ಲಾಕ್‌ಡೌನ್ ನಡುವೆಯೂ ಭಾರೀ ಪ್ರಮಾಣದ ದಂಡ ವಿಧಿಸಿದ ದೆಹಲಿ ಪೊಲೀಸರು

ದೇಶದಾದ್ಯಂತ ಲಾಕ್‌ಡೌನ್ ಜಾರಿಯಲ್ಲಿದೆ. ದೆಹಲಿಯಲ್ಲಿಯೂ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಲಾಕ್‌ಡೌನ್‌ನಿಂದಾಗಿ ಜನರು ಪರದಾಡುವಂತಾಗಿದೆ. ಲಾಕ್‌ಡೌನ್ ಅವಧಿಯಲ್ಲಿಯೇ ದೆಹಲಿ ಪೊಲೀಸರು 4.54 ಲಕ್ಷ ವಾಹನ ಮಾಲೀಕರಿಗೆ ದಂಡ ವಿಧಿಸಿದ್ದಾರೆ.

ಲಾಕ್‌ಡೌನ್ ನಡುವೆಯೂ ಭಾರೀ ಪ್ರಮಾಣದ ದಂಡ ವಿಧಿಸಿದ ದೆಹಲಿ ಪೊಲೀಸರು

ಲಾಕ್‌ಡೌನ್‌ನಿಂದಾಗಿ ದೆಹಲಿಯ ರಸ್ತೆಗಳೆಲ್ಲಾ ಖಾಲಿಯಾಗಿವೆ. ಇದರ ಲಾಭವನ್ನು ಪಡೆದುಕೊಳ್ಳುತ್ತಿರುವ ಜನರು ಅತಿ ವೇಗವಾಗಿ ಚಲಿಸುತ್ತಿದ್ದಾರೆ. ಖಾಲಿಯಿರುವ ರಸ್ತೆಗಳಲ್ಲಿ ವೇಗವಾಗಿ ಚಲಿಸುವುದು ಸಾಮಾನ್ಯವೇ ಆದರೂ ಜನರು ಈ ಭಾರೀ ಬೆಲೆಯನ್ನು ತೆರುವಂತಾಗಿದೆ.

ಲಾಕ್‌ಡೌನ್ ನಡುವೆಯೂ ಭಾರೀ ಪ್ರಮಾಣದ ದಂಡ ವಿಧಿಸಿದ ದೆಹಲಿ ಪೊಲೀಸರು

ಲಾಕ್‌ಡೌನ್ ಸಮಯದಲ್ಲಿಯೇ ದೆಹಲಿ ಪೊಲೀಸರು ಒಟ್ಟು 4,54,438 ಜನರಿಗೆ ದಂಡ ವಿಧಿಸಿದ್ದಾರೆ. ಸಾಮಾನ್ಯವಾಗಿ ದೆಹಲಿಯ ರಸ್ತೆಗಳು ವಾಹನಗಳಿಂದ ತುಂಬಿರುತ್ತವೆ. ಲಾಕ್‌ಡೌನ್ ಕಾರಣಕ್ಕೆ ಯಾವುದೇ ವಾಹನಗಳಿಲ್ಲದೇ ಖಾಲಿ ರಸ್ತೆಗಳು ಕಂಡುಬರುತ್ತಿವೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಲಾಕ್‌ಡೌನ್ ನಡುವೆಯೂ ಭಾರೀ ಪ್ರಮಾಣದ ದಂಡ ವಿಧಿಸಿದ ದೆಹಲಿ ಪೊಲೀಸರು

ಪೊಲೀಸರು ವಿಧಿಸಿರುವ 4.54 ಲಕ್ಷ ಚಲನ್‌ಗಳ ಮೊತ್ತವು ಸುಮಾರು ರೂ.90 ಕೋಟಿಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ ಮನೆಯಿಂದ ಹೊರಗೆ ಬಂದಿಲ್ಲ, ಆದರೂ ಸಹ ದಂಡ ವಿಧಿಸಲಾಗಿದೆ ಎಂದು ಜನರು ದೂರಿದ್ದಾರೆ.

