250 ಎಲೆಕ್ಟ್ರಿಕ್ ಕಾರುಗಳ ಪೂರೈಕೆಗಾಗಿ ಹೊಸ ಟೆಂಡರ್ ಪಡೆದುಕೊಂಡ ಟಾಟಾ ಮತ್ತು ಹ್ಯುಂಡೈ

ಸರ್ಕಾರಿ ಸ್ವಾಮ್ಯದ ಎನರ್ಜಿ ಎಫಿಷಿಯೆನ್ಸಿ ಸರ್ವೀಸಸ್ ಲಿಮಿಟೆಡ್ (ಇಇಎಸ್ಎಲ್) ಸಂಸ್ಥೆಯು ವಿವಿಧ ಇಲಾಖೆಯ ಅಧಿಕಾರಿಗಳ ಅಧಿಕತೃತ ವಾಹನಗಳನ್ನಾಗಿ ಎಲೆಕ್ಟ್ರಿಕ್ ವಾಹನ ಖರೀದಿಗೆ ಆದ್ಯತೆ ನೀಡುತ್ತಿದ್ದು, ಇದೀಗ 250 ಇವಿ ಕಾರುಗಳನ್ನು ಖರೀದಿಸುತ್ತಿರುವಾಗಿ ಘೋಷಣೆ ಮಾಡಿದೆ.

250 ಎಲೆಕ್ಟ್ರಿಕ್ ಕಾರುಗಳ ಪೂರೈಕೆಗಾಗಿ ಹೊಸ ಟೆಂಡರ್ ಪಡೆದುಕೊಂಡ ಟಾಟಾ ಮತ್ತು ಹ್ಯುಂಡೈ

ಕಳೆದ ವಾರ 250 ಇವಿ ಕಾರುಗಳ ಖರೀದಿಗಾಗಿ ಟೆಂಡರ್ ಕರೆದಿದ್ದ ಎನರ್ಜಿ ಎಫಿಷಿಯೆನ್ಸಿ ಸರ್ವೀಸಸ್ ಲಿಮಿಟೆಡ್ (ಇಇಎಸ್ಎಲ್) ಸಂಸ್ಥೆಯು 150 ಯುನಿಟ್ ಟಾಟಾ ನೆಕ್ಸಾನ್ ಮತ್ತು 100 ಯನಿಟ್ ಹ್ಯುಂಡೈ ಕೊನಾ ಕಾರುಗಳನ್ನು ಆಯ್ಕೆ ಮಾಡಿದ್ದು, ಇಂಧನ ಆಧಾರಿತ ವಾಹನಗಳನ್ನು ಆಯ್ಕೆಯನ್ನು ಹಂತ-ಹಂತವಾಗಿ ತಗ್ಗಿಸುತ್ತಿರುವುದು ಮಹತ್ವದ ಬದಲಾವಣೆಗೆ ಕಾರಣವಾಗಿದೆ. ಜೊತೆಗೆ ಟೆಂಡರ್‌ನಲ್ಲಿ ಖರೀದಿ ಮಾಡುವ ಇವಿ ವಾಹನಗಳಿಂದ ಗರಿಷ್ಠ ಲಾಭಗಳಿದ್ದು, ವಿಸ್ತರಿತ ವಾರಂಟಿ ಮತ್ತು ಕೈಗೆಟುಕುವ ಬೆಲೆಗಳಲ್ಲಿ ಇವಿ ವಾಹನಗಳು ಲಭ್ಯವಾಗುತ್ತಿವೆ.

