ಫೆಬ್ರವರಿ ತಿಂಗಳ ಕಾರು ಮಾರಾಟದಲ್ಲಿ ಹ್ಯುಂಡೈ ವೆನ್ಯೂಗೆ ಅಗ್ರಸ್ಥಾನ

ಫೆಬ್ರವರಿ ತಿಂಗಳ ಕಾಂಪ್ಯಾಕ್ಟ್ ಎಸ್‌ಯುವಿಗಳ ಮಾರಾಟದಲ್ಲಿ ಹ್ಯುಂಡೈ ಕಂಪನಿಯ ವೆನ್ಯೂ ಅಗ್ರ ಸ್ಥಾನದಲ್ಲಿ ಮುಂದುವರೆದಿದೆ. ಈ ಸೆಗ್‍‍ಮೆಂಟ್ ಭಾರತದಲ್ಲಿ ನಿಧಾನವಾಗಿ ಬೆಳೆಯುತ್ತಿದೆ. ಹ್ಯುಂಡೈ ವೆನ್ಯೂ ಒಂದು ಲಕ್ಷಕ್ಕೂ ಹೆಚ್ಚು ಬುಕ್ಕಿಂಗ್‍‍ಗಳನ್ನು ಹೊಂದುವ ಮೂಲಕ ಮೊದಲ ಸ್ಥಾನದಲ್ಲಿದೆ.

ಫೆಬ್ರವರಿ ತಿಂಗಳ ಕಾರು ಮಾರಾಟದಲ್ಲಿ ಹ್ಯುಂಡೈ ವೆನ್ಯೂಗೆ ಅಗ್ರಸ್ಥಾನ

2020ರ ಫೆಬ್ರವರಿಯಲ್ಲಿ ಹ್ಯುಂಡೈ ವೆನ್ಯೂವಿನ 10,321 ಯುನಿಟ್‌ಗಳು ಮಾರಾಟವಾಗಿವೆ. ಕಂಪನಿಯು ಈ ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಕೆಲವೇ ತಿಂಗಳುಗಳ ಹಿಂದೆ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಈಗ ವೆನ್ಯೂವಿನ ಬುಕ್ಕಿಂಗ್ 1 ಲಕ್ಷದ ಗಡಿ ದಾಟಿದೆ.

ಫೆಬ್ರವರಿ ತಿಂಗಳ ಕಾರು ಮಾರಾಟದಲ್ಲಿ ಹ್ಯುಂಡೈ ವೆನ್ಯೂಗೆ ಅಗ್ರಸ್ಥಾನ

ಈ ಹಿಂದೆ ಈ ಸೆಗ್‍‍ಮೆಂಟಿನಲ್ಲಿ ಅಗ್ರಸ್ಥಾನದಲ್ಲಿದ್ದ ಮಾರುತಿ ಸುಜುಕಿ ಕಂಪನಿಯ ಬ್ರೆಝಾ ಎರಡನೇ ಸ್ಥಾನಕ್ಕೆ ಕುಸಿದಿದೆ. ಮಾರುತಿ ವಿಟಾರಾ ಬ್ರೆಝಾವನ್ನು ಇತ್ತೀಚೆಗೆ ಬಿಎಸ್ 6 ಎಂಜಿನ್‍‍ನೊಂದಿಗೆ ಅಪ್‍‍ಗ್ರೇಡ್ ಮಾಡಲಾಗಿದೆ. ಆದರೂ ಈ ಎಸ್‍‍ಯುವಿಯ ಮಾರಾಟವು ಹೆಚ್ಚಾಗಿಲ್ಲ.

ಫೆಬ್ರವರಿ ತಿಂಗಳ ಕಾರು ಮಾರಾಟದಲ್ಲಿ ಹ್ಯುಂಡೈ ವೆನ್ಯೂಗೆ ಅಗ್ರಸ್ಥಾನ

ಫೆಬ್ರವರಿ ತಿಂಗಳಿನಲ್ಲಿ ಮಾರುತಿ ಸುಜುಕಿ ಬ್ರೆಝಾದ 6866 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. 2019ರ ಫೆಬ್ರವರಿಯಲ್ಲಿ 11,613 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಮೂರನೇ ಸ್ಥಾನದಲ್ಲಿರುವ ಟಾಟಾ ನೆಕ್ಸಾನ್‍‍ನ 3894 ಯುನಿಟ್‍‍ಗಳನ್ನು ಫೆಬ್ರವರಿ ತಿಂಗಳಿನಲ್ಲಿ ಮಾರಾಟ ಮಾಡಲಾಗಿದೆ.

