ಶೀಘ್ರದಲ್ಲೇ ಪುನರಾರಂಭಗೊಳ್ಳಲಿದೆ ಭಾರತ-ಅಮೆರಿಕಾ ನಡುವಿನ ವಿಮಾನಯಾನ

ಭಾರತದಲ್ಲಿ ವಿಮಾನಗಳನ್ನು ನಿಯಂತ್ರಿಸುವ ಡಿಜಿಸಿಎ, ಜುಲೈ 23ರಿಂದ ಭಾರತ ಹಾಗೂ ಅಮೆರಿಕಾ ನಡುವೆ ಪ್ರಯಾಣಿಕ ವಿಮಾನಗಳ ಹಾರಾಟವನ್ನು ಆರಂಭಿಸುವುದಾಗಿ ಪ್ರಕಟಿಸಿದೆ. ಅಮೆರಿಕಾ, ಜರ್ಮನಿ ಹಾಗೂ ಫ್ರಾನ್ಸ್ ದೇಶಗಳ ನಡುವೆ ಪ್ರಯಾಣಿಕ ವಿಮಾನಗಳ ಹಾರಾಟವನ್ನು ಆರಂಭಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಶೀಘ್ರದಲ್ಲೇ ಪುನರಾರಂಭಗೊಳ್ಳಲಿದೆ ಭಾರತ-ಅಮೆರಿಕಾ ನಡುವಿನ ವಿಮಾನಯಾನ

ಈ ಹಿನ್ನೆಲೆಯಲ್ಲಿ ಅಮೆರಿಕಾ-ಭಾರತ ನಡುವೆ ವಿಮಾನ ಹಾರಾಟವನ್ನು ಆರಂಭಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಇತರ ದೇಶಗಳಿಗೂ ಶೀಘ್ರದಲ್ಲೇ ವಿಮಾನಗಳ ಹಾರಾಟವನ್ನು ಆರಂಭಿಸುವ ನಿರೀಕ್ಷೆಗಳಿವೆ. ಕರೋನಾ ಸೋಂಕಿನ ಪ್ರಕರಣಗಳು ಹೆಚ್ಚಾದ ಕಾರಣಕ್ಕೆ ಡಿಜಿಸಿಎ, ಅಂತರರಾಷ್ಟ್ರೀಯ ಪ್ರಯಾಣಿಕ ವಿಮಾನಗಳ ಹಾರಾಟವನ್ನು ಅನಿರ್ದಿಷ್ಟಾವಧಿಗೆ ಅಮಾನತುಗೊಳಿಸಿತ್ತು.

ಶೀಘ್ರದಲ್ಲೇ ಪುನರಾರಂಭಗೊಳ್ಳಲಿದೆ ಭಾರತ-ಅಮೆರಿಕಾ ನಡುವಿನ ವಿಮಾನಯಾನ

ಎರಡು ತಿಂಗಳ ಅಮಾನತಿನ ನಂತರ ಮೇ 25ರಿಂದ ದೇಶೀಯ ವಿಮಾನಯಾನವನ್ನು ಪುನರಾರಂಭಿಸಲಾಗಿದೆ. ಆದರೆ ವಿಮಾನಯಾನ ಸಂಸ್ಥೆಗಳಿಗೆ ಕೇವಲ 45%ನಷ್ಟು ಪ್ರಯಾಣಿಕರನ್ನು ಮಾತ್ರ ಹೊತ್ತೊಯ್ಯಲು ಅವಕಾಶ ನೀಡಲಾಗಿದೆ.

