಚಿಸಿದ ಕಾರು ತಯಾರಕ ಕಂಪನಿಗಳು
ಕೋವಿಡ್ -19ನಿಂದಾಗಿ ಅನೇಕ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಇನ್ನೂ ಅನೇಕ ಜನರು ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಕರೋನಾ ಹಾಗೂ ಲಾಕ್‌ಡೌನ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದರೂ ಕಾರು ತಯಾರಕ ಕಂಪನಿಗಳು ತಮ್ಮ ಉದ್ಯೋಗಿಗಳ ಸಂಬಳವನ್ನು ಹೆಚ್ಚಿಸಿವೆ.

ಜೊತೆಗೆ ಕೆಲ ಕಂಪನಿಗಳು ಲಾಕ್‌ಡೌನ್ ಅವಧಿಯಲ್ಲಿಯೂ ಸಂಬಳವನ್ನು ಕಡಿತಗೊಳಿಸಿರಲಿಲ್ಲ. ಇತ್ತೀಚೆಗಷ್ಟೇ ಟೊಯೊಟಾ ಕಿರ್ಲೋಸ್ಕರ್ ಕಂಪನಿಯು ತನ್ನ ನೌಕರರ ವೇತನವನ್ನು ಹೆಚ್ಚಿಸಿದೆ. ಹೋಂಡಾ ಮತ್ತು ರೆನಾಲ್ಟ್ ಕಂಪನಿಗಳ ರೀತಿಯಲ್ಲಿ ಟೊಯೊಟಾ ಕಂಪನಿಯು ನೌಕರರ ವೇತನವನ್ನು 4%ನಿಂದ 14%ವರೆಗೂ ಹೆಚ್ಚಿಸಿದೆ. ಹ್ಯುಂಡೈ ಕಂಪನಿಯು ಸಹ ತನ್ನ ಉತ್ಪಾದನಾ ಘಟಕದ ನೌಕರರ ವೇತನವನ್ನು ಹೆಚ್ಚಿಸಿದ್ದು, ಕಚೇರಿ ಸಿಬ್ಬಂದಿಯ ವೇತನವನ್ನು ಹೆಚ್ಚಿಸುವ ಯೋಜನೆಯಲ್ಲಿದೆ.

ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ, ಫೋರ್ಡ್, ಸ್ಕೋಡಾ, ಫೋಕ್ಸ್‌ವ್ಯಾಗನ್ ಹಾಗೂ ಎಂಜಿ ಮೋಟಾರ್‌ನಂತಹ ಕಂಪನಿಗಳು ತಮ್ಮ ಸಿಬ್ಬಂದಿಯ ನೆರವಿಗೆ ಧಾವಿಸಿವೆ.
MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಕೋವಿಡ್ -19 ಕಾರಣದಿಂದಾಗಿ ಅನೇಕ ಬಿಡಿಭಾಗ ಪೂರೈಕೆದಾರ ಕಂಪನಿಗಳು ತಮ್ಮ ಉದ್ಯೋಗಿಗಳ ವೇತನ ಕಡಿತಗೊಳಿಸಿ, ಉದ್ಯೋಗಿಗಳನ್ನು ವಜಾಗೊಳಿಸಿವೆ. ಆದರೆ ಕಾರು ತಯಾರಕ ಕಂಪನಿಗಳು ತಮ್ಮ ಉದ್ಯೋಗಿಗಳ ನೆರವಿಗೆ ಧಾವಿಸಿವೆ.

ಕಾರ್ಯಾಚರಣೆಯನ್ನು ಪುನರಾರಂಭಿಸಿದ ಸುಮಾರು ಎರಡು ತಿಂಗಳ ನಂತರ 14 ಕಂಪನಿಗಳ ಪೈಕಿ 10 ಕಂಪೆನಿಗಳು ಕಳೆದ ವರ್ಷದ ಬೋನಸ್ ಗಳನ್ನು ನೀಡಿವೆ. ಆರು ಕಂಪನಿಗಳು ಉದ್ಯೋಗಿಗಳಿಗೆ ಬಡ್ತಿ ನೀಡಿವೆ. ಕಂಪನಿಗಳು ಉದ್ಯೋಗಿಗಳಿಗೆ 2-3 ತಿಂಗಳ ಬೋನಸ್ ನೀಡುತ್ತಿವೆ.
MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಆದರೆ ಇತರ ಕಾರು ಕಂಪನಿಗಳಂತೆ ಮಹೀಂದ್ರಾ ಕಂಪನಿಯು ತನ್ನ ಉದ್ಯೋಗಿಗಳಿಗೆ ಬೋನಸ್ ನೀಡುತ್ತಿಲ್ಲ. ಬದಲಿಗೆ ಅವರ ಪರ್ಫಾಮೆನ್ಸ್ ಆಧಾರದ ಮೇಲೆ ವೇತನ ಪಾವತಿಸಲಿದೆ. ಕಂಪನಿಯು ವೇತನವನ್ನು ಹೆಚ್ಚಿಸದಿದ್ದರೂ, ಲಾಕ್‌ಡೌನ್ ಸಮಯದಲ್ಲಿ ಯಾವುದೇ ಉದ್ಯೋಗಿಗಳ ವೇತನವನ್ನು ಕಡಿತಗೊಳಿಸಿರಲಿಲ್ಲ.

ಯಾವುದೇ ಕಾರು ತಯಾರಕ ಕಂಪನಿಯು ಖಾಯಂ ಉದ್ಯೋಗಿಯನ್ನು ಕೆಲಸದಿಂದ ತೆಗೆದುಹಾಕಿಲ್ಲವೆಂದು ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ ಹೇಳಿದೆ. ಮಾರುಕಟ್ಟೆಯು ದಿಢೀರನೆ ಚೇತರಿಸಿಕೊಂಡ ಕಾರಣಕ್ಕೆ ಕಾರು ತಯಾರಕ ಕಂಪನಿಗಳು ತಮ್ಮ ಎಲ್ಲ ಉದ್ಯೋಗಿಗಳಿಗೆ ಸಂಬಳವನ್ನು ಪಾವತಿಸಿವೆ.
MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಕಾರ್ಯಾಚರಣೆ ಪುನರಾರಂಭವಾದ ಎರಡು ತಿಂಗಳಲ್ಲಿ ವಾಹನಗಳ ಮಾರಾಟವು ಈ ಹಿಂದೆಗೆ ಹೋಲಿಸಿದರೆ 85%ನಷ್ಟು ಹೆಚ್ಚಾಗಿದೆ. ಇನ್ನೂ ಸ್ವಲ್ಪ ಪ್ರಮಾಣದ ಆರ್ಥಿಕ ನೆರವು ದೊರೆತರೆ, ಈ ಪ್ರಮಾಣವು ಮತ್ತಷ್ಟು ಹೆಚ್ಚಾಗಲಿದೆ.

ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಮರಳಿರುವುದರಿಂದ ತಾತ್ಕಾಲಿಕವಾಗಿ ಕಾರ್ಮಿಕರ ಕೊರತೆ ಉಂಟಾಗಿದೆ. ಈ ಕಾರಣದಿಂದಾಗಿ ಉತ್ಪಾದನಾ ಘಟಕಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಉತ್ಪಾದನೆಯಾಗುತ್ತಿಲ್ಲ. ಕಾರು ತಯಾರಕ ಕಂಪನಿಗಳು ವಲಸೆ ಕಾರ್ಮಿಕರನ್ನು ಮರಳಿ ಕರೆ ತರಲು ಪ್ರಯತ್ನಿಸುತ್ತಿವೆ.