2020ರ ಆಟೋ ಎಕ್ಸ್‌ಪೋದಲ್ಲಿ ಕಂಡು ಬಂದ ಎಲೆಕ್ಟ್ರಿಕ್ ಕಾರುಗಳಿವು

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರುಕಟ್ಟೆಯು ವೇಗವಾಗಿ ಬೆಳೆಯುತ್ತಿದೆ. 2020ರ ಆಟೋ ಎಕ್ಸ್‌ಪೋದಲ್ಲಿ ಎಲೆಕ್ಟ್ರಿಕ್ ಕಾರುಗಳ ಪ್ರಮಾಣ ಏರಿಕೆಯಾಗಿದೆ. ಈ ಎಕ್ಸ್ ಪೋದಲ್ಲಿ ಅನೇಕ ಕಂಪನಿಗಳು ತಮ್ಮ ಎಲೆಕ್ಟ್ರಿಕ್ ಕಾರುಗಳನ್ನು ಪರಿಚಯಿಸಿದವು. ಈ ಲೇಖನದಲ್ಲಿ 2020ರ ಆಟೋ ಎಕ್ಸ್‌ಪೋದಲ್ಲಿ ಕಂಡುಬಂದ ಎಲೆಕ್ಟ್ರಿಕ್ ಕಾರುಗಳ ಬಗ್ಗೆ ನೋಡೋಣ.

2020ರ ಆಟೋ ಎಕ್ಸ್‌ಪೋದಲ್ಲಿ ಕಂಡು ಬಂದ ಎಲೆಕ್ಟ್ರಿಕ್ ಕಾರುಗಳಿವು

ರೆನಾಲ್ಟ್ ಕೆ- ಝಡ್ಇ

ಇದು ರೆನಾಲ್ಟ್ ಕ್ವಿಡ್‌ನ ವಿದ್ಯುತ್ ಆವೃತ್ತಿಯಾಗಿದೆ. ಈ ಎಲೆಕ್ಟ್ರಿಕ್ ಕಾರು ವೇಗದ ಚಾರ್ಜಿಂಗ್‍‍ನಲ್ಲಿ ಕೇವಲ 50 ನಿಮಿಷಗಳಲ್ಲಿ 0 - 80%ವರೆಗೆ ಚಾರ್ಜ್ ಆಗುತ್ತದೆ. ಪೂರ್ತಿಯಾಗಿ ಚಾರ್ಜ್ ಮಾಡಿದ ನಂತರ ಸುಮಾರು 250 ಕಿ.ಮೀಗಳವರೆಗೆ ಚಲಿಸುತ್ತದೆ.

2020ರ ಆಟೋ ಎಕ್ಸ್‌ಪೋದಲ್ಲಿ ಕಂಡು ಬಂದ ಎಲೆಕ್ಟ್ರಿಕ್ ಕಾರುಗಳಿವು

ರೆನಾಲ್ಟ್ ಟ್ವಿಗ್ಗಿ

ಇದು ರೆನಾಲ್ಟ್ ಕಂಪನಿಯ ಸರಕು ಎಲೆಕ್ಟ್ರಿಕ್ ಕಾರ್ ಆಗಿದೆ. ಈ ಕಾರಿನಲ್ಲಿರುವ ಎಲೆಕ್ಟ್ರಿಕ್ ಮೋಟರ್ 16 ಬಿಎಚ್‌ಪಿ ಪವರ್ ಹಾಗೂ 57 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಲೆಕ್ಟ್ರಿಕ್ ಕಾರು 6.1 ಕಿ.ವ್ಯಾ ಬ್ಯಾಟರಿಯನ್ನು ಹೊಂದಿದ್ದು, ಪೂರ್ತಿಯಾಗಿ ಚಾರ್ಜ್ ಮಾಡಿದ ನಂತರ 100 ಕಿ.ಮೀಗಳವರೆಗೆ ಚಲಿಸುತ್ತದೆ.

