ವೈರಸ್ ಭೀತಿ: ಕ್ಯಾಬ್‌ಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಹೊಸ ಪ್ಲ್ಯಾನ್
ಕರೋನಾ ವೈರಸ್ ಹರಡುವಿಕೆಯನ್ನು ತಡೆಯಲು ಸಾಮಾಜಿಕ ಅಂತರವು ಪ್ರಮುಖ ಮುನ್ನೆಚ್ಚರಿಕೆ ಕ್ರಮ ಎನ್ನುವುದರಲ್ಲಿ ಎರಡು ಮಾತಿಲ್ಲ. ಜನದಟ್ಟಣೆಯಾಗುವ ಪ್ರತಿ ಸ್ಥಳದಲ್ಲೂ ಇದೀಗ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೇ ಪ್ರಮುಖ ಸವಾಲಾಗಿದೆ.

ಇಡೀ ವಿಶ್ವವೇ ಇದೀಗ ಮಹಾಮಾರಿ ಕರೋನಾ ವೈರಸ್ ಅಟ್ಟಹಾಸಕ್ಕೆ ನಲುಗಿ ಹೋಗಿದ್ದು, ವೈರಸ್ ತಡೆಗಾಗಿ ಹಲವಾರು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಕರೋನಾ ವೈರಸ್‌ಗೆ ಸೂಕ್ತವಾದ ಔಷಧಿಗಳಿಲ್ಲದಿರುವುದು ಸಾಕಷ್ಟು ಸಾವು-ನೋವಿಗೆ ಕಾರಣವಾಗಿದ್ದು, ವೈರಸ್ ಹರಡುವಿಕೆಯನ್ನು ತಡೆಯುವುದಕ್ಕಾಗಿ ಸದ್ಯಕ್ಕೆ ಸಾಮಾಜಿಕ ಅಂತರ ಕಾಯ್ದಕೊಳ್ಳುತ್ತಿದ್ದಕ್ಕಿಂತ ಮತ್ತೊಂದು ಉತ್ತಮ ಮುಂಜಾಗ್ರತೆ ಇಲ್ಲ ಎನ್ನಬಹುದು.

ತರಕಾರಿ ಖರೀದಿಯಿಂದ ಹಿಡಿದು ಸಾರಿಗೆ ವ್ಯವಸ್ಥೆಯ ಬಳಕೆಯ ತನಕವು ಇದೀಗ ಸಾಮಾಜಿಕ ಅಂತರ ಕಾಯ್ದಕೊಳ್ಳುವುದರ ಬಗೆಗೆ ಹೆಚ್ಚು ಗಮನಹರಿಸಲಾಗುತ್ತಿದ್ದು, ಇಲ್ಲೊಬ್ಬ ಕ್ಯಾಬ್ ಮಾಲೀಕನು ಹೊಸ ಸುರಕ್ಷಾ ಕ್ರಮದೊಂದಿಗೆ ಪ್ರಯಾಣಿಕರಿಗೆ ಸೇವೆ ನೀಡಲು ಸಿದ್ದವಾಗಿರುವುದು ಗಮನಸೆಳೆದಿದೆ.

ಲಾಕ್‌ಡೌನ್‌ದಿಂದ ಭಾರೀ ಆರ್ಥಿಕ ಸಂಕಷ್ಟದಲ್ಲಿರುವ ಕ್ಯಾಬ್ ಚಾಲಕರಿಗೆ ವೈರಸ್ ಭೀತಿಯು ಮತ್ತಷ್ಟು ಕಂಗಾಲಾಗುವಂತೆ ಮಾಡಿದ್ದು, ಹೊಸ ಸುರಕ್ಷಾ ಕ್ರಮಗಳೊಂದಿಗೆ ಕ್ಯಾಬ್ ಚಾಲನೆ ಸಿಕ್ಕಲೂ ಯಾವುದೇ ಗರಿಷ್ಠ ಸುರಕ್ಷಾ ಕ್ರಮಗಳಿಲ್ಲ.

