ಸೆಲೆಬ್ರಿಟಿಗಳ ಬಳಿಯಿರುವ ದುಬಾರಿ ಸೂಪರ್ ಫಾಸ್ಟ್ ಕಾರುಗಳಿವು

ಸೆಲೆಬ್ರಿಟಿಗಳಿಗೆ ದುಬಾರಿ ಮತ್ತು ಐಷಾರಾಮಿ ಕಾರುಗಳ ಕ್ರೇಜ್ ಹೆಚ್ಚು. ಕೇವಲ ದುಬಾರಿ ಕಾರುಗಳ ಮೇಲೆ ಮಾತ್ರವಲ್ಲ, ಸೂಪರ್ ಫಾಸ್ಟ್ ಕಾರುಗಳ ಕ್ರೇಜ್ ಕೂಡ ಹೆಚ್ಚಿರುತ್ತದೆ. ಸಿನಿಮಾ ತಾರೆಯರು, ಕ್ರೀಡಾ ಪಟುಗಳು ಅಲ್ಲದೇ ಉದ್ಯಮಿಗಳು ಕೂಡ ಇದರಿಂದ ಹೊರತಾಗಿಲ್ಲ.

ಸೆಲೆಬ್ರಿಟಿಗಳ ಬಳಿಯಿರುವ ದುಬಾರಿ ಸೂಪರ್ ಫಾಸ್ಟ್ ಕಾರುಗಳಿವು

ಯಾರ ಬಳಿಯೂ ಇಲ್ಲದಂಥ ಕಾರು ಅಥವಾ ಅತೀ ದುಬಾರಿ ಕಾರನ್ನು ಹೊಂದಬೇಕೆಂಬ ಕನಸು ಹಲವು ಸೆಲೆಬ್ರಿಟಿಗಳಿಗಿದೆ. ಇದಕ್ಕಾಗಿ ಅವರು ಅತಿ ದುಬಾರಿ ಕಾರುಗಳನ್ನು ಖರೀದಿಸುತ್ತಾರೆ. ಹಲವಾರು ಸೆಲೆಬ್ರಿಟಿಗಳು ದುಬಾರಿ ಸೂಪರ್ ಫಾಸ್ಟ್ ಕಾರುಗಳನ್ನು ಹೊಂದಿದ್ದಾರೆ. ಯಾವ ಎಲ್ಲಾ ಸೆಲೆಬ್ರಿಟಿಗಳು ಸುಬಾರಿ ಸೂಪರ್ ಫಾಸ್ಟ್ ಕಾರುಗಳನ್ನು ಹೊಂದಿದ್ದಾರೆ ಎಂಬುದರ ಮಾಹಿತಿಯನ್ನು ಈ ಲೇಖನದಲ್ಲಿ ನೋಡೊಣ.

ಸೆಲೆಬ್ರಿಟಿಗಳ ಬಳಿಯಿರುವ ದುಬಾರಿ ಸೂಪರ್ ಫಾಸ್ಟ್ ಕಾರುಗಳಿವು

ಮಲ್ಲಿಕಾ ಶೆರಾವತ್

ಲ್ಯಾಂಬೊರ್ಗಿನ್ ಅವೆಂಟಡಾರ್

ಈ ಕಾರು ವಿಶ್ವದ ಅತಿ ವೇಗದ ಕಾರುಗಳಲ್ಲಿ ಒಂದಾಗಿದೆ. ಸುರಕ್ಷತಾ ದೃಷ್ಠಿಯಿಂದಾಗಿ ಈ ಕಾರಿನ ವೇಗವನ್ನು ಪ್ರತಿ ಗಂಟೆಗೆ 349 ಕಿ.ಮೀ ಸೀಮಿತಗೊಳಿಸಲಾಗಿದೆ. ಈ ಕಾರಿನಲ್ಲಿ 6.5 ಲೀಟರ್ ವಿ12 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 750 ಬಿ‍‍ಹೆಚ್‍‍ಪಿ ಪವರ್ ಮತ್ತು 690 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಸೆಲೆಬ್ರಿಟಿಗಳ ಬಳಿಯಿರುವ ದುಬಾರಿ ಸೂಪರ್ ಫಾಸ್ಟ್ ಕಾರುಗಳಿವು

