ಬಿಡುಗಡೆಯ ಸನಿಹದಲ್ಲಿ ಬಿಎಸ್-6 ಎಂಜಿನ್ ಪ್ರೇರಿತ ಫೋರ್ಸ್ ಟ್ರಾಕ್ಸ್ ಕ್ರೂಸರ್

ಪುಣೆ ಮೂಲದ ಫೋರ್ಸ್ ಮೋಟಾರ್ಸ್ ಕಂಪನಿಯು ಶೀಘ್ರದಲ್ಲೇ ತನ್ನ ಜನಪ್ರಿಯ ಟ್ರಾಕ್ಸ್ ಕ್ರೂಸರ್ ಹೊಸ ಆವೃತ್ತಿಯನ್ನು ಬಿಡುಗಡೆಗೊಳಿಸಲು ಸಿದ್ದವಾಗುತ್ತಿದ್ದು, ಹೊಸ ವಾಹನದಲ್ಲಿ ಸುಧಾರಿತ ಎಂಜಿನ್ ಸೇರಿದಂತೆ ಹಲವಾರು ಬದಲಾವಣೆಗಳನ್ನು ಪರಿಚಯಿಸಲಾಗಿದೆ.

ಬಿಡುಗಡೆಯ ಸನಿಹದಲ್ಲಿ ಬಿಎಸ್-6 ಫೋರ್ಸ್ ಟ್ರಾಕ್ಸ್ ಕ್ರೂಸರ್

ಹೊಸ ವಾಹನವು ಏಪ್ರಿಲ್ 1ರಿಂದ ಕಡ್ಡಾಯವಾಗಿ ಜಾರಿಗೆ ಬಂದಿರುವ ಬಿಎಸ್-6 ಎಮಿಷನ್ ಪ್ರಕಾರ ಅಭಿವೃದ್ದಿಗೊಂಡಿದ್ದು, ಹೊಸ ವಾಹನವನ್ನು ಕಳೆದ ಮೇ ತಿಂಗಳಿನಲ್ಲಿಯೇ ಬಿಡುಗಡೆಗಾಗಿ ಯೋಜನೆ ರೂಪಿಸಲಾಗಿತ್ತು. ಆದರೆ ಕರೋನಾ ವೈರಸ್ ಪರಿಣಾಮ ಹೊಸ ವಾಹನದ ಬಿಡುಗಡೆಯನ್ನು ಮುಂದೂಡಿಕೆ ಮಾಡಿದ್ದ ಫೋರ್ಸ್ ಕಂಪನಿಯು ಇದೀಗ ಬಿಡುಗಡೆಗಾಗಿ ಸಿದ್ದವಾಗಿದ್ದು, ಹೊಸ ವಾಹನ ಮುಂದಿನ ಕೆಲವೇ ದಿನಗಳಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ.

ಬಿಡುಗಡೆಯ ಸನಿಹದಲ್ಲಿ ಬಿಎಸ್-6 ಫೋರ್ಸ್ ಟ್ರಾಕ್ಸ್ ಕ್ರೂಸರ್

ಹೊಸ ವಾಹನದ ಬಿಡುಗಡೆಗಾಗಿ ಪುಣೆ-ಮುಂಬೈ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಅಂತಿಮ ಹಂತದ ರೋಡ್ ಟೆಸ್ಟಿಂಗ್ ನಡೆಸಲಾಗುತ್ತಿದ್ದು, ಹೊಸ ವಾಹನದಲ್ಲಿ ಹಲವಾರು ಸುಧಾರಿತ ತಂತ್ರಜ್ಞಾನ ಪ್ರೇರಿತ ತಾಂತ್ರಿಕ ಸೌಲಭ್ಯಗಳನ್ನು ಜೋಡಣೆ ಮಾಡಿರುವುದು ಬಹುತೇಕ ಖಚಿತವಾಗಿದೆ.

ಬಿಡುಗಡೆಯ ಸನಿಹದಲ್ಲಿ ಬಿಎಸ್-6 ಫೋರ್ಸ್ ಟ್ರಾಕ್ಸ್ ಕ್ರೂಸರ್

ಹೊಸ ಫೋರ್ಸ್ ಟ್ರಾಕ್ಸ್ ಕ್ರೂಸರ್‌ಲ್ಲಿ ಮರುವಿನ್ಯಾಸಗೊಳಿಸಲಾದ ಮುಂಭಾಗದ ಗ್ರಿಲ್, ಬಂಪರ್ ಮತ್ತು ಹೆಡ್‌ಲ್ಯಾಂಪ್ ಕ್ಲಸ್ಟರ್ ಆಕರ್ಷಕವಾಗಿದ್ದು, ಹೊಸದಾದ ವರ್ಟಿಕಲ್ ಮೌಂಟೆಡ್ ಟೈಲ್ ಲ್ಯಾಂಪ್ ಸೌಲಭ್ಯವನ್ನು ನೀಡಲಾಗಿದೆ.

