ಕರೋನಾ ವೈರಸ್: ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡಿದ ಓಲಾ

ಕರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಕ್ಯಾಬ್ ಸೇವಾ ಕಂಪನಿಯಾದ ಓಲಾ ಮತ್ತೊಂದು ಮಹತ್ವದ ಹೆಜ್ಜೆಯನ್ನಿಟ್ಟಿದೆ. ಕರೋನಾ ವೈರಸ್ ಮಹಾಮಾರಿ ವಿರುದ್ಧ ಹೋರಾಡಲು ಓಲಾ ಗ್ರೂಪ್ ತಮಿಳುನಾಡು ರಾಜ್ಯಕ್ಕೆ ನೆರವು ನೀಡಿದೆ. ಕಳೆದ ತಿಂಗಳು ಓಲಾ ಗ್ರೂಪ್ ಪ್ರಧಾನಮಂತ್ರಿ ಪರಿಹಾರ ನಿಧಿಗೆ 5 ಕೋಟಿ ರೂಪಾಯಿಗಳನ್ನು ದೇಣಿಗೆ ನೀಡಿತ್ತು.

ಕರೋನಾ ವೈರಸ್: ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡಿದ ಓಲಾ

ಈ ಮೊದಲು ಓಲಾ ಗ್ರೂಪ್ ವಿವಿಧ ರಾಜ್ಯಗಳ ಮುಖ್ಯಮಂತ್ರಿ ಪರಿಹಾರ ನಿಧಿಗೆ ರೂ.3 ಕೋಟಿ ದೇಣಿಗೆ ನೀಡಿತ್ತು. ಈಗ ಕರೋನಾ ವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಓಲಾ ಕಂಪನಿ ಮತ್ತೊಮ್ಮೆ 50 ಲಕ್ಷ ರೂಪಾಯಿಗಳನ್ನು ತಮಿಳುನಾಡು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಿದೆ.

ಕರೋನಾ ವೈರಸ್: ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡಿದ ಓಲಾ

ಈ ಹಣವು ಆರೋಗ್ಯ ಇಲಾಖೆಯ ಪರಿಹಾರ ಕಾರ್ಯಗಳಿಗೆ ನೆರವು ನೀಡುವುದರ ಜೊತೆಗೆ ರಾಜ್ಯದ ಆರ್ಥಿಕ ವ್ಯವಸ್ಥೆಗೂ ಅನುಕೂಲ ನೀಡಲಿದೆಯೆಂದು ಓಲಾ ಕಂಪನಿ ಹೇಳಿದೆ. ಈ ಮಾಹಿತಿಯನ್ನು ಓಲಾ ಗ್ರೂಪ್‌ನ ಸಿಇಒ ಹಾಗೂ ಸಹ ಸಂಸ್ಥಾಪಕರಾದ ಭಾವೀಶ್ ಅಗರ್‌ವಾಲ್ ನೀಡಿದ್ದಾರೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಕರೋನಾ ವೈರಸ್: ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡಿದ ಓಲಾ

ಈ ಬಗ್ಗೆ ಮಾತನಾಡಿರುವ ಅವರು ನಾವು ನಮ್ಮ ಕಾಲದ ಅತಿದೊಡ್ಡ ಮಾನವೀಯ ಬಿಕ್ಕಟ್ಟನ್ನು ಎದುರಿಸುತ್ತಿದ್ದೇವೆ. ಈ ಮಹಾಮಾರಿ ವೈರಸ್‌ನಿಂದ ಬಳಲುತ್ತಿರುವ ಎಲ್ಲಾ ರಾಜ್ಯಗಳು, ಸಮುದಾಯಗಳು ಹಾಗೂ ಜನರಿಗೆ ಸಹಾಯ ಮಾಡಲು ಓಲಾ ಗುಂಪು ಯಾವಾಗಲೂ ಬದ್ಧವಾಗಿದೆ ಎಂದು ಹೇಳಿದ್ದಾರೆ.

ಕರೋನಾ ವೈರಸ್: ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡಿದ ಓಲಾ

ಕರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ನಾವು ಒಟ್ಟಾಗಿ ಕೆಲಸ ಮಾಡುತ್ತಿರುವುದರಿಂದ ನಾವು ತಮಿಳುನಾಡು ರಾಜ್ಯಕ್ಕೆ ನಮ್ಮ ನೆರವನ್ನು ನೀಡಿದ್ದೇವೆ. ಈ ಸಂಕಷ್ಟದ ಸಮಯದಲ್ಲಿ ಕೆಲಸ ಮಾಡುತ್ತಿರುವವರಿಗೆ ನಾವು ಆಭಾರಿಯಾಗಿದ್ದೇವೆ ಎಂದು ಅವರು ಹೇಳಿದರು.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಕರೋನಾ ವೈರಸ್: ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡಿದ ಓಲಾ

ಓಲಾ ಫೌಂಡೇಶನ್ ಲಾಕ್‌ಡೌನ್ ಅವಧಿಯಲ್ಲಿ ತನ್ನ ಚಾಲಕ-ಪಾಲುದಾರರಿಗೆ ನೆರವಾಗಲು ಡ್ರೈವ್ ದಿ ಡ್ರೈವರ್ ಫಂಡ್ ಎಂಬ ಹೆಸರಿನ ಕ್ರೌಡ್‌ಸೋರ್ಸಿಂಗ್ ಯೋಜನೆಯನ್ನು ಸಹ ಆರಂಭಿಸಿದೆ.

ಕರೋನಾ ವೈರಸ್: ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡಿದ ಓಲಾ

ಓಲಾ ಗ್ರೂಪ್‌ನ ನೌಕರರು ಈ ನಿಧಿಗೆ ರೂ.20 ಕೋಟಿ ದೇಣಿಗೆ ನೀಡಿದ್ದರು. ಇದರ ಜೊತೆಗೆ ಕಂಪನಿಯ ಸಿಇಒ ಭಾವೀಶ್ ಅಗರ್‌ವಾಲ್‌ರವರು ತಮ್ಮ ಒಂದು ವರ್ಷದ ವೇತನವನ್ನು ಈ ನಿಧಿಗೆ ನೀಡಿದ್ದಾರೆ. ಓಲಾ ಕಂಪನಿಯು 100 ಗ್ರೀನ್ ಝೋನ್ ಹಾಗೂ ಆರೆಂಜ್ ಝೋನ್‌ಗಳಲ್ಲಿ ತನ್ನ ಸೇವೆಗಳನ್ನು ಆರಂಭಿಸಿದೆ.

Article Published On: Monday, May 11, 2020, 17:38 [IST]
English summary
Ola donates Rs.50 lakh to Tamilnadu CM relief fund. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+