ಕೆಲವು ಕಡೆಗಳಲ್ಲಿ ಕ್ಯಾಬ್ ಕಂಪನಿಗಳು ಕಾರಿನ ಒಳಭಾಗದಲ್ಲಿ ಪ್ರಯಾಣಿಕರು ಮತ್ತು ಚಾಲಕರ ನಡುವಿನ ನೇರ ಸಂಪರ್ಕ್ ತಪ್ಪಿಸುವುದಕ್ಕಾಗಿ ಮಧ್ಯಭಾಗದಲ್ಲಿ ಫೈಬರ್ ಗ್ಲಾಸ್ ಜೋಡಣೆ ಮಾಡುತ್ತಿದ್ದು, ಇನ್ನು ಕೆಲವು ಕಡೆಗಳಲ್ಲಿ ಸ್ವಂತ ಖರ್ಚಿನಲ್ಲೇ ಪಿಪಿಇ ಕಿಟ್ ಬಳಕೆ ಮಾಡಲಾಗುತ್ತಿದೆ.
MOST READ: ಸ್ಕ್ರ್ಯಾಪಿಂಗ್ ನೀತಿ ಜಾರಿಗೆ ಅಂತಿಮ ಸಿದ್ದತೆ- ಆಟೋ ಉದ್ಯಮದಲ್ಲಿ ಹೊಸ ಸಂಚಲನ..

ಹೀಗಿರುವಾಗ ಇಲ್ಲೊಬ್ಬ ಕ್ಯಾಬ್ ಮಾಲೀಕ ಕೂಡಾ ಚಾಲಕ ಮತ್ತು ಪ್ರಯಾಣಿಕರು ಮಧ್ಯೆ ಮತ್ರವಲ್ಲದೆ ಹಿಂಬದಿಯಲ್ಲಿ ಕೂರುವ ಪ್ರಯಾಣಿಕ ನಡುವೆಯೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಪರದೆ ಜೋಡಣೆ ಮಾಡಿಸಿದ್ದಾರೆ.

ಕೊಯಮುತ್ತೂರು ಮೂಲದ ಕಾರು ಮಾಲೀಕ ಈ ರೀತಿಯಾಗಿ ಪರದೆ ಜೋಡಣೆ ಮಾಡಿಸಿದ್ದು, ಹೊಸ ಸೌಲಭ್ಯ ಅಳವಡಿಸಿಕೊಳ್ಳಲು ರೂ.1,500 ಖರ್ಚು ಮಾಡಿದ್ದಾರೆ ಎನ್ನುವುದು ಪ್ರಮುಖ ವಿಚಾರವಾಗಿದೆ.
MOST READ: ಕಾರು ಖರೀದಿ ಮಾಡುವ ಕರೋನಾ ವಾರಿಯರ್ಸ್‌ಗೆ ಭರ್ಜರಿ ಆಫರ್ ನೀಡಿದ ಟಾಟಾ

ವೈರಸ್ ಭೀತಿ ಹಿನ್ನಲೆಯಲ್ಲಿ ಗ್ರಾಹಕರಿಗೆ ಗರಿಷ್ಠ ಸುರಕ್ಷಾ ಮಾರ್ಗಗಳ ಮೂಲಕ ಆದಾಯ ಗಳಿಕೆಯು ಇದೀಗ ದೊಡ್ಡ ಸವಾಲಾಗಿದ್ದು, ಪರದೆ ಮಾತ್ರವಲ್ಲದೆ ನಂಜು ನಿರೋಧಕ ರಸಾಯನಿಕಗಳನ್ನು ಸಿಂಪರಣೆ ಮಾಡುವುದು ಮತ್ತು ಥರ್ಮಾ ಟೆಸ್ಟಿಂಗ್ ಕೂಡಾ ಮಾಡಿ ಕ್ಯಾಬ್ ಸೇವೆಗಳನ್ನು ನೀಡಲಾಗುತ್ತಿದೆ.


Click it and Unblock the Notifications