250 ಎಲೆಕ್ಟ್ರಿಕ್ ಕಾರುಗಳ ಪೂರೈಕೆಗಾಗಿ ಹೊಸ ಟೆಂಡರ್ ಪಡೆದುಕೊಂಡ ಟಾಟಾ ಮತ್ತು ಹ್ಯುಂಡೈ

ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುವ ಸರ್ಕಾರಿ ಸಂಸ್ಥೆಗಳ ಅಧಿಕೃತ ವಾಹನಗಳ ನಿರ್ವಹಣಾ ಜವಾಬ್ದಾರಿ ಹೊತ್ತಿರುವ ಎನರ್ಜಿ ಎಫಿಷಿಯೆನ್ಸಿ ಸರ್ವೀಸಸ್ ಲಿಮಿಟೆಡ್ (ಇಇಎಸ್ಎಲ್) ಸಂಸ್ಥೆಯು ಡೀಸೆಲ್ ಕಾರುಗಳ ಆಯ್ಕೆಯನ್ನು ಗಣನೀಯವಾಗಿ ಇಳಿಕೆ ಮಾಡಿದ್ದು, ಪೂರ್ಣಪ್ರಮಾಣದಲ್ಲಿ ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಹೆಚ್ಚಿನ ಒತ್ತು ನೀಡುತ್ತಿದೆ.

250 ಎಲೆಕ್ಟ್ರಿಕ್ ಕಾರುಗಳ ಪೂರೈಕೆಗಾಗಿ ಹೊಸ ಟೆಂಡರ್ ಪಡೆದುಕೊಂಡ ಟಾಟಾ ಮತ್ತು ಹ್ಯುಂಡೈ

ಪ್ರಮುಖ ಇಲಾಖೆಗಳಿಗೆ ಈಗಾಗಲೇ ವಿವಿಧ ಮಾದರಿಯ ಸಾವಿರಾರು ಎಲೆಕ್ಟ್ರಿಕ್ ಕಾರು ಮಾದರಿಗಳನ್ನು ಬಜೆಟ್‌ಗೆ ಅನುಗುಣವಾಗಿ ಪೂರೈಕೆ ಮಾಡಿದ್ದು, ಇದೀಗ ಹೊಸ ಟೆಂಡರ್ ಮೂಲಕ ಮತ್ತೆ 250 ಇವಿ ಕಾರುಗಳನ್ನು ಟಾಟಾ ಮತ್ತು ಹ್ಯುಂಡೈ ಕಂಪನಿಯಿಂದ ಖರೀದಿಸುತ್ತಿರುವುದಾಗಿ ಅಧಿಕೃತ ಮಾಹಿತಿ ನೀಡಿದೆ.

250 ಎಲೆಕ್ಟ್ರಿಕ್ ಕಾರುಗಳ ಪೂರೈಕೆಗಾಗಿ ಹೊಸ ಟೆಂಡರ್ ಪಡೆದುಕೊಂಡ ಟಾಟಾ ಮತ್ತು ಹ್ಯುಂಡೈ

ಟಾಟಾ ನೆಕ್ಸಾನ್ ಇವಿ ಕಾರು ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 13.99 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ.15.99 ಲಕ್ಷ ಬೆಲೆ ಪಡೆದುಕೊಂಡಿದ್ದು, ಎಕ್ಸ್‌ಎಂ, ಎಕ್ಸ್‌ಝಡ್ ಪ್ಲಸ್, ಎಕ್ಸ್‌ಝಡ್‍ ಪ್ಲಸ್ ಲಕ್ಸ್ ಎನ್ನುವ ಮೂರು ಪ್ರಮುಖ ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ.

250 ಎಲೆಕ್ಟ್ರಿಕ್ ಕಾರುಗಳ ಪೂರೈಕೆಗಾಗಿ ಹೊಸ ಟೆಂಡರ್ ಪಡೆದುಕೊಂಡ ಟಾಟಾ ಮತ್ತು ಹ್ಯುಂಡೈ

ಹೊಸ ಎಲೆಕ್ಟ್ರಿಕ್ ಕಾರಿನಲ್ಲಿ 95 ಕಿ.ವ್ಯಾಟ್ ಎಲೆಕ್ಟ್ರಿಕ್ ಮೋಟಾರ್ ಅಳವಡಿಸಲಾಗಿದ್ದು, ಎ‍ಆರ್‌ಎಐ ಪ್ರಮಾಣ ಪತ್ರದಂತೆ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಒಂದು ಬಾರಿಗೆ ಪೂರ್ತಿಯಾಗಿ ಚಾರ್ಜ್ ಆದಲ್ಲಿ ಗರಿಷ್ಠ 312 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

