ಸಿ5 ಏರ್‌ಕ್ರಾಸ್ ನಂತರ ಬಿಡುಗಡೆಗೆ ಸಜ್ಜಾದ ಸಿಟ್ರನ್ ಸಿ3 ಸ್ಪೋರ್ಟಿ ಕಾರು

ಪಿಎಸ್ಎ ಗ್ರೂಪ್‌ನ ಸಿಟ್ರನ್ ಕಂಪನಿಯು ಭಾರತದಲ್ಲಿ 2021ಕ್ಕೆ ಹೊಸ ಕಾರು ಮಾರಾಟವನ್ನು ಅಧಿಕೃತವಾಗಿ ಆರಂಭಿಸಲು ಸಿದ್ದತೆ ನಡೆಸಿದ್ದು, ಸಿಟ್ರನ್ ಬಿಡುಗಡೆ ಮಾಡುವ ಕಾರುಗಳಲ್ಲಿ ಕಂಪ್ಯಾಕ್ಟ್ ಎಸ್‌ಯುವಿ ಕೂಡಾ ಪ್ರಮುಖ ಕಾರು ಮಾದರಿಯಾಗಿದೆ.

ಸಿ5 ಏರ್‌ಕ್ರಾಸ್ ನಂತರ ಬಿಡುಗಡೆಗೆ ಸಜ್ಜಾದ ಸಿಟ್ರನ್ ಸಿ3 ಸ್ಪೋರ್ಟಿ

ಗ್ರಾಹಕರ ಬೇಡಿಕೆಯೆಂತೆ ವಿವಿಧ ಮಾದರಿಯ ಹ್ಯಾಚ್‌ಬ್ಯಾಕ್, ಸೆಡಾನ್, ಎಸ್‌‌ಯುವಿ ಮತ್ತು ಎಂಪಿವಿ ಕಾರುಗಳನ್ನು ಬಿಡುಗಡೆಗೆ ಸಿದ್ದವಾಗಿರುವ ಫ್ರೆಂಚ್ ಮೂಲದ ಸಿಟ್ರನ್ ಕಂಪನಿಯು ಮೊದಲ ಹಂತದಲ್ಲಿ ಎಸ್‌ಯುವಿ ಮಾದರಿಯನ್ನು ನಂತರದಲ್ಲಿ ಕಂಪ್ಯಾಕ್ಟ್ ಎಸ್‌ಯುವಿ ಕಾರನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದ್ದು, ಹೊಸ ಕಂಪ್ಯಾಕ್ಟ್ ಎಸ್‌ಯುವಿ ಕಾರನ್ನು ಸದ್ಯಕ್ಕೆ ಭಾರತದಲ್ಲಿ ಸಿ21 ಎನ್ನುವ ಕೋಡ್‌ನೊಂದಿಗೆ ರೋಡ್ ಟೆಸ್ಟಿಂಗ್ ನಡೆಸಲಾಗುತ್ತಿದೆ.

ಸಿ5 ಏರ್‌ಕ್ರಾಸ್ ನಂತರ ಬಿಡುಗಡೆಗೆ ಸಜ್ಜಾದ ಸಿಟ್ರನ್ ಸಿ3 ಸ್ಪೋರ್ಟಿ

ಪುಣೆ ಹೊರಭಾಗದಲ್ಲಿ ಸಿ21 ಕಾರಿನ ಉತ್ಪಾದನಾ ಆವೃತ್ತಿಯೊಂದಿಗೆ ರೋಡ್ ಟೆಸ್ಟಿಂಗ್ ನಡೆಸುತ್ತಿರುವುದು ಕಂಡುಬಂದಿದ್ದು, ಹೊಸ ಕಾರು ಭಾರತೀಯ ರಸ್ತೆಗಳಿಗೆ ಅನುಗುಣವಾಗಿ ಅಭಿವೃದ್ದಿಗೊಳಿಸಲಾಗುತ್ತಿದೆ.

ಸಿ5 ಏರ್‌ಕ್ರಾಸ್ ನಂತರ ಬಿಡುಗಡೆಗೆ ಸಜ್ಜಾದ ಸಿಟ್ರನ್ ಸಿ3 ಸ್ಪೋರ್ಟಿ

ಹೊಸ ಕಂಪ್ಯಾಕ್ಟ್ ಕಾರು ಈಗಾಗಲೇ ಯುರೋಪಿನ ಪ್ರಮುಖ ಮಾರುಕಟ್ಟೆಗಳಲ್ಲಿ ವಿವಿಧ ಹೆಸರಿನೊಂದಿಗೆ ಮಾರಾಟವಾಗುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ಸಾಮಾನ್ಯ ಕಾರು ಮಾದರಿಯ ಜೊತೆಗೆ ಎಲೆಕ್ಟ್ರಿಕ್ ಆವೃತ್ತಿಯನ್ನು ಸಹ ಪಡೆದುಕೊಂಡಿದೆ.

