ಹೊಸ ಎಂಜಿನ್‍‍ನೊಂದಿಗೆ ಬಿಡುಗಡೆಯಾಗಲಿದೆ 2020ರ ಫೋರ್ಡ್ ಎಂಡೀವರ್

ಫೋರ್ಡ್ ಇಂಡಿಯಾ ಕಂಪನಿಯು ತನ್ನ ಬಿಎಸ್-6 ಎಂಡೀವರ್ ಎಸ್‍‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಹೊಸ ಫೋರ್ಡ್ ಎಂಡೀವರ್ ಎಸ್‍‍ಯುವಿಯನ್ನು ಬಿಎಸ್-6 ಮಾಲಿನ್ಯ ನಿಯಮ ಜಾರಿಯಾಗುವ ಮೊದಲೇ ಬಿಡುಗಡೆಗೊಳಿಸಲಿದೆ.

ಹೊಸ ಎಂಜಿನ್‍‍ನೊಂದಿಗೆ ಬಿಡುಗಡೆಯಾಗಲಿದೆ 2020ರ ಫೋರ್ಡ್ ಎಂಡೀವರ್

ಭಾರತದಲ್ಲಿ ಬಿಡುಗಡೆಯಾಗುವ ಮುನ್ನ ಹೊಸ ಫೋರ್ಡ್ ಎಂಡೀವರ್ ಹೊಸ ಎಂಜಿನ್ ಅನ್ನು ಅಳವಡಿಸಲಿದೆ ಎಂದು ವರದಿಗಳು ಪ್ರಕಟವಾಗಿದೆ. ಹೊಸದಾಗಿ 2.0 ಲೀಟರ್ ಬೈ-ಟರ್ಬೊ ಡೀಸೆಲ್ ಎಂಜಿನ್ ಅನ್ನು ಅಳವಡಿಸಲಿದೆ. ಈ ಎಂಜಿ‍ನೊಂದಿಗೆ 10 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಿದೆ. ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿರುವ ಎಂಡೀವರ್ ಎಸ್‍‍ಯುವಿಯ ಎರಡು ಎಂಜಿನ್‍ಗಳನ್ನು ಬದಲಾಯಿಸಬಹುದು ಎಂದು ವರದಿಯಾಗಿದೆ.

ಹೊಸ ಎಂಜಿನ್‍‍ನೊಂದಿಗೆ ಬಿಡುಗಡೆಯಾಗಲಿದೆ 2020ರ ಫೋರ್ಡ್ ಎಂಡೀವರ್

ಪ್ರಸ್ತುತ ಎಂಡೀವರ್ ಎಸ್‍‍ಯುವಿನಲ್ಲಿರುವ ಎಂಜಿನ್‍‍ಗಳ ಬದಲಾವಣೆಗೆ ಪ್ರಮುಖ ಕಾರಣವೆಂದರೆ ಎಂಡೀವರ್ ಬೆಲೆಯನ್ನು ದುಬಾರಿಯಾಗಿಸುತ್ತದೆ. ಈ ಎಸ್‍‍ಯುವಿಯ ಪ್ರಸ್ತುತ ಎಂಜಿನ್‍‍ಗಳನ್ನು ನವೀಕರಿಸುವುದರಿಂದ ಎಂಡೀವರ್ ಬೆಲೆಗಳನ್ನು ಸುಮಾರು ರೂ.3 ರಿಂದ ರೂ.4 ಲಕ್ಷಗಳಾವರೆಗೆ ಬೆಲೆಯನ್ನು ಹೆಚ್ಚಿಸಬೇಕಾಗಿತ್ತು. ಹೊಸ ಎಂಜಿನ್ ಅನ್ನು ಅಳವಡಿಸುವುದರಿಂದ ಸ್ಪರ್ಧಾತ್ಮಕ ಬೆಲೆಯಲ್ಲಿ ಮಾರಾಟ ಮಾಡಬಹುದಾಗಿದೆ.

ಹೊಸ ಎಂಜಿನ್‍‍ನೊಂದಿಗೆ ಬಿಡುಗಡೆಯಾಗಲಿದೆ 2020ರ ಫೋರ್ಡ್ ಎಂಡೀವರ್

ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಫೋರ್ಡ್ ಎಂಡೀವರ್ ಎಸ್‍‍ಯುವಿಯಲ್ಲಿ 2.2 ಲೀಟರ್ ಡೀಸೆಲ್ ಎಂಜಿನ್ ಅಳವಡಿಸಲಾಗಿದ್ದು, ಈ ಎಂಜಿನ್ 158 ಬಿ‍‍ಹೆಚ್‍‍ಪಿ ಪವರ್ ಮತ್ತು 385 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಹೊಸ ಎಂಜಿನ್‍‍ನೊಂದಿಗೆ ಬಿಡುಗಡೆಯಾಗಲಿದೆ 2020ರ ಫೋರ್ಡ್ ಎಂಡೀವರ್

