ಬಸ್ಸುಗಳಲ್ಲಿ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಕಡ್ಡಾಯಗೊಳಿಸಲು ಮುಂದಾದ ಕೇಂದ್ರ ಸರ್ಕಾರ

ಸಾರಿಗೆ ವಾಹನಗಳಲ್ಲಿ ಮಾಲಿನ್ಯ ಹಾಗೂ ಸುರಕ್ಷತಾ ಕ್ರಮಗಳಿಗೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ಮಾನದಂಡಗಳನ್ನು ಜಾರಿಗೆ ತರಲು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಇಲಾಖೆಯು ಚಿಂತನೆ ನಡೆಸಿದೆ.

ಬಸ್ಸುಗಳಲ್ಲಿ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಕಡ್ಡಾಯಗೊಳಿಸಲು ಮುಂದಾದ ಕೇಂದ್ರ ಸರ್ಕಾರ

ಈ ಹಿನ್ನೆಲೆಯಲ್ಲಿ ಸರ್ಕಾರವು ಬಸ್ಸುಗಳಲ್ಲಿ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ಇಎಸ್ ಸಿ) ಹಾಗೂ ಬ್ರೇಕ್ ಅಸಿಸ್ಟ್ ಸಿಸ್ಟಂ ಫೀಚರ್ ಗಳನ್ನು ಕಡ್ಡಾಯಗೊಳಿಸಲಿದೆ. ಬಸ್‌ಗಳಲ್ಲಿ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಅಳವಡಿಸುವ ಕುರಿತು ಕಳೆದ ವರ್ಷವೇ ಅಧಿಸೂಚನೆಯನ್ನು ಹೊರಡಿಸಲಾಗಿತ್ತು. ಈ ನಿಯಮವನ್ನು ಏಪ್ರಿಲ್ 2023ರೊಳಗೆ ದೇಶಾದ್ಯಂತ ಜಾರಿಗೆ ತರಲಾಗುವುದು ಎಂದು ಹೇಳಲಾಗಿದೆ. ಇದಲ್ಲದೆ ಸರ್ಕಾರವು ಟಯರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ ಅಳವಡಿಸುವ ಕುರಿತು ಚಂತನೆ ನಡೆಸುತ್ತಿದೆ.

ಬಸ್ಸುಗಳಲ್ಲಿ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಕಡ್ಡಾಯಗೊಳಿಸಲು ಮುಂದಾದ ಕೇಂದ್ರ ಸರ್ಕಾರ

2020ರ ಅಕ್ಟೋಬರ್ ವೇಳೆಗೆ ಸರ್ಕಾರವು ಕೆಲವು ವರ್ಗದ ವಾಹನಗಳಲ್ಲಿ ಟಯರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂಗಳನ್ನು ಕಡ್ಡಾಯಗೊಳಿಸಲಿದೆ. ವಾಹನಗಳ ಗಾತ್ರ, ನಿರ್ಮಾಣ, ವಾಹನಗಳ ಸುರಕ್ಷತೆ, ಸೈಡ್ ಸ್ಟ್ಯಾಂಡ್, ದ್ವಿ ಚಕ್ರ ವಾಹನಗಳಲ್ಲಿ ಫುಟ್ ರೆಸ್ಟ್ ಅಳವಡಿಕೆ ಕುರಿತು ಅಧಿಸೂಚನೆಯನ್ನು ಹೊರಡಿಸಲಾಗಿದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಬಸ್ಸುಗಳಲ್ಲಿ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಕಡ್ಡಾಯಗೊಳಿಸಲು ಮುಂದಾದ ಕೇಂದ್ರ ಸರ್ಕಾರ

ಕೇಂದ್ರ ಸರ್ಕಾರವು ಈಗಾಗಲೇ ಹಲವು ರೀತಿಯ ವಾಹನಗಳಲ್ಲಿ ಕೆಲವು ಸುರಕ್ಷತಾ ಮಾನದಂಡಗಳನ್ನು ಕಡ್ಡಾಯಗೊಳಿಸಿದೆ. ಈ ಸುರಕ್ಷತಾ ಮಾನದಂಡಗಳಲ್ಲಿ ಎಬಿಎಸ್, ಇಬಿಡಿ, ಏರ್‌ಬ್ಯಾಗ್, ಸ್ಪೀಡ್ ಅಲರ್ಟ್ ಸಿಸ್ಟಂ, ರಿವರ್ಸ್ ಪಾರ್ಕಿಂಗ್ ಅಸಿಸ್ಟ್ ಗಳು ಸೇರಿವೆ.