ಬಿಡುಗಡೆಯ ಸನಿಹದಲ್ಲಿ ಬಿಎಸ್-6 ಫೋರ್ಸ್ ಟ್ರಾಕ್ಸ್ ಕ್ರೂಸರ್

ಹಳೆಯ ಆವೃತ್ತಿಗಿಂತಲೂ ಹಲವಾರು ಸುಧಾರಿತ ತಂತ್ರಜ್ಞಾನ ಪ್ರೇರಿತ ಸೌಲಭ್ಯಗಳನ್ನು ಹೊಂದಿರುವ ಹೊಸ ಟ್ರಾಕ್ಸ್ ಕ್ರೂಸರ್ ಮಾದರಿಯಲ್ಲಿ ಹೊಸದಾಗಿ ಅಳವಡಿಕೆ ಮಾಡಿರುವ ಬ್ಲ್ಯಾಕ್ ಪ್ಲಾಸ್ಟಿಕ್ ಫ್ಲೈರ್ಡ್ ವೀಲ್ಹ್ ಆರ್ಚ್ ಮತ್ತು ಫುಟ್‌ಬೋರ್ಡ್ ಸೌಲಭ್ಯವು ಗಮನಸೆಳೆಯುತ್ತದೆ.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಬಿಡುಗಡೆಯ ಸನಿಹದಲ್ಲಿ ಬಿಎಸ್-6 ಫೋರ್ಸ್ ಟ್ರಾಕ್ಸ್ ಕ್ರೂಸರ್

ಹೊಸ ಫೋರ್ಸ್ ಟ್ರಾಕ್ಸ್ ಕ್ರೂಸರ್‌ನಲ್ಲಿ ಹೊರಭಾಗದ ಬದವಾವಣೆಯೆಂತೆ ಒಳಭಾಗದ ವಿನ್ಯಾಸದಲ್ಲೂ ಹಲವಾರು ಬದಲಾವಣೆಗಳನ್ನು ಪರಿಚಯಿಸಲಾಗಿದ್ದು, ಈ ಹಿಂದಿನ ಮಾದರಿಗಿಂತಲೂ ಕೆಲವು ಪ್ರೀಮಿಯಂ ಫೀಚರ್ಸ್‌ಗಳು ಸುಖಕರ ಪ್ರಯಾಣಕ್ಕೆ ಅನುಕೂರವಾಗಿವೆ. ಡ್ಯುಯಲ್ ಕಲರ್ ಟೋನ್ ಥೀಮ್, ಹೊಸ ಇನ್‌ಸ್ಟ್ರುಮೆಂಟಲ್ ಕ್ಲಸ್ಟರ್ ಜೊತೆಗೆ ಬ್ಲ್ಯೂ ಲಿಟ್ ಮಲ್ಟಿ ಇನ್‌ಫಾರ್ಮೆಷನ್ ಡಿಸ್‌ಪ್ಲೇ ನೀಡಲಾಗಿದ್ದು, ಈ ಹಿಂದಿನ ಆವೃತ್ತಿಯಲ್ಲಿ ಆಡಿಯೋ ಸಿಸ್ಟಂ ಸೌಲಭ್ಯವನ್ನು ಹೆಚ್ಚುವರಿಯಾಗಿ ಖರೀದಿ ಮಾಡಬೇಕಿತ್ತು.

