ವಿನೂತನ ವಿನ್ಯಾಸದೊಂದಿಗೆ ದಟ್ಸನ್ ರೆಡಿ-ಗೊ ಫೇಸ್‌ಲಿಫ್ಟ್ ಬಿಡುಗಡೆ

ದಟ್ಸನ್ ಇಂಡಿಯಾ ಕಂಪನಿಯು ತನ್ನ ಜನಪ್ರಿಯ ಎಂಟ್ರಿ ಲೆವಲ್ ಹ್ಯಾಚ್‌ಬ್ಯಾಕ್ ಮಾದರಿಯಾದ ರೆಡಿ-ಗೊ ನವೀಕೃತ ಆವೃತ್ತಿಯನ್ನು ಬಿಡುಗಡೆಗೊಳಿಸಿದ್ದು, ಗ್ರಾಹಕರ ಬೇಡಿಕೆಯೆಂತೆ ಹೊಸ ಕಾರು ಪ್ರಮುಖ ಆರು ವೆರಿಯೆಂಟ್‌ಗಳಲ್ಲಿ ಖರೀದಿ ಲಭ್ಯವಿದೆ.

ವಿನೂತನ ವಿನ್ಯಾಸದೊಂದಿಗೆ ದಟ್ಸನ್ ರೆಡಿ-ಗೊ ಫೇಸ್‌ಲಿಫ್ಟ್ ಬಿಡುಗಡೆ

ರೆಡಿ-ಗೊ ಫೇಸ್‌ಲಿಫ್ಟ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ 2.83 ಲಕ್ಷ ಬೆಲೆ ಹೊಂದಿದ್ದು, ಟಾಪ್ ಎಂಡ್ ಮಾದರಿಯು ರೂ. 4.77ಲಕ್ಷ ಬೆಲೆ ಹೊಂದಿದೆ. ಈ ಹಿಂದಿನಂತೆ ಹೊಸ ಕಾರಿನಲ್ಲಿ ಎರಡು ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ನೀಡಲಾಗಿದ್ದು, ಹೊಸ ಎಂಜಿನ್ ಅನ್ನು ಏಪ್ರಿಲ್ 1ರಿಂದ ಕಡ್ಡಾಯವಾಗಿ ಜಾರಿಗೆ ಬಂದಿರುವ ಬಿಎಸ್-6 ಎಮಿಷನ್‌ಗೆ ಅನುಗುಣವಾಗಿ ಉನ್ನತೀಕರಿಸಲಾಗಿದೆ.

ವಿನೂತನ ವಿನ್ಯಾಸದೊಂದಿಗೆ ದಟ್ಸನ್ ರೆಡಿ-ಗೊ ಫೇಸ್‌ಲಿಫ್ಟ್ ಬಿಡುಗಡೆ

ಹೊಸ ರೆಡಿ-ಗೊ ಕಾರಿನಲ್ಲಿ 800 ಸಿಸಿ ಮತ್ತು 1.0-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಗಳಿದ್ದು, ಬೆಸ್ ವೆರಿಯೆಂಟ್‌ನಲ್ಲಿ ಡಿ, ಎ, ಟಿ, ಟಿ(ಆಪ್ಷನ್) ಮತ್ತು ಟಾಪ್ ಎಂಡ್ ವೆರಿಯೆಂಟ್‌ನಲ್ಲಿ ಟಿ(ಆಪ್ಷನ್), ಟಿ(ಆಪ್ಷನ್ ಎಟಿ) ಮಾದರಿಗಳನ್ನು ಹೊಂದಿದೆ.

ವಿನೂತನ ವಿನ್ಯಾಸದೊಂದಿಗೆ ದಟ್ಸನ್ ರೆಡಿ-ಗೊ ಫೇಸ್‌ಲಿಫ್ಟ್ ಬಿಡುಗಡೆ

ಆಪ್ಷನ್ ಕಾರು ಮಾದರಿಗಳಲ್ಲಿ ಗ್ರಾಹಕರ ತಮ್ಮ ಬೇಡಿಕೆಗೆ ಅನುಗುಣವಾಗಿ ತಾಂತ್ರಿಕ ಅಂಶಗಳನ್ನು ಬದಲಾವಣೆಗೊಳಿಸಬಹುದಾಗಿದ್ದು, ಬೆಸ್ ವೆರಿಯೆಂಟ್‌ಗಳಲ್ಲಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು ಟಾಪ್ ಎಂಡ್ ವೆರಿಯೆಂಟ್‌ಗಳಲ್ಲಿ ಎಎಂಟಿ ಗೇರ್‌ಬಾಕ್ಸ್ ಆಯ್ಕೆ ನೀಡಲಾಗಿದೆ.