ಈ ಎಂಜಿನ್‍‍ನೊಂದಿಗೆ 6 ಸ್ಪೀ ಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಈ ಎಸ್‍‍ಯುವಿಯಲ್ಲಿರುವ 3.2-ಲೀಟರ್ ಡೀಸೆಲ್ ಎಂಜಿನ್ 197-ಬಿಎಚ್‌ಪಿ ಪವರ್ ಮತ್ತು 470 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಹೊಸ ಎಂಜಿನ್‍‍ನೊಂದಿಗೆ ಬಿಡುಗಡೆಯಾಗಲಿದೆ 2020ರ ಫೋರ್ಡ್ ಎಂಡೀವರ್

ಈ ಎಂಜಿನ್‍‍ನೊಂದಿಗೆ 6 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ 4x4 ಡ್ರೈವ್ ಟೆಕ್ನಾಲಜಿ ಸೌಲಭ್ಯ ಹೊಂದಿದೆ. ಈ ಎಸ್‍ಯುವಿಯ ಮುಂಭಾಗದಲ್ಲಿ ಫ್ರಂಟ್ ಗ್ರಿಲ್ ಮತ್ತು ಕ್ರೋಮ್ ಸ್ಲಾಟ್‌ಗಳನ್ನು ಅಳವಡಿಸಲಾಗಿದೆ.

ಹೊಸ ಎಂಜಿನ್‍‍ನೊಂದಿಗೆ ಬಿಡುಗಡೆಯಾಗಲಿದೆ 2020ರ ಫೋರ್ಡ್ ಎಂಡೀವರ್

ಈ ಎಸ್‍ಯುವಿಯಲ್ಲಿ ಹೆಡ್‌ಲ್ಯಾಂಪ್ ಯುನಿಟ್, ಎಲ್ಇಡಿ ಟೇಲ್‍ಲೈಟ್, 18-ಇಂಚಿನ ಅಲಾಯ್ ವ್ಹೀಲ್, ನವೀಕರಿಸಿದ ಫ್ರಂಟ್ ಬಂಪರ್, ಸೆಮಿ ಪ್ಯಾರಾಲೆಲ್ ಅಸಿಸ್ಟ್, ಪನರೋಮಿಕ್ ಸನ್‌ರೂಫ್ ಅನ್ನು ಅಳವಡಿಸಲಾಗಿದೆ.

ಹೊಸ ಎಂಜಿನ್‍‍ನೊಂದಿಗೆ ಬಿಡುಗಡೆಯಾಗಲಿದೆ 2020ರ ಫೋರ್ಡ್ ಎಂಡೀವರ್

ಈ ಎಸ್‍ಯುವಿ ಇಂಟಿರಿಯರ್‍‍ನಲ್ಲಿ ಸ್ಟೀಯರಿಂಗ್ ಮೌಟೆಂಡ್ ಆಡಿಯೋ ಕಂಟ್ರೋಲ್, ಡ್ಯುಯಲ್-ಜೋನ್ ಕ್ಲೈಮೆಟ್ ಕಂಟ್ರೋಲ್, 8.0-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೇನ್‌ಮೆಂಟ್ ಸಿಸ್ಟಂ ಜೊತೆ ಆ್ಯಪಲ್ ಕಾರ್ ಪ್ಲೇ, ಅಂಡ್ರಾಯಿಡ್ ಆಟೋ ಮತ್ತು 10-ಸ್ಪಿಕರ್ಸ್ ಸೌಂಡ್ ಸಿಸ್ಟಂ ಹೊಂದಿದೆ.

ಹೊಸ ಎಂಜಿನ್‍‍ನೊಂದಿಗೆ ಬಿಡುಗಡೆಯಾಗಲಿದೆ 2020ರ ಫೋರ್ಡ್ ಎಂಡೀವರ್

ಫೋರ್ಡ್ ಎಂಡೀವರ್ ಎಸ್‍‍ಯುವಿಯಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಏಳು ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್, ಹಿಲ್ ಅಸಿಸ್ಟ್ ಮತ್ತು ಪಾರ್ಕಿಂಗ್ ಕ್ಯಾಮೆರಾವನ್ನು ಅಳವಡಿಸಲಾಗಿದೆ.

ಹೊಸ ಎಂಜಿನ್‍‍ನೊಂದಿಗೆ ಬಿಡುಗಡೆಯಾಗಲಿದೆ 2020ರ ಫೋರ್ಡ್ ಎಂಡೀವರ್

ಬಿಎಸ್-6 ಟೊಯೊಟಾ ಎಂಡೀವರ್ ಎಸ್‍‍ಯುವಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಟೊಯೊಟಾ ಫಾರ್ಚೂನರ್, ಮಹೀಂದ್ರಾ ಅಲ್ಟುರಾಸ್ ಜಿ4 ಮತ್ತು ಇಸುಝು ಎಂಯು-ಎಕ್ಸ್ ಎಸ್‍‍ಯುವಿಗಳಿಗೆ ಪೈಪೋಟಿ ನೀಡುತ್ತದೆ. ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಟೊಯೊಟಾ ಎಂಡೀವರ್ ಎಸ್‍ಯುವಿ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.29.2 ಲಕ್ಷದಿಂದ ರೂ.34 ಲಕ್ಷಗಳಾಗಿದೆ.

More from DriveSpark

Article Published On: Saturday, January 11, 2020, 8:45 [IST]
English summary
Ford Endeavour BS6 To Receive New Powertrain: Could Discontinue Current Engine Options. Read in Kannada.
Read more on ಫೋರ್ಡ್ ford
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+