ಲಾಕ್‌ಡೌನ್ ನಡುವೆಯೂ ಭಾರೀ ಪ್ರಮಾಣದ ದಂಡ ವಿಧಿಸಿದ ದೆಹಲಿ ಪೊಲೀಸರು

ರಸ್ತೆಗಳು ಖಾಲಿಯಿರುವ ಕಾರಣಕ್ಕೆ ಜನರು ಅತಿ ವೇಗದಲ್ಲಿ ವಾಹನ ಚಲಾಯಿಸುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಈ ಬಗ್ಗೆ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ ರಸ್ತೆಯಲ್ಲಿ ಕಡಿಮೆ ದಟ್ಟಣೆ ಇರುವುದರಿಂದ ಜನರು ಹೆಚ್ಚಿನ ವೇಗದಲ್ಲಿ ವಾಹನ ಚಲಾಯಿಸುತ್ತಿದ್ದಾರೆ. ನಿಗದಿತ ವೇಗದ ಮಿತಿಯನ್ನು ಮೀರಿದಾಗ ರಸ್ತೆಯಲ್ಲಿರುವ ಸ್ಪೀಡ್ ಗನ್‌ಗಳು ಆಟೋಮ್ಯಾಟಿಕ್ ಆಗಿ ದಂಡ ವಿಧಿಸುತ್ತವೆ ಎಂದು ಹೇಳಿದ್ದಾರೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಲಾಕ್‌ಡೌನ್ ನಡುವೆಯೂ ಭಾರೀ ಪ್ರಮಾಣದ ದಂಡ ವಿಧಿಸಿದ ದೆಹಲಿ ಪೊಲೀಸರು

ದೆಹಲಿ ನಗರದ ಹಲವು ಪ್ರಮುಖ ಮಾರ್ಗಗಳಲ್ಲಿ ಸ್ಪೀಡ್ ಗನ್‌ಗಳನ್ನು ಅಳವಡಿಸಲಾಗಿದೆ. ಈ ಗನ್‌ಗಳು ವಾಹನಗಳ ವೇಗವನ್ನು ಒಂದು ಕಿ.ಮೀ ದೂರದಿಂದಲೇ ಅಳೆಯುತ್ತವೆ. ನಿಗದಿತ ವೇಗದ ಮಿತಿಯನ್ನು ಮೀರಿದರೆ ಫೋಟೋ ತೆಗೆಯುತ್ತವೆ. ಇದು ಆಟೋಮ್ಯಾಟಿಕ್ ಕ್ರಿಯೆಯಾಗಿದ್ದು, ನಂತರ ಚಲನ್ ಅನ್ನು ಆನ್‌ಲೈನ್‌ನಲ್ಲಿ ರೂಲ್ ಬ್ರೇಕರ್‌ಗೆ ಕಳುಹಿಸಲಾಗುತ್ತದೆ.

ಲಾಕ್‌ಡೌನ್ ನಡುವೆಯೂ ಭಾರೀ ಪ್ರಮಾಣದ ದಂಡ ವಿಧಿಸಿದ ದೆಹಲಿ ಪೊಲೀಸರು

ಈ ಚಲನ್‌ಗಳನ್ನು ಆನ್‌ಲೈನ್‌ನಲ್ಲಿಯೂ ಪಾವತಿಸಬಹುದು. ನಗರದ ಅನೇಕ ಮುಖ್ಯ ರಸ್ತೆಗಳಲ್ಲಿ ಇವುಗಳನ್ನು ಅಳವಡಿಸಲಾಗಿದೆ. ಇವು ಹಗಲಿನಲ್ಲಿ ಮಾತ್ರವಲ್ಲದೇ ರಾತ್ರಿ ವೇಳೆಯಲ್ಲಿಯೂ ಕಾರ್ಯನಿರ್ವಹಿಸುತ್ತವೆ. ಚಲನ್‌ನೊಂದಿಗೆ ನಿಯಮ ಉಲ್ಲಂಘಿಸಿರುವ ಫೋಟೋಗಳನ್ನು ಕಳುಹಿಸಿಲ್ಲ ಎಂಬುದು ಸಾರ್ವಜನಿಕರ ದೂರು.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಲಾಕ್‌ಡೌನ್ ನಡುವೆಯೂ ಭಾರೀ ಪ್ರಮಾಣದ ದಂಡ ವಿಧಿಸಿದ ದೆಹಲಿ ಪೊಲೀಸರು

ಇದರಿಂದಾಗಿ ಜನರಲ್ಲಿ ಗೊಂದಲ ಉಂಟಾಗುತ್ತಿದೆ. ಅನೇಕ ಜನರು ಆನ್‌ಲೈನ್‌ನಲ್ಲಿ ದಂಡದ ಬಗ್ಗೆ ಪರಿಶೀಲಿಸುವುದಿಲ್ಲ. ಇದರಿಂದ ದಂಡದ ಪ್ರಮಾಣವು ಹೆಚ್ಚಾಗುತ್ತದೆ. ಚಲನ್ ನೀಡಬೇಕೋ ಬೇಡವೋ ಎಂಬುದರ ಬಗ್ಗೆ ದೆಹಲಿ ಪೊಲೀಸರು ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.

Article Published On: Saturday, May 2, 2020, 17:22 [IST]
English summary
Delhi police issues 4.5 lakh challan during lockdown. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+