MOST READ:ಒಂದು ಸಾವಿರ ರೂಪಾಯಿ ಪಾವತಿಸಿ ಈ ಸ್ಕೂಟರ್ ಬುಕ್ ಮಾಡಿ

ಶೀಘ್ರದಲ್ಲೇ ಪುನರಾರಂಭಗೊಳ್ಳಲಿದೆ ಭಾರತ-ಅಮೆರಿಕಾ ನಡುವಿನ ವಿಮಾನಯಾನ

ಕೇಂದ್ರ ಸರ್ಕಾರವು ವಿದೇಶಗಳಲ್ಲಿ ಸಿಲುಕಿದ್ದ ಭಾರತೀಯ ಪ್ರಜೆಗಳನ್ನು ಮರಳಿ ಭಾರತಕ್ಕೆ ಕರೆತರಲು ವಂದೇ ಭಾರತ್ ಮಿಷನ್ ಅಭಿಯಾನವನ್ನು ಕೈಗೊಂಡಿದೆ. ಈ ಅಭಿಯಾನದಡಿಯಲ್ಲಿ ಜುಲೈ 15ರವರೆಗೆ 6,87,467 ಭಾರತೀಯರನ್ನು ಮರಳಿ ಭಾರತಕ್ಕೆ ಕರೆತರಲಾಗಿದೆ.

ಶೀಘ್ರದಲ್ಲೇ ಪುನರಾರಂಭಗೊಳ್ಳಲಿದೆ ಭಾರತ-ಅಮೆರಿಕಾ ನಡುವಿನ ವಿಮಾನಯಾನ

ಭಾರತ, ಅಮೆರಿಕ ಹಾಗೂ ರಷ್ಯಾ ದೇಶಗಳು ಕರೋನಾ ವೈರಸ್‌ನಿಂದ ಹೆಚ್ಚು ತತ್ತರಿಸಿವೆ. ಅಮೆರಿಕಾ, ಬ್ರೆಜಿಲ್ ನಂತರ ಈಗ ಭಾರತದಲ್ಲಿಯೂ ಕರೋನಾ ವೈರಸ್ ಸೋಂಕಿತರ ಸಂಖ್ಯೆ ಹತ್ತು ಲಕ್ಷದ ಗಡಿ ದಾಟಿದೆ. ಕಳೆದ 15 ದಿನಗಳಿಂದ ಭಾರತದಲ್ಲಿ ಸೋಂಕಿತರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಶೀಘ್ರದಲ್ಲೇ ಪುನರಾರಂಭಗೊಳ್ಳಲಿದೆ ಭಾರತ-ಅಮೆರಿಕಾ ನಡುವಿನ ವಿಮಾನಯಾನ

ಜೂನ್ 8ರಂದು ಭಾರತದಲ್ಲಿ ಲಾಕ್‌ಡೌನ್ ಮುಗಿದ ನಂತರ ಕರೋನಾ ವೈರಸ್ ಸೋಂಕಿತರ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಲಾಕ್‌ಡೌನ್ ಅವಧಿಯಲ್ಲಿ ಪ್ರತಿದಿನ ನೂರರ ಸಂಖ್ಯೆಯಲ್ಲಿ ವರದಿಯಾಗುತ್ತಿದ್ದರೆ, ಈಗ ಈ ಪ್ರತಿ ದಿನ 25,000ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ.

ಶೀಘ್ರದಲ್ಲೇ ಪುನರಾರಂಭಗೊಳ್ಳಲಿದೆ ಭಾರತ-ಅಮೆರಿಕಾ ನಡುವಿನ ವಿಮಾನಯಾನ

ದೆಹಲಿ, ಮುಂಬೈ, ಚೆನ್ನೈ, ಪುಣೆ, ನಾಗ್ಪುರ ಮತ್ತು ಅಹಮದಾಬಾದ್‌ನಂತಹ ಹಾಟ್‌ಸ್ಪಾಟ್ ಗಳಿಂದ ಕೋಲ್ಕತಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುವ ವಿಮಾನಗಳನ್ನು ನಿಷೇಧಿಸಲಾಗಿದೆ. ಈ ನಿಷೇಧವು ಜುಲೈ 31ರವರೆಗೆ ಜಾರಿಯಲ್ಲಿರಲಿದೆ.

Article Published On: Monday, July 20, 2020, 17:21 [IST]
English summary
Flight services between India and America to resume soon. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+