ಎಲೆಕ್ಟ್ರಿಕ್ ವಾಹನ ನೀತಿ ಜಾರಿ ಮಾಡಿರುವ ದೆಹಲಿ ಸರ್ಕಾರದಿಂದ ಸಬ್ಸಡಿ ವಿತರಣೆಗೆ ಸಿದ್ದತೆ

ದೇಶದಲ್ಲಿ ಮೊದಲ ಬಾರಿಗೆ ಎಲೆಕ್ಟ್ರಿಕ್ ವಾಹನ ನೀತಿ ಜಾರಿ ಮಾಡಿರುವ ಹೆಗ್ಗಳಿಕೆ ಕಾರಣವಾಗಿರುವ ದೆಹಲಿ ಸರ್ಕಾರವು ಇವಿ ವಾಹನ ಖರೀದಿದಾರರಿಗೆ ಗರಿಷ್ಠ ಸಬ್ಸಡಿ ನೀಡುವ ಯೋಜನೆ ಹೊಂದಿದ್ದು, ಹೊಸ ಯೋಜನೆ ಪೂರಕವಾಗಿ ಸಬ್ಸಡಿ ವಿತರಣೆಗೆ ಇದೀಗ ಅಂತಿಮ ಹಂತದ ಸಿದ್ದತೆ ನಡೆಸುತ್ತಿದೆ.

ಇವಿ ನೀತಿ ಜಾರಿ ಮಾಡಿರುವ ದೆಹಲಿ ಸರ್ಕಾರದಿಂದ ಸಬ್ಸಡಿ ವಿತರಣೆ

ಸರ್ಕಾರದ ನೀತಿಗಳಿಗೆ ಅನುಗುಣವಾಗಿ ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಸಬ್ಸಡಿ ಒದಗಿಸಲಿರುವ ದೆಹಲಿ ಸರ್ಕಾರವು ಮಾಲಿನ್ಯ ಮುಕ್ತವಾಗಿಸಿ ಆರ್ಥಿಕ ಅಭಿವೃದ್ದಿ ಹೊಂದಿರುವ ಗುರಿಹೊಂದಿದ್ದು, ಇವಿ ಖರೀದಿದಾರರ ಬ್ಯಾಂಕ್ ಖಾತೆಗೆ ಸಬ್ಸಡಿ ಹಣವನ್ನು ನೇರವಾಗಿ ಜಮಾಮಾಡುವುದಾಗಿ ಹೇಳಿದೆ. ಹೊಸ ಇವಿ ನೀತಿ ಅಡಿ ದ್ವಿಚಕ್ರ, ತ್ರಿ ಚಕ್ರ ಮತ್ತು ಎಲೆಕ್ಟ್ರಿಕ್ ವಾಹನಗಳಿಗೆ ಗರಿಷ್ಠ ಸಬ್ಸಡಿ ನೀಡುತ್ತಿರುವ ದೆಹಲಿ ಸರ್ಕಾರವು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಫೇಮ್ 2 ಯೋಜನೆ ಹೊರತುಪಡಿಸಿ ಹೆಚ್ಚುವರಿಯಾಗಿ ಸಬ್ಸಡಿ ನೀಡುತ್ತಿದೆ.

ಇವಿ ನೀತಿ ಜಾರಿ ಮಾಡಿರುವ ದೆಹಲಿ ಸರ್ಕಾರದಿಂದ ಸಬ್ಸಡಿ ವಿತರಣೆ

ದೆಹಲಿ ಸರ್ಕಾರವು ಎಲೆಕ್ಟ್ರಿಕ್ ದ್ವಿಚಕ್ರ, ತ್ರಿ ಚಕ್ರ ವಾಹನಗಳಿಗೆ ಗರಿಷ್ಠ ರೂ.30 ಸಾವಿರ ಮತ್ತು ಎಲೆಕ್ಟ್ರಿಕ್ ಕಾರು ಖರೀದಿದಾರರಿಗೆ ಗರಿಷ್ಠ 1.50 ಲಕ್ಷದ ತನಕ ಸಬ್ಸಡಿ ನೀಡುತ್ತಿದ್ದು, ಕೇಂದ್ರ ಸರ್ಕಾರವು FAME 2.0 ನೀತಿ ಅಡಿ ನೀಡಲಾಗುತ್ತಿರುವ ಸಬ್ಸಡಿಗಿಂತಲೂ ಇದು ಹೆಚ್ಚು.

ಇವಿ ನೀತಿ ಜಾರಿ ಮಾಡಿರುವ ದೆಹಲಿ ಸರ್ಕಾರದಿಂದ ಸಬ್ಸಡಿ ವಿತರಣೆ

ಇದು ಮಾಲಿನ್ಯದಿಂದಾಗಿ ಕಳೆಗಟ್ಟಿರುವ ದೆಹಲಿ ಚಿತ್ರಣವನ್ನು ಬದಲಾಯಿಸಲು ಸಾಕಷ್ಟು ಸಹಕಾರಿಯಾಗಲಿದ್ದು, ಮುಂದಿನ ಮೂರು ವರ್ಷಗಳ ತನಕ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವ ಗ್ರಾಹಕರಿಗೆ ಸಬ್ಸಡಿ ಲಭ್ಯವಾಗಲಿದೆ.

