ದೆಹಲಿ ಮೀರತ್ ನಡುವಿನ ಸಂಚಾರವನ್ನು 45 ನಿಮಿಷಗಳಿಗೆ ಇಳಿಸಲಿದೆ ಈ ಎಕ್ಸ್‌ಪ್ರೆಸ್ ವೇ

ದೆಹಲಿ-ಮೀರತ್ ನಡುವಿನ ಎಕ್ಸ್‌ಪ್ರೆಸ್ ವೇ ನಿರ್ಮಾಣ ಕಾರ್ಯವು 2020ರ ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿರವರು ಟ್ವಿಟರ್ ಮೂಲಕ ಮಾಹಿತಿ ನೀಡಿದ್ದಾರೆ. ಈ ಎಕ್ಸ್‌ಪ್ರೆಸ್‌ವೇ ಪೂರ್ಣಗೊಂಡ ನಂತರ ದೆಹಲಿಯಿಂದ ಮೀರತ್ ನಡುವಿನ ಅಂತರವನ್ನು ಕೇವಲ 45 ನಿಮಿಷಗಳಲ್ಲಿ ಕ್ರಮಿಸಬಹುದು ಎಂದು ಅವರು ಹೇಳಿದ್ದಾರೆ.

ದೆಹಲಿ ಮೀರತ್ ನಡುವಿನ ಸಂಚಾರವನ್ನು 45 ನಿಮಿಷಗಳಿಗೆ ಇಳಿಸಲಿದೆ ಈ ಎಕ್ಸ್‌ಪ್ರೆಸ್ ವೇ

ಈ ಎಕ್ಸ್‌ಪ್ರೆಸ್‌ವೇಯಿಂದ ಪ್ರಯಾಣಕ್ಕೆ ಅನುಕೂಲವಾಗುವುದರ ಜೊತೆಗೆ ದೆಹಲಿ-ಎನ್‌ಸಿಆರ್‌ನಲ್ಲಿನ ವಾಯು ಮಾಲಿನ್ಯ ಮಟ್ಟವು ಕಡಿಮೆಯಾಗುತ್ತದೆ ಎಂದು ಅವರು ಹೇಳಿದರು. ದೆಹಲಿ - ಮೀರತ್ ಎಕ್ಸ್‌ಪ್ರೆಸ್‌ವೇ ಬಗೆಗಿನ ವೀಡಿಯೊವನ್ನು ಸಚಿವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅಪ್‌ಲೋಡ್ ಮಾಡಿದ್ದಾರೆ. ದೆಹಲಿ-ಮೀರತ್ ಎಕ್ಸ್‌ಪ್ರೆಸ್ ವೇಯ ಉದ್ದ 82.05 ಕಿ.ಮೀಗಳಾಗಿದೆ. ಈ ಎಕ್ಸ್‌ಪ್ರೆಸ್‌ವೇಯ ಮೊದಲ ಹಾಗೂ ಮೂರನೇ ಹಂತಗಳು ಪೂರ್ಣಗೊಂಡಿದ್ದು, ಎರಡನೇ ಹಾಗೂ ನಾಲ್ಕನೇ ಹಂತಗಳು ಇನ್ನೂ ಪೂರ್ಣಗೊಂಡಿಲ್ಲ.

ದೆಹಲಿ ಮೀರತ್ ನಡುವಿನ ಸಂಚಾರವನ್ನು 45 ನಿಮಿಷಗಳಿಗೆ ಇಳಿಸಲಿದೆ ಈ ಎಕ್ಸ್‌ಪ್ರೆಸ್ ವೇ

ದೆಹಲಿಯಿಂದ ಉತ್ತರಪ್ರದೇಶದ ಗಡಿಯವರೆಗೆ ಹಾಗೂ ದಾಸ್ನಾದಿಂದ ಹಾಪುರದವರೆಗಿನ ನಿಜಾಮುದ್ದೀನ್ ಸೇತುವೆಯ ನಿರ್ಮಾಣದ ಮೊದಲ ಹಾಗೂ ಮೂರನೇ ಹಂತವು ಪೂರ್ಣಗೊಂಡಿದೆ. ಎರಡನೇ ಹಂತದಲ್ಲಿ ದೆಹಲಿ-ಉತ್ತರಪ್ರದೇಶದ ಗಡಿಯಿಂದ ಗಾಜಿಯಾಬಾದ್‌ವರೆಗೆ 19.24 ಕಿ.ಮೀ ರಸ್ತೆ ನಿರ್ಮಾಣವಾಗುತ್ತಿದ್ದು, ನಾಲ್ಕನೇ ಹಂತದಲ್ಲಿ ಗಾಜಿಯಾಬಾದ್‌ನಿಂದ ಮೀರತ್‌ವರೆಗಿನ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ದೆಹಲಿ ಮೀರತ್ ನಡುವಿನ ಸಂಚಾರವನ್ನು 45 ನಿಮಿಷಗಳಿಗೆ ಇಳಿಸಲಿದೆ ಈ ಎಕ್ಸ್‌ಪ್ರೆಸ್ ವೇ