250 ಎಲೆಕ್ಟ್ರಿಕ್ ಕಾರುಗಳ ಪೂರೈಕೆಗಾಗಿ ಹೊಸ ಟೆಂಡರ್ ಪಡೆದುಕೊಂಡ ಟಾಟಾ ಮತ್ತು ಹ್ಯುಂಡೈ

ಹಾಗೆಯೇ ಹ್ಯುಂಡೈ ಕೊನಾ ಎಲೆಕ್ಟ್ರಿಕ್ ಕಾರು ಅತಿ ಕಡಿಮೆ ನಿರ್ವಹಣಾ ವೆಚ್ಚದಿಂದಾಗಿ ಗ್ರಾಹಕರ ಮೆಚ್ಚುಗೆಗೆ ಕಾರಣವಾಗಿದ್ದು, ಸಾಮಾನ್ಯ ಕಾರುಗಳಿಂತಲೂ ಶೇ.80ರಷ್ಟು ಕಡಿಮೆ ರನ್ನಿಂಗ್ ಕಾಸ್ಟ್ ಹೊಂದಿರುವ ಕೊನಾ ಕಾರು ಪ್ರತಿ ಕಿ.ಮೀ ಗೆ ರೂ.1 ಕ್ಕಿಂತಲೂ ಕಡಿಮೆ ನಿರ್ವಹಣಾ ವೆಚ್ಚವನ್ನು ಹೊಂದಿದೆ.

250 ಎಲೆಕ್ಟ್ರಿಕ್ ಕಾರುಗಳ ಪೂರೈಕೆಗಾಗಿ ಹೊಸ ಟೆಂಡರ್ ಪಡೆದುಕೊಂಡ ಟಾಟಾ ಮತ್ತು ಹ್ಯುಂಡೈ

39.2kWh ಬ್ಯಾಟರಿ ಪ್ಯಾಕ್ ಹೊಂದಿರುವ ಹ್ಯುಂಡೈ ಕೊನಾ ಇವಿ ಕಾರು ಪ್ರತಿ ಚಾರ್ಜ್‌ಗೆ ಗರಿಷ್ಠ 452 ಕಿ.ಮಿ ಮೈಲೇಜ್ ಹಿಂದಿರುಗಿಸುವ ವೈಶಿಷ್ಟ್ಯತೆ ಹೊಂದಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 23.90 ಲಕ್ಷ ಬೆಲೆ ಹೊಂದಿದೆ. ಬೆಲೆ ತುಸು ದುಬಾರಿ ಎನ್ನಿಲಸಿದರೂ ಹೊಸ ಕಾರಿನಲ್ಲಿ ಫೀಚರ್ಸ್‌ಗಳಿಗೆ ಅನುಗುಣವಾಗಿ ಹಲವಾರು ಸುಧಾರಿತ ಮಾದರಿಯ ತಾಂತ್ರಿಕ ಸೌಲಭ್ಯಗಳಿದ್ದು, ಟೆಂಡರ್ ಮೂಲಕ ಖರೀದಿಸುವ ಇವಿ ವಾಹನಗಳ ಬೆಲೆಯು ರೀಟೆಲ್ ದರಕ್ಕಿಂತಲೂ ತುಸು ಬೆಲೆಗೆ ಒದಗಿಸಲಾಗುತ್ತದೆ.

250 ಎಲೆಕ್ಟ್ರಿಕ್ ಕಾರುಗಳ ಪೂರೈಕೆಗಾಗಿ ಹೊಸ ಟೆಂಡರ್ ಪಡೆದುಕೊಂಡ ಟಾಟಾ ಮತ್ತು ಹ್ಯುಂಡೈ

ಇನ್ನು ಪ್ರಸ್ತುತ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟಕ್ಕೆ ಪೂರಕವಾದ ವಾತಾವರಣವಿದ್ದರೂ ಚಾರ್ಜಿಂಗ್ ನಿಲ್ದಾಣಗಳ ಕೊರತೆಯು ಇವಿ ವಾಹನಗಳ ಖರೀದಿಗೆ ಹಿನ್ನಡೆಯುಂಟು ಮಾಡುತ್ತಿದ್ದು, ಎನರ್ಜಿ ಎಫಿಷಿಯೆನ್ಸಿ ಸರ್ವೀಸಸ್ ಲಿಮಿಟೆಡ್ ಸಂಸ್ಥೆಯು ವಿವಿಧ ಸರ್ಕಾರಿ ಸಂಸ್ಥೆಗಳ ಸಹಯೋಗದೊಂದಿಗೆ ಆಯಾಕಟ್ಟಿನ ಪ್ರದೇಶಗಳಲ್ಲಿ ಸಾರ್ವಜನಿಕ ಬಳಕೆಯ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯುತ್ತಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

