ಟಾಟಾ ಹ್ಯಾರಿಯರ್ ಕಾರಿಗೆ ಪೈಪೋಟಿ ನೀಡಲಿದೆ ಫೋರ್ಡ್-ಮಹೀಂದ್ರಾ ಹೊಸ ಕಾರು

ಭಾರತದಲ್ಲಿ ಸಹಭಾಗಿತ್ವ ಯೋಜನೆಗೆ ಚಾಲನೆ ನೀಡಿರುವ ಮಹೀಂದ್ರಾ ಮತ್ತು ಫೋರ್ಡ್ ಕಾರು ಉತ್ಪಾದನಾ ಕಂಪನಿಗಳು ಹಲವು ಹೊಸ ಮಾದರಿಯ ಕಾರುಗಳನ್ನು ಬಿಡುಗಡೆ ಮಾಡಲಿದ್ದು, ಹೊಸ ಕಾರುಗಳು ಮಧ್ಯಮ ಕ್ರಮಾಂಕದ ಎಸ್‌ಯುವಿ ಮಾದರಿಗಳಿಗೆ ಉತ್ತಮ ಪೈಪೋಟಿ ನೀಡಲಿವೆ.

ಹ್ಯಾರಿಯರ್ ಕಾರಿಗೆ ಪೈಪೋಟಿ ನೀಡಲಿದೆ ಫೋರ್ಡ್-ಮಹೀಂದ್ರಾ ಹೊಸ ಕಾರು

ಮಹೀಂದ್ರಾ ಮತ್ತು ಫೋರ್ಡ್ ಕಂಪನಿಗಳು ಸಹಭಾಗಿತ್ವದ ಯೋಜನೆ ಅಡಿ ಹಲವು ಹೊಸ ಕಾರು ಮಾದರಿಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದ್ದು, ಫೋರ್ಡ್ ಕಂಪನಿಯು ಕಾರು ಉತ್ಪಾದನೆ ಮತ್ತು ತಂತ್ರಜ್ಞಾನ ಅಭಿವೃದ್ದಿ ಮಾಡಲಿದ್ದರೆ ಮಹೀಂದ್ರಾ ಕಂಪನಿಯು ಹೊಸ ಕಾರುಗಳಿಗೆ ಮಾರುಕಟ್ಟೆ ಒದಗಿಸುವುದರ ಜೊತೆಗೆ ಹೊಸ ಕಾರುಗಳ ಉತ್ಪಾದನೆಯ ವೆಚ್ಚ ಇಳಿಕೆಗಾಗಿ ಬಜೆಟ್ ಬೆಲೆಯ ಬಿಡಿಭಾಗಗಳನ್ನು ಒದಗಿಸಲಿದೆ.

ಹ್ಯಾರಿಯರ್ ಕಾರಿಗೆ ಪೈಪೋಟಿ ನೀಡಲಿದೆ ಫೋರ್ಡ್-ಮಹೀಂದ್ರಾ ಹೊಸ ಕಾರು

ಭಾರತೀಯ ಆಟೋ ಉದ್ಯಮದಲ್ಲಿ ಫೋರ್ಡ್ ಮತ್ತು ಮಹೀಂದ್ರಾ ಕಂಪನಿಗಳು ತಮ್ಮದೆ ಆದ ಜನಪ್ರಿಯತೆ ಹೊಂದಿದ್ದು, ಭವಿಷ್ಯದಲ್ಲಿ ಮತ್ತಷ್ಟು ಹೊಸ ಕಾರು ಉತ್ಪನ್ನಗಳೊಂದಿಗೆ ಗ್ರಾಹಕರ ಪ್ರಮುಖ ಆಕರ್ಷಣೆಯಾಗಲಿವೆ.

ಹ್ಯಾರಿಯರ್ ಕಾರಿಗೆ ಪೈಪೋಟಿ ನೀಡಲಿದೆ ಫೋರ್ಡ್-ಮಹೀಂದ್ರಾ ಹೊಸ ಕಾರು

ಪ್ರಸ್ತುತ ಮಾರುಕಟ್ಟೆಯಲ್ಲಿ ರೂ.15 ಲಕ್ಷ ರೂ.19 ಲಕ್ಷ ಬೆಲೆ ಅಂತರದಲ್ಲಿ ಬಲಿಷ್ಠವಾದ ಸಿ-ಸೆಗ್ಮೆಂಟ್ ಎಸ್‌ಯುವಿ ಹೆಚ್ಚಿನ ಬೇಡಿಕೆಯಿದ್ದು, ಮಹೀಂದ್ರಾ ಎಕ್ಸ್‌ಯುವಿ500, ಟಾಟಾ ಹ್ಯಾರಿಯರ್ ಮತ್ತು ಜೀಪ್ ಕಂಪಾಸ್ ಕಾರುಗಳು ಉತ್ತಮ ಬೇಡಿಕೆ ಪಡೆದುಕೊಂಡಿರುವುದು ಫೋರ್ಡ್-ಮಹೀಂದ್ರಾ ಸಹಭಾಗಿತ್ವದ ಹೊಸ ಕಾರುಗಳಿಗೆ ಪ್ರಮುಖ ಪ್ರೇರಣೆಯಾಗಿದೆ.