2020ರ ಆಟೋ ಎಕ್ಸ್‌ಪೋದಲ್ಲಿ ಕಂಡು ಬಂದ ಎಲೆಕ್ಟ್ರಿಕ್ ಕಾರುಗಳಿವು

ರೆನಾಲ್ಟ್ ಜೋಯಿ

ರೆನಾಲ್ಟ್ ಕಂಪನಿಯು ಈ ಆಟೋ ಎಕ್ಸ್‌ಪೋದಲ್ಲಿ ಜೋಯಿ ಎಲೆಕ್ಟ್ರಿಕ್ ಕಾರನ್ನು ಪ್ರದರ್ಶಿಸಿತು. ಜೋಯಿ ಎಲೆಕ್ಟ್ರಿಕ್ ಕಾರು 52 ಕಿ.ವ್ಯಾ ಬ್ಯಾಟರಿಯನ್ನು ಹೊಂದಿದ್ದು, ಪೂರ್ತಿಯಾಗಿ ಚಾರ್ಜ್ ಮಾಡಿದ ನಂತರ 385 ಕಿ.ಮೀ.ಗಳವರೆಗೆ ಚಲಿಸುತ್ತದೆ. ಈ ಕಾರಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 140 ಕಿ.ಮೀಗಳಾಗಿದೆ.

2020ರ ಆಟೋ ಎಕ್ಸ್‌ಪೋದಲ್ಲಿ ಕಂಡು ಬಂದ ಎಲೆಕ್ಟ್ರಿಕ್ ಕಾರುಗಳಿವು

ಎಂಜಿ ಮಾರ್ವೆಲ್ ಎಕ್ಸ್

ಎಂಜಿ ಮೋಟಾರ್ ಕಂಪನಿಯು 2020ರ ಆಟೋ ಎಕ್ಸ್‌ಪೋದಲ್ಲಿ ಎಲೆಕ್ಟ್ರಿಕ್ ಕಾರ್ ಆದ ಮಾರ್ವೆಲ್ ಎಕ್ಸ್ ಅನ್ನು ಪ್ರದರ್ಶಿಸಿತು. ಮಾರ್ವೆಲ್ ಎಕ್ಸ್ ಕಾರ್ ಅನ್ನು ಹಿಂದಿನ ವ್ಹೀಲ್ ಡ್ರೈವ್ ಹಾಗೂ ಎಲ್ಲಾ ವೀಲ್ ಡ್ರೈವ್ ಆವೃತ್ತಿಗಳಲ್ಲಿ ಪರಿಚಯಿಸಲಾಗಿದೆ. ಈ ಎರಡೂ ಆವೃತ್ತಿಗಳೂ 52.5 ಕಿ.ವ್ಯಾ ಬ್ಯಾಟರಿಯನ್ನು ಹೊಂದಿದ್ದು, ಪೂರ್ತಿಯಾಗಿ ಚಾರ್ಜ್ ಮಾಡಿದ ನಂತರ ಈ ಕಾರು 400 ಕಿ.ಮೀಗಳವರೆಗೆ ಚಲಿಸುತ್ತವೆ.

2020ರ ಆಟೋ ಎಕ್ಸ್‌ಪೋದಲ್ಲಿ ಕಂಡು ಬಂದ ಎಲೆಕ್ಟ್ರಿಕ್ ಕಾರುಗಳಿವು

ಇ 200 ಮೈಕ್ರೋ

ಇದು ಎಂಜಿ ಮೋಟಾರ್‌ನ ಎರಡನೇ ಎಲೆಕ್ಟ್ರಿಕ್ ಕಾರ್ ಆಗಿದೆ. ಕಂಪನಿಯು ಈ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಪೂರ್ತಿಯಾಗಿ ಚಾರ್ಜ್ ಆದ ನಂತರ ಈ ಕಾರು 250 ಕಿ.ಮೀಗಳವರೆಗೆ ಚಲಿಸುತ್ತದೆ ಎಂದು ಹೇಳಲಾಗಿದೆ.