Rank Sub 4m SUV February 2020 February 2019 Difference (in percentage)
1 Hyundai Venue 10,321 0 10,321 (-)
2 Maruti Brezza 6,866 11,613 -4,747 (-40.88%)
3 Tata Nexon 3,894 5,263 -1,369 (-26.01%)
4 Ford EcoSport 3,713 3,156 557 (17.65%)
5 Mahindra XUV300 2,431 4,484 -2,053 (-45.79%)
6 Mahindra TUV300 944 1,057 -113 (-10.69%)
7 Honda WRV 0 2,278 -2,278 (-100.00%)
Total 28,169 27,851 318 (1.14%)
ಫೆಬ್ರವರಿ ತಿಂಗಳ ಕಾರು ಮಾರಾಟದಲ್ಲಿ ಹ್ಯುಂಡೈ ವೆನ್ಯೂಗೆ ಅಗ್ರಸ್ಥಾನ

ಫೋರ್ಡ್ ಇಕೋಸ್ಪೋರ್ಟ್ ನಾಲ್ಕನೇ ಸ್ಥಾನದಲ್ಲಿದ್ದು, ಫೆಬ್ರವರಿಯಲ್ಲಿ 3713 ಯುನಿಟ್‍‍ಗಳನ್ನು ಮಾರಾಟ ಮಾಡಲಾಗಿದೆ. ಬೇರೆ ವಾಹನಗಳಿಗೆ ಹೋಲಿಸಿದರೆ ಫೋರ್ಡ್ ಇಕೋಸ್ಪೋರ್ಟ್‍‍ನ ಮಾರಾಟದಲ್ಲಿ 17.65 ಯುನಿಟ್‍‍ಗಳು ಹೆಚ್ಚು ಮಾರಾಟವಾಗಿವೆ.

ಫೆಬ್ರವರಿ ತಿಂಗಳ ಕಾರು ಮಾರಾಟದಲ್ಲಿ ಹ್ಯುಂಡೈ ವೆನ್ಯೂಗೆ ಅಗ್ರಸ್ಥಾನ

ಇನ್ನು ಮಹೀಂದ್ರಾ ಕಾರುಗಳ ಬಗ್ಗೆ ಹೇಳುವುದಾದರೆ, ಎಕ್ಸ್‌ಯುವಿ 300 ಹಾಗೂ ಟಿಯುವಿ 300ಗಳು ಫೆಬ್ರವರಿ ತಿಂಗಳಿನಲ್ಲಿ ಕ್ರಮವಾಗಿ 2431 ಮತ್ತು 944 ಯುನಿಟ್‌ಗಳಷ್ಟು ಮಾರಾಟವಾಗಿವೆ. ಈ ಮೂಲಕ ಎರಡೂ ಮಾದರಿಗಳು ಮಾರಾಟದಲ್ಲಿ ಕುಸಿತವನ್ನು ದಾಖಲಿಸಿವೆ.

ಫೆಬ್ರವರಿ ತಿಂಗಳ ಕಾರು ಮಾರಾಟದಲ್ಲಿ ಹ್ಯುಂಡೈ ವೆನ್ಯೂಗೆ ಅಗ್ರಸ್ಥಾನ

ಈ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಹೋಂಡಾ ಡಬ್ಲ್ಯುಆರ್-ವಿ ಕಾಂಪ್ಯಾಕ್ಟ್ ಎಸ್‌ಯುವಿಯ ಒಂದೇ ಒಂದು ಯುನಿಟ್ ಸಹ ಮಾರಾಟವಾಗಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮಾರಾಟದಲ್ಲಿ ಭಾರಿ ಕುಸಿತ ಕಂಡುಬಂದಿದೆ.

ಫೆಬ್ರವರಿ ತಿಂಗಳ ಕಾರು ಮಾರಾಟದಲ್ಲಿ ಹ್ಯುಂಡೈ ವೆನ್ಯೂಗೆ ಅಗ್ರಸ್ಥಾನ

ಕಿಯಾ ಮೋಟಾರ್ಸ್ ಮುಂಬರುವ ದಿನಗಳಲ್ಲಿ ಸೊನೆಟ್ ಕಾರಿನ ಬಿಡುಗಡೆಯೊಂದಿಗೆ ಈ ಸೆಗ್‍‍ಮೆಂಟಿಗೆ ಕಾಲಿಡಲಿದೆ. ಬ್ರೆಝಾ ಹಾಗೂ ವೆನ್ಯೂ ಎಸ್‍‍ಯುವಿಗಳು ಬಿಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಯಾಗಿದ್ದು, ಮುಂಬರುವ ದಿನಗಳಲ್ಲಿ ಎಷ್ಟರ ಮಟ್ಟಿಗೆ ಪರಿಣಾಮ ಉಂಟಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

More from DriveSpark

Article Published On: Sunday, March 8, 2020, 11:00 [IST]
English summary
Compact SUV sales February month's details. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+