ವಿನೂತನ ವಿನ್ಯಾಸದೊಂದಿಗೆ ದಟ್ಸನ್ ರೆಡಿ-ಗೊ ಫೇಸ್‌ಲಿಫ್ಟ್ ಬಿಡುಗಡೆ

ಎಂಜಿನ್ ಪರ್ಫಾಮೆನ್ಸ್

ಹೊಸ ಕಾರಿನಲ್ಲಿ ನೀಡಲಾಗಿರುವ 800 ಸಿಸಿ ಪೆಟ್ರೋಲ್ ಮಾದರಿಯು 54-ಬಿಎಚ್‌ಪಿ, 71-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದ್ದರೆ 1.0-ಲೀಟರ್(999ಸಿಸಿ) ಪೆಟ್ರೋಲ್ ಎಂಜಿನ್ ಮಾದರಿಯು 67-ಬಿಎಚ್‌ಪಿ, 91-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

MOST READ: ಸ್ಕ್ರ್ಯಾಪಿಂಗ್ ನೀತಿ ಜಾರಿಗೆ ಅಂತಿಮ ಸಿದ್ದತೆ- ಆಟೋ ಉದ್ಯಮದಲ್ಲಿ ಹೊಸ ಸಂಚಲನ..

ವಿನೂತನ ವಿನ್ಯಾಸದೊಂದಿಗೆ ದಟ್ಸನ್ ರೆಡಿ-ಗೊ ಫೇಸ್‌ಲಿಫ್ಟ್ ಬಿಡುಗಡೆ

ಇನ್ನು ಹೊಸ ಕಾರಿನಲ್ಲಿ ಹಲವಾರು ಹೊಸ ಮಾದರಿಯ ವಿನ್ಯಾಸಗಳನ್ನು ನೀಡಲಾಗಿದ್ದು, ಒಕ್ಟಾಗೊನಲ್ ಗ್ರಿಲ್, ಶೇಫರ್ ಸೆಟ್ ಹೆಡ್‌ಲ್ಯಾಂಪ್, ಎಲ್ ಶೇಫ್ ಎಲ್‌ಇಡಿ ಡಿಆರ್‌ಎಸ್, ಎಲ್‌ಇಡಿ ಫಾಗ್ ಲ್ಯಾಂಪ್, ಸ್ಪೋಟಿ ವಿನ್ಯಾಸದ ಡ್ಯುಯಲ್ ಟೋನ್ ವೀಲ್ಹ್ ಕವರ್, 187-ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಮತ್ತು ಎಲ್‌ಇಡಿ ಟೈಲ್‌ಲೈಟ್ ಸೌಲಭ್ಯವನ್ನು ಪಡೆದುಕೊಂಡಿದೆ.

ವಿನೂತನ ವಿನ್ಯಾಸದೊಂದಿಗೆ ದಟ್ಸನ್ ರೆಡಿ-ಗೊ ಫೇಸ್‌ಲಿಫ್ಟ್ ಬಿಡುಗಡೆ

ಹಾಗೆಯೇ ಕಾರಿನ ಒಳಭಾಗದಲ್ಲೂ ಹಲವಾರು ಹೊಸ ಫೀಚರ್ಸ್‌ಗಳನ್ನು ನೀಡಲಾಗಿದ್ದು, ಡ್ಯುಯಲ್ ಟೋನ್ ಡ್ಯಾಶ್‌ಬೋರ್ಡ್, 8-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್, ಆ್ಯಪಲ್ ಕಾರ್ ಪ್ಲೇ, ಆಂಡ್ರಾಯಿಡ್ ಆಟೋ, ಸಿಲ್ವರ್ ಆಕ್ಸೆಂಟ್, ಡ್ಯುಯಲ್ ಟೋನ್ ಸೀಟ್, ಮರುವಿನ್ಯಾಸಗೊಳಿಸಿದ ಸೆಂಟ್ರಲ್ ಕನ್ಸೊಲ್ ಜೋಡಿಸಲಾಗಿದೆ.

MOST READ: ಕಾರು ಖರೀದಿ ಮಾಡುವ ಕರೋನಾ ವಾರಿಯರ್ಸ್‌ಗೆ ಭರ್ಜರಿ ಆಫರ್ ನೀಡಿದ ಟಾಟಾ

ವಿನೂತನ ವಿನ್ಯಾಸದೊಂದಿಗೆ ದಟ್ಸನ್ ರೆಡಿ-ಗೊ ಫೇಸ್‌ಲಿಫ್ಟ್ ಬಿಡುಗಡೆ

ಪ್ರಯಾಣಿಕ ಸುರಕ್ಷತೆಗಾಗಿ ಹೊಸ ಕಾರಿನಲ್ಲಿ ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಸ್ಪೀಡ್ ಸೆನ್ಸಾರ್, ಸೀಟ್ ಬೆಲ್ಟ್ ರಿಮೆಂಡರ್, ರಿಯರ್ ಪಾರ್ಕಿಂಗ್ ಸೆನ್ಸಾರ್, ರಿಯರ್ ಪಾರ್ಕಿಂಗ್ ಕ್ಯಾಮೆರಾ, ಸೆಂಟ್ರಲ್ ಲಾಕಿಂಗ್ ಮತ್ತು ಲೋಡ್ ಲಿಮಿಟ್ ಅಲರ್ಟ್ ಸೌಲಭ್ಯಗಳನ್ನು ಹೊಂದಿದೆ.

More from DriveSpark

Article Published On: Thursday, May 28, 2020, 21:34 [IST]
English summary
2020 Datsun Redi-GO Facelift Launched In India. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+