ಸಿ5 ಏರ್‌ಕ್ರಾಸ್ ನಂತರ ಬಿಡುಗಡೆಗೆ ಸಜ್ಜಾದ ಸಿಟ್ರನ್ ಸಿ3 ಸ್ಪೋರ್ಟಿ

ಎಲೆಕ್ಟ್ರಿಕ್ ಆವೃತ್ತಿಯು ಸಿ3 ಸ್ಟೋರ್ಟಿ ಹೆಸರಿನೊಂದಿಗೆ ಬಿಡುಗಡೆಗೊಂಡಿದ್ದು, ಅದೇ ಕಾರು ಇದೀಗ ಭಾರತದಲ್ಲೂ ಸಿ3 ಸ್ಪೋರ್ಟಿ ಹೆಸರಿನೊಂದಿಗೆ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಸದ್ಯ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಯಲ್ಲಿ ಮಾತ್ರವೇ ಖರೀದಿಗೆ ಲಭ್ಯವಿರಲಿದ್ದು, ಎಲೆಕ್ಟ್ರಿಕ್ ಆವೃತ್ತಿಯು ತದನಂತರದಲ್ಲಿ ಬಿಡುಗಡೆಯಾಗಲಿದೆ.

ಸಿ5 ಏರ್‌ಕ್ರಾಸ್ ನಂತರ ಬಿಡುಗಡೆಗೆ ಸಜ್ಜಾದ ಸಿಟ್ರನ್ ಸಿ3 ಸ್ಪೋರ್ಟಿ

ಸಿ21 ಕಾರು ಮಾದರಿಯು ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ಹಲವಾರು ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದ್ದು, ಹೊಸ ಕಾರು ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಲಿದೆ.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಸಿ5 ಏರ್‌ಕ್ರಾಸ್ ನಂತರ ಬಿಡುಗಡೆಗೆ ಸಜ್ಜಾದ ಸಿಟ್ರನ್ ಸಿ3 ಸ್ಪೋರ್ಟಿ

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಬಹುತೇಕ ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳು ಆರಂಭಿಕವಾಗಿ ರೂ.6.50 ಲಕ್ಷದಿಂದ ಟಾಪ್ ಮಾದರಿಗಳು ರೂ. 12 ಲಕ್ಷ ಬೆಲೆ ಅಂತರದಲ್ಲಿ ಮಾರಾಟವಾಗುತ್ತಿದ್ದು, ಇದನ್ನೇ ಪ್ರಧಾನವಾಗಿಟ್ಟುಕೊಂಡಿರುವ ಸಿಟ್ರನ್ ಕಂಪನಿಯು ಅಂತರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯವಾಗಿರುವ ಸಿ3 ಏರ್‌ಕ್ರಾಸ್ ಕಾರನ್ನು ಭಾರತದಲ್ಲಿ ಬದಲಿ ಹೆಸರಿನೊಂದಿಗೆ ಬಿಡುಗಡೆ ಮಾಡುತ್ತಿದೆ.

ಸಿ5 ಏರ್‌ಕ್ರಾಸ್ ನಂತರ ಬಿಡುಗಡೆಗೆ ಸಜ್ಜಾದ ಸಿಟ್ರನ್ ಸಿ3 ಸ್ಪೋರ್ಟಿ

ಸಿ3 ಏರ್‌ಕ್ರಾಸ್ ಕಾರು 1.2-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಪಡೆದುಕೊಳ್ಳುವ ಸಾಧ್ಯತೆಗಳಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.8 ಲಕ್ಷದಿಂದ ರೂ.12 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಲಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಸಿ5 ಏರ್‌ಕ್ರಾಸ್ ನಂತರ ಬಿಡುಗಡೆಗೆ ಸಜ್ಜಾದ ಸಿಟ್ರನ್ ಸಿ3 ಸ್ಪೋರ್ಟಿ

ದೇಶಿಯ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಸಿಟ್ರನ್ ಹೊಸ ಕಾರುಗಳು ಮಹತ್ವದ ಬದಲಾಣೆಗಳೊಂದಿಗೆ ಅಭಿವೃದ್ದಿಗೊಳ್ಳಲಿದ್ದು, ಸಿ5 ಏರ್‌ಕ್ರಾಸ್ ಕಾರು ಕಿಯಾ ಸೆಲ್ಟೊಸ್, ಟಾಟಾ ಹ್ಯಾರಿಯರ್, ಜೀಪ್ ಕಂಪಾಸ್ ಕಾರುಗಳಿಗೆ ಸರಿಸಮನಾದ ತಾಂತ್ರಿಕ ಅಂಶಗಳೊಂದಿಗೆ ಬಿಡುಗಡೆಯಾಗಲಿದ್ದರೆ ಸಿ3 ಏರ್‌ಕ್ರಾಸ್ ಕಾರು ಮಾರುತಿ ಸುಜುಕಿ ಬ್ರೆಝಾ, ಹ್ಯುಂಡೈ ವೆನ್ಯೂ, ಟಾಟಾ ನೆಕ್ಸಾನ್ ಮತ್ತು ಮಹೀಂದ್ರಾ ಎಕ್ಸ್‌ಯುವಿ300 ಕಾರುಗಳಿಗೆ ಪೈಪೋಟಿ ನೀಡಲಿದೆ.

More from DriveSpark

Article Published On: Friday, August 28, 2020, 18:41 [IST]
English summary
Citroen C3 Sporty Spotted Testing. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+