ಭಾರತದಲ್ಲಿ ಮೊದಲ ಬಾರಿಗೆ ಕಂಪ್ಯಾಕ್ಟ್ ಎಸ್‌ಯುವಿ ರೋಡ್ ಟೆಸ್ಟಿಂಗ್ ನಡೆಸಿದ ಸಿಟ್ರನ್
ಸಿಟ್ರನ್ ಕಂಪನಿಯು ತನ್ನ ಸಿ5 ಏರ್‌ಕ್ರಾಸ್ ಎಸ್‌ಯುವಿ ಮಾದರಿಯನ್ನು ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆಗೊಳಿಸಲು ಅಂತಿಮ ಹಂತದ ಸಿದ್ದತೆ ನಡೆಸುತ್ತಿದ್ದು, ಮಾತೃಸಂಸ್ಥೆಯಾದ ಪಿಎಸ್ಎ ಗ್ರೂಪ್ ಜೊತೆಗೂಡಿ ಟ್ರಯಲ್ ವರ್ಷನ್ ಉತ್ಪಾದನಾ ಪ್ರಕ್ರಿಯೆಗೆ ಚಾಲನೆ ನೀಡಿರುವುದಲ್ಲದೇ ವಿವಿಧ ಕಾರುಗಳ ರೋಡ್ ಟೆಸ್ಟಿಂಗ್ ಪ್ರಕ್ರಿಯೆಯನ್ನು ಸಹ ಆರಂಭಿಸಿದೆ.

ಪಿಎಸ್ಎ ಗ್ರೂಪ್‌ನ ಸಿಟ್ರನ್ ಕಂಪನಿಯು ಭಾರತದಲ್ಲಿ 2021ಕ್ಕೆ ಹೊಸ ಕಾರು ಮಾರಾಟವನ್ನು ಅಧಿಕೃತವಾಗಿ ಆರಂಭಿಸಲು ಸಿದ್ದತೆ ನಡೆಸಿದ್ದು, ಸಿಟ್ರನ್ ಬಿಡುಗಡೆ ಮಾಡುವ ಕಾರುಗಳಲ್ಲಿ ಕಂಪ್ಯಾಕ್ಟ್ ಎಸ್‌ಯುವಿ ಕೂಡಾ ಪ್ರಮುಖ ಕಾರು ಮಾದರಿಯಾಗಿದೆ. ಗ್ರಾಹಕರ ಬೇಡಿಕೆಯೆಂತೆ ವಿವಿಧ ಮಾದರಿಯ ಹ್ಯಾಚ್‌ಬ್ಯಾಕ್, ಸೆಡಾನ್, ಎಸ್‌ಯುವಿ ಮತ್ತು ಎಂಪಿವಿ ಕಾರುಗಳನ್ನು ಬಿಡುಗಡೆಗೆ ಸಿದ್ದವಾಗಿರುವ ಫ್ರೆಂಚ್ ಮೂಲದ ಸಿಟ್ರನ್ ಕಂಪನಿಯು ಮೊದಲ ಹಂತದಲ್ಲಿ ಎಸ್‌ಯುವಿ ಮಾದರಿಯನ್ನು ನಂತರದಲ್ಲಿ ಕಂಪ್ಯಾಕ್ಟ್ ಎಸ್‌ಯುವಿ ಕಾರನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಹೊಸ ಕಂಪ್ಯಾಕ್ಟ್ ಎಸ್‌ಯುವಿ ಕಾರು ಸದ್ಯಕ್ಕೆ ಭಾರತದಲ್ಲಿ ಸಿ21 ಎನ್ನುವ ಕೋಡ್‌ನೊಂದಿಗೆ ರೋಡ್ ಟೆಸ್ಟಿಂಗ್ ನಡೆಸುತ್ತಿದ್ದು, ಮಾರುತಿ ಸುಜುಕಿ ವಿಟಾರಾ ಬ್ರೆಝಾ, ಕಿಯಾ ಸೊನೆಟ್, ಮಹೀಂದ್ರಾ ಎಕ್ಸ್‌ಯುವಿ300 ಮತ್ತು ಟಾಟಾ ನೆಕ್ಸಾನ್ ಕಾರು ಮಾದರಿಗಳಿಗೆ ಪೈಪೋಟಿ ನೀಡಲಿದೆ.

