ಸಾರಿಗೆ ವಾಹನಗಳ ವೇಗದ ಮಿತಿಯ ಬಗ್ಗೆ ಸ್ಪಷ್ಟನೆ ನೀಡಿದ ಹೈಕೋರ್ಟ್

ಭಾರತದಲ್ಲಿ ದಿನೇ ದಿನೇ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ಜೊತೆಗೆ ರಸ್ತೆ ಅಪಘಾತಗಳ ಸಂಖ್ಯೆಯೂ ಹೆಚ್ಚುತ್ತಿದೆ. ಭಾರತದಲ್ಲಿ ಸಂಭವಿಸುವ ರಸ್ತೆ ಅಪಘಾತಗಳಿಂದಾಗಿ ಪ್ರತಿ ವರ್ಷ ಸುಮಾರು 1.50 ಲಕ್ಷಕ್ಕೂ ಹೆಚ್ಚು ಜನರು ಸಾವನ್ನಪ್ಪುತ್ತಿದ್ದಾರೆ ಎಂದು ಅಂಕಿ ಅಂಶಗಳಿಂದ ಕಂಡು ಬಂದಿದೆ.

ಸಾರಿಗೆ ವಾಹನಗಳ ವೇಗದ ಮಿತಿಯ ಬಗ್ಗೆ ಸ್ಪಷ್ಟನೆ ನೀಡಿದ ಹೈಕೋರ್ಟ್

ಸಂಚಾರಿ ನಿಯಮಗಳ ಉಲ್ಲಂಘನೆ, ಅತಿ ವೇಗವಾಗಿ ವಾಹನ ಚಾಲನೆ ಮಾಡುವುದು ಸೇರಿದಂತೆ ಇನ್ನಿತರ ಕಾರಣಗಳಿಂದಾಗಿ ರಸ್ತೆ ಅಪಘಾತಗಳು ಸಂಭವಿಸುತ್ತವೆ. ವೇಗವಾಗಿ ವಾಹನ ಚಾಲನೆ ಮಾಡುವಾಗ ಏಕಾಏಕಿ ಯಾರಾದರೂ ಅಡ್ಡ ಬಂದರೆ ವಾಹನಗಳ ಮೇಲೆ ನಿಯಂತ್ರಣ ಸಿಗದೇ ಅಪಘಾತಗಳು ಸಂಭವಿಸುತ್ತವೆ. ಈ ಕಾರಣಕ್ಕೆ ಅತಿ ವೇಗವಾಗಿ ವಾಹನ ಚಾಲನೆ ಮಾಡುವವರಿಗೆ ಮೋಟಾರು ವಾಹನ ಕಾಯ್ದೆಯನ್ವಯ ದಂಡ ವಿಧಿಸಲಾಗುತ್ತದೆ.

ಸಾರಿಗೆ ವಾಹನಗಳ ವೇಗದ ಮಿತಿಯ ಬಗ್ಗೆ ಸ್ಪಷ್ಟನೆ ನೀಡಿದ ಹೈಕೋರ್ಟ್

ವಾಹನಗಳು ಇಂತಿಷ್ಟೇ ವೇಗದಲ್ಲಿ ಸಾಗಬೇಕು ಎಂದು ಹಲವು ರಾಜ್ಯ ಸರ್ಕಾರಗಳು ವೇಗದ ಮಿತಿಯನ್ನು ನಿಗದಿಪಡಿಸಿವೆ. ದೆಹಲಿ ರಾಜ್ಯ ಸರ್ಕಾರವು 2015ರ ಅಕ್ಟೋಬರ್ ನಂತರ ರಿಜಿಸ್ಟರ್ ಆದ ಸಾರಿಗೆ ವಾಹನಗಳು ಗಂಟೆಗೆ 40 ಕಿ.ಮೀಗಿಂತ ಕಡಿಮೆ ವೇಗವನ್ನು ಹೊಂದಿರಬೇಕು ಎಂಬ ಅಧಿಸೂಚನೆಯನ್ನು ಹೊರಡಿಸಿತ್ತು.

MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಸಾರಿಗೆ ವಾಹನಗಳ ವೇಗದ ಮಿತಿಯ ಬಗ್ಗೆ ಸ್ಪಷ್ಟನೆ ನೀಡಿದ ಹೈಕೋರ್ಟ್

ಈ ಅಧಿಸೂಚನೆಯನ್ನು ಪ್ರಶ್ನಿಸಿ ಹಲವು ಸಂಘ, ಸಂಸ್ಥೆಗಳು ದೆಹಲಿ ಹೈಕೋರ್ಟಿನಲ್ಲಿ ಮೇಲ್ಮನವಿ ಅರ್ಜಿಯನ್ನು ಸಲ್ಲಿಸಿದ್ದವು. ಈ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ಡಿ.ಎನ್. ಪಟೇಲ್ ಹಾಗೂ ನ್ಯಾಯಮೂರ್ತಿ ಪ್ರತೀಕ್ ಜಲನ್ ಅವರಿಂದ ನ್ಯಾಯಪೀಠವು ದೆಹಲಿ ಸರ್ಕಾರದ ಅಧಿಸೂಚನೆಯನ್ನು ವಜಾಗೊಳಿಸಿದೆ.