ಈ ಕಾರು ಕೇವಲ 2.9 ಸೆಕೆಂಡುಗಳಲ್ಲಿ ಗಂಟೆಗೆ 0 - 100 ಕಿ.ಮೀ ಕ್ರಮಿಸುತ್ತದೆ. ಈ ಕಾರನ್ನು ಬಾಲಿವುಡ್ ನಟಿ ಮಲ್ಲಿಕಾ ಶೆರಾವತ್ ಅವರು ಹೊಂದಿದ್ದಾರೆ. ಆದರೆ ಈ ಕಾರು ಭಾರತದಲ್ಲಿ ಇಲ್ಲ. ಅವರ ಈ ಕಾರು ಯುರೋಪ್‍‍ನಲ್ಲಿದೆ.

ಸೆಲೆಬ್ರಿಟಿಗಳ ಬಳಿಯಿರುವ ದುಬಾರಿ ಸೂಪರ್ ಫಾಸ್ಟ್ ಕಾರುಗಳಿವು

ಯುವರಾಜ್ ಸಿಂಗ್

ಲ್ಯಾಂಬೊರ್ಗಿಸಿ ಮುರ್ಸಿಲಾಗೊ

ಲ್ಯಾಂಬೊರ್ಗಿನಿ ಮುರ್ಸಿಲಾಗೊ ಜನಪ್ರಿಯ ಕಾರು ಆಗಿದೆ. ಈ ಕಾರನ್ನು ಸ್ಫೋಟಕ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್ ಅವರು ಹೊಂದಿದ್ದಾರೆ. ಈ ಕಾರಿನಲ್ಲಿ 6.5 ಲೀಟರ್ ವಿ12 ಎಂಜಿನ್ ಅಳವಡಿಸಲಾಗಿದೆ.. ಈ ಎಂಜಿನ್ 632 ಬಿ‍‍ಹೆಚ್‍‍ಪಿ ಪವರ್ ಮತ್ತು 660 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಸೆಲೆಬ್ರಿಟಿಗಳ ಬಳಿಯಿರುವ ದುಬಾರಿ ಸೂಪರ್ ಫಾಸ್ಟ್ ಕಾರುಗಳಿವು

ಈ ಕಾರು ಕೇವಲ 3.2 ಸೆಕೆಂಡುಗಳಲ್ಲಿ 0-100 ಕಿ.ಮೀ ಕ್ರಮಿಸುತ್ತದೆ. ಈ ಸೂಪರ್‍ ಕಾರು ಪ್ರತಿ ಗಂಟೆಗೆ 330 ಕಿ.ಮೀ ಟಾಪ್ ಸ್ಫೀಡ್ ಅನ್ನು ಹೊಂದಿದೆ. ಈ ಕಾರು ಯುವರಾಜ್ ಸಿಂಗ್ ಅವರ ಬಳಿ ಇರುವ ದುಬಾರಿ ಕಾರುಗಳಲ್ಲಿ ಒಂದಾಗಿದೆ.