250 ಎಲೆಕ್ಟ್ರಿಕ್ ಕಾರುಗಳ ಪೂರೈಕೆಗಾಗಿ ಹೊಸ ಟೆಂಡರ್ ಪಡೆದುಕೊಂಡ ಟಾಟಾ ಮತ್ತು ಹ್ಯುಂಡೈ

ಕಳೆದ ಫೆಬ್ರುವರಿಯಲ್ಲೇ ಹೊಸ ಯೋಜನೆಗಾಗಿ ಬಿಎಸ್ಎನ್ಎನ್ ಸಂಸ್ಥೆಯ ಜೊತೆಗೂಡಿ ಹೊಸ ಒಪ್ಪಂದಕ್ಕೆ ಸಹಿ ಹಾಕಿದ್ದ ಇಇಎಸ್ಎಲ್ ಸಂಸ್ಥೆಯು ಮಾರ್ಚ್‌ನಲ್ಲಿ ಹೊಸ ಯೋಜನೆಗೆ ಅಧಿಕೃತವಾಗಿ ನೀಡುವ ಯೋಜನೆಯಲ್ಲಿತ್ತು.

250 ಎಲೆಕ್ಟ್ರಿಕ್ ಕಾರುಗಳ ಪೂರೈಕೆಗಾಗಿ ಹೊಸ ಟೆಂಡರ್ ಪಡೆದುಕೊಂಡ ಟಾಟಾ ಮತ್ತು ಹ್ಯುಂಡೈ

ಆದರೆ ಕರೋನಾ ವೈರಸ್ ಪರಿಣಾಮದಿಂದಾಗಿ ಹೊಸ ಯೋಜನೆಯನ್ನು ತಟಸ್ಥವಾಗಿಟ್ಟದ್ದ ಇಇಎಸ್ಎಲ್ ಸಂಸ್ಥೆಯು ಇದೀಗ ನೋಯ್ಡಾ ಅಭಿವೃದ್ದಿ ಪ್ರಾಧಿಕಾರದ ಜೊತೆಗೂಡಿ ಮರುಚಾಲನೆ ನೀಡುತ್ತಿದ್ದು, ಯೋಜನೆಯ ಮೊದಲ ಹಂತವಾಗಿ ನೋಯ್ಡಾದಲ್ಲಿ 13 ಚಾರ್ಜಿಂಗ್ ನಿಲ್ದಾಣಕ್ಕೆ ಗ್ರೀನ್ ಸಿಗ್ನಲ್ ನೀಡಲು ಒಪ್ಪಿಗೆ ಸೂಚಿಸಿದೆ.

MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

250 ಎಲೆಕ್ಟ್ರಿಕ್ ಕಾರುಗಳ ಪೂರೈಕೆಗಾಗಿ ಹೊಸ ಟೆಂಡರ್ ಪಡೆದುಕೊಂಡ ಟಾಟಾ ಮತ್ತು ಹ್ಯುಂಡೈ

2021ರ ಒಳಗಾಗಿ ದೇಶಾದ್ಯಂತ ಒಟ್ಟು 1 ಸಾವಿರ ಸಾರ್ವಜನಿಕ ಬಳಕೆಯ ಚಾರ್ಜಿಂಗ್ ನಿಲ್ದಾಣಗಳನ್ನು ನಿರ್ಮಿಸಲು ಯೋಜಿಸಲಾಗಿದ್ದು, ಎಲೆಕ್ಟ್ರಿಕ್ ವಾಹನಗಳ ಮಾದರಿಗಳಿಗೆ ಅನುಗುಣವಾಗಿ ಎಸಿ ಮತ್ತು ಡಿಸಿ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳ ನಿರ್ಮಾಣ ಮಾಡಲಿದೆ.

Most Read Articles

Kannada
English summary
EESL To Procure 250 Tata Nexon EV & Hyundai Kona EV. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X