2020ರ ಆಟೋ ಎಕ್ಸ್‌ಪೋದಲ್ಲಿ ಕಂಡು ಬಂದ ಎಲೆಕ್ಟ್ರಿಕ್ ಕಾರುಗಳಿವು

ಇಕೆಯುವಿ 100

ಮಹೀಂದ್ರಾ ಕಂಪನಿಯು ತನ್ನ ಇಕೆಯುವಿ 100 ಕಾರ್ ಅನ್ನು ಆಟೋ ಎಕ್ಸ್‌ಪೋದಲ್ಲಿ ಬಿಡುಗಡೆಗೊಳಿಸಿದೆ. ಈ ಕಾರಿನ ಬೆಲೆ ಎಕ್ಸ್‌ಶೋರೂಂ ದರದಂತೆ ರೂ.8.25 ಲಕ್ಷಗಳಾಗಿದೆ. 40 ಕಿ.ವ್ಯಾ ಬ್ಯಾಟರಿಯನ್ನು ಹೊಂದಿರುವ ಈ ಕಾರು ಪೂರ್ತಿಯಾಗಿ ಚಾರ್ಚ್ ಆದ ನಂತರ 150 ಕಿ.ಮೀಗಳವರೆಗೆ ಚಲಿಸುತ್ತದೆ.

2020ರ ಆಟೋ ಎಕ್ಸ್‌ಪೋದಲ್ಲಿ ಕಂಡು ಬಂದ ಎಲೆಕ್ಟ್ರಿಕ್ ಕಾರುಗಳಿವು

ಎಕ್ಸ್‌ಯುವಿ 300

ಮಹೀಂದ್ರಾ ಕಂಪನಿಯ ಎರಡನೇ ಎಲೆಕ್ಟ್ರಿಕ್ ಕಾರ್ ಆದ ಎಕ್ಸ್‌ಯುವಿ 300ಯನ್ನು ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾಗಿದೆ. ಕಂಪನಿಯು ಈ ಕಾರಿನಲ್ಲಿರುವ ಬ್ಯಾಟರಿ ಹಾಗೂ ಮೋಟರ್ ಬಗ್ಗೆ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಆದರೆ ಇಕೆಯುವಿ 100 ಕಾರಿಗೆ ಹೋಲಿಸಿದರೆ ಈ ಕಾರಿನಲ್ಲಿ ಹಲವು ಬದಲಾವಣೆಗಳಾಗಬಹುದು.

2020ರ ಆಟೋ ಎಕ್ಸ್‌ಪೋದಲ್ಲಿ ಕಂಡು ಬಂದ ಎಲೆಕ್ಟ್ರಿಕ್ ಕಾರುಗಳಿವು

ಕಿಯಾ ಸೋಲ್ ಹಾಗೂ ಕಿಯಾ ನಿರೋ

ಕಿಯಾ ಕಂಪನಿಯು ತನ್ನ ಎರಡು ಎಲೆಕ್ಟ್ರಿಕ್ ಕಾರುಗಳಾದ ಕಿಯಾ ಸೋಲ್ ಹಾಗೂ ಕಿಯಾ ನಿರೋ ಕಾರುಗಳನ್ನು ಈ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಿದೆ. ಕಿಯಾ ನಿರೋ 64 ಕಿ.ವ್ಯಾ ಲಿಥಿಯಂ ಅಯಾನ್ ಬ್ಯಾಟರಿಯನ್ನು ಹೊಂದಿದ್ದು, 450 ಕಿ.ಮೀಗಳವರೆಗೆ ಚಲಿಸುತ್ತದೆ.

2020ರ ಆಟೋ ಎಕ್ಸ್‌ಪೋದಲ್ಲಿ ಕಂಡು ಬಂದ ಎಲೆಕ್ಟ್ರಿಕ್ ಕಾರುಗಳಿವು

ಕಿಯಾ ಸೋಲ್ 150 ಕಿ.ವ್ಯಾ ಎಲೆಕ್ಟ್ರಿಕ್ ಮೋಟರ್ ಅನ್ನು ಹೊಂದಿದ್ದು, ಪೂರ್ತಿಯಾಗಿ ಚಾರ್ಜ್ ಆದ ನಂತರ 383 ಕಿ.ಮೀಗಳವರೆಗೆ ಚಲಿಸುತ್ತದೆ.