ಸೆಲೆಬ್ರಿಟಿಗಳ ಬಳಿಯಿರುವ ದುಬಾರಿ ಸೂಪರ್ ಫಾಸ್ಟ್ ಕಾರುಗಳಿವು

ಪೃಥ್ವಿರಾಜ್

ಲ್ಯಾಂಬೊರ್ಗಿನಿ ಹುರಾಕಾನ್

ಮಲಯಾಳಂ ಜನಪ್ರಿಯ ಚಿತ್ರ ನಟ ಪೃಥ್ವಿರಾಜ್ ಅವರು ಹೊಸ ಲ್ಯಾಂಬೊರ್ಗಿನಿ ಹುರಾಕಾನ್ ಕಾರನ್ನು ಹೊಂದಿದೆ. ಇವರ ಬಳಿ ಇರುವ ಬ್ಲ್ಯಾಕ್ ಬಣ್ಣದ ಹುರಾಕನ್ ಆಕರ್ಷಕ ಲುಕ್ ಅನ್ನು ಹೊಂದಿದೆ. ಈ ಕಾರು 3.4 ಸೆಕೆಂಡುಗಳಲ್ಲಿ 0-100 ಕಿ.ಮೀ ಕ್ರಮಿಸುತ್ತದೆ. ಈ ಕಾರು 5.2 ಲೀಟರ್ ವಿ10 ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 572 ಬಿ‍‍ಹೆಚ್‍‍ಪಿ ಪವರ್ ಮತ್ತು 540 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಸೆಲೆಬ್ರಿಟಿಗಳ ಬಳಿಯಿರುವ ದುಬಾರಿ ಸೂಪರ್ ಫಾಸ್ಟ್ ಕಾರುಗಳಿವು

ಹಾರ್ಡ್ ಕೌರ್

ಫೆರಾರಿ 458 ಇಟಾಲಿಯಾ

ಹಿಪ್ ಹಾಪ್ ಗಾಯಕಿ ಹಾರ್ಡ್ ಅವರು ದುಬಾರಿ ಫೆರಾರಿ 458 ಇಟಾಲಿಯ ಕಾರನ್ನು ಹೊಂದಿದ್ದಾರೆ. 458 ಇಟಾಲಿಯಾ ಕಾರು 4.5 ಲೀಟರ್ ವಿ8 ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 562 ಬಿ‍‍ಹೆಚ್‍‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಈ ಕಾರು 3.4 ಸೆಕೆಂಡುಗಳಲ್ಲಿ 0-100 ಕಿ.ಮೀ ಕ್ರಮಿಸುತ್ತದೆ. ಈ ಕಾರು ಗಂಟೆಗೆ 340 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

ಸೆಲೆಬ್ರಿಟಿಗಳ ಬಳಿಯಿರುವ ದುಬಾರಿ ಸೂಪರ್ ಫಾಸ್ಟ್ ಕಾರುಗಳಿವು

ಭೂಷಣ್ ಕುಮಾರ್

ಫೆರಾರಿ 458 ಸ್ಪೈಡರ್

ವಿಶ್ವದ ಅತ್ಯಂತ ಶ್ರೀಮಂತ ಸಂಗೀತ ನಿರ್ಮಾಪಕರಲ್ಲಿ ಒಬ್ಬರಾದ ಭೂಷಣ್ ಕುಮಾರ್ ಅವರು ರೋಲ್ಸ್ ರಾಯ್ಸ್ ಕಲ್ಲಿನಾನ್ ನಂತಹ ಅತಿ ದುಬಾರಿ ಕಾರುಗಳನ್ನು ಹೊಂದಿದ್ದಾರೆ. ಇದರೊಂದಿಗೆ ಅವರ ಬಳಿ ಫೆರಾರಿ 458 ಸ್ಪೈಡರ್ ಸೂಪರ್ ಕಾರು ಕೂಡ ಹೊಂದಿದ್ದಾರೆ.

ಸೆಲೆಬ್ರಿಟಿಗಳ ಬಳಿಯಿರುವ ದುಬಾರಿ ಸೂಪರ್ ಫಾಸ್ಟ್ ಕಾರುಗಳಿವು

ಈ ಕಾರು 4.5 ಲೀಟರ್ ವಿ8 ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 562 ಬಿ‍‍ಹೆಚ್‍ಪಿ ಪವರ್ ಮತು 540 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಕಾರು ಗಂಟೆಗೆ 320 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