ಬಿಡುಗಡೆಯ ಸನಿಹದಲ್ಲಿ ಬಿಎಸ್-6 ಫೋರ್ಸ್ ಟ್ರಾಕ್ಸ್ ಕ್ರೂಸರ್

ಹಾಗೆಯೇ ಹೊಸ ವಾಹನದಲ್ಲಿ ಮುಂಭಾಗದ ಪ್ರಯಾಣಿಕರಿಗೆ ಎಸಿ ಸೌಲಭ್ಯವಲ್ಲದೆ ಹಿಂಬದಿಯಲ್ಲಿ ರೂಫ್ ಮೌಂಟೆಡ್ ವೆಂಟ್ಸ್, ಡ್ಯುಯಲ್ ಟೋನ್ ಬಿಜ್ ಸೀಟುಗಳು ಮತ್ತು ಹಿಂಬದಿಯ ಸವಾರರಿಗೆ ಅನುಕೂಲಕರ ಆಸನ ಸೌಲಭ್ಯ ನೀಡಲಾಗಿದೆ. ಈ ಮೂಲಕ ಹೊಸ ವಾಹನದಲ್ಲಿ ಚಾಲಕ ಸೇರಿ ಒಟ್ಟು 13 ಜನ ಪ್ರಯಾಣಿಕರು ಅರಾಮದಾಯಕವಾಗಿ ಪ್ರಯಾಣಿಸಬಹುದಾಗಿದ್ದು, 3+4+3+3 ಮಾದರಿಯಲ್ಲಿ ಆಸನ ವ್ಯವಸ್ಥೆ ಹೊಂದಿದೆ. ಮುಂಭಾಗದಲ್ಲಿ ಚಾಲಕನ ಸೀಟು ಪ್ರತ್ಯೇಕ ನಿಯಂತ್ರಣ ಹೊಂದಿದ್ದು, ಹಿಂಬದಿಯಲ್ಲಿ ಬೆಂಚ್ ಸೀಟಗಳನ್ನು ನೀಡಲಾಗಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಬಿಡುಗಡೆಯ ಸನಿಹದಲ್ಲಿ ಬಿಎಸ್-6 ಫೋರ್ಸ್ ಟ್ರಾಕ್ಸ್ ಕ್ರೂಸರ್

ಇದಲ್ಲದೇ ಹೊಸ ವಾಹನದಲ್ಲಿ ಸುಧಾರಿತ ಸುರಕ್ಷಾ ಸೌಲಭ್ಯಗಳನ್ನು ಹೆಚ್ಚಿಸಲಾಗಿದ್ದು, ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಬದಿಯಲ್ಲಿ ಡ್ರಮ್ ಬ್ರೇಕ್ ನೀಡಲಾಗಿದೆ. ಜೊತೆಗೆ ಪ್ರತ್ಯೇಕವಾದ ರಿಗೆಡ್-ಆಕ್ಸೆಲ್ ಸೌಲಭ್ಯವನ್ನು ಹೊಂದಿದಿರುವುದು ಹೊಸ ವಾಹನಕ್ಕೆ ಮತ್ತಷ್ಟು ಬಲಿಷ್ಠತೆ ತಂದುಕೊಡಲಿದೆ.

ಬಿಡುಗಡೆಯ ಸನಿಹದಲ್ಲಿ ಬಿಎಸ್-6 ಫೋರ್ಸ್ ಟ್ರಾಕ್ಸ್ ಕ್ರೂಸರ್

ಎಂಜಿನ್ ಸಾಮರ್ಥ್ಯ

ಹೊಸ ವಾಹನವು ಬಿಎಸ್-6 ವೈಶಿಷ್ಟ್ಯತೆಯ 2.6-ಲೀಟರ್ ಫೋರ್ ಸಿಲಿಂಡರ್ ಡೀಸೆಲ್ ಎಂಜಿನ್ ಹೊಂದಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 90-ಬಿಎಚ್‌ಪಿ ಮತ್ತು 260-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

MOST READ: ವಾಹನ ಖರೀದಿಯನ್ನು ಸುಲಭವಾಗಿಸಲಿದೆ ಅಗಸ್ಟ್ 1ರಿಂದ ಜಾರಿಗೆ ಬಂದಿರುವ ಹೊಸ ವಿಮಾ ನೀತಿ..

ಬಿಡುಗಡೆಯ ಸನಿಹದಲ್ಲಿ ಬಿಎಸ್-6 ಫೋರ್ಸ್ ಟ್ರಾಕ್ಸ್ ಕ್ರೂಸರ್

ಜೊತೆಗೆ ಹೊಸದಾಗಿ ಜಾರಿಗೆ ತರಲಾಗಿರುವ ಬಿಎಸ್-6 ನಿಯಮದಿಂದಾಗಿ ವಾಹನಗಳ ಎಂಜಿನ್‌ನಲ್ಲಿ ಮಾತ್ರವಲ್ಲದೆ ಪ್ರಯಾಣಿಕರ ಸುರಕ್ಷತೆಯಲ್ಲೂ ಸಾಕಷ್ಟು ಬದಲಾವಣೆಯಾಗಿದ್ದು, ಪ್ರೀಮಿಯಂ ಫೀಚರ್ಸ್‌ಗಳಿಂದಾಗಿ ಬೆಲೆ ಕೂಡಾ ಹೆಚ್ಚಳವಾಗಿದೆ.

More from DriveSpark

Article Published On: Thursday, August 13, 2020, 14:39 [IST]
English summary
Force Trax Cruiser BS6 Spied Testing. Read in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+