ಇವಿ ನೀತಿ ಜಾರಿ ಮಾಡಿರುವ ದೆಹಲಿ ಸರ್ಕಾರದಿಂದ ಸಬ್ಸಡಿ ವಿತರಣೆ

ಸಬ್ಸಡಿ ಬಯಸುವ ಗ್ರಾಹಕರು ಎಲೆಕ್ಟ್ರಿಕ್ ವಾಹನ ಖರೀದಿ ನಂತರ ಸಾರಿಗೆ ಇಲಾಖೆಯಲ್ಲಿ ನೋಂದಣಿ ಮಾಡುವ ಸಂದರ್ಭದಲ್ಲೇ ಬ್ಯಾಂಕ್ ಖಾತೆ ವಿವರಗಳ ದಾಖಲೆ ಸಲ್ಲಿಸಬೇಕಿದ್ದು, ವಾಹನ ಖರೀದಿ ಮಾಡಿದ ನಿಗದಿತ ಅವಧಿಯೊಳಗೆ ನಿಮ್ಮ ಸಬ್ಸಡಿ ಹಣವು ನೇರವಾಗಿ ನಿಮ್ಮ ಖಾತೆಗೆ ಜಮೆಯಾಗಲಿದೆ.

ಇವಿ ನೀತಿ ಜಾರಿ ಮಾಡಿರುವ ದೆಹಲಿ ಸರ್ಕಾರದಿಂದ ಸಬ್ಸಡಿ ವಿತರಣೆ

ಇನ್ನು ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಮಾರಾಟವನ್ನು ತಗ್ಗಿಸಲು ಮತ್ತು ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹೆಚ್ಚಿಸಲು ಹಲವಾರು ಯೋಜನೆಗಳನ್ನು ಜಾರಿಗೆ ತಂದಿರುವ ಕೇಂದ್ರ ಸರ್ಕಾರವು ಇದೀಗ ಮತ್ತೊಂದು ಮಹತ್ವದ ಯೋಜನೆಗೆ ಚಾಲನೆ ನೀಡುತ್ತಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಇವಿ ನೀತಿ ಜಾರಿ ಮಾಡಿರುವ ದೆಹಲಿ ಸರ್ಕಾರದಿಂದ ಸಬ್ಸಡಿ ವಿತರಣೆ

ಕೇಂದ್ರ ಸರ್ಕಾರವು ಈಗಾಗಲೇ ಎಲೆಕ್ಟ್ರಿಕ್ ವಾಹನಗಳ ಅಭಿವೃದ್ದಿಪಡಿಸುವ ಆಟೋ ಕಂಪನಿಗಳ ಜೊತೆಗೆ ಎಲೆಕ್ಟ್ರಿಕ್ ವಾಹನ ಖರೀದಿಸುವ ಗ್ರಾಹಕರಿಗೂ ಕೂಡಾ ಆಕರ್ಷಕ ಆಫರ್‌ಗಳನ್ನು ನೀಡಲಾಗುತ್ತಿದ್ದು, ಜಿಎಸ್‌ಟಿ ವಿನಾಯ್ತಿ, ಗರಿಷ್ಠ ಸಬ್ಸಡಿ, ತೆರಿಗೆ ವಿನಾಯ್ತಿಗಳನ್ನು ನೀಡಲಾಗುತ್ತಿದೆ. ಆದರೂ ಕೂಡಾ ಎಲೆಕ್ಟ್ರಿಕ್ ವಾಹನಗಳಿಗೆ ಪೂರಕವಾಗಿ ಹೆಚ್ಚಿನ ಮಟ್ಟದ ಸಾರ್ವಜನಿಕ ಬಳಕೆಯ ಫಾಸ್ಟ್ ಚಾರ್ಜಿಂಗ್ ನಿಲ್ದಾಣ ಕೊರೆತೆ ಎದುರಾಗಿದ್ದು, ಕೇಂದ್ರ ಸರ್ಕಾರವು ಈ ವಿಚಾರವಾಗಿ ಮಹತ್ವದ ನಿರ್ಧಾರ ಕೈಗೊಂಡಿದೆ.