2020ರ ಆಟೋ ಎಕ್ಸ್‌ಪೋದಲ್ಲಿ ಕಂಡು ಬಂದ ಎಲೆಕ್ಟ್ರಿಕ್ ಕಾರುಗಳಿವು

ಗ್ರೇಟ್‍ ವಾಲ್ ಆರ್ 1

ಗ್ರೇಟ್ ವಾಲ್ ಮೋಟಾರ್ಸ್ ಮೊದಲ ಬಾರಿಗೆ ಭಾರತೀಯ ಮಾರುಕಟ್ಟೆಗೆ ಕಾಲಿಟ್ಟಿದ್ದು, ಆಟೋ ಎಕ್ಸ್‌ಪೋದಲ್ಲಿ ತನ್ನ ಎಲೆಕ್ಟ್ರಿಕ್ ಕಾರ್ ಆದ ಆರ್ 1 ಅನ್ನು ಪ್ರದರ್ಶಿಸಿದೆ. ಈ ಕಾರು 33 ಕಿವ್ಯಾ ಬ್ಯಾಟರಿಯನ್ನು ಹೊಂದಿದ್ದು, 351 ಕಿ.ಮೀಗಳವರೆಗೆ ಚಲಿಸುತ್ತದೆ.

2020ರ ಆಟೋ ಎಕ್ಸ್‌ಪೋದಲ್ಲಿ ಕಂಡು ಬಂದ ಎಲೆಕ್ಟ್ರಿಕ್ ಕಾರುಗಳಿವು

ಹೈಮಾ ಇ 1

ಈ ಆಟೋ ಎಕ್ಸ್‌ಪೋದಲ್ಲಿ ಹೈಮಾ ಇ 1 ಎಲೆಕ್ಟ್ರಿಕ್ ಕಾರ್ ಅನ್ನು ಸಹ ಪರಿಚಯಿಸಲಾಗಿದೆ. ಈ ಕಾರು 20.99 ಕಿ.ವ್ಯಾ ಬ್ಯಾಟರಿಯನ್ನು ಹೊಂದಿದ್ದು, ಪೂರ್ತಿಯಾಗಿ ಚಾರ್ಜ್ ಆದ ನಂತರ 202 ಕಿ.ಮೀಗಳವರೆಗೆ ಚಲಿಸುತ್ತದೆ.

2020ರ ಆಟೋ ಎಕ್ಸ್‌ಪೋದಲ್ಲಿ ಕಂಡು ಬಂದ ಎಲೆಕ್ಟ್ರಿಕ್ ಕಾರುಗಳಿವು

ಟಾಟಾ ಆಲ್ಟ್ರೋಜ್

ಟಾಟಾ ಮೋಟಾರ್ಸ್, ಆಲ್ಟ್ರೋಸ್ ಎಲೆಕ್ಟ್ರಿಕ್ ಕಾರ್ ಅನ್ನು ಪರಿಚಯಿಸಿದೆ. ಈ ಕಾರಿನ ಬಗ್ಗೆ ಯಾವುದೇ ಮಾಹಿತಿ ನೀಡದಿದ್ದರೂ, ಅದರಲ್ಲಿ 30.2 ಕಿ.ವ್ಯಾ ಬ್ಯಾಟರಿಯನ್ನು ಅಳವಡಿಸಲಾಗುವುದು ಎಂದು ಹೇಳಲಾಗಿದ್ದು, ಈ ಬ್ಯಾಟರಿಯನ್ನು ಪೂರ್ತಿಯಾಗಿ ಚಾರ್ಜ್ ಮಾಡಿದ ನಂತರ 312 ಕಿ.ಮೀಗಳವರೆಗೆ ಚಲಿಸುತ್ತದೆ.

Article Published On: Saturday, February 15, 2020, 12:00 [IST]
English summary
Electric Cars at Auto Expo 2020. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+