ಸಾರಿಗೆ ವಾಹನಗಳ ವೇಗದ ಮಿತಿಯ ಬಗ್ಗೆ ಸ್ಪಷ್ಟನೆ ನೀಡಿದ ಹೈಕೋರ್ಟ್

ವಾಹನಗಳಿಗೆ ವೇಗದ ಮಿತಿಯನ್ನು ನಿಗದಿಪಡಿಸಲು ರಾಜ್ಯ ಸರ್ಕಾರಗಳಿಗೆ ಅಧಿಕಾರವಿಲ್ಲವೆಂದು ನ್ಯಾಯಪೀಠ ಹೇಳಿದೆ. ಪರಿಷ್ಕೃತ ಕೇಂದ್ರ ಮೋಟಾರು ವಾಹನ ನಿಯಮ 2015 ಹಾಗೂ ಮೋಟಾರು ವಾಹನ ಕಾಯ್ದೆ 1988ರಡಿಯಲ್ಲಿ ಸಾರಿಗೆ ವಾಹನಗಳ ವೇಗದ ಮಿತಿ ಭಿನ್ನವಾಗಿದೆ ಎಂದು ನ್ಯಾಯಪೀಠ ಹೇಳಿದೆ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಸಾರಿಗೆ ವಾಹನಗಳ ವೇಗದ ಮಿತಿಯ ಬಗ್ಗೆ ಸ್ಪಷ್ಟನೆ ನೀಡಿದ ಹೈಕೋರ್ಟ್

ಮೋಟಾರು ವಾಹನ ಕಾಯ್ದೆಯನ್ವಯ ಲಘು ಸಾರಿಗೆ ವಾಹನಗಳು ಪ್ರತಿ ಗಂಟೆಗೆ ಗರಿಷ್ಠ 80 ಕಿ.ಮೀ ವೇಗವನ್ನು ನಿಗದಿಪಡಿಸಿರುವ ಸ್ಪೀಡ್ ಗವರ್ನರ್ ಗಳನ್ನು ಹೊಂದಿರಬೇಕು ಎಂದು ಹೈಕೋರ್ಟ್ ನ್ಯಾಯಪೀಠ ಸ್ಪಷ್ಟಪಡಿಸಿದೆ.

ಸಾರಿಗೆ ವಾಹನಗಳ ವೇಗದ ಮಿತಿಯ ಬಗ್ಗೆ ಸ್ಪಷ್ಟನೆ ನೀಡಿದ ಹೈಕೋರ್ಟ್

ಈ ಗವರ್ನರ್‌ಗಳನ್ನು ವಾಹನಗಳನ್ನು ನಿರ್ಮಿಸುವ ಸಮಯದಲ್ಲಿಯೇ ವಾಹನಗಳಲ್ಲಿ ಅಳವಡಿಸಬೇಕು. ಇದರ ಜೊತೆಗೆ ಈ ಗವರ್ನರ್‌ಗಳನ್ನು ವಾಹನ ಮಾರಾಟಗಾರರು ಸಹ ಅಳವಡಿಸಬಹುದು. ಇದರ ನಂತರವೂ ಈ ವಾಹನಗಳ ಗರಿಷ್ಠ ವೇಗವನ್ನು ಗಂಟೆಗೆ 40 ಕಿ.ಮೀಗಿಂತ ಕಡಿಮೆಗೊಳಿಸುವಂತೆ ರಾಜ್ಯ ಸರ್ಕಾರ ಆದೇಶಿಸಬಾರದು ಎಂದು ನ್ಯಾಯಪೀಠ ಹೇಳಿದೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಸಾರಿಗೆ ವಾಹನಗಳ ವೇಗದ ಮಿತಿಯ ಬಗ್ಗೆ ಸ್ಪಷ್ಟನೆ ನೀಡಿದ ಹೈಕೋರ್ಟ್

ವೇಗದ ಮಿತಿಯ ಕುರಿತು ದೆಹಲಿ ಸರ್ಕಾರ ಹೊರಡಿಸಿದ್ದ ಅಧಿಸೂಚನೆಯನ್ನು ವಜಾಗೊಳಿಸಿದ ನ್ಯಾಯಪೀಠ, 2015ರ ಅಕ್ಟೋಬರ್ 01ರ ನಂತರ ನೋಂದಾಯಿಸಲಾದ ವಾಹನಗಳಲ್ಲಿ ಸ್ಪೀಡ್ ಗವರ್ನರ್‌ಗಳನ್ನು ಅಳವಡಿಸುವ ಬಗ್ಗೆ ಮೋಟಾರು ವಾಹನ ಕಾಯ್ದೆ ನಿಯಮ 118(1) ರಲ್ಲಿ ಹೇಳಲಾಗಿದೆ.

ಸಾರಿಗೆ ವಾಹನಗಳ ವೇಗದ ಮಿತಿಯ ಬಗ್ಗೆ ಸ್ಪಷ್ಟನೆ ನೀಡಿದ ಹೈಕೋರ್ಟ್

ಈ ನಿಯಮವೇ ಅಗತ್ಯವಿರುವ ವಿಶೇಷಣಗಳನ್ನು ಪೂರೈಸುತ್ತದೆ. ಅದನ್ನು ರಾಜ್ಯ ಸರ್ಕಾರಗಳು ನಿರ್ಧರಿಸುವಂತಿಲ್ಲ ಎಂದು ಹೇಳಿದೆ. ವಿವಿಧ ವರ್ಗದ ಸಾರಿಗೆ ವಾಹನಗಳಿಗೆ ವಿಭಿನ್ನ ವೇಗದ ಸ್ಪೀಡ್ ಗವರ್ನರ್‌ಗಳನ್ನು ಸಜ್ಜುಗೊಳಿಸಲು ಅವಕಾಶವಿತ್ತು.

Most Read Articles

Kannada
English summary
Delhi High Court clarifies about speed limit for transport vehicles. Read in Kannada.
Story first published: Saturday, September 19, 2020, 13:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X