ಹ್ಯಾರಿಯರ್ ಕಾರಿಗೆ ಪೈಪೋಟಿ ನೀಡಲಿದೆ ಫೋರ್ಡ್-ಮಹೀಂದ್ರಾ ಹೊಸ ಕಾರು

ಹಾಗೆಯೇ ಬಿ-ಸೆಗ್ಮೆಂಟ್‌ನಲ್ಲಿ ಬಿಡುಗಡೆಯಾಗಲಿರುವ ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳು ರೂ. 10 ಲಕ್ಷದಿಂದ ರೂ. 15 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಲಿದ್ದು, ಸಹಭಾಗಿತ್ವದ ಆಧಾರದ ಮೇಲೆ ಹೊಸ ಕಾರುಗಳ ನಿರ್ಮಾಣ, ಎಂಜಿನ್ ಅಭಿವೃದ್ದಿಗಾಗಿ ಪರಸ್ಪರ ಸಹಕರಿಸುವ ಮೂಲಕ ಎಸ್‌ಯುವಿ ಕಾರುಗಳ ಮೇಲೆ ಹೆಚ್ಚಿನ ಒತ್ತು ನೀಡಲು ನಿರ್ಧರಿಸಲಾಗಿದೆ.

ಹ್ಯಾರಿಯರ್ ಕಾರಿಗೆ ಪೈಪೋಟಿ ನೀಡಲಿದೆ ಫೋರ್ಡ್-ಮಹೀಂದ್ರಾ ಹೊಸ ಕಾರು

ಗ್ರಾಹಕರ ಬೇಡಿಕೆಯೆಂತೆ ಒಟ್ಟು ಮೂರು ಹೊಸ ಕಾರುಗಳು ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಬಿಡುಗಡೆಯಾಗಲಿದ್ದು, ಫೋರ್ಡ್ ಎಕ್ಸ್‌ಪ್ಲೊರರ್ ಮಾದರಿಯಲ್ಲಿ ನಿರ್ಮಾಣಗೊಳ್ಳಲಿರುವ ಹೊಸ ಕಾರು ಹ್ಯಾರಿಯರ್ ಕಾರಿಗೆ ಭರ್ಜರಿ ಪೈಪೋಟಿ ನೀಡಲಿದೆ.

ಹ್ಯಾರಿಯರ್ ಕಾರಿಗೆ ಪೈಪೋಟಿ ನೀಡಲಿದೆ ಫೋರ್ಡ್-ಮಹೀಂದ್ರಾ ಹೊಸ ಕಾರು

ಹೊಸ ಕಾರು 163-ಬಿಎಚ್‌ಪಿ ಪ್ರೇರಿತ 1.5-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಪಡೆದುಕೊಳ್ಳಲಿದ್ದು, ಹೊಸ ಕಾರಿನ ರೋಡ್ ಟೆಸ್ಟಿಂಗ್ ಪ್ರಕ್ರಿಯೆಯನ್ನು ಮುಂದಿನ ಕೆಲವೇ ದಿನಗಳಲ್ಲಿ ಆರಂಭಿಸಲಿದೆ.

ಹ್ಯಾರಿಯರ್ ಕಾರಿಗೆ ಪೈಪೋಟಿ ನೀಡಲಿದೆ ಫೋರ್ಡ್-ಮಹೀಂದ್ರಾ ಹೊಸ ಕಾರು

ಮಾಹಿತಿಗಳ ಪ್ರಕಾರ, ಮಹೀಂದ್ರಾ ಮತ್ತು ಫೋರ್ಡ್ ಕಂಪನಿಗಳ ಜಂಟಿ ಯೋಜನೆ ಅಡಿ ನಿರ್ಮಾಣಗೊಂಡ ಹೊಸ ಕಾರು ಆವೃತ್ತಿಗಳು 2021-22ರ ಆರ್ಥಿಕ ವರ್ಷದಲ್ಲಿ ಬಿಡುಗಡೆಯಾಗಲಿದ್ದು, ತದನಂತರ ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಒಟ್ಟು 7 ವಿವಿಧ ನಮೂನೆಯ ಹೊಸ ಎಸ್‌ಯುವಿ, ಎಂಪಿವಿ ಮತ್ತು ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಲಿವೆ.

More from DriveSpark

Article Published On: Wednesday, June 17, 2020, 19:41 [IST]
English summary
Ford C-SUV Launch Next Year, Rival Tata Harrier. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+