ಬಸ್ಸುಗಳಲ್ಲಿ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಕಡ್ಡಾಯಗೊಳಿಸಲು ಮುಂದಾದ ಕೇಂದ್ರ ಸರ್ಕಾರ

ದೇಶಿಯ ಉತ್ಪಾದನೆಯನ್ನು ಹೆಚ್ಚಿಸಲು ಸರ್ಕಾರವು ಆಮದು ಮಾಡಿಕೊಳ್ಳುವ ಕಾರುಗಳ ಮೇಲಿನ ಆಮದು ಸುಂಕವನ್ನು ಹಂತಹಂತವಾಗಿ ಹೆಚ್ಚಿಸಲಿರುವ ಅಂಶವು ಇತ್ತೀಚೆಗೆ ಬಹಿರಂಗವಾಗಿದೆ. ಕೇಂದ್ರ ಸರ್ಕಾರವು ಮುಂದಿನ 5 ವರ್ಷಗಳಲ್ಲಿ ಆಮದು ಪ್ರಮಾಣವನ್ನು ಅರ್ಧಕ್ಕೆ ಇಳಿಸುವ ಗುರಿಯನ್ನು ಹೊಂದಿದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಬಸ್ಸುಗಳಲ್ಲಿ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಕಡ್ಡಾಯಗೊಳಿಸಲು ಮುಂದಾದ ಕೇಂದ್ರ ಸರ್ಕಾರ

ಮಾಹಿತಿಗಳ ಪ್ರಕಾರ ದೇಶದ ಆಟೋ ಮೊಬೈಲ್ ವಲಯವು ವಾರ್ಷಿಕವಾಗಿ 13.7 ಬಿಲಿಯನ್ ಡಾಲರ್ ಅಂದರೆ ರೂ.10,03,47,29,40,000 ಮೌಲ್ಯದ ಉಪಕರಣಗಳು ಮತ್ತು ಕಾರ್ ಕಿಟ್‌ಗಳನ್ನು ಆಮದು ಮಾಡಿಕೊಳ್ಳುತ್ತದೆ. ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾದ ಪವರ್ ಗೋಯೆಂಕಾ ಈ ಬಗ್ಗೆ ಮಾಹಿತಿ ನೀಡಿದ್ದರು.

ಬಸ್ಸುಗಳಲ್ಲಿ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಕಡ್ಡಾಯಗೊಳಿಸಲು ಮುಂದಾದ ಕೇಂದ್ರ ಸರ್ಕಾರ

ಇದಲ್ಲದೆ, ಇತ್ತೀಚೆಗೆ ಕರೋನಾ ಅವಧಿಯಲ್ಲಿ ವಾಹನ ಉದ್ಯಮಕ್ಕೆ ಪರಿಹಾರ ನೀಡಲು ಭಾರತ ಸರ್ಕಾರವು ವಾಹನಗಳ ಜಿಎಸ್ ಟಿ ದರವನ್ನು ಕಡಿಮೆ ಮಾಡುವ ಬಗ್ಗೆಯೂ ಮಾತುಕತೆ ನಡೆದಿತ್ತು. ಎಲ್ಲಾ ರೀತಿಯ ವಾಹನಗಳ ಮೇಲಿನ ಜಿಎಸ್‌ಟಿಯನ್ನು 10%ನಷ್ಟು ಕಡಿಮೆಗೊಳಿಸುವ ಬೇಡಿಕೆಯನ್ನು ಸರ್ಕಾರವು ಪರಿಗಣಿಸುತ್ತಿದೆ ಎಂದು ಭಾರಿ ಕೈಗಾರಿಕಾ ಸಚಿವ ಪ್ರಕಾಶ್ ಜಾವಡೇಕರ್ ಇತ್ತೀಚೆಗೆ ಹೇಳಿದ್ದರು.

Most Read Articles

Kannada
English summary
Central government to mandate ESC for buses. Read in Kannada.
Story first published: Monday, September 14, 2020, 17:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X