7ನೇ ವರ್ಷದ ಸಂಭ್ರಮದಲ್ಲಿ ಜನಪ್ರಿಯ ಫೋರ್ಡ್ ಇಕೋಸ್ಪೋರ್ಟ್
ಫೋರ್ಡ್ ಕಂಪನಿಯ ಜನಪ್ರಿಯ ಇಕೋಸ್ಪೋರ್ಟ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡು 7 ವರ್ಷಗಳನ್ನು ಪೂರೈಸಿದೆ. ವಿಶಿಷ್ಟವಾದ ಬಾಡಿ ಸ್ಟೈಲ್ ಅನ್ನು ಹೊಂದಿರುವ ಈ ಇಕೋಸ್ಪೋರ್ಟ್ ಸಬ್ ಕಾಂಪ್ಯಾಕ್ಟ್ ಎಸ್‌ಯುವಿಯು ಭಾರತೀಯ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಭಾರತೀಯ ಮಾರುಕಟ್ಟೆಯಲ್ಲಿ 2012ರ ಆಟೋ ಎಕ್ಸ್‌ಪೋದಲ್ಲಿ ಇಕೋಸ್ಪೋರ್ಟ್ ಸಬ್ ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಮೊದಲ ಬಾರಿಗೆ ಪರಿಚಯಿಸಿದ್ದರು. ಈ ಇಕೋಸ್ಪೋರ್ಟ್ ಎಸ್‍ಯುವಿಯನ್ನು 2012ರ ಆಟೋ ಎಕ್ಸ್‌ಪೋದಲ್ಲಿ ಕಾನ್ಸೆಪ್ಟ್ ಎಸ್‍ಯುವಿಯಾಗಿ ಪರಿಚಯಿಸಿದ್ದರು. ನಂತರ ಫೋರ್ಡ್ ಇಂಡಿಯಾ ಕಂಪನಿಯು ಇಕೋಸ್ಪೋರ್ಟ್ ಸಬ್ ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಭಾರತದಲ್ಲಿ 2013ರಲ್ಲಿ ಮೊದಲ ಬಾರಿ ಬಿಡುಗಡೆಗೊಳಿಸಿದ್ದರು.

ಫೋರ್ಡ್ ತನ್ನ ಇಕೋಸ್ಪೋರ್ಟ್ ಕಾಂಪ್ಯಾಕ್ಟ್ ಎಸ್‍ಯುವಿಯನ್ನು ಬಿಎಸ್-6 ಆವೃತ್ತಿಯಲ್ಲಿ ಈ ವರ್ಷದ ಆರಂಭದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಫೋರ್ಡ್ ಕಂಪನಿಯ ಕಾರುಗಳ ಸರಣಿಯಲ್ಲಿ ಬಿಡುಗಡೆಯಾದ ಮೊದಲ ಬಿಎಸ್-6 ವಾಹನವಾಗಿದೆ.
MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಇಕೋಸ್ಪೋರ್ಟ್ ಎಸ್‍ಯುವಿಯ ಮುಂಭಾಗದಲ್ಲಿ, ಫಾಗ್ ಲ್ಯಾಂಪ್ ಬೆಜೆಲ್ ಮತ್ತು ಗ್ರಿಲ್‍ಗಳಿವೆ. ಇಂಟಿರಿಯರ್‍ನಲ್ಲಿರುವ ಕ್ಯಾಬಿನ್ ಡ್ಯುಯಲ್ ಟೋನ್ ಥೀಮ್ ಹೊಂದಿದೆ. ಸೀಟುಗಳು, ಡೋರ್ ಪ್ಯಾನೆಲ್‍ಗಳು, ಪ್ಯಾಸೆಂಜರ್ ಗ್ರಾಬ್ ಹ್ಯಾಂಡಲ್, ಸೆಂಟರ್ ಆರ್ಮ್‌ರೆಸ್ಟ್ ಹಾಗೂ ಸೆಂಟರ್ ಕನ್ಸೋಲ್‌ಗಳು ಕಂದು ಬಣ್ಣವನ್ನು ಹೊಂದಿವೆ.