ಇವಿ ನೀತಿ ಜಾರಿ ಮಾಡಿರುವ ದೆಹಲಿ ಸರ್ಕಾರದಿಂದ ಸಬ್ಸಡಿ ವಿತರಣೆ

ಭಾರತದಲ್ಲಿ ವಿವಿಧ ಮಾದರಿಯ ಹಲವು ಎಲೆಕ್ಟ್ರಿಕ್ ಕಾರು ಮತ್ತು ದ್ವಿಚಕ್ರ ವಾಹನ ಮಾದರಿಗಳು ಮಾರಾಟವಾಗುತ್ತಿದ್ದು, ಬೆಲೆಗಳಿಗೆ ಅನುಗುಣವಾಗಿ ಮೈಲೇಜ್ ಪಡೆದುಕೊಂಡಿವೆ. ದುಬಾರಿ ಬೆಲೆಯ ಇವಿ ವಾಹನಗಳು ಹೆಚ್ಚಿನ ಮಟ್ಟದ ಮೈಲೇಜ್ ರೇಂಜ್ ಹೊಂದಿದ್ದರೆ ಬಜೆಟ್ ಬೆಲೆಯ ಇವಿ ವಾಹನಗಳು ಕಡಿಮೆ ಮೈಲೇಜ್‌ನೊಂದಿಗೆ ನಗರ ಪ್ರದೇಶದಲ್ಲಿನ ಸಂಚಾರಕ್ಕೆ ಮಾತ್ರವೇ ಸೀಮಿತವಾಗಿವೆ.

ಇವಿ ನೀತಿ ಜಾರಿ ಮಾಡಿರುವ ದೆಹಲಿ ಸರ್ಕಾರದಿಂದ ಸಬ್ಸಡಿ ವಿತರಣೆ

ಜೊತೆಗೆ ಪ್ರಸ್ತುತ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳು ಸ್ವಂತ ಬಳಕೆ ಮಾತ್ರ ಮಾರಾಟವಾಗುತ್ತಿದ್ದು, ವಾಣಿಜ್ಯ ಬಳಕೆಗೂ ಇವಿ ವಾಹನಗಳು ಮಾರಾಟ ಹೆಚ್ಚಳವಾಗಬೇಕೆಂಬ ಯೋಜನೆ ರೂಪಿಸಲಾಗುತ್ತಿದೆ. ಇದಕ್ಕೆ ಪೂರಕವಾಗಿ ಯಾವುದೇ ಪ್ರದೇಶಗಳಿಗೂ ಹೋದರೂ ಚಾರ್ಜಿಂಗ್ ಸೌಲಭ್ಯ ಲಭ್ಯವಾಗುವಂತೆ ಯೋಜನೆ ಸಿದ್ದಪಡಿಸಲಾಗಿದೆ.

MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

ಇವಿ ನೀತಿ ಜಾರಿ ಮಾಡಿರುವ ದೆಹಲಿ ಸರ್ಕಾರದಿಂದ ಸಬ್ಸಡಿ ವಿತರಣೆ

ಇದಕ್ಕಾಗಿ ಮಹತ್ವದ ನಿರ್ಧಾರ ಕೈಗೊಂಡಿರುವ ಕೇಂದ್ರ ಸರ್ಕಾರವು ಮುಂದಿನ ಕೆಲವೇ ದಿನಗಳಲ್ಲಿ ಸರ್ಕಾರಿ ಸ್ವಾಮ್ಯದ ಪೆಟ್ರೋಲ್ ಬಂಕ್‌ಗಳು ಸೇರಿದಂತೆ ಖಾಸಗಿ ಕಂಪನಿಗಳ ಪೆಟ್ರೋಲ್ ಬಂಕ್‌ಗಳನ್ನು ಚಾರ್ಜಿಂಗ್ ಪಾಯಿಂಟ್‌ಗಳನ್ನು ತೆರೆಯಲು ನಿರ್ಧರಿಸಿದೆ.

ಇವಿ ನೀತಿ ಜಾರಿ ಮಾಡಿರುವ ದೆಹಲಿ ಸರ್ಕಾರದಿಂದ ಸಬ್ಸಡಿ ವಿತರಣೆ

ಖಾಸಗಿ ಕಂಪನಿಗಳ ಅಧೀನದಲ್ಲಿರುವ ಪೆಟ್ರೋಲ್ ಬಂಕ್‌ಗಳಲ್ಲೂ ಕಡ್ಡಾಯವಾಗಿ 1 ಚಾರ್ಜಿಂಗ್ ಪಾಯಿಂಟ್ ತೆರೆಯುವಂತೆ ವಿವಿಧ ಪೆಟ್ರೋಲ್ ಪೂರೈಕೆ ಕಂಪನಿಗಳ ಜೊತೆ ಮಾತುಕತೆ ನಡೆಸಿರುವ ಕೇಂದ್ರ ಸರ್ಕಾರದ ಇಂಧನ ಸಚಿವಾಲಯವು ಮುಂದಿನ ಒಂದು ವರ್ಷದಲ್ಲಿ 69 ಸಾವಿರ ಪೆಟ್ರೋಲ್ ಬಂಕ್‌ಗಳಲ್ಲಿ ಚಾರ್ಜಿಂಗ್ ಸೌಲಭ್ಯವನ್ನು ಒದಗಿಸುವ ಭರವಸೆ ನೀಡಿದೆ.

Most Read Articles

Kannada
English summary
Delhi Govt To Deposit Electric Vehicle Subsidy in Bank Account Of EV Buyers. Read in Kannada.
Story first published: Friday, September 11, 2020, 21:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X