ಸೆಲೆಬ್ರಿಟಿಗಳ ಬಳಿಯಿರುವ ದುಬಾರಿ ಸೂಪರ್ ಫಾಸ್ಟ್ ಕಾರುಗಳಿವು

ಶಿಲ್ಪಾ ಶೆಟ್ಟಿ

ಲ್ಯಾಂಬೊರ್ಗಿನಿ ಗಲ್ಲಾರ್ಡೊ

ಲ್ಯಾಂಬೊರ್ಗಿನಿ ಗಲ್ಲಾರ್ಡೊ ಅತ್ಯಂತ ಜನಪ್ರಿಯ ಕಾರುಗಳಲ್ಲಿ ಒಂದಾಗಿದೆ. ಈ ಕಾರಿನಲ್ಲಿ 5.2 ಲೀಟರ್ ವಿ10 ಎಂಜಿನ್ ಅನ್ನು ಅಳವಡಿಸಲಾಗಿದೆ.. ಈ ಎಂಜಿನ್ 562 ಬಿ‍‍ಹೆಚ್‍‍ಪಿ ಪವರ್ ಮತ್ತು 540 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಕಾರು ಗಂಟೆಗೆ 320 ಟಾಪ್ ಸ್ಪೀಡ್ ಅನ್ನು ಹೊಂದಿದೆ.

ಸೆಲೆಬ್ರಿಟಿಗಳ ಬಳಿಯಿರುವ ದುಬಾರಿ ಸೂಪರ್ ಫಾಸ್ಟ್ ಕಾರುಗಳಿವು

ರಣವೀರ್ ಸಿಂಗ್‍

ಲ್ಯಾಂಬೊರ್ಗಿನಿ ಉರುಸ್

ಬಾಲಿವುಡ್ ನಟ ರಣವೀರ್ ಸಿಂಗ್‍‍ರವರು ವಿಶ್ವದ ಅತಿ ವೇಗದ ಎಸ್‍‍ಯುವಿ‍‍ಗಳಲ್ಲಿ ಒಂದಾದ ಲ್ಯಾಂಬೊರ್ಗಿನಿ ಉರುಸ್ ಅನ್ನು ಹೊಂದಿದ್ದಾರೆ. ಲ್ಯಾಂಬೊರ್ಗಿನಿ ಉರುಸ್ ಎಸ್‍‍ಯುವಿಯ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ. 3 ಕೋಟಿಗಳಾಗಿದೆ. ಲ್ಯಾಂಬೊರ್ಗಿನಿ ಉರುಸ್‍‍ನಲ್ಲಿ ಹೊಸ 4.0 ಲೀಟರಿನ ವಿ8 ಟ್ವಿನ್ ಟರ್ಬೊ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 6,000 ಆರ್‍‍ಪಿ‍ಎಂನಲ್ಲಿ 650 ಬಿ‍‍ಹೆಚ್‍‍ಪಿ ಪವರ್ ಹಾಗೂ 2,250 ಆರ್‍‍ಪಿಎಂನಲ್ಲಿ 850 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಸೆಲೆಬ್ರಿಟಿಗಳ ಬಳಿಯಿರುವ ದುಬಾರಿ ಸೂಪರ್ ಫಾಸ್ಟ್ ಕಾರುಗಳಿವು

ಜಾನ್ ಅಬ್ರಹಾಂ

ನಿಸ್ಸಾನ್ ಜಿಟಿ-ಆರ್

ಬಾಲಿವುಡ್ ಜನಪ್ರಿಯ ನಟ ಜಾನ್ ಅಬ್ರಹಾಂ ಅವರು ನಿಸ್ಸಾನ್ ಜಿಟಿ-ಆರ್ ಕಾರನ್ನು ಹೊಂದಿದ್ದಾರೆ. ಈ ಕಾರು ವಿಶ್ವದ ಅತಿ ವೇಗದ ಕಾರುಗಳಲ್ಲಿ ಒಂದಾಗಿದೆ. ಈ ಕಾರಿನ ಬೆಲೆಯು ರೂ.2.3 ಕೋಟಿಗಳಾಗಿದೆ. ಈ ಕಾರು ಕೇವಲ 3 ಸೇಕೆಂಡುಗಳಲ್ಲಿ 0-100 ಕಿ.ಮೀ ಕ್ರಮಿಸುತ್ತದೆ. ಈ ಕಾರಿನಲ್ಲಿ 3.8 ಲೀಟರ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ.. ಈ ಎಂಜಿನ್ 562 ಬಿ‍‍ಹೆಚ್‍‍ಪಿ ಪವರ್ ಮತ್ತು 630 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

More from DriveSpark

Article Published On: Monday, January 20, 2020, 13:25 [IST]
English summary
FASTEST cars of India’s rich & famous. Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+