ಬಿಎಸ್-6 ಫೋರ್ಡ್ ಇಕೋಸ್ಪೋರ್ಟ್ ಎಸ್‍ಯುವಿಯ ಇಂಟಿರಿಯರ್‍ನಲ್ಲಿ ಹಲವಾರು ಫೀಚರ್ಸ್‍ಗಳನ್ನು ಅಳವಡಿಸಿದ್ದಾರೆ. ಇದರಲ್ಲಿ ಎಸ್‍ವೈಎನ್‍ಸಿ 3 ಇನ್ಫೋಟೇನ್‍ಮೆಂಟ್ ಸಿಸ್ಟಂ, 8 ಇಂಚಿನ ಟಚ್‍ಸ್ಕ್ರೀನ್ ಮತ್ತು ಟಾಪ್ ವೆರಿಯೆಂಟ್ ಆದ ಇಕೋಸ್ಪೋರ್ಟ್ ಎಸ್ ರೂಪಾಂತರದಲ್ಲಿ ಆ್ಯಪಲ್ ಕಾರ್‍ಪ್ಲೇ ಮತ್ತು ಆಂಡ್ರಾಯ್ಡ್ ಆಟೋವನ್ನು ಅಳವಡಿಸಲಾಗಿದೆ.ಸುರಕ್ಷತೆಗಾಗಿ ಈ ಎಸ್‍ಯುವಿಯಲ್ಲಿ 6 ಏರ್‍ಬ್ಯಾಗ್‍ಗಳನ್ನು ಅಳವಡಿಸಲಾಗಿದೆ.
MOST READ: ಭರ್ಜರಿಯಾಗಿ ಮಾರಾಟವಾಯ್ತು ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ

ಬಿಎಸ್-6 ಫೋರ್ಡ್ ಇಕೋಸ್ಪೋರ್ಟ್ ರೂಪಾಂತರವನ್ನು ಅವಲಂಬಿಸಿ 9 ಇಂಚಿನ ಟಚ್‍ಸ್ಕ್ರೀನ್ ಇನ್ಫೋಟೇನ್‍ಮೆಂಟ್ ಸಿಸ್ಟಂ ಮತ್ತು ಎಂಬೆಡಡ್ ನ್ಯಾವಿಗೇಷನ್ ಅಳವಡಿಸಲಾಗಿದೆ.

ಬಿಎಸ್-6 ಫೋರ್ಡ್ ಇಕೋಸ್ಪೋರ್ಟ್ ಕಾರಿನಲ್ಲಿ 1.5 ಲೀಟರ್ ಟಿಡಿಸಿಐ ಡೀಸೆಲ್ ಎಂಜಿನ್ ಅನ್ನು ಅಳವಡಿಸಿದ್ದಾರೆ. ಈ ಎಂಜಿನ್ 101 ಬಿಹೆಚ್‍ಪಿ ಪವರ್ ಮತ್ತು 215 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
MOST READ: ಮತ್ತಷ್ಟು ತಡವಾಗಲಿದೆ ಹೊಸ ಹೋಂಡಾ ಹೆಚ್‌ಆರ್-ವಿ ಎಸ್‍ಯುವಿ ಬಿಡುಗಡೆ

ಇದರೊಂದಿಗೆ 1.5 ಲೀಟರ್ ಟಿಐ-ವಿಸಿಟಿ ಪೆಟ್ರೋಲ್ ಎಂಜಿನ್ ಅನ್ನು ಕೂಡ ಅಳವಡಿಸಿದ್ದಾರೆ. ಈ ಎಂಜಿನ್ 122 ಬಿಹೆಚ್‍ಪಿ ಪವರ್ ಮತ್ತು 149 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಫೋರ್ಡ್ ಕಂಪನಿಯು ತನ್ನ ವಾರಂಟಿ ಮತ್ತು ಉಚಿತ ಸರ್ವಿಸ್ ಅವಧಿಗಳನ್ನು ವಿಸ್ತರಿಸಿದೆ. ಫೋರ್ಡ್ ಕಂಪನಿಯು ತನ್ನ ನೌಕರ ಸುರಕ್ಷತೆ ಮತ್ತು ಇತರ ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡು ಉತ್ಪಾದನೆ ಮತ್ತು ಮಾರಾಟವನ್ನು ಪುನಾರಂಭಿಸಿದೆ.


Click it and Unblock the Notifications








