ಚೇತರಿಕೆ ಹಾದಿಯಲ್ಲಿ ಡೀಸೆಲ್ - ಪೆಟ್ರೋಲ್ ಮಾರಾಟ
ಲಾಕ್‌ಡೌನ್ ಕಾರಣದಿಂದಾಗಿ ಏಪ್ರಿಲ್‌ನಲ್ಲಿ ಇಂಧನ ಬೇಡಿಕೆಯು ಕುಸಿದಿತ್ತು. ದೇಶಾದ್ಯಂತ ತೈಲ ಕಂಪನಿಗಳ ಮಾರಾಟದಲ್ಲಿ ಗಣನೀಯ ಕುಸಿತ ಉಂಟಾಗಿತ್ತು. ಈಗ ಲಾಕ್‌ಡೌನ್‌ನಿಂದ ವಿನಾಯಿತಿ ನೀಡಿರುವ ಹಿನ್ನೆಲೆಯಲ್ಲಿ ಮಾರಾಟವು ಸುಧಾರಿಸುತ್ತಿದೆ.

ದೇಶದ ಅತಿದೊಡ್ಡ ತೈಲ ಪೂರೈಕೆದಾರ ಕಂಪನಿಯಾದ ಇಂಡಿಯಾ ಆಯಿಲ್ ಕಾರ್ಪೊರೇಷನ್ ನೀಡಿರುವ ಮಾಹಿತಿಯ ಪ್ರಕಾರ, ದೇಶದಲ್ಲಿ ಆರ್ಥಿಕ ಚಟುವಟಿಕೆಗಳು ಪುನರಾರಂಭವಾಗುತ್ತಿದ್ದು, ಇಂಧನದ ಬೇಡಿಕೆಯೂ ಹೆಚ್ಚಾಗಲಿದೆ. ಮುಂದಿನ ದಿನಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್‌ಗಳಿಗೆ ಬೇಡಿಕೆ ಹೆಚ್ಚಾಗಲಿದೆ.

ಇಂಡಿಯಾ ಆಯಿಲ್ ಕಾರ್ಪೊರೇಶನ್‌ನ ಅಧಿಕಾರಿಯೊಬ್ಬರ ಪ್ರಕಾರ, ಏಪ್ರಿಲ್ ತಿಂಗಳಿನಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಮಾರಾಟ ಪ್ರಮಾಣವು 46%ನಷ್ಟು ಕಡಿಮೆಯಾಗಿತ್ತು. ಪೆಟ್ರೋಲ್, ಡೀಸೆಲ್ ಹಾಗೂ ಜೆಟ್ ಇಂಧನದ ಮಾರಾಟವು ಏಪ್ರಿಲ್ ತಿಂಗಳಿನಲ್ಲಿ ಕ್ರಮವಾಗಿ 61%, 56.7% ಹಾಗೂ 91.5%ನಷ್ಟು ಕಡಿಮೆಯಾಗಿತ್ತು.
MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಲಾಕ್‌ಡೌನ್‌ನಲ್ಲಿನ ವಿನಾಯಿತಿ ಹಾಗೂ ಆರ್ಥಿಕ ಪ್ಯಾಕೇಜ್ ನೆರವಿನಿಂದ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದ್ದು, ಪೆಟ್ರೋಲಿಯಂ ಉತ್ಪನ್ನಗಳ ಮಾರಾಟವು ಏರಿಕೆಯಾಗಲಿದೆ ಎಂದು ಹೇಳಲಾಗಿದೆ. ಅನ್‌ಲಾಕ್ 1.0ನಲ್ಲಿ ಪೆಟ್ರೋಲಿಯಂ ಉತ್ಪನ್ನ ಮಾರಾಟವು ಹೆಚ್ಚಾಗಲಿದೆ ಎಂದು ಕಂಪನಿ ಹೇಳಿದೆ.

ಮೇ ತಿಂಗಳಿನ ಮಾರಾಟವು ಏಪ್ರಿಲ್‌ಗಿಂತ ಉತ್ತಮವಾಗಿದ್ದರೂ 2019ರ ಮೇ ತಿಂಗಳಿಗಿಂತ ಕಡಿಮೆಯಾಗಿದೆ. ಜೂನ್ 8ರಿಂದ ಹೆಚ್ಚಿನ ಚಟುವಟಿಕೆಗಳಿಗೆ ಅನುಮತಿ ನೀಡಲಾಗಿದ್ದು, ಜನರು ವಾಹನಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಸುತ್ತಿರುವ ಕಾರಣಕ್ಕೆ ಇಂಧನ ಮಾರಾಟವು ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ.
MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಕಳೆದ ಹಣಕಾಸು ವರ್ಷದಲ್ಲಿ, ಪೆಟ್ರೋಲಿಯಂ ಉತ್ಪನ್ನ ಮಾರಾಟವು ಫೆಬ್ರವರಿಯವರೆಗೆ ಶೇಕಡಾ 1.9%ನಷ್ಟು ಬೆಳವಣಿಗೆಯನ್ನು ದಾಖಲಿಸಿತ್ತು. ಆದರೆ ಕರೋನಾ ವೈರಸ್ ಹಾವಳಿಯಿಂದಾಗಿ ಮಾರ್ಚ್ ತಿಂಗಳಿನಲ್ಲಿ ಬೆಳವಣಿಗೆಯು 18%ನಷ್ಟು ಕಡಿಮೆಯಾಯಿತು.

ದೇಶಿಯ ವಿಮಾನಗಳ ಹಾರಾಟಕ್ಕೆ ಅನುಮತಿ ನೀಡಲಾಗಿದೆ. ಸದ್ಯಕ್ಕೆ ವಿಮಾನಗಳು ಸೀಮಿತ ಸಂಖ್ಯೆಯಲ್ಲಿ ಹಾರಾಟ ನಡೆಸುತ್ತಿವೆ. ಅಂತರರಾಷ್ಟ್ರೀಯ ವಿಮಾನಗಳ ಹಾರಾಟವನ್ನು ಆರಂಭಿಸಿಲ್ಲ. ಸದ್ಯಕ್ಕೆ ಅಂತರರಾಷ್ಟ್ರೀಯ ವಿಮಾನಗಳ ಹಾರಾಟವನ್ನು ಆರಂಭಿಸುವುದು ಅನುಮಾನ ಎಂದು ಹೇಳಲಾಗಿದೆ.


Click it and Unblock the Notifications