ಸಿ21 ಕಾರಿನ ಉತ್ಪಾದನಾ ಆವೃತ್ತಿಯೊಂದಿಗೆ ರೋಡ್ ಟೆಸ್ಟಿಂಗ್ ನಡೆಸುತ್ತಿರುವುದು ಕಂಡುಬಂದಿದ್ದು, ಹೊಸ ಕಾರು ಭಾರತೀಯ ರಸ್ತೆಗಳಿಗೆ ಅನುಗುಣವಾಗಿ ಅಭಿವೃದ್ದಿಗೊಳ್ಳುತ್ತಿದೆ. ಹೊಸ ಕಂಪ್ಯಾಕ್ಟ್ ಕಾರು ಈಗಾಗಲೇ ಯುರೋಪಿನ ಪ್ರಮುಖ ಮಾರುಕಟ್ಟೆಗಳಲ್ಲಿ ವಿವಿಧ ಹೆಸರಿನೊಂದಿಗೆ ಮಾರಾಟವಾಗುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ಸಾಮಾನ್ಯ ಕಾರು ಮಾದರಿಯ ಜೊತೆಗೆ ಎಲೆಕ್ಟ್ರಿಕ್ ಆವೃತ್ತಿಯನ್ನು ಸಹ ಪಡೆದುಕೊಂಡಿದೆ.

ಎಲೆಕ್ಟ್ರಿಕ್ ಆವೃತ್ತಿಯು ಸಿ3 ಸ್ಟೋರ್ಟಿ ಹೆಸರಿನೊಂದಿಗೆ ಬಿಡುಗಡೆಗೊಂಡಿದ್ದು, ಅದೇ ಕಾರು ಇದೀಗ ಭಾರತದಲ್ಲೂ ಸಿ3 ಸ್ಪೋರ್ಟಿ ಹೆಸರಿನೊಂದಿಗೆ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಸದ್ಯ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಯಲ್ಲಿ ಮಾತ್ರವೇ ಖರೀದಿಗೆ ಲಭ್ಯವಿರಲಿದ್ದು, ಎಲೆಕ್ಟ್ರಿಕ್ ಆವೃತ್ತಿಯು ತದನಂತರದಲ್ಲಿ ಬಿಡುಗಡೆಯಾಗಲಿದೆ.

ಸಿ21 ಕಾರು ಮಾದರಿಯು ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ಹಲವಾರು ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದ್ದು, ಹೊಸ ಕಾರು ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಲಿದೆ.
MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಬಹುತೇಕ ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳು ಆರಂಭಿಕವಾಗಿ ರೂ.6.50 ಲಕ್ಷದಿಂದ ಟಾಪ್ ಮಾದರಿಗಳು ರೂ. 12ಸಿ3 ಏರ್‌ಕ್ರಾಸ್ ಕಾರು 1.2-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಪಡೆದುಕೊಳ್ಳುವ ಸಾಧ್ಯತೆಗಳಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.8 ಲಕ್ಷದಿಂದ ರೂ.12 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಲಿದೆ.

ಸಿ3 ಏರ್‌ಕ್ರಾಸ್ ಕಾರು 1.2-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಪಡೆದುಕೊಳ್ಳುವ ಸಾಧ್ಯತೆಗಳಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.8 ಲಕ್ಷದಿಂದ ರೂ.12 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಲಿದೆ.
MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ದೇಶಿಯ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಸಿಟ್ರನ್ ಹೊಸ ಕಾರುಗಳು ಮಹತ್ವದ ಬದಲಾಣೆಗಳೊಂದಿಗೆ ಅಭಿವೃದ್ದಿಗೊಳ್ಳಲಿದ್ದು, ಸಿ5 ಏರ್‌ಕ್ರಾಸ್ ಕಾರು ಕಿಯಾ ಸೆಲ್ಟೊಸ್, ಟಾಟಾ ಹ್ಯಾರಿಯರ್, ಜೀಪ್ ಕಂಪಾಸ್ ಕಾರುಗಳಿಗೆ ಸರಿಸಮನಾದ ತಾಂತ್ರಿಕ ಅಂಶಗಳೊಂದಿಗೆ ಬಿಡುಗಡೆಯಾಗಲಿದ್ದರೆ ಸಿ3 ಏರ್‌ಕ್ರಾಸ್ ಕಾರು ಮಾರುತಿ ಸುಜುಕಿ ಬ್ರೆಝಾ, ಹ್ಯುಂಡೈ ವೆನ್ಯೂ, ಟಾಟಾ ನೆಕ್ಸಾನ್ ಮತ್ತು ಮಹೀಂದ್ರಾ ಎಕ್ಸ್‌ಯುವಿ300 ಕಾರುಗಳಿಗೆ ಪೈಪೋಟಿ ನೀಡಲಿದೆ.


Click it and Unblock the Notifications