ನಾಲ್ಕನೇ ಹಂತದಲ್ಲಿ ದಸ್ನಾದಿಂದ ಮೀರತ್ ನಡುವೆ 32 ಕಿ.ಮೀ ಉದ್ದದ 6 ಪಥದ ಎಕ್ಸ್‌ಪ್ರೆಸ್ ವೇ ನಿರ್ಮಿಸಲಾಗುವುದು. ಈ ಹಂತದಲ್ಲಿ ಭೋಜ್‌ಪುರದಿಂದ ದಸ್ನಾ ನಡುವಿನ ಕೆಲಸವನ್ನು ಸಮಯಕ್ಕೆ ಪೂರ್ಣಗೊಳಿಸುವುದು ಸವಾಲಿನ ಕೆಲಸವಾಗಿದೆ.

ದೆಹಲಿ ಮೀರತ್ ನಡುವಿನ ಸಂಚಾರವನ್ನು 45 ನಿಮಿಷಗಳಿಗೆ ಇಳಿಸಲಿದೆ ಈ ಎಕ್ಸ್‌ಪ್ರೆಸ್ ವೇ

120 ದಿನಗಳಲ್ಲಿ ಕೆಲಸವನ್ನು ಪೂರ್ಣಗೊಳಿಸುವುದು ಎನ್‌ಹೆಚ್‌ಎಐಗೆ ನಿಜಕ್ಕೂ ಸವಾಲಿನ ಕೆಲಸವಾಗಿದೆ. ಸೆಪ್ಟೆಂಬರ್ ಮೊದಲು ಈ ಯೋಜನೆಯನ್ನು ಪೂರ್ಣಗೊಳಿಸಬೇಕಾಗಿತ್ತು. ಆದರೆ ಲಾಕ್ ಡೌನ್ ಹಾಗೂ ಕೆಲವು ಸ್ಥಳಗಳಲ್ಲಿ ರೈತರ ವಿರೋಧದಿಂದಾಗಿ ಕಾಮಗಾರಿ ಪೂರ್ಣಗೊಳ್ಳಲು ವಿಧಿಸಲಾಗಿದ್ದ ಗಡುವನ್ನು ವಿಸ್ತರಿಸಲಾಗಿದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ದೆಹಲಿ ಮೀರತ್ ಎಕ್ಸ್‌ಪ್ರೆಸ್ ವೇ ದೇಶದ ಮೊದಲ 16 ಪಥದ ಎಕ್ಸ್‌ಪ್ರೆಸ್ ವೇಯಾಗಿದೆ. 82 ಕಿ.ಮೀ ಉದ್ದದ ಈ ಯೋಜನೆಗೆ ರೂ.6273 ಕೋಟಿ ವೆಚ್ಚ ಮಾಡಲಾಗುತ್ತಿದೆ. ಎನ್‌ಹೆಚ್‌-235 ಆರಂಭಗೊಂಡಾಗ ಈ ರಸ್ತೆಯ ಮೂಲಕ ಮೀರತ್ ತಲುಪುವುದು ಸುಲಭವಾಗಲಿದೆ.

ದೆಹಲಿ ಮೀರತ್ ನಡುವಿನ ಸಂಚಾರವನ್ನು 45 ನಿಮಿಷಗಳಿಗೆ ಇಳಿಸಲಿದೆ ಈ ಎಕ್ಸ್‌ಪ್ರೆಸ್ ವೇ

ಸದ್ಯ ದೆಹಲಿಯಿಂದ ರಸ್ತೆ ಮೂಲಕ ಮೀರತ್‌ ತಲುಪಲು ಎರಡೂವರೆ ಗಂಟೆ ಬೇಕಾಗುತ್ತದೆ. ಈ ಎಕ್ಸ್‌ಪ್ರೆಸ್‌ವೇಯ ಪಕ್ಕದಲ್ಲಿ ನೆಡಲಾಗಿರುವ ಗಿಡಗಳ ಬಗ್ಗೆಯೂ ವಿಶೇಷ ಗಮನ ಹರಿಸಲಾಗುತ್ತಿದೆ. ಈ ಎಕ್ಸ್‌ಪ್ರೆಸ್‌ವೇಯಲ್ಲಿ ಹಲವು ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ನಿತಿನ್ ಗಡ್ಕರಿರವರು ಹೇಳಿದ್ದಾರೆ.

Most Read Articles

Kannada
English summary
Delhi Meerut travel will be reduced to 45 mins by this expressway. Read in Kannada.
Story first published: Monday, August 31, 2020, 18:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X