ಕರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ಕೈಜೋಡಿಸಿದ ಖ್ಯಾತ ಆಯಿಲ್ ತಯಾರಕ ಕಂಪನಿ

ದೇಶಾದ್ಯಂತ ಇದುವರೆಗೂ 24ಸಾವಿರಕ್ಕೂ ಹೆಚ್ಚು ಜನ ಕರೋನಾ ವೈರಸ್ ಸೋಂಕಿಗೆ ಒಳಗಾಗಿದ್ದಾರೆ. ಪ್ರತಿದಿನ ಹೊಸ ಪ್ರಕರಣಗಳು ದಾಖಲಾಗುತ್ತಲೇ ಇವೆ. ಈ ವೈರಸ್‌ನಿಂದಾಗಿ ಭಾರತದಲ್ಲಿ ಈವರೆಗೆ 775 ಜನರು ಸಾವನ್ನಪ್ಪಿದ್ದಾರೆ.

ಕರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ಕೈಜೋಡಿಸಿದ ಖ್ಯಾತ ಆಯಿಲ್ ತಯಾರಕ ಕಂಪನಿ

ಈ ಮಹಾಮಾರಿ ವೈರಸ್ ಸೋಂಕು ಹರಡದಂತೆ ತಡೆಯಲು ದೇಶಾದ್ಯಂತ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಇದರ ಜೊತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಕ್ರಮಗಳನ್ನು ಕೈಗೊಳ್ಳುತ್ತಿವೆ. ಸೋಂಕಿತರಿಗೆ ಚಿಕಿತ್ಸೆ ನೀಡಲು ಸಾವಿರಾರು ವೈದ್ಯರು ಹಾಗೂ ಆರೋಗ್ಯ ಕಾರ್ಯಕರ್ತರು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ಲಾಕ್‌ಡೌನ್‌ನಿಂದಾಗಿ ಸಾವಿರಾರು ಜನರು ಬೇರೆ ಊರುಗಳಲ್ಲಿ ಸಿಲುಕಿಕೊಂಡಿದ್ದಾರೆ.

ಕರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ಕೈಜೋಡಿಸಿದ ಖ್ಯಾತ ಆಯಿಲ್ ತಯಾರಕ ಕಂಪನಿ

ಈ ಪರಿಸ್ಥಿತಿಯಲ್ಲಿ, ವೈದ್ಯರು, ಆರೋಗ್ಯ ಕಾರ್ಯಕರ್ತರು ಹಾಗೂ ಅಸಹಾಯಕರಿಗೆ ಅನೇಕ ವಾಹನ ತಯಾರಕ ಕಂಪನಿಗಳು ನೆರವಾಗುತ್ತಿವೆ. ಈಗ ಎಂಜಿನ್ ಆಯಿಲ್ ತಯಾರಕ ಕಂಪನಿಯಾದ ಕ್ಯಾಸ್ಟ್ರಲ್ ಸಹ ಕರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಕರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ಕೈಜೋಡಿಸಿದ ಖ್ಯಾತ ಆಯಿಲ್ ತಯಾರಕ ಕಂಪನಿ

ಅಗತ್ಯವಿರುವವರಿಗೆ ಸಹಾಯ ಮಾಡುವ ಉದ್ದೇಶದಿಂದ ಕ್ಯಾಸ್ಟ್ರಲ್ ವಿವಿಧ ಎನ್‌ಜಿಒಗಳ ಜೊತೆಗೆ ಕೈಜೋಡಿಸಿದೆ. ಈ ಎನ್‌ಜಿಒಗಳ ಸಹಾಯದಿಂದ ಕ್ಯಾಸ್ಟ್ರಲ್ ಅನೇಕ ರಾಜ್ಯಗಳಲ್ಲಿರುವ ಸರ್ಕಾರಿ ಆಸ್ಪತ್ರೆಗಳಿಗೆ ಎಮರ್ಜೆನ್ಸಿ ಉಪಕರಣಗಳನ್ನು ಸರಬರಾಜು ಮಾಡಿದೆ.

ಕರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ಕೈಜೋಡಿಸಿದ ಖ್ಯಾತ ಆಯಿಲ್ ತಯಾರಕ ಕಂಪನಿ

ಇವುಗಳಲ್ಲಿ ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಉತ್ತರ ಪ್ರದೇಶ, ತಮಿಳುನಾಡು, ದೆಹಲಿ, ಛತ್ತೀಸ್‌ಗಢ ಹಾಗೂ ಹರಿಯಾಣ ರಾಜ್ಯಗಳು ಸೇರಿವೆ. ಇದರೊಂದಿಗೆ ಕಂಪನಿಯು ಅಗತ್ಯವಿರುವವರಿಗೆ ಪಡಿತರ ಸಾಮಗ್ರಿಯನ್ನು ವಿತರಿಸಿದೆ. ಇದರ ಜೊತೆಗೆ ಕ್ಯಾಸ್ಟ್ರಲ್ ಕಂಪನಿಯು ಅನೇಕ ಸಾರಿಗೆ ಕೇಂದ್ರಗಳಲ್ಲಿ ಟ್ರಕ್ ಚಾಲಕರಿಗೆ ಆಹಾರವನ್ನು ನೀಡಿದೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಕರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ಕೈಜೋಡಿಸಿದ ಖ್ಯಾತ ಆಯಿಲ್ ತಯಾರಕ ಕಂಪನಿ

ಟ್ರಕ್ ಚಾಲಕರು ಹಾಗೂ ಕಾರ್ಮಿಕರಿಗೆ ನೆರವಾಗಲು ಕ್ಯಾಸ್ಟ್ರಲ್ ಕಂಪನಿಯು ಔಟ್ ರೀಚ್ ಕಾರ್ಯಕ್ರಮವನ್ನು ಆರಂಭಿಸುತ್ತಿದೆ. ಈ ಕಾರ್ಯಕ್ರಮದಡಿಯಲ್ಲಿ, ಟ್ರಕ್ ಚಾಲಕರು ಹಾಗೂ ಕಾರ್ಮಿಕರಿಗೆ ಕರೋನಾ ವೈರಸ್ ಸಂಬಂಧಿತ ಚಿಕಿತ್ಸಾಗಳಿಗೆ ಭಾಗಶಃ ವೆಚ್ಚವನ್ನು ಭರಿಸಲಿದೆ.

ಕರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ಕೈಜೋಡಿಸಿದ ಖ್ಯಾತ ಆಯಿಲ್ ತಯಾರಕ ಕಂಪನಿ

ಹೀರೋ ಮೊಟೊಕಾರ್ಪ್, ಬಜಾಜ್ ಆಟೋ, ಹೋಂಡಾ ಮೋಟಾರ್‌ಸೈಕಲ್, ಪಿಯಾಜಿಯೊ, ಟಿವಿಎಸ್ ಇಂಡಿಯಾ ಹಾಗೂ ಇನ್ನಿತರ ದ್ವಿಚಕ್ರ ವಾಹನ ತಯಾರಕ ಕಂಪನಿಗಳು ಕರೋನಾದ ಈ ಸಂಕಷ್ಟದ ಸಮಯದಲ್ಲಿ ಜನರಿಗೆ ತಮ್ಮದೇ ಆದ ರೀತಿಯಲ್ಲಿ ಸಹಾಯ ಮಾಡುತ್ತಿವೆ.

Article Published On: Saturday, April 25, 2020, 17:59 [IST]
English summary
Castrol India offers relief measures in support of fight against Covid 19 pandemic. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+