ಲಾಕ್‌ಡೌನ್ ಸಡಿಲಿಕೆ: ಈ ನಗರಗಳ ಮಧ್ಯೆ ಸಂಚಾರಕ್ಕೆ ಇ-ಪಾಸ್ ಕಡ್ಡಾಯ

ಲಾಕ್‌ಡೌನ್ 4.0 ಹಿನ್ನೆಲೆಯಲ್ಲಿ ದೆಹಲಿ-ನೋಯ್ಡಾ ಗಡಿಯನ್ನು ಬಂದ್ ಮಾಡಲಾಗಿದೆ. ಇದರಿಂದಾಗಿ ದೆಹಲಿಯಿಂದ ನೋಯ್ಡಾಕ್ಕೆ ಹೋಗುವ ರಸ್ತೆಯಲ್ಲಿ ವಾಹನಗಳ ಉದ್ದದ ಸಾಲು ಕಂಡು ಬರುತ್ತಿದೆ. ಈ ಬಗ್ಗೆ ದೆಹಲಿ ಪೊಲೀಸರು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.

ಲಾಕ್‌ಡೌನ್ ಸಡಿಲಿಕೆ: ಈ ನಗರಗಳ ಮಧ್ಯೆ ಸಂಚಾರಕ್ಕೆ ಇ-ಪಾಸ್ ಕಡ್ಡಾಯ

ನೋಯ್ಡಾದ ಸ್ಥಳೀಯ ಆಡಳಿತದಿಂದ ಇ- ಪಾಸ್ ಪಡೆದ ವಾಹನಗಳಿಗೆ ಮಾತ್ರ ಸಂಚರಿಸಲು ಅವಕಾಶ ನೀಡಲಾಗುವುದು ಎಂದು ದೆಹಲಿ ಪೊಲೀಸರು ಟ್ವೀಟ್ ಮೂಲಕ ತಿಳಿಸಿದ್ದಾರೆ. ಇದರಂತೆ ದೆಹಲಿಯಿಂದ ನೋಯ್ಡಾಕ್ಕೆ ಹೋಗಲು ಕಾಲಿಂಡಿ ಕುಂಜ್ ಫ್ಲೈಓವರ್ ಹಾಗೂ ಡಿಎನ್‌ಡಿ ಫ್ಲೈಓವರ್ ಬಳಸುತ್ತಿರುವವರು ಯೋಜನೆ ರೂಪಿಸಕೊಳ್ಳಬೇಕೆಂದು ಹೇಳಿದ್ದಾರೆ.

ಲಾಕ್‌ಡೌನ್ ಸಡಿಲಿಕೆ: ಈ ನಗರಗಳ ಮಧ್ಯೆ ಸಂಚಾರಕ್ಕೆ ಇ-ಪಾಸ್ ಕಡ್ಡಾಯ

ಈ ಸ್ಥಳಗಳಲ್ಲಿ ಸಾಕಷ್ಟು ಟ್ರಾಫಿಕ್ ಜಾಮ್ ಉಂಟಾದ ಕಾರಣ ಜನರು ಗಡಿ ದಾಟದಂತೆ ನಿಷೇಧಿಸಲಾಗಿದೆ. ದೆಹಲಿಯಿಂದ ನೋಯ್ಡಾದಲ್ಲಿರುವ ತಮ್ಮ ಕಚೇರಿಗಳಿಗೆ ಹೋಗುತ್ತಿದ್ದ ಜನರ ಪಾಸ್‌ಗಳನ್ನು ಪರಿಶೀಲಿಸಲು ತಡೆಹಿಡಿದಿದ್ದೇ ಇಷ್ಟೊಂದು ಟ್ರಾಫಿಕ್ ಜಾಮ್ ಉಂಟಾಗಲು ಮುಖ್ಯ ಕಾರಣ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಲಾಕ್‌ಡೌನ್ ಸಡಿಲಿಕೆ: ಈ ನಗರಗಳ ಮಧ್ಯೆ ಸಂಚಾರಕ್ಕೆ ಇ-ಪಾಸ್ ಕಡ್ಡಾಯ

ದೆಹಲಿ-ಗುರುಗ್ರಾಮ ಗಡಿಯಲ್ಲಿಯೂ ಇದೇ ಪರಿಸ್ಥಿತಿ ಎದುರಾಗಿದೆ. ಅಲ್ಲಿ ಕಚೇರಿಗೆ ಹೋಗುವವರ ಕಾರಣದಿಂದಾಗಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಲಾಕ್‌ಡೌನ್‌ನಿಂದ ಖಾಸಗಿ ವಾಹನಗಳಿಗೆ ವಿನಾಯಿತಿ ನೀಡಿದ ಕಾರಣಕ್ಕೆ ದೆಹಲಿಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದೆ.

ಲಾಕ್‌ಡೌನ್ ಸಡಿಲಿಕೆ: ಈ ನಗರಗಳ ಮಧ್ಯೆ ಸಂಚಾರಕ್ಕೆ ಇ-ಪಾಸ್ ಕಡ್ಡಾಯ

ದೆಹಲಿ-ನೋಯ್ಡಾ ಗಡಿಯನ್ನು ಬಂದ್ ಮಾಡಲಾಗಿದ್ದು, ಅನುಮತಿ ಪಡೆದವರು ಮಾತ್ರ ಪ್ರಯಾಣಿಸಬಹುದೆಂದು ಗೌತಮ್ ಬುದ್ಧ ನಗರದ ಸ್ಥಳೀಯ ಆಡಳಿತವು ಮಾಹಿತಿ ನೀಡಿದೆ. ಉತ್ತರ ಪ್ರದೇಶ ಸರ್ಕಾರವು ಮುಂದಿನ ಆದೇಶ ಹೊರಡಿಸುವವರೆಗೆ ಈ ಗಡಿಯನ್ನು ಬಂದ್ ಮಾಡಲಾಗುತ್ತದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಲಾಕ್‌ಡೌನ್ ಸಡಿಲಿಕೆ: ಈ ನಗರಗಳ ಮಧ್ಯೆ ಸಂಚಾರಕ್ಕೆ ಇ-ಪಾಸ್ ಕಡ್ಡಾಯ

ಎರಡು ನಗರಗಳ ನಡುವೆ ಪ್ರಯಾಣಿಸುವವರಿಗೆ ಗೊಂದಲ ಉಂಟಾಗಿತ್ತು. ಹತ್ತಿರದಲ್ಲಿದ್ದ ಜನರು ಸಹ ಹೊರಟುಹೋದರು. ಈ ಕಾರಣಕ್ಕೆ ಲಾಕ್‌ಡೌನ್ 4.0ರ ಮೊದಲ ಎರಡು ದಿನಗಳಲ್ಲಿಯೇ ಈ ಮಾರ್ಗಗಳಲ್ಲಿ ಹೆಚ್ಚಿನ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ.

ಲಾಕ್‌ಡೌನ್ ಸಡಿಲಿಕೆ: ಈ ನಗರಗಳ ಮಧ್ಯೆ ಸಂಚಾರಕ್ಕೆ ಇ-ಪಾಸ್ ಕಡ್ಡಾಯ

ದೆಹಲಿ-ನೋಯ್ಡಾ ನಗರಗಳ ನಡುವೆ ಸಂಚರಿಸಲು ಇ-ಪಾಸ್ ಪಡೆಯಲು ಇ ವಿಧಾನಗಳನ್ನು ಅನುಸರಿಸಿ:

1. ಹೆಸರು, ಮೊಬೈಲ್ ಸಂಖ್ಯೆ, ಹುಟ್ಟಿದ ದಿನಾಂಕವನ್ನು ಭರ್ತಿ ಮಾಡಿ

2. ನಂತರ ಯಾವ ರೀತಿಯ ಸೇವೆಯ ಅಗತ್ಯವಿದೆ ಎಂಬುದರ ಮಾಹಿತಿ ನೀಡಿ.

3. ದಿನಾಂಕ ಮತ್ತು ಸಮಯದ ವಿವರಗಳನ್ನು ನೀಡಿ

4. ಗುರುತಿನ ಚೀಟಿಯನ್ನು ನೀಡಿ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಲಾಕ್‌ಡೌನ್ ಸಡಿಲಿಕೆ: ಈ ನಗರಗಳ ಮಧ್ಯೆ ಸಂಚಾರಕ್ಕೆ ಇ-ಪಾಸ್ ಕಡ್ಡಾಯ

ಈ ಎರಡೂ ನಗರಗಳಲ್ಲಿ ಲಾಕ್‌ಡೌನ್ ಅನ್ನು ಸ್ವಲ್ಪಮಟ್ಟಿಗೆ ಸಡಿಲಿಸಲಾಗಿದೆ. ಹೆಚ್ಚುತ್ತಿರುವ ಕರೋನಾ ಸೋಂಕಿನಿಂದಾಗಿ ಸೀಮಿತಗೊಳಿಸಲಾಗಿದೆ. ಕೆಲವು ಷರತ್ತುಗಳೊಂದಿಗೆ ಓಲಾ, ಉಬರ್‌ಗಳಿಗೆ ಕಾರ್ಯಾಚರಣೆ ನಡೆಸಲು ಅನುಮತಿ ನೀಡಲಾಗಿದೆ.

Article Published On: Tuesday, May 19, 2020, 18:03 [IST]
English summary
Delhi Noida